Asianet Suvarna News Asianet Suvarna News

ಟ್ವಿಟರ್‌ನ ಸ್ಪೇಸ್ ಎಲ್ಲರೂ ಬಳಸಬಹುದು, ಫಾಲೋವರ್ಸ್ ಮಿತಿ ಇಲ್ಲ!

ಇತ್ತೀಚಿನ ಕೆಲವು ದಿನಗಳಲ್ಲಿ ಕ್ಲಬ್‌ಹೌಸ್(ClubHouse) ಆಡಿಯೋ ವೇದಿಕೆ ಹೆಚ್ಚು ಜನಪ್ರಿಯವಾಗಿದೆ. ಅದೇ ರೀತಿ, ಟ್ವಿಟರ್ (Twitter) ಕೂಡ ಅಂಥದ್ದೇ ಆಡಿಯೋ ವೇದಿಕೆಯಾಗಿರುವ ಸ್ಪೇಸ್ ಆರಂಭಿಸಿದೆ. ಈ ಮೊದಲು ಈ ಸೇವೆಯನ್ನು 600 ಫಾಲೋವರ್ಸ್ ಹೊಂದಿದವರು ಮಾತ್ರ ಬಳಸಬಹುದಿತ್ತು. ಇದೀಗ ಆ ಮಿತಿಯನ್ನು ಟ್ವಿಟರ್ ತೆಗೆದು ಹಾಕಿದೆ. 

Now Twitter spaces can use all without follower restriction
Author
Bengaluru, First Published Oct 24, 2021, 3:42 PM IST | Last Updated Oct 24, 2021, 3:42 PM IST

ಕ್ಲಬ್‌ಹೌಸ್‌ (Clubhouse)ನಲ್ಲಿ ಕೂತ ಮಾತನಾನೋಡರು ಇನ್ನು ಟ್ವಿಟರ್‌ (Twitter) ನಲ್ಲೂ ಅದೇ ರೀತಿ ಮಾತನಾಡಬಹುದು. ಯಾಕೆಂದರೆ, ಅಮೆರಿಕ (America) ಮೂಲದ ಟ್ವಿಟರ್ (Twitter), ಈಗ ತನ್ನ ಬಳಕೆದಾರರಿಗೆ ಆಡಿಯೋ ಚಾಟ್ ಸೇವೆ ಒದಗಿಸುವ ಸ್ಪೇಸಸ್ (Sapces) ಅನ್ನು ಎಲ್ಲ ಬಳಕೆದಾರರಿಗೆ ಮುಕ್ತವಾಗಿಸಿದೆ. 

ಆಡಿಯೋ ವೇದಿಕೆಯಾಗಿರುವ ಕ್ಲಬ್‌ಹೌಸ್, ಕಳೆದ ವರ್ಷದಿಂದ ಸಿಕ್ಕಾಪಟ್ಟೆ ಪ್ರಸಿದ್ಧಿಯಾಗಿದೆ. ಇದೇ ವೇಳೆ, ಟ್ವಿಟರ್ ಕೂಡ ಅದೇ ಮಾದರಿಯ ವೇದಿಕೆಯನ್ನು ರೂಪಿಸಿತ್ತು. ಇದು ಕ್ಲೌಬ್‌ಹೌಸ್ ಪ್ರೇರಿತವಾಗಿದ್ದು, ಬಳಕೆದಾರರಿಗೆ ಆಡಿಯೋ (Audio) ಚಾಟ್ ರೂಮ್ (Chat Room) ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಟ್ವಿಟರ್‌ನಲ್ಲಿ ಈ ಹಿಂದೆ 600 ಕ್ಕಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜನರು ಮಾತ್ರ ಸ್ಪೇಸ್ಗಳನ್ನು ಆಯೋಜಿಸಬಹುದು. ಟ್ವಿಟರ್ನಲ್ಲಿ ಚರ್ಚೆಗಳನ್ನು ಈಗ ಎಲ್ಲಾ ಬಳಕೆದಾರರು ತಮ್ಮ ಅನುಯಾಯಿಗಳ ಸಂಖ್ಯೆಯನ್ನು ಲೆಕ್ಕಿಸದೆ ಸ್ಪೇಸ್ ಆಯೋಜಿಸಬಹುದು.

ಈ ಸಂಬಂಧ ಟ್ಟ್ವಿಟ್ಟರ್ (Twitter) ತನ್ನ ಸ್ಪೇಸಸ್ ಟ್ವಿಟರ್ ಹ್ಯಾಂಡಲ್ ಮೂಲಕ ಸುದ್ದಿಯನ್ನು ಖಚಿತಪಡಿಸಿದೆ. ಜೊತೆಗೆ ಮೊಬೈಲ್ (Mobile) ನಲ್ಲಿ ಸ್ಪೇಸ್ ಅನ್ನು ಹೇಗೆ ಆರಂಭಿಸುವುದು ಎಂಬುದರ ಕುರಿತು ಸಂಕ್ಷಿಪ್ತ ವಿವರವನ್ನು ಒದಗಿಸುವ ವಿಡಿಯೋ (Video) ವನ್ನು ಷೇರ್ ಮಾಡಿದೆ.

ಫೇಸ್‌ಬುಕ್ ಈಗ ಭವಿಷ್ಯವನ್ನೂ ಊಹಿಸಬಲ್ಲುದು

ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಬಳಕೆದಾರರು ಈ ಸ್ಪೇಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಬಳಕೆದಾರರು ಹೋಮ್‌ಪೇಜ್‌ನಲ್ಲಿರುವ ಹೊಸ ಟ್ವೀಟ್ ಐಕಾನ್ ಅನ್ನು ಒತ್ತಿ ನಂತರ ಸ್ಪೇಸ್ ಆಯ್ಕೆಯನ್ನು (ಚುಕ್ಕೆಗಳ ಕ್ಲಸ್ಟರ್) ಆಯ್ಕೆ ಮಾಡುವ ಮೂಲಕ ಸ್ಪೇಸ್ ಆರಂಭಿಸಬಹುದು. ನಂತರ, ಬಳಕೆದಾರರು ತಮ್ಮ ಚರ್ಚೆಗೆ ಶೀರ್ಷಿಕೆಯನ್ನು ನೀಡಬಹುದು. ತಮಗೆ ಬೇಕಾದ ಜನರ ವರ್ಗವನ್ನು ಆರಿಸಬೇಕು ಮತ್ತು ಆ ನಂತರ ಅವರೊಂದಿಗೆ ಸ್ಪೇಸ್‌ನಲ್ಲಿ ಪ್ರಾರಂಭಿಸಬಹುದು. 

ಟ್ವಿಟರ್‌ನ ಈ ಸ್ಪೇಸ್ ಬಳಕೆದಾರರಿಗೂ ಶೆಡ್ಯೂಲ್ ಮಾಡುವ ಆಯ್ಕೆಯನ್ನು ಒದಗಿಸುತ್ತದೆ. ಸ್ಪೇಸ್ ಆರಂಭಿಸಲು ಬಳಕೆದಾರರು ಮೈಕ್ರೊಫೋನ್ (Microphone) ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಸ್ಪೇಸ್‌ಗಳು ಕ್ಲಬ್‌ಹೌಸ್‌ಗೆ ಮೈಕ್ರೋಬ್ಲಾಗಿಂಗ್ (Micro Blogging)  ಪ್ಲಾಟ್‌ಫಾರ್ಮ್‌ನ ಪ್ರತಿಕ್ರಿಯೆಯಾಗಿದೆ. 

ಉಚಿತ ವಾಟ್ಸಾಪ್ ಬ್ಯಾಕ್‌ಅಪ್ ಶೀಘ್ರವೇ ಅಂತ್ಯ? ಸ್ಪೇಸ್ ಬೇಕಿದ್ದರೆ ದುಡ್ಡು ಕೊಡ್ಬೇಕಾ? 

ಮೊಬೈಲ್‌ (Mobile)ನಲ್ಲಿ ಮಾತ್ರವಲ್ಲದೇ ಬಳಕೆದಾರರು ವೆಬ್‌ (Web)ನಲ್ಲಿ ಸ್ಪೇಸ್ (Spaces) ಸೇವೆಯನ್ನು ಪಡೆದುಕೊಳ್ಳಬಹುದು. ಟ್ವಿಟರ್ ಸ್ಪೇಸ್‌ಗಳನ್ನು ಕಳೆದ ತಿಂಗಳು ರೆಕಾರ್ಡಿಂಗ್ ಮತ್ತು ಪ್ಲೇಬ್ಯಾಕ್ ಕಾರ್ಯಕ್ಷಮತೆಯೊಂದಿಗೆ ಹೆಚ್ಚಿಸಲಾಗಿದೆ. ಆಡಿಯೋ ಚಾಟ್‌ಗಳ ನಂತರ  ಬಳಕೆದಾರರಿಗೆ ಅವುಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ. ಲಭ್ಯವಿರುವ ಕ್ರಿಯಾತ್ಮಕತೆಗೆ ಸಂಬಂಧಿಸಿದಂತೆ, ಆನ್‌ಲೈನ್ ಆವೃತ್ತಿಯು ಮೊಬೈಲ್ ಅಪ್ಲಿಕೇಶನ್‌ಗೆ ಹೋಲಿಸಿದಾಗ ವೆಬ್‌ ಬಳಕೆಯು ಸಾಕಷ್ಟು ಸೀಮಿತವಾಗಿದೆ.

ನಿಮ್ಮ ಫೋನ್‌ನಲ್ಲಿ Weather Report ಅಲರ್ಟ್ ಸೆಟ್ ಮಾಡುವುದು ಹೇಗೆ? 

ಕ್ಲಬ್‌ಹೌಸ್ ರೀತಿಯ ಆಡಿಯೋ ವೇದಿಕೆಯನ್ನು ಟ್ವಿಟರ್ ಮಾತ್ರವಲ್ಲದೇ ಫೇಸ್‌ಬುಕ್ ಕೂಡ ಅಭಿವೃದ್ಧಿ ಪಡಿಸುತ್ತಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು. ಇತ್ತೀಚಿನ ಕೆಲವು ದಿನಗಳಲ್ಲಿ ಆಡಿಯೋ ಸೋಷಿಯಲ್ ಮೀಡಿಯಾ ಹೆಚ್ಚೆಚ್ಚು ಜನರನ್ನು ಆಕರ್ಷಿಸಲು ಯಶಸ್ವಿಯಾಗುತ್ತಿದೆ. ಆ ಕಾರಣಕ್ಕಾಗಿ ಬೃಹತ್ ಕಂಪನಿಗಳು ಆಡಿಯೋ ವೇದಿಕೆಯನ್ನು ಬಳಕೆದಾರರಿಗೆ ಒದಗಿಸುತ್ತಿವೆ.

ಟ್ವಿಟರ್ ಹೊಸ ಜಾಹೀರಾತು ಸಾಮರ್ಥ್ಯ
ಟ್ವಿಟರ್ ಹೊಸ ಜಾಹೀರಾತು ಸಾಮರ್ಥ್ಯ (capabilities) ಗಳನ್ನು ಘೋಷಿಸಿದೆ. ಭವಿಷ್ಯದ ಇ-ಕಾಮರ್ಸ್ (e-commerce) ಸೇವೆಗಳಿಗೆ ಆಧಾರವನ್ನು ನಿರ್ಮಿಸುವ ಪ್ರಯತ್ನದ ಭಾಗವಾಗಿ ಯಾವ ಜಾಹೀರಾತುಗಳನ್ನು ಬಳಕೆದಾರರು ನೋಡುತ್ತಾರೆ ಎಂಬುದನ್ನು ನಿರ್ಧರಿಸುವ ಅಲ್ಗಾರಿದಮ್ (algorithm) ಅನ್ನು ಬದಲಾಯಿಸಿದೆ ಎಂದು ವರದಿಯಾಗಿದೆ. 

ಟ್ವಿಟರ್ ತನ್ನ ಕಾರ್ಯಕ್ಷಮತೆ ಜಾಹೀರಾತು ವ್ಯಾಪಾರವನ್ನು ವಿಸ್ತರಿಸಲು ಕೆಲಸ ಮಾಡುತ್ತಿರುವಾಗ ಹೊಸ ಸಾಮರ್ಥ್ಯಗಳು ಬಂದಿವೆ. ಇದು ತ್ವರಿತವಾಗಿ ಆದಾಯವನ್ನು ಸೃಷ್ಟಿಸುವ ಭರವಸೆಯನ್ನು ನೀಡುತ್ತದೆ ಮತ್ತು ಕಳೆದ ವರ್ಷ ಟ್ವಿಟರ್ (Twitter) ಆದಾಯದ ಕೇವಲ 15% ನಷ್ಟಿತ್ತು. 2023ರ ವೇಳೆಗೆ ಟ್ವಿಟರ್ ತನ್ನ ವಾರ್ಷಿಕ ಆದಾಯವನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನು ಪೂರೈಸಲು ಈ ಪ್ರಯತ್ನವು ನೆರವಾಗಲಿದೆ. 

Latest Videos
Follow Us:
Download App:
  • android
  • ios