Asianet Suvarna News Asianet Suvarna News

ಫೇಸ್‌ಬುಕ್‌ ಕಂಪನಿ ಇನ್ನು ಮೆಟಾವರ್ಸ್‌: ಜುಕರ್‌ಬರ್ಗ್‌ ಘೋಷಣೆ!

* ಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಕಂಪನಿ ಹೆಸರು ಬದಲಾವಣೆ

* ಫೇಸ್‌ಬುಕ್‌ ಕಂಪನಿ ಇನ್ನು ಮೆಟಾವರ್ಸ್‌

* ವಾರ್ಷಿಕ ಸಭೆಯಲ್ಲಿ ಜುಕರ್‌ಬರ್ಗ್‌ ಘೋಷಣೆ

Facebook changes name to Meta as it refocuses on virtual reality pod
Author
Bangalore, First Published Oct 29, 2021, 7:51 AM IST

ಓಕ್‌ಲೆಂಡ್‌(ಅ.29): ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಕಂಪನಿ (Facebook Company) ಮುಖ್ಯಸ್ಥ ಮಾರ್ಕ್ ಜುಕರ್‌ ಬರ್ಗ್‌ (Mark Zukerberg) ಅವರು ಭವಿಷ್ಯದ ವಚ್ರ್ಯುವಲ್‌ ರಿಯಾಲಿಟಿ ದೃಷ್ಟಿಕೋನದ ದೃಷ್ಟಿಕೋನದೊಂದಿಗೆ ತಮ್ಮ ಕಂಪನಿಯನ್ನು ‘ಮೆಟಾ’ (Meta) ಎಂಬ ಹೆಸರಿನಲ್ಲಿ ಬ್ರಾಂಡಿಂಗ್‌ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಇದಕ್ಕೆ ಮೆಟಾವರ್ಸ್‌ ಎಂದು ಅವರು ಕರೆದಿದ್ದಾರೆ.

ಗುರುವಾರ ನಡೆದ ಕಂಪನಿಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜುಕರ್‌ ಬರ್ಗ್‌ (Mark Zukerberg) ಅವರು, ‘ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದೇ ಕಾರಣಕ್ಕೆ ನಮ್ಮ ಕಂಪನಿ ಜನರ ಸಂಪರ್ಕದ ಕೇಂದ್ರವಾಗಿದೆ. ನಾವೆಲ್ಲರೂ ಒಟ್ಟಾಗಿ ಬೃಹತ್‌ ಪ್ರಮಾಣದ ಆರ್ಥಿಕತೆಯನ್ನು ಸೃಷ್ಟಿಸಬಹುದು. ಅಲ್ಲದೆ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್‌ 100 ಕೋಟಿ ಜನರನ್ನು ತಲುಪಲಿದೆ’ ಎಂದು ಆಶಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಹಲವು ಯೋಜನೆಗಳಿಗೆ ಫೇಸ್ಬುಕ್‌ ಹೆಸರನ್ನು ಪೂರ್ತಿಯಾಗಿ ಬಳಸುವುದಿಲ್ಲ. ಆದರೆ ಕಾಲಾಂತರದಲ್ಲಿ ನಾವು ಮೆಟಾವರ್ಸ್‌ ಕಂಪನಿಯಾಗಿ ಬದಲಾವಣೆಯಾಗುವ ಭರವಸೆಯಿದೆ ಎಂದು ಹೇಳಿದರು.

ಟ್ವಿಟರ್‌ನಿಂದ ಬಹಿಷ್ಕಾರ: ತನ್ನದೇ ಹೊಸ ಸಾಮಾಜಿಕ ಜಾಲತಾಣ ಪ್ರಾರಂಭಿಸಲಿದ್ದಾರೆ ಟ್ರಂಪ್!

ಮೆಟಾವರ್ಸ್‌ (Metaverse) ವೇದಿಕೆಯು ಜನರ ಸಂವಹನ, ಕೆಲಸ, ಉತ್ಪನ್ನಗಳಿಗೆ ಮಾರುಕಟ್ಟೆ, ವಿವಿಧ ವಿಷಯಗಳ ಕುರಿತ ರಚನೆ ಅವಕಾಶ ನೀಡಲಿದ್ದು, ಲಕ್ಷಾಂತರ ಮಂದಿಗೆ ಉದ್ಯೋ ದೊರಕಿಸಿಕೊಡಲಿದೆ ಎಂದು ಹೇಳಿದರು. ವಿಶ್ವದ ಹಲವು ಭಾಗಗಳಲ್ಲಿ ಫೇಸ್‌ಬುಕ್‌ ವಿರುದ್ಧ ಶಾಸಕಾಂಗದ ಕ್ರಮ ಮತ್ತು ನಿಯಂತ್ರಣವನ್ನು ಎದುರಿಸುತ್ತಿರುವ ಹಾಗೂ ಅಸ್ತಿತ್ವದ ಕುರಿತ ಬಿಕ್ಕಟ್ಟಿನ ಮಧ್ಯೆ ಫೇಸ್‌ಬುಕ್‌ ಕಂಪನಿಗೆ ಹೊಸ ನಾಮಕರಣದ ನಿರ್ಧಾರ ಹೊರಬಿದ್ದಿದೆ.

ಮೆಟಾವರ್ಸ್‌ ಎಂದರೇನು?

ನೈಜ ಪ್ರಪಂಚದಿಂದ ತಪ್ಪಿಸಿಕೊಳ್ಳುವ ವಚ್ರ್ಯುವಲ್‌ ಪ್ರಪಂಚದ ಜನರನ್ನು ಉದ್ದೇಶಿಸಿ ಕಾದಂಬರಿಕಾರ ನೀಲ್‌ ಸ್ಟೆಫನ್ಸನ್‌ ಅವರು ಮೆಟಾವರ್ಸ್‌ ಎಂಬ ಪದವನ್ನು ಮೊಟ್ಟಮೊದಲ ಬಾರಿಗೆ ಬಳಕೆ ಮಾಡಿದ್ದರು. ಇದೀಗ ಇದೇ ಹೆಸರನ್ನು ಜುಕರ್‌ಬರ್ಗ್‌ ಅವರು ಫೇಸ್‌ಬುಕ್‌ ಕಂಪನಿಗೆ ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ.

ಟ್ವಿಟರ್‌ನ ಸ್ಪೇಸ್ ಎಲ್ಲರೂ ಬಳಸಬಹುದು, ಫಾಲೋವರ್ಸ್ ಮಿತಿ ಇಲ್ಲ!

ಫೇಸ್‌ಬುಕ್ ಈಗ ಭವಿಷ್ಯವನ್ನೂ ಊಹಿಸಬಲ್ಲುದು!

ಫೇಸ್‌ಬುಕ್‌ (Facebook)ನಿಂದ ಏನೆಲ್ಲ ಉಪಯೋಗಗಳಿವೆ? ನಿಮ್ಮ ಫ್ರೆಂಡ್ ಸರ್ಕಲ್ (Friend Circle) ಸಿಗಬಹುದು, ಹೊಸ ಫ್ರೆಂಡ್ಸ್ ಆಗಬಹುದು, ಮಾಹಿತಿ ಷೇರ್ ಮಾಡಿಕೊಳ್ಳಬಹುದು, ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಬಹುದು ಇತ್ಯಾದಿ.  ಇಷ್ಟು ಮಾತ್ರವಲ್ಲದೇ  ಲಾಭಗಳ ಪಟ್ಟಿ ದೊಡ್ಡದಾಗುತ್ತ ಹೋಗುತ್ತದೆ ಅಲ್ಲವೇ? 

ದೈತ್ಯ ಸೋಷಿಯಲ್ ಮೀಡಿಯಾ (Social Media) ಫೇಸ್‌ಬುಕ್‌ನಿಂದ ಮತ್ತೊಂದು ಮಹತ್ತರ ಪ್ರಯೋಜನ ದೊರೆಯುವ ಸಾಧ್ಯತೆ ಇದೆ. ನೀವು ಫೇಸ್‌ಬುಕ್ (Facebook) ಮೂಲಕವೇ ಭವಿಷ್ಯವನ್ನು ಊಹಿಸಬಹುದು (Predict the Future)! ಹೌದು, ಇದು ಆಶ್ಚರ್ಯವಾದರೂ ನಿಜ. ಫೇಸ್‌ಬುಕ್ ಇತ್ತೀಚೆಗಷ್ಟೇ ಆಂಟಿಸಿಪೆಟಿವ್ ವಿಡಿಯೋ ಟ್ರಾನ್ಸಫಾರ್ಮರ್ (Anticipative Video Transformer- AVT) ಎಂಬ ಮಷಿನ್ ಲರ್ನಿಂಗ್ ಪ್ರೊಸೆಸ್ (Machine Learning Process) ಅನ್ನು ಅನಾವರಣ ಮಾಡಿದೆ. ಎವಿಟಿ (AVT) ಮೂಲಕ ದೃಶ್ಯಗಳನ್ನು ವ್ಯಾಖ್ಯಾನ ಮಾಡುವ ಮೂಲಕ ಭವಿಷ್ಯವನ್ನು ಊಹಿಸಲು ಸಾಧ್ಯವಾಗಲಿದೆ.

Artificial Intelligence ಸ್ಟಾರ್ಟ್‌ಅಪ್‌ ಬೆಂಬಲಿಸಲು ಮೈಕ್ರೋಸಾಫ್ಟ್ AI ಇನೋವೇಟ್ ಕಾರ್ಯಕ್ರಮ!

ವರ್ಧಿತ ರಿಯಾಲಿಟಿ (Augmented Reality - AR) ಅಥವಾ ಮೆಟಾವರ್ಸ್‌ಗಾಗಿ ಫೇಸ್‌ಬುಕ್‌ನ ದೊಡ್ಡ ವಾಹನದ ಸಣ್ಣ ಚಕ್ರದಂತೆ ಗ್ರಹಿಸಲ್ಪಟ್ಟಿರುವ ಕಾರಣ, ಎವಿಟಿ (AVT) ಚಟುವಟಿಕೆಗಳನ್ನು ವಿಶ್ಲೇಷಿಸುವ ಮೂಲಕ ಸಂಭಾವ್ಯ ಫಲಿತಾಂಶವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಪಡೆಯಲಿದೆ ಎಂಬುದು ಫೇಸ್‌ಬುಕ್ ಅಭಿಪ್ರಾಯವಾಗಿದೆ. 

ಈ ಹೊಸ ತಂತ್ರಜ್ಞಾನವು ಅಪ್ಲಿಕೇಷನ್‌ಗಳ ಸರಣಿಯಾಗಿದೆ. ಇದು ಎಆರ್ (AR) ಅನ್ನು ಆಕ್ಷನ್ ಕೋಚ್ ಆಗಿ ಅಥವಾ ಕೃತಕ ಬುದ್ಧಿಮತ್ತೆ (intelligence assistant) ಸಹಾಯಕವಾಗಿ ಎವಿಟಿ ಬಳಸಿಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಸಮಯದೊಳಗೆ ಜನರು ಮಾಡುವ ತಪ್ಪುಗಳಿಗೆ ಸಂಬಂಧಿಸಿದಂತೆ ಈ ಹೊಸ ಟೂಲ್ ಎಚ್ಚರಿಕೆಯನ್ನು ರವಾನಿಸುವ ಕೆಲಸವನ್ನು ಮಾಡುತ್ತದೆ. ಇಷ್ಟು ಮಾತ್ರವಲ್ಲದೇ, ವ್ಯಕ್ತಿಯೊಬ್ಬ ತಾನು ಪಾಲಿಸಬೇಕಾದ ಸರಿಯಾದ ಮಾರ್ಗದ ಕುರಿತಂತೆಯೂ ಪರಿಹಾರವನ್ನು ಸೂಚಿಸುವ ಕೆಲಸವನ್ನು ಮಾಡಲಿದೆ.

Follow Us:
Download App:
  • android
  • ios