ಮೈಕ್ರೋಸಾಫ್ಟ್‌ಗೂ ಗೂಗಲ್ ಆಂಡ್ರಾಯ್ಡ್‌ಗೂ ಎಲ್ಲಿಯ ಸಂಬಂಧ ಎನ್ನಬೇಡಿ. ಯಾಕೆಂದರೆ, ಮುಂದಿನ ವರ್ಷ ಮೈಕ್ರೋಸಾಫ್ಟ್ ತನ್ನ ವಿಂಡೋಸ್‌ಗೆ ಆಂಡ್ರಾಯ್ಡ್ ಆಪ್‌ಗಳನ್ನು ಸೇರಿಸುವ ಬಗ್ಗೆ ಯೋಚನೆ ಮಾಡುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದು ನಿಜವೇ ಆದರೆ ನೀವು ವಿಂಡೋಸ್‌ನಲ್ಲಿ ಆಂಡ್ರಾಯ್ಡ್ ಆಪ್‌ಗಳನ್ನು ಬಳಸುವ ದಿನಗಳು ದೂರಿಲ್ಲ.

ಬ್ಲೂಸ್ಟ್ಯಾಕ್ಸ್‌ನಂತಹ ರನ್‌ಟೈಮ್ ಅಪ್ಲಿಕೇಶನ್‌ಗಳು ಆಂಡ್ರಾಯ್ಡ್ ಪೈಪೋಟಿ ನೀಡಬಹುದಾದರೂ ಮೈಕ್ರೋಸಾಫ್ಟ್‌ನ ಈ ಕ್ರಮವು ಯುಡಬ್ಲ್ಯೂಪಿ ಮತ್ತು ವಿನ್ 32 ಅಪ್ಲಿಕೇಶನ್‌ಗಳ ಜೊತೆಗೆ ಡೌನ್‌ಲೋಡ್ ಮಾಡಲು ಮತ್ತು ಚಲಾಯಿಸಲು ಲಭ್ಯವಿರುವ ಅಪ್ಲಿಕೇಶನ್‌ಗಳನ್ನು ಪರಿಗಣಿಸಲಿದೆ. Windows Central ವರದಿಯ ಪ್ರಕಾರ, ವಿಂಡೋಸ್ 10ಗೆ ಆಂಡ್ರಾಯ್ಡ್ ಆಪ್‌ಗಳನ್ನು ಸೇರಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಆಂತರಿಕವಾಗಿ ಚರ್ಚೆಗಳು ನಡೆಯುತ್ತಿವೆ. ಹಾಗಾಗಿ 2021ರಲ್ಲಿ ಮೈಕ್ರೋಸಾಫ್ಟ್‌ ಹೊಸ ವಿನ್ಯಾಸದೊಂದಿಗೆ ಬರಲಿದ್ದು ಆ ಸಂದರ್ಭದಲ್ಲಿ ಈ ಆಡಂಡ್ರಾಯ್ಡ್ ಆಪ್‌ಗಳು ಕೂಡ ಸೇರ್ಪಡೆಯಾಗಬುಹದು ಎಂದು ನಿರೀಕ್ಷಿಸಲಾಗಿದೆ.

8T ಬೆನ್ನಲ್ಲೇ ಒನ್‌ಪ್ಲಸ್‌ನಿಂದ ಹೊಸ ವರ್ಷದಲ್ಲಿ 9 ಪ್ರೋ ಫೋನ್?

ಮೈಕ್ರೋಸಾಫ್ಟ್ ಮೊದಲಿಗೆ ಆಂಡ್ರಾಯ್ಡ್  ಬಳಸಿದ್ದು 2017ರಲ್ಲಿ ತನ್ನ ವಿಂಡೋಸ್ 10 ಮೊಬೈಲ್ ಆಪರೇಟಿಂಗ್ ಸಾಫ್ಟ್‌ವೇರ್‌ಗೆ. ಕಂಪನಿ ಈಗಾಗಲೇ ತನ್ನೆಲ್ಲ ಬಹುತೇಕ ಮೊಬೈಲ್‌ಗಳಿಗೆ ಆಂಡ್ರಾಯ್ಡ್ ಆಪರೇಟಿಂಗ್ ಸಾಫ್ಟ್‌ವೇರ್ ಆಫರ್ ಮಾಡುತ್ತದೆ.  ವಿಂಡೋಸ್ ಯುವರ್ ಫೋನ್ ಆಪ್‌ನಿಂದಾಗಿ  ಬಳಕೆದಾರರು ಡೆಸ್ಕ್‌ಟಾಪ್‌ನಲ್ಲಿ ಹೊಂದಾಣಿಕೆಯ ಸ್ಮಾರ್ಟ್‌ಫೋನ್‌ಗಳಿಂದ ಅನೇಕ ಆಪ್‌ಗಳನ್ನು ರನ್ ಮಾಡಲು ಸಾಧ್ಯಾಗುತ್ತದೆ. ಆದರೆ ಈ ಸೇವೆಯು ಪ್ರಸ್ತುತ ಸ್ಯಾಮ್‌ಸಂಗ್ ಫೋನ್ ಬಳಕೆದಾರರಿಗೆ ಸೀಮಿತವಾಗಿದೆ.

ಹಾಗಾಗಿ, ಡೆಸ್ಕ್‌ಟಾಪ್ ಕಂಪ್ಯೂಟರ್‌ ಬಳಕೆದಾರರಿಗೆ ನೇರವಾಗಿ ಆಂಡ್ರಾಯ್ಡ್ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಮಾಡುವುದು ವಿಂಡೋಸ್‍ 10ನ ಅತಿದೊಡ್ಡ ಅಪ್‌ಗ್ರೇಡ್ ಎನಿಸಿಕೊಳ್ಳಲಿದೆ. ಕ್ರೋಮ್ಓಎಸ್, ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಮತ್ತು ಲಿನಕ್ಸ್ ಪ್ಯಾಕೇಜ್‌ಗಳನ್ನು ಏಕಕಾಲದಲ್ಲಿ ಚಲಾಯಿಸಬಲ್ಲ ಗೂಗಲ್‌ನ ಕ್ರೋಮ್‌ಬುಕ್ ವ್ಯಾಪ್ತಿಯೊಂದಿಗೆ ನೇರ ಪೈಪೋಟಿ ನೀಡಬಹುದು.  ಕ್ರೋಮ್ ಬ್ರೌಸರ್‌ಗೆ ಅಕ್ಸೆಸ್ ಮತ್ತು ಜಿಯುಐ ಅನುಮತಿಯೊಂದಿಗೆ ಲಿನಕ್ಸ್ ಸಿದ್ಧವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಸೇರ್ಪಡೆಯು ವಿಂಡೋಸ್ ಅನ್ನು ಸಾರ್ವತ್ರಿಕ ಆಪರೇಟಿಂಗ್ ಸಿಸ್ಟಮ್ ಆಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ವಿಂಡೋಸ್ ಬಳಕೆ ವ್ಯಾಪಕತೆ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಾರೆ ತಜ್ಞರು.

PUBG ಇಂಡಿಯಾದಿಂದ 6 ಕೋಟಿ ರೂಪಾಯಿ ಗೇಮಿಂಗ್ ಸ್ಪರ್ಧೆ?

ಏತನ್ಮಧ್ಯೆ, ಕಂಪನಿಯು ಅಂತಿಮವಾಗಿ, ಆಪರೇಟಿಂಗ್ ಸಾಫ್ಟ್‌ವೇರ್‌ನ ಹೊಸ ಆವೃತ್ತಿ ವಿಂಡೋಸ್ 10 ಎಕ್ಸ್ ಅನ್ನು ಹೊಂದಿದ್ದು, ಇದು ಅಂತಿಮವಾಗಿ ಬಹು-ಪರದೆಯ ಸಾಧನಗಳನ್ನು ಗುರಿಯಾಗಿರಿಸಿಕೊಂಡು ಅಭಿವೃದ್ಧಿಯಾಗಿದೆ. ಜೊತೆಗೆ ವರ್ಷಾಂತ್ಯದ ಮೊದಲು ಆರ್‌ಟಿಎಂಗೆ ಸಿದ್ಧವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

OnePlus Education Benefits: ಫೋನ್, ಟಿವಿ ಖರೀದಿಸಿದರೆ ಸಾವಿರ ರೂ. ಆಫರ್

ಆಂಡ್ರಾಯ್ಡ್ ಆಪ್ ಸೇರಿಸುವ  ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿ ಇಲ್ಲವಾದರೂ  ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಕುರಿತು ನಾವು ಈಗಾಗಲೇ ಊಹಿಸಿಕೊಳ್ಳಲು ಸಾಧ್ಯವಿದೆ. ವಿಂಡೋಸ್‌ನಲ್ಲಿ  ಅದು ಗೂಗಲ್ ಪ್ಲೇ ಸ್ಟೋರ್ ರನ್ ಮಾಡಲಿದೆಯೇ, ಒಂದು ವೇಳೆ ಇಲ್ಲ ಎಂದಾದರೆ ಅದರರ್ಥ ಪ್ಲೇ ಸ್ಟೋರ್ ಇರುವುದೇ ಇಲ್ಲವೇ ಎಂದು ತಿಳಿದುಕೊಳ್ಲಬೇಕೆ? ಒಂದು ಸಂಗತಿ ಏನೆಂದರೆ, ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ವಿಭಾಗ ತೆರೆಯುವ ಸಾಧ್ಯತೆ ಇರಬಹುದು. ಹಾಗಾದಾಗ ಅಸ್ತಿತ್ವದಲ್ಲಿರುವ ಆಂಡ್ರಾಯ್ಡ್ ಆಪ್ ಮಾಲೀಕರಿಗೆ ಸಮಸ್ಯೆಯನ್ನು ತಂದೊಡ್ಡಲಿದ್ದು, ಎರಡು ಭಿನ್ನ ಸ್ಟೋರ್‌ಗಳಲ್ಲಿ ಪಾವತಿಸುವುದನ್ನು ಅದು ತಡೆಗಟ್ಟಬಹುದು ಮತ್ತು ಭಿನ್ನ ಸಾಧನಗಳಲ್ಲಿ ವಿಭಿನ್ನವಾಗಿ ಡೇಟಾ ಸೇವ್ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಬಹುದು ಎನ್ನುತ್ತಾರೆ ವಿಶ್ಲೇಷಕರು.