Asianet Suvarna News Asianet Suvarna News

Artificial Intelligence ಸ್ಟಾರ್ಟ್‌ಅಪ್‌ ಬೆಂಬಲಿಸಲು ಮೈಕ್ರೋಸಾಫ್ಟ್ AI ಇನೋವೇಟ್ ಕಾರ್ಯಕ್ರಮ!

  • Artificial Intelligence ಬೆಂಬಲಿಸಲು ವಿಶೇಷ ಕಾರ್ಯಕ್ರಮ
  • AI ಇನೋವೇಟ್  ಪ್ರೋಗ್ರಾಮ್ ಹಮ್ಮಿಕೊಂಡ  ಮೈಕ್ರೋಸಾಫ್ಟ್ 
  • ನವೆಂಬರ್‌ನಿಂದ AI ಇನೋವೇಟ್ ಕಾರ್ಯಕ್ರಮ ಆರಂಭ
Microsoft AI Innovate empowers startups in India to accelerate with Artificial Intelligence ckm
Author
Bengaluru, First Published Oct 20, 2021, 11:43 PM IST

ಬೆಂಗಳೂರು(ಅ.20): ದೇಶದ ಸ್ಟಾರ್ಟ್‍ಅಪ್ ಪರಿಸರವ್ಯವಸ್ಥೆಗೆ  ಬೆಂಬಲ ಒದಗಿಸುವ ಸಲುವಾಗಿ ಮೈಕ್ರೋಸಾಫ್ಟ್, ಕೃತಕ ಬುದ್ಧಿಮತ್ತೆ(ಎಐ)ಅನ್ನು ವರ್ಧಿಸುತ್ತಿರುವ ಸ್ಟಾರ್ಟ್‍ಅಪ್‍ಗಳಿಗೆ ಬೆಂಬಲ ಒದಗಿಸಲು ಪ್ರೋಗ್ರಾಮ್ ಆರಂಭಿಸಿದೆ. 10-ವಾರಗಳ ಉಪಕ್ರಮವಾದ ಮೈಕ್ರೋಸಾಫ್ಟ್ AI ಇನೋವೇಟಿವ್, AI ತಂತ್ರಜ್ಞಾನಗಳನ್ನು ವರ್ಧಿಸುತ್ತಿರುವ ಸ್ಟಾರ್ಟ್‍ಅಪ್‍ಗಳಿಗೆ ಬೆಂಬಲ ಒದಗಿಸಿ ಅವುಗಳು ತಮ್ಮ ಕಾರ್ಯಾಚರಣೆಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ.   ಹಣಕಾಸು  ಸೇವೆಗಳು, ಆರೋಗ್ಯಶುಶ್ರೂಷೆ, ಶಿಕ್ಷಣ, ಕೃಷಿ, ಬಾಹ್ಯಾಕಾಶ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್, ರೀಟೇಲ್ ಹಾಗೂ ಇ-ವಾಣಿಜ್ಯ ಒಳಗೊಂಡಂತೆ ವಿವಿಧ ಉದ್ದಿಮೆಗಳಲ್ಲಿರುವ ಬಿ2ಬಿ ಹಾಗೂ ಬಿ2ಸಿ  ಸ್ಟಾರ್ಟ್‍ಅಪ್‍ಗಳೆರಡನ್ನೂ ಈ ಒಳಗೊಳ್ಳುವ ಉಪಕ್ರಮದ ತ್ರೈಮಾಸಿಕ ಗುಂಪಿನಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. 

ಡಿಜಿ ಸಕ್ಷಮ್; ಉದ್ಯೋಗಾವಕಾಶ ಹೆಚ್ಚಿಸುವ ಡಿಜಿಟಲ್ ಕೌಶಲ್ಯ ಕಾರ್ಯಕ್ರಮಕ್ಕೆ ಚಾಲನೆ!

ವಿಶ್ವದಲ್ಲಿ ಭಾರತವು ಸ್ಟಾರ್ಟ್‍ಅಪ್‍ಗಳ ಮೂರನೇ ಅತಿದೊಡ್ಡ ಪರಿಸರವ್ಯವಸ್ಥೆಯಾಗಿರುವಂತಹ ಸಂದರ್ಭದಲ್ಲಿ, ವಿವಿಧ ಉದ್ದಿಮೆಗಳಾದ್ಯಂತ ಆವಿಷ್ಕಾರವನ್ನು ವರ್ಧಿಸಲು ಆರಂಭಿಕ ವ್ಯಾಪಾರಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ. ಈ ವಿಶೇಷ ಕಾರ್ಯಕ್ರಮದ ಮೂಲಕ ಮೈಕ್ರೋಸಾಫ್ಟ್, ಎಲ್ಲರಿಗೂ ಎಐ ಪ್ರವೇಶಾವಕಾಶ ಸಿಗುವಂತೆ ಮಾಡುವ ಸಲುವಾಗಿ, ಸ್ಟಾರ್ಟ್‍ಅಪ್‍ಗಳು ತಮ್ಮ ಪರಿಹಾರಗಳನ್ನು ಸುಧಾರಿಸಿಕೊಳ್ಳಲು, ತಮ್ಮ ಸಂಸ್ಥೆಗಳನ್ನು ಪರಿವರ್ತಿಸಿಕೊಳ್ಳಲು ಮತ್ತು ಜವಾಬ್ದಾರಿಯುತವಾಗಿ ನಿರ್ಮಾಣ ಮಾಡಲು ಅವರಿಗೆ ತಂತ್ರಜ್ಞಾನ ಹಾಗೂ ವ್ಯಾಪಾರ ಅವಕಾಶಗಳನ್ನು ಒದಗಿಸುವುದರ ಮೇಲೆ ಗಮನ ಕೇಂದ್ರೀಕರಿಸಲಿದೆ.   ಮೈಕ್ರೋಸಾಫ್ಟ್‍ನ ಮಾರಾಟ ಹಾಗೂ ಭಾಗೀದಾರ ಜಾಲತಾಣದೊಡಗೂಡಿ ಸ್ಟಾರ್ಟ್‍ಅಪ್‍ಗಳು ಹೊಸಹೊಸ ಗ್ರಾಹಕರು  ಹಾಗೂ ಭೌಗೋಳಿಕ ಪ್ರದೇಶಗಳನ್ನು ತಲುಪಲು ಕೂಡ ನೆರವಾಗಲಿದೆ. ಪ್ರತಿಯೊಂದು ಗುಂಪಿನ ಆಯ್ದ ಸ್ಟಾರ್ಟ್‍ಅಪ್‍ಗಳು, ಉದ್ಯಮದ ನಿಪುಣರು ನಡೆಸಿಕೊಡುವ ಉದ್ಯಮದ ಸುದೀಘ ಅಧಿವೇಶನಗಳು ಹಾಗೂ ಎಐ ಮಾಸ್ಟರ್‍ಕ್ಲಾಸಸ್‍ಗಳಿಗೆ ಪ್ರವೇಶಾವಕಾಶ ಪಡೆದುಕೊಳ್ಳುವ ಮೂಲಕ ಯೂನಿಕಾರ್ನ್ ಸ್ಥಾಪಕರಿಂದ ಮಾರ್ಗದರ್ಶನ ಪಡೆದುಕೊಂಡು ಕೌಶಲ ಹಾಗೂ ಪ್ರಮಾಣಪತ್ರ ಅವಕಾಶದಂತಹ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಲಿದ್ದಾರೆ. 

“ಅರ್ಥಪೂರ್ಣ ಆವಿಷ್ಕಾರಗಳನ್ನು ಕಾರ್ಯಸ್ಥಗೊಳಿಸುವ ಫಲಿತಾಂಶಗಳಾಗಿ ಪರಿವರ್ತಿಸುವುದಕ್ಕೆ ಉದ್ಯಮದಾದ್ಯಂತ ಇರುವ  ಪ್ರತಿಯೊಂದು  ಸ್ಟಾರ್ಟ್‍ಅಪ್‍ಗೆ ನೆರವಾಗುವುದು ಮೈಕ್ರೋಸಾಫ್ಟ್‍ನ ಧ್ಯೇಯೋದ್ದೇಶವಾಗಿದೆ. ಮೈಕ್ರೋಸಾಫ್ಟ್ ಎಐ ಇನೊವೇಟ್, ಸ್ಟಾರ್ಟ್‍ಅಪ್‍ಗಳು, ಚುರುಕುತನದೊಂದಿಗೆ ನಿರ್ಮಾಣ ಮಾಡಿ,  ಬೆಳೆದು ಪರಿವರ್ತನೆಗೊಳ್ಳುವ ಅವಕಾಶಗಳೊಂದಿಗೆ ಅವರನ್ನು ಸಬಲಗೊಳಿಸುವುದಕ್ಕೆ ಒಂದು ತೊಡಗಿಕೊಳ್ಳುವಂತಹ ವೇದಿಕೆಯನ್ನು ಸೃಷ್ಟಿಸಲಿದೆ. ಪ್ರತಿಯೊಂದು ಸ್ಟಾರ್ಟ್‍ಅಪ್ ಎಐನ ಜವಾಬ್ದಾರಿಯುತವಾದ ಬಳಕೆಗೆ ಅವರ ದೃಷ್ಟಿಕೋನವನ್ನು ಬಲಪಡಿಸುವ ಸಲುವಾಗಿ ತಜ್ಞ ಮಾರ್ಗದರ್ಶನ ಹಾಗೂ ವರ್ಗದಲ್ಲೇ ಅತ್ಯುತ್ತಮವಾದ ತಂತ್ರಜ್ಞಾನ ಸಂಪನ್ಮೂಲಗಳನ್ನು ಪಡೆದುಕೊಳ್ಳುವುದನ್ನು ನಾವು ಖಾತರಿಪಡಿಸುತ್ತಿದ್ದೇವೆ ಎಂದು  ಮೈಕ್ರೋಸಾಫ್ಟ್ ಇಂಡಿಯಾದ ಸ್ಟಾರ್ಟ್‍ಅಪ್ ಎಕೋಸಿಸ್ಟಮ್ ವಿಭಾಗದ ನಿರ್ದೇಶಕಿ ಸಂಗೀತಾ ಬಾವಿ ಹೇಳಿದರು.

ಮೈಕ್ರೋಸಾಫ್ಟ್‌ನ ವಿಂಡೋಸ್‌ 11 ಆವೃತ್ತಿ ಬಿಡುಗಡೆ!

ತಾಂತ್ರಿಕ ಹಾಗೂ ವ್ಯಾಪಾರ ಪ್ರೇಕ್ಷಕರಿಬ್ಬರ ಅಗತ್ಯಗಳನ್ನೂ ಪೂರೈಸಲಿರುವ ಕಾರ್ಯಕ್ರಮವು ಅತ್ಯಾಧುನಿಕ ತಂತ್ರಜ್ಞಾನ ಅರಿವು, ಜಾಗತಿಕ ಜಿಟಿಎಮ್ ಸಹಭಾಗಿತ್ವಗಳನ್ನು ಒಗ್ಗೂಡಿಸುವುದರ ಜೊತೆಗೆ, ಮೈಕ್ರೋಸಾಫ್ಟ್‍ನ ಇಂಜಿನಿಯರಿಂಗ್ ಮತ್ತು ಸಂಶೋಧನಾ ತಜ್ಞರನ್ನೂ ಒಗ್ಗೂಡಿಸುತ್ತದೆ. ವಿವಿಧ ಸ್ತರಗಳಾದ್ಯಂತ ಅದು ಸ್ಟಾರ್ಟ್‍ಅಪ್‍ಗಳಿಗೆ ಅನೇಕ ಪ್ರಯೋಜನಗಳನ್ನು ಒದಗಿಸಲಿದೆ:

•    ಆಲ್ ಸ್ಟಾರ್ಟ್‍ಅಪ್‍ಸ್: ಇತರ ಅನೇಕ ಪ್ರಯೋಜನಗಳ ಜೊತೆಗೆ, ಅಝೂರ್ ಪ್ರಯೋಜನಗಳು(ಉಚಿತ ಕ್ಲೌಡ್ ಕ್ರೆಡಿಟ್ಸ್‍ಗಳ ಜೊತೆಗೆ), ಉತ್ಪನ್ನ ಇಂಜಿನಿಯರಿಂಗ್ ಬೆಂಬಲ, ಅನಿಯಮಿತ 24x7 ತಾಂತ್ರಿಕ ಬೆಂಬಲ ಒಳಗೊಂಡಂತೆ, ಅರ್ಹ ಸೀಡ್‍ನಿಂದ ಸೀರೀಸ್ ‘ಬಿ’ವರೆಗಿನ ಸ್ಟಾರ್ಟ್‍ಅಪ್‍ಗಳಿಗೆ ತಂತ್ರಜ್ಞಾನ ಸಾಮರ್ಥ್ಯಗಳನ್ನು ಒದಗಿಸಲಿದೆ.  ಅಲ್ಲದೆ ಅವು, ಮಾರುಕಟ್ಟೆಸ್ಥಳ ಆನ್‍ಬೋರ್ಡಿಂಗ್‍ನಂತಹ ವ್ಯಾಪಾರ ಹಾಗೂ ಮಾರಾಟ ವರ್ಧನೆಯೊಂದಿಗೆ ಕೂಡ ಬೆಂಬಲ ಪಡೆದುಕೊಳ್ಳಲಿದ್ದಾರೆ. 
•    ಸಹ ಮಾರಾಟ(ಕೋ-ಸೆಲ್) ಸ್ಟಾರ್ಟ್‍ಅಪ್ಸ್: ಉದ್ಯಮ-ಸಿದ್ಧವಾದ ಪರಿಹಾರಗಳನ್ನು ಹೊಂದಿರುವ ಸ್ಟಾರ್ಟ್‍ಅಪ್‍ಗಳಿಗೆ, ಅವುಗಳು ವೃತ್ತಿಪರರ ನಿಬದ್ಧ ತಂಡವನ್ನು ನಿರ್ಮಾಣ ಮಾಡಿಕೊಳ್ಳುವುದರ ಜೊತೆಗೆ ತಮ್ಮ ಪರಿಹಾರಗಳನ್ನು ನಿರ್ಮಾಣ ಮಾಡಿಕೊಳ್ಳಲು ಕೂಡ ಅವಕಾಶಗಳನ್ನು ಒದಗಿಸಲಿದೆ. ಅವರಿಗೆ ಮಾರುಕಟ್ಟೆಗೆ-ಹೋಗಿ ಬೆಂಬಲದ ಜೊತೆಗೆ ಮೈಕ್ರೋಸಾಫ್ಟ್‍ನ ಮಾರಾಟ ತಂಡ ಹಾಗೂ ಭಾಗೀದಾರ ಪರಿಸರವ್ಯವಸ್ಥೆಯಿಂದ ಸಹ ಮಾರಾಟದ ಪ್ರಯೋಜನಗಳನ್ನೂ ಒದಗಿಸಲಾಗುತ್ತದೆ. ಈ ಸ್ಟಾರ್ಟ್‍ಅಪ್‍ಗಳು ತಮ್ಮ ಕಾರ್ಯಜಾಲ ತಲುಪುವಿಕೆಯನ್ನು ಬಲಪಡಿಸಿಕೊಳ್ಳುವ ಸಲುವಾಗಿ  ಅವರಿಗೆ ಮೇಲ್ದರ್ಜೆ ಭಾಗೀದಾರ ಹಾಗೂ ಗ್ರಾಹಕ ಕಾರ್ಯಕ್ರಮಗಳಿಗೆ ಕೂಡ ಪ್ರವೇಶಾವಕಾಶ ಪಡೆದುಕೊಳ್ಳುತ್ತಾರೆ. 
•    ಸಹ ನಿರ್ಮಾಣ(ಕೋ-ಬಿಲ್ಡ್) ಸ್ಟಾರ್ಟ್‍ಅಪ್ಸ್: ಇಉದ್ಯಮ-ಸಿದ್ಧವಾಗಿರುವ ಸ್ಟಾರ್ಟ್‍ಅಪ್‍ಗಳಿಗೆ ಉದ್ಯಮ ತಜ್ಞರಿಂದ ಅವರ ಪರಿಹಾರಗಳ ಪರಿಕಲ್ಪನೆಗೆ ಬೆಂಬಲ, ನಿಬದ್ಧ ವೃತ್ತಿಪರರಿಂದ ಅವರ ತಂತ್ರಜ್ಞಾನದ ಭವಿಷ್ಯಭದ್ರತೆ, ಮತ್ತು ತಜ್ಞ ಭಾಗೀದಾರರೊಂದಿಗೆ ಉತ್ಪಾದನೆ ವರ್ಧನೆಯನ್ನು ಬೆಂಬಲಿಸಲಾಗುತ್ತದೆ. 

ಮೈಕ್ರೋಸಾಫ್ಟ್ ಎಐ ಇನೋವೇಟ್, ಸ್ಟಾರ್ಟ್‍ಅಪ್‍ಗಳು, ಕಾಪೆರ್Çರೇಟ್‍ಗಳು, ಉದ್ಯಮ ಮಂಡಳಿಗಳು, ಸರ್ಕಾರಗಳು, ಮತ್ತು ವೆಂಚರ್  ಬಂಡವಾಳ ಸಂಸ್ಥೆಗಳನ್ನು ಒಗ್ಗೂಡಿಸಿ ಕಲಿಕೆ ಮತ್ತು ಆವಿಷ್ಕಾರಕ್ಕೆ ಒಂದು ಹಂಚಿಕೊಂಡ ವೇದಿಕೆಯನ್ನು ಸೃಷ್ಟಿಸುವ ಗುರಿ ಹೊಂದಿದೆ. 

Follow Us:
Download App:
  • android
  • ios