Forbes: ಜಗತ್ತಿನ ನಂ. 1 ಶ್ರೀಮಂತ ಎಂಬ ಹಣೆಪಟ್ಟಿನೂ ಕಳಕೊಂಡ್ರೇ ಎಲಾನ್ ಮಸ್ಕ್..?
ಕೆಲ ಕಾಲ ಎಲಾನ್ ಮಸ್ಕ್ ಅವರು ಜಗತ್ತಿನ ನಂ. 2 ಶ್ರೀಮಂತರಾಗಿದ್ರು. ಕ್ಷಣ ಕ್ಷಣಕ್ಕೂ ಜಗತ್ತಿನ ಬಿಲಿಯನೇರ್‌ಗಳ ಪಟ್ಟಿಯನ್ನು ಲೆಕ್ಕ ಹಾಕೋ ಫೋರ್ಬ್ಸ್ (Forbes) ಈ ವರದಿ ಮಾಡಿದೆ.
ಟೆಸ್ಲಾ (Tesla) ಹಾಗೂ ಸ್ಪೇಸ್ ಎಕ್ಸ್ (Space X) ಸಂಸ್ಥಾಪಕ ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಆಗಾಗ್ಗೆ ಸುದ್ದಿಯಾಗುತ್ತಲೇ ಇದ್ದಾರೆ. ಟ್ವಿಟ್ಟರ್ ಖರೀದಿಸಿದ ಬಳಿಕ ಸಾವಿರಾರು ಜನರನ್ನು ಕಿತ್ತು ಹಾಕಿದ್ದು, ಇನ್ನೂ ಸಾಕಷ್ಟು ಜನರು ಸಾಮೂಹಿಕ ರಾಜೀನಾಮೆಯನ್ನೂ ನೀಡಿದ್ರು. ಇನ್ನು, ಎಲಾನ್ ಮಸ್ಕ್ ಜಗತ್ತಿನ ನಂ. 1 ಶ್ರೀಮಂತ (World’s No. 1 Richest Person) ಎಂಬ ಶಿರೋನಾಮೆಯನ್ನು ಹೊಂದಿದ್ದಾರೆ. ಆದರೆ, ಇವರು ಈ ಹಣೆಪಟ್ಟಿಯನ್ನೂ ಕಳೆದುಕೊಳ್ತಾರಾ ಎಂಬ ಅನುಮಾನವೂ ಕಾಡುತ್ತಿದೆ. ಯಾಕೆ ಅಂತೀರಾ..? ಟ್ವಿಟ್ಟರ್ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೆಲ ಕಾಲ ನಂ. 1 ಎಂಬ ಹಣೆಪಟ್ಟಿಯನ್ನೂ ಕಳೆದುಕೊಂಡಿದ್ರು.
ಹೌದು, ನಿನ್ನೆ ಅಂದರೆ ಡಿಸೆಂಬರ್ 7 ರ ಬುಧವಾರ, ಕೆಲ ಕಾಲ ಎಲಾನ್ ಮಸ್ಕ್ ಅವರು ಜಗತ್ತಿನ ನಂ. 2 ಶ್ರೀಮಂತರಾಗಿದ್ರು. ಕ್ಷಣ ಕ್ಷಣಕ್ಕೂ ಜಗತ್ತಿನ ಬಿಲಿಯನೇರ್‌ಗಳ ಪಟ್ಟಿಯನ್ನು ಲೆಕ್ಕ ಹಾಕೋ ಫೋರ್ಬ್ಸ್ (Forbes) ಈ ವರದಿ ಮಾಡಿದೆ. ಟೆಸ್ಲಾ ಷೇರುಗಳ ಮೌಲ್ಯ ಕುಸಿತ ಹಾಗೂ ಟ್ವಿಟ್ಟರ್ ಖರೀದಿಗೆ 44 ಬಿಲಿಯನ್ ಡಾಲರ್ ಹಣ ನೀಡಿರೋದು ಎಲಾನ್ ಮಸ್ಕ್ ಅವರ ಆಸ್ತಿ ಇಳಿಕೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಇದನ್ನು ಓದಿ: ವಿಶ್ವದ ಪ್ರಭಾವಿ ಸ್ತ್ರೀಯರ ಪಟ್ಟಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್
ಇನ್ನು, 51 ವರ್ಷದ ಎಲಾನ್ ಮಸ್ಕ್ ಅವರು ಲಕ್ಷುರಿ ಬ್ರ್ಯಾಂಡ್ ಲೂಯಿ ವಿಟ್ಟನ್ (Louis Vuitton) ಎಂಬ ಪೋಷಕ ಕಂಪನಿ ಎಲ್‌ವಿಎಂಎಚ್ (LVMH) ನ ಪ್ರಮುಖ ಎಕ್ಸಿಕ್ಯುಟಿವ್ ಬರ್ನಾಡ್ ಅರ್ನಾಲ್ಟ್ (Bernard Arnault) ಜಗತ್ತಿನ ನಂ. 1 ಶ್ರೀಮಂತ ಆಗಿದ್ದರು. ಬರ್ನಾಡ್ ಅರ್ನಾಲ್ಟ್ ಅವರು 185.3 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದು, ಇವರು ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ ನಂ. 1 ಶ್ರೀಮಂತರಾಗಿದ್ರು. ಆದರೆ, ಇದು ಸ್ವಲ್ಪ ಸಮಯ ಮಾತ್ರ. ಏಕೆಂದರೆ, ಎಲಾನ್ ಮಟ್ಕ್ ಮತ್ತೆ ನಂ. 1 ಶ್ರೀಮಂತರಾಗಿದ್ದು, ಇವರ ಒಟ್ಟಾರೆ ಆಸ್ತಿ ಮೌಲ್ಯ 185.7 ಬಿಲಿಯನ್ ಡಾಲರ್ ಆಗಿದೆ.
ಸೆಪ್ಟೆಂಬರ್ 2021 ಅಂದರೆ 15 ತಿಂಗಳಿಂದ ಎಲಾನ್ ಮಟ್ಕ್ ವಿಶ್ವದ ನಂ. 1 ಶ್ರೀಮಂತ ಎನಿಸಿಕೊಡಿದ್ದಾರೆ. ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಅವರನ್ನು ಸೋಲಿಸಿ ಎಲಾನ್ ಮಸ್ಕ್ ಈ ಕೀರ್ತಿಗೆ ಪಾತ್ರರಾಗಿದ್ದಾರೆ. 200 ಬಿಲಿಯನ್ ಡಾಲರ್‌ಗೂ ಹೆಚ್ಚು ಅಸ್ತಿ ಮೌಲ್ಯ ಹೊಂದಿದ್ದ ಎಲಾನ್ ಮಸ್ಕ್ ಆಸ್ತಿ 2022 ರಲ್ಲಿ ಸಾಕಷ್ಟು ಇಳಿಕೆಯಾಗಿದೆ. ಇದಕ್ಕೆ ಕಾರಣ ಟೆಸ್ಲಾ ಷೇರುಗಳ ಮೌಲ್ಯ 2 ವರ್ಷದಲ್ಲ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಎಲೆಕ್ಟ್ರಿಕ್ ಕಾರುಗಳ ಟೆಸ್ಲಾ ಕಂಪನಿಯೇ ಎಲಾನ್ ಮಸ್ಕ್ ಅವರ ಹೆಚ್ಚಿನ ಆಸ್ತಿಗೆ ಕಾರಣವಾಗಿದೆ. ಅಮೆರಿಕ ಬಿಟ್ಟರೆ ಚೀನಾದಲ್ಲಿ ಟೆಸ್ಲಾಗೆ ಹೆಚ್ಚು ಡಿಮ್ಯಾಂಡ್ ಇದ್ದು, ಆದರೆ ಕೋವಿಡ್ ನಿರ್ಬಂಧಗಳಿಂದಾಗಿ ಚೀನಾದಲ್ಲಿ ಟೆಸ್ಲಾ ಮಾರುಕಟ್ಟೆ ಕುಸಿದು ಬಿದ್ದಿದ್ದು, ಷೇರುಗಳ ಮೌಲ್ಯವೂ ಕಡಿಮೆಯಾಗಿದೆ.
ಇದನ್ನೂ ಓದಿ: Forbes 100 Richest Indians: ಅದಾನಿ, ಅಂಬಾನಿ, ಧಮಾನಿ ಭಾರತದ ಟಾಪ್ 3 ಶ್ರೀಮಂತರು: ಕರ್ನಾಟಕದ 10 ಮಂದಿಗೆ ಸ್ಥಾನ
ಇದರ ಜತೆಗೆ, ಕಳೆದ ತಿಂಗಳು ಟ್ವಿಟ್ಟರ್ ಸ್ವಾಧೀನಪಡಿಸಿಕೊಂಡ ಎಲಾನ್ ಮಸ್ಕ್ 44 ಬಿಲಿಯನ್ ಡಾಲರ್ ಅನ್ನು ಕಳೆದುಕೊಂಡಿದ್ದಾರೆ. ಇವರು ಟ್ವಿಟ್ಟರ್ ಬಾಸ್ ಆದ ಬಳಿಕ ಶೇ. 60 ರಷ್ಟು ಸಿಬ್ಬಂದಿಯನ್ನು ಸಹ ಕಳೆದುಕೊಂಡಿದ್ದಾರೆ. ಅಲ್ಲದೆ, ಟ್ವಿಟ್ಟರ್ ಕಂಪನಿ ದಿನೇ ದಿನೇ ನಷ್ಟದ ಹಾದಿಯಲ್ಲಿದೆ ಎಂದೂ ಇತ್ತೀಚೆಗೆ ವರದಿಯಾಗಿತ್ತು.
ಟೆಸ್ಲಾ ಹಾಗೂ ಟ್ವಿಟ್ಟರ್ ಮಾತ್ರವಲ್ಲದೆ ರಾಕೆಟ್ ಕಂಪನಿ ಸ್ಪೇಸ್ ಎಕ್ಸ್ ಹಾಗೂ ನ್ಯೂರಾಲಿಂಕ್ (Neuralink) ಎಂಬ ಸ್ಟಾರ್ಟಪ್‌ನ ಒಡೆಯರೂ ಆಗಿದ್ದಾರೆ. ಮಾನವನ ಮೆದುಳನ್ನು ಕಂಪ್ಯೂಟರ್‌ಗಳಿಗೆ ಸಂಪರ್ಕಿಸಲು ಅಲ್ಟ್ರಾ-ಹೈ ಬ್ಯಾಂಡ್‌ವಿಡ್ತ್ ಬ್ರೈನ್-ಮೆಷಿನ್ ಇಂಟರ್‌ಫೇಸ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವ ಸ್ಟಾರ್ಟಪ್ ಇದಾಗಿದೆ.
ಇದನ್ನೂ ಓದಿ: ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮರಳಿ ಮೂರನೇ ಸ್ಥಾನಕ್ಕೆ ಜಿಗಿದ ಗೌತಮ್ ಅದಾನಿ