OnePlus Education Benefits: ಟಿವಿ ಖರೀದಿಸಿದರೆ ಸಾವಿರ ರೂ. ಆಫರ್!

ಭಾರತದ ಮಾರುಕಟ್ಟೆಯಲ್ಲಿ ಪ್ರಮುಖ ಬ್ರ್ಯಾಂಡ್ ಆಗಿರುವ ಒನ್‌ಪ್ಲಸ್ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದಕ್ಕೆ ನೆರವಾಗಲು ಒನ್‌ಪ್ಲಸ್ ಎಜುಕೇಷನ್ ಬೆನೆಫಿಟ್ಸ್ ಎಂಬ ಪ್ರಯೋಜನವನ್ನು ಘೋಷಿಸಿದ್ದು, ಅದರಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಶೇಷ ರಿಯಾಯ್ತಿಯನ್ನು ಪಡೆದುಕೊಳ್ಳಬಹುದು.
 

OnePlus introduces Educational Benefits students can avail offers

ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತನ್ನ ಉತ್ಪನ್ನಗಳು ತಲುಪಬೇಕೆಂಬ ಉದ್ದೇಶದಿಂದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒನ್‌ಪ್ಲಸ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿಯೇ ಎಜುಕೇಷನ್ ಬೆನಿಫಿಟ್ಸ್(OnePlus Education Benefits) ಆಫರ್ ನೀಡಲು ಆರಂಭಿಸಿದೆ. 

ಈ  ಬಗ್ಗೆ ಮಾಹಿತಿ ನೀಡಿರುವ ಒನ್‌ಪ್ಲಸ್, ಒನ್‌ಪ್ಲಸ್ ಉತ್ಪನ್ನಗಳ ಖರೀದಿ ನಿಮ್ಮ ಜೇಬಿಗೆ ಹೊರೆಯಾಗದಂತೆ ಒನ್‌ಪ್ಲಸ್ ಎಜುಕೇಷನ್ ಬೆನೆಫಿಟ್ಸ್ ಕಾರ್ಯಕ್ರಮವನ್ನು ವಿನ್ಯಾಸ ಮಾಡಲಾಗಿದೆ. ನೀವು ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಅಥವಾ ಒನ್‌ಪ್ಲಸ್ ಟಿವಿಯನ್ನು ಖರೀದಿಸಿ ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆದಾಗ, ನಿಮಗೆ ತ್ವರಿತವಾಗಿ ಖರೀದಿ ಮೇಲೆ 1000 ರೂಪಾಯಿ ಆಫರ್ ಸಿಗುತ್ತದೆ. ಇದಿಷ್ಟೇ ಅಲ್ಲದೇ ನಾವು ಎಲ್ಲಾ ಕಾಲೇಜು, ವಿಶ್ವವಿದ್ಯಾಲಯಕ್ಕೆ ಹೋಗುವವರಿಗೆ ಪ್ರತ್ಯೇಕವಾಗಿ ಯಾವುದೇ ಒನ್‌ಪ್ಲಸ್ ಸಾಧನಗಳ ಮೇಲೆ ಮೇಲೆ ಶೇ.5ರಷ್ಟು ರಿಯಾಯಿತಿ ನೀಡುತ್ತಿದ್ದೇವೆ ಎಂದು ಹೇಳಿಕೊಂಡಿದೆ.

ಮುಂದಿನ ವಾರ ನೋಕಿಯಾ 2.4 ಬಜೆಟ್ ಫೋನ್ ಬಿಡುಗಡೆ

ಈ ಒನ್‌ಪ್ಲಸ್ ಎಜುಕೇಷನ್ ಬೆನೆಫಿಟ್ಸ್ ಕಾರ್ಯಕ್ರಮವು ದೇಶದ ಸುಮಾರು 760 ವಿಶ್ವವಿದ್ಯಾಲಯಗಳು ಮತ್ತು 38,498 ಕಾಲೇಜುಗಳನ್ನು ಕವರ್ ಮಾಡಲಿದೆ.

ವಿದ್ಯಾರ್ಥಿ ಅಥವಾ ಶಿಕ್ಷಕರೊಬ್ಬರು  ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಅಥವಾ ಒನ್‌ಪ್ಲಸ್ ಟಿವಿ ಖರೀದಿಸಿದಾಗ ಸಾವಿರ ರೂಪಾಯಿ ರಿಯಾಯ್ತಿ ಪಡೆದುಕೊಳ್ಳುತ್ತಾರೆ. ಹಾಗೆಯೇ, ಒನ್‌ಪ್ಲಸ್ ಇತರ ಅಸ್ಸೆಸರಿಗಳನ್ನುಖರೀದಿಸಿದರೆ ಅದರ ಮೇಲೆ ಶೇ.5ರಷ್ಟು ರಿಯಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. 

ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್ ಹೋಗಿ ನೀವು ನೋಂದಣಿ ಮಾಡಿಕೊಂಡು ವಿದ್ಯಾರ್ಥಿ ಅಥವಾ ಶಿಕ್ಷಕ ಎಂಬುದನ್ನು ಖಚಿತಪಡಿಸಬೇಕು. ಬಳಿಕ ನಿಮಗೆ ಬೇಕಿರುವ ಒನ್‌ಪ್ಲಸ್ ಉತ್ಪನ್ನಗಳನ್ನು ಖರೀದಿಸಬಹುದು. ಮತ್ತು ಆಫರ್‌ಗಳನ್ನು ಪಡೆದುಕೊಳ್ಳಬಹುದು.

ಮುಂದಿನ ವರ್ಷ Realme X7 ಸೀರಿಸ್ 5G ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ 

ಪ್ರಸ್ತುತ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸದಸ್ಯರು ಮಾತ್ರ ಈ ರಿಯಾಯ್ತಿಗೆ ಅರ್ಹರಾಗಿರುತ್ತಾರೆ. ಈ ಪ್ರಯೋಜನವನ್ನು ವರ್ಷಕ್ಕೆ ಒಮ್ಮೆ ಮಾತ್ರ ಬಳಸಬಹುದಾಗಿದೆ. ಆಡಿಯೊ ಸಾಧನಗಳು, ಕೇಸ್‌ಸ್(ಮೊಬೈಲ್ ಕವರ್) ಮತ್ತು ಪ್ರೋಟೆಕ್ಷನ್ ಸೇರಿದಂತೆ ಇತರ ಎಲ್ಲ ಅಸ್ಸೆಸರಿಸ್‌ಗಳನ್ನು ಖರೀದಿಸುವಾಗ ಶೇ.5ರಷ್ಟು ರಿಯಾಯ್ತಿಯನ್ನು ಪಡೆಯಬಹುದು. ವಿದ್ಯಾರ್ಥಿ ಅಥವಾ ಅಧ್ಯಾಪಕ ಸದಸ್ಯರಿಗೆ ನೀಡಲಾಗುವ ವೋಚರ್ ಅವರ ಒನ್‌ಪ್ಲಸ್ ಖಾತೆಯಿಂದ ಬದ್ಧವಾಗಿರುತ್ತದೆ ಮತ್ತು ಅದನ್ನು ಆ ವ್ಯಕ್ತಿಯು ಮಾತ್ರವೇ ಬಳಸಬಹುದು. ಒಂದು ವರ್ಷದ ಪರಿಶೀಲನೆಯ ನಂತರ ವೋಚರ್ ಅವಧಿ ಮುಗಿಯುತ್ತದೆ, ಮತ್ತು ಬಳಕೆದಾರರು ಮತ್ತೊಮ್ಮೆ ಹೊಸ ವೋಚರ್ ಪಡೆಯಲು ಮತ್ತೊಮ್ಮೆ ಪರಿಶೀಲಿಸಬೇಕಾಗುತ್ತದೆ.

OnePlus introduces Educational Benefits students can avail offers

ಒನ್‌ಪ್ಲಸ್ ಇತ್ತೀಚೆಗಷ್ಟೇ ಒನ್‌ಪ್ಲಸ್ 8ಟಿ ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು 42,999 ರೂಪಾಯಿಯಿಂದ ಆರಂಭವಾಗುತ್ತದೆ. ಒನ್‌ಪ್ಲಸ್ 8ಟಿ ಸ್ಮಾರ್ಟ್‌ಫೋನ್ ನಮೂನೆಗಳಲ್ಲಿ ಮಾರಾಟಕ್ಕೆಲಭ್ಯವಿದೆ. ಮೊದಲನೆಯದು 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಬೆಲೆ 42,999 ರೂಪಾಯಿ. ಎರಡನೆಯದ್ದು 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್. ಈ ಡಿವೈಸ್ ಬೆಲೆ 45,999 ರೂಪಾಯಿ. 120 ಹಜಾರ್ಡ್ ಡಿಸ್‌ಪ್ಲೇ ಮತ್ತು 4,500 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಈ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿದ್ದು, ಈ ಬ್ಯಾಟರಿ ಕೇವಲ 39 ನಿಮಿಷದಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 65 ವ್ಯಾಟ್ ಫಾಸ್ಟ್‌ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.

ಈ ಎರಡೂ ಮಾದರಿಯ ಫೋನ್‌ಗಳು ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಾಗಿದ್ದು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ.

ಆಕರ್ಷಕ ಬೆಲೆ: ಭಾರತದಲ್ಲಿ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಬಿಡುಗಡೆ
 

Latest Videos
Follow Us:
Download App:
  • android
  • ios