ಇತ್ತೀಚೆಗಷ್ಟೇ ಒನ್‌ಪ್ಲಸ್ 8ಟಿ ಮೂಲಕ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಒನ್‌ಪ್ಲಸ್, 9 ಸೀರಿಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಮುಂದಾಗಿದೆಯಾ? ಹೌದು, ಇಂಥದೊಂದು ಅನುಮಾನ ಬರಲು ಕಾರಣವಿದೆ. ಕೆಲವು ವರದಿಗಳ ಪ್ರಕಾರ ಒನ್‌ಪ್ಲಸ್ ಕಂಪನಿ ಮುಂದಿನ ಮಾರ್ಚ್‌ನಲ್ಲಿ ಒನ್‌ಪ್ಲಸ್ 9 ಸಿರೀಸ್ ಫೋನ್‌ ಅನಾವರಣಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದರೆ, ನಿಗದಿತ ಬಿಡುಗಡೆ ವೇಳೆಗಿಂತ ನಾಲ್ಕು ವಾರ ಮುಂಚೆಯೇ 9 ಸಿರೀಸ್ ಬಿಡುಗಡೆಯಾಗಬಹುದು ಎಂಬುದು ಗುಸುಗುಸು ಇದೆ. 

ಒನ್‌ಪ್ಲಸ್ 9 ಸೀರಿಸ್‌ನ ಒನ್‌ಪ್ಲಸ್ 9 ಮತ್ತು 9 ಪ್ರೊ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ಮತ್ತು ಭಾವಚಿತ್ರವನ್ನು voice.comನ ಆನ್‌ಲೀಕ್‌ ಕಮ್ಯುನಿಟಿಯಲ್ಲಿ ಹಂಚಿಕೊಳ್ಳಲಾಗಿದೆ. 2021ರ ಮೊದಲ ಸ್ಮಾರ್ಟ್‌ಫೋನ್ ಭಾವಚಿತ್ರ ಇದು ಎಂದು ನೀವು ಭಾವಿಸಿಕೊಳ್ಳಬಹುದು. 

ನವೆಂಬರ್ 26ಕ್ಕೆ ರೆಡ್‌ಮೀ ನೋಟ್ 9 ಸರಣಿ ಫೋನ್‌ಗಳು ಬಿಡುಗಡೆ

ಸೋರಿಕೆಯಾದ ಮುಂಬರುವ ಒನ್‌ಪ್ಲಸ್ 9 ಪ್ರೋ ಆಯತಾಕಾರದ ಕ್ಯಾಮೆರಾ ಸೆಟ್ ಅಪ್ ವಿನ್ಯಾಸವನ್ನು ನೀವು ಗಮನಿಸಬಹುದು. ಹೀಗಿದ್ದಾಗ್ಯೂ, 9 ಪ್ರೋ ಮಾದರಿಯು ಹೆಚ್ಚುವರಿ ಕ್ಯಾಮರಾ ಸೆನ್ಸರ್ ಮತ್ತು ಆಯತಾಕಾರದ ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿರುವಂತೆ ಕಾಣುತ್ತದೆ. ಮತ್ತೊಂದು ಪ್ರಮುಖ ವ್ಯತ್ಯಾಸವವನ್ನು ನೀವು ಡಿಸ್ಪ್ಲೇಯಲ್ಲಿ ಗುರತಿಸಬಹುದು. ಒನ್‌ಪ್ಲಸ್ 9 ಪ್ರೋ ಒನ್‌ಪ್ಲಸ್ 9 ನಲ್ಲಿನ 6.55-ಇಂಚಿನ ಫ್ಲಾಟ್ ಪ್ಯಾನೆಲ್‌ಗೆ ಬದಲಾಗಿ ಸ್ವಲ್ಪ ದೊಡ್ಡದಾದ 6.7-ಇಂಚಿನ ಕರ್ವ್ ಆಗಿರುವುದನ್ನು ನೀವು ಗಮನಿಸಬಹುದು. 9 ಪ್ರೋ ಕ್ಯಾಮರಾದ ಮೇಲೆ ಇತ್ತೀಚೆಗಷ್ಟೇ ಬಿಡುಗಡೆಯಾದ ಒನ್‌ಪ್ಲಸ್ 8ಟಿಗೆ ಅಳವಡಿಸಲಾದ ಕ್ಯಾಮರ ಪ್ರಭಾವ ದಟ್ಟವಾಗಿರುವುದನ್ನು ಕಾಣಬಹುದು.

ಒನ್‌ಪ್ಲಸ್ 9 ಪ್ರೋ ಸ್ಮಾರ್ಟ್‌ಫೋನ್ ಕೆಳಗಿನ ಬದಿಯಲ್ಲಿ ನೀವು ಸ್ಪೀಕರ್ ಮತ್ತು ಯುಎಸ್‌ಹಿ ಸಿ-ಪೋರ್ಟ್ ಇರುವುದನ್ನು ಕಾಣಬಹುದು. ಅಲರ್ಟ್ ಸ್ಲೈಡರ್ ಮತ್ತು ಪವರ್ ಬಟನ್‌ಗಳು ಬಲಬದಿಗೆ ಇದ್ದು ಎಡಬದಿಯಲ್ಲಿ ವಾಲ್ಯೂಮ್‌  ಬಟನ್‌ಗಳನ್ನು ಅಳವಡಿಸಲಾಗಿದೆ. ಟಿಪ್‌ಸ್ಟರ್ ಪ್ರಕಾರ ಈ ಒನ್‌ಪ್ಲಸ್ 9 ಸೀರಿಸ್ ಫೋನ್‌ಗಳು ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬಹುದು. ಇದೇ ವೇಳೆ, ಈಗ ಲೀಕ್ ಆಗಿರುವ ವಿನ್ಯಾಸಗಳೇ ಅಂತಿಮವಲ್ಲ. ಇವು ಪ್ರೋಟೋಟೈಪ್ ಆಗಿದ್ದು ಈ ಸ್ಮಾರ್ಟ್‌ಫೋನ್ ಬೃಹತ್ ಪ್ರಮಾಣದ ಉತ್ಪಾದನೆಯಾಗುತ್ತಿದ್ದಂತೆ ವಿನ್ಯಾಸದಲ್ಲಿ ಮತ್ತಷ್ಟು ಬದಲಾವಣೆಗಳನ್ನು ಕಾಣಹುದಾಗಿದೆ ಎಂದು ಆನ್‌ಲೀಕ್ ಅಭಿಪ್ರಾಯ ಪಟ್ಟಿದೆ.

PUBG ಇಂಡಿಯಾದಿಂದ 6 ಕೋಟಿ ರೂಪಾಯಿ ಗೇಮಿಂಗ್ ಸ್ಪರ್ಧೆ?

ಇದೇ ವೇಳೆ 91ಮೊಬೈಲ್ಸ್ ಕೂಡ ಪ್ರತ್ಯೇಕವಾಗಿ ಒನ್‌ಪ್ಲಸ್ 9 ಸ್ಮಾರ್ಟ್‌ಫೋನ್‌ನ ಕ್ಯಾಮರಾ ಲೈವ್ ಇಮೇಜ್ ಜೊತೆಗೆ ಕ್ಯಾಮರಾಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದೆ. ಲೈವ್ ಇಮೇಜ್‌ನಲ್ಲಿ ನೀವು ಆಯತಾಕಾರದ ಮಾಡ್ಯೂಲ್‌ನೊಳಗೇ ಮೂರು ಸೆನ್ಸರ್‌ಗಳು ಇರುವುದನ್ನು ಗಮನಿಸಬಹುದು. ಈ ಪೈಕಿ ಎರಡು ದೊಡ್ಡ ಗಾತ್ರದ ಲೆನ್ಸ್‌ಗಳಿದ್ದು, ಮತ್ತೊಂದು ತುಂಬ ಚಿಕ್ಕದಾದ ಲೆನ್ಸ್ ಇರುವುದು ಕಾಣುತ್ತದೆ. 

ಮತ್ತೊಂದು ಮೂಲದ ಪ್ರಕಾರ, ಒನ್‌ಪ್ಲಸ್‌ 9 ಪ್ರೋನಲ್ಲಿ 6 ಎಂಎಂ ಫೋಕಲ್ ಲೆಂಥ್ ಇರುವ 48 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ ಹಾಗೂ ಅಲ್ಟ್ರಾ ವೈಡ್ ಸೆಕೆಂಡರಿ ಸೆನ್ಸರ್ ಇರುವ 48 ಮೆಗಾ ಪಿಕ್ಸೆಲ್ ಕ್ಯಾಮರಾ ಕೂಡ ಇರಲಿದೆ. ಆದರೆ, ಮೂರನೇ ಕ್ಯಾಮರಾ ಬಗ್ಗೆ ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ. ಹಾಗಾಗಿ, ಮ್ಯಾಕ್ರೋ ಅಥವಾ ಮೋನೋಕ್ರೋಮ್ ಸೆನ್ಸರ್ ಕ್ಯಾಮರಾ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.

ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ಕೃಷ್ಟತೆಯನ್ನು ಕಾಯ್ದುಕೊಂಡು ಒಂದು ವರ್ಗದ ಗ್ರಾಹಕರನ್ನು ಸೆಳೆಯಲು ಶಕ್ಯವಾಗಿರುವ ಒನ್‌ಪ್ಲಸ್ ಇದೀಗ ಹೊಸ ವರ್ಷದಲ್ಲಿ 9 ಸೀರಿಸ್ ಮೂಲಕ ಕಮಾಲ್ ಹೊರಟಿದೆ ಎಂದು ಹೇಳಬೇಕು. ಹಾಗಂತ, ಈ ಎಲ್ಲ ಮಾಹಿತಿಯನ್ನು ಕಂಪನಿಯೇನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಸೋಷಿಯಲ್ ಮೀಡಿಯಾ ಹಾಗೂ ಕೆಲವು ವೆಬ್‌ಸೈಟ್‌ಗಳಲ್ಲಿ ಈ ಮಾಹಿತಿ ಸೋರಿಕೆಯಾಗುತ್ತಿದೆಯಷ್ಟೇ. 

Streamfest: ಡಿ.5ರಿಂದ 6ರವರೆಗೆ ಉಚಿತವಾಗಿ ನೆಟ್‌ಫ್ಲಿಕ್ಸ್ ನೋಡಿ!