Asianet Suvarna News Asianet Suvarna News

ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್ ಮೇಲೆ 4ನೇ ಕೇಸ್ ದಾಖಲು; ಈ ಬಾರಿ ಸಂಕಷ್ಟ ಡಬಲ್!

  • ಮಕ್ಕಳ ಅಶ್ಲೀಲತೆ ವಿಡಿಯೋದಿಂದ ನಾಲ್ಕನೇ ಕೇಸ್ ದಾಖಲು
  • ಟ್ವಿಟರ್ ಇಂಡಿಯಾ ಮೇಲೆ  Posco ಕಾಯ್ದೆಯಡಿ ಪ್ರಕರಣ
  • ಚೈಲ್ಡ್ ಪೊರ್ನೋಗ್ರಫಿ ಕೇಸ್‌ನಿಂದ ಟ್ವಿಟರ್ ಸಂಕಷ್ಟ ಡಬಲ್
     
Cae registered against Twitter india over child Pornography ckm
Author
Bengaluru, First Published Jun 29, 2021, 8:39 PM IST

ನವದೆಹಲಿ(ಜೂ.29): ಭಾರತದ ನೂತನ ಐಟಿ ನಿಯಮ ಪಾಲಿಸಲು ನಿರಾಕರಿಸಿದ ಟ್ವಿಟರ್ ಇಂಡಿಯಾಗೆ ದಿನದಿಂದ ದಿನಕ್ಕೆ ಸಂಕಷ್ಟ ಹೆಚ್ಚಾಗುತ್ತಿದೆ. ಭಾರತದ ವಿರುದ್ಧ ಕತ್ತಿ ಮಸೆಯಲು ಯತ್ನಿಸುತ್ತಿರುವ ಟ್ವಿಟರ್ ಮೇಲೆ ಇದೀಗ ನಾಲ್ಕನೇ ಕೇಸ್ ದಾಖಲಾಗಿದೆ. ಈ ಬಾರಿ Posco ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಟ್ವಿಟರ್ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಭಾರತದ ನಕ್ಷೆ ಎಡವಟ್ಟು: ಟ್ವಿಟರ್ ಇಂಡಿಯಾ MD ಮನೀಷ್ ಮಹೇಶ್ವರಿಗೆ ಸಂಕಷ್ಟ!.

ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (NCPCR) ನೀಡಿದ ದೂರಿನ ಹಿನ್ನೆಲೆಯಲ್ಲಿ ದೆಹಲಿ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟ್ವಿಟರ್‌ನಲ್ಲಿ ನಿರಂತರವಾಗಿ ಮಕ್ಕಳನ್ನು ಒಳಗೊಂಡ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಲಾಗುತ್ತಿದೆ.  ಹೀಗಾಗಿ ತಕ್ಷಣವೇ ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು  NCPCR ದೂರಿನಲ್ಲಿ ಹೇಳಿದೆ.

ಟ್ವಿಟರ್ ಜಟಾಪಟಿ; ಒಂದೇ ತಿಂಗಳಿಗೆ ನೇಮಕಗೊಂಡಿದ್ದ ಅಧಿಕಾರಿ ಗುಡ್‌ಬೈ!.

ಚೈಲ್ಡ್ ಪೋರ್ನೋಗ್ರಫಿ ಕುರಿತು NCPCR ಈ ಹಿಂದೆ ದೂರು ನೀಡಿತ್ತು. ಇಷ್ಟೇ ಅಲ್ಲ ದೆಹಲಿ ಪೊಲೀಸ್ ಆಯುಕ್ತರಿಗೆ ಎರಡು ಪತ್ರ ಬರೆದಿತ್ತು.  ಇದೀಗ ಹೊಸ ದೂರು ನೀಡಿದ್ದು, ಟ್ವಿಟರ್ ಇಂಡಿಯಾ ಹಾಗೂ ಎಂಡಿ ಮನೀಶ್ ಮಹೇಶ್ವರಿ ವಿರುದ್ಧ ದೂರು ದಾಖಲಾಗಿದೆ.

ಕೇಂದ್ರದ ನೂತನ ಐಟಿ ನಿಯಮ ಪಾಲಿಸದ ಟ್ವಿಟರ್ ಕಾನೂನು ರಕ್ಷಣೆ ಕಳೆದುಕೊಂಡಿದೆ. ಹೀಗಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ, ಹರಿದಾಡುತ್ತಿರುವ ಯಾವುದೇ ವಿಡಿಯೋ, ಆಕ್ಷೇಪ ಬರಹ, ಚಿತ್ರ, ಪ್ರಚೋದನಾರಿ ವಿಷಯಗಳಿಗೆ ಟ್ವಿಟರ್ ಮೇಲೂ ಪ್ರಕರಣ ದಾಖಲಾಗುತ್ತದೆ.

ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!

ಗಾಝಿಯಾಬಾದ್ ಮುಸ್ಲಿಂ ವ್ಯಕ್ತಿಗೆ ಥಳಿತ ಹಾಗೂ ಕೋಮು ಗಲಭೆ ಸೃಷ್ಟಿಗೆ ಪ್ರಚೋದನೆ, ಭಾರತದ ಮ್ಯಾಪ್ ತಿರುಚಿ ಲಡಾಖ್,  ಜಮ್ಮು ಕಾಶ್ಮೀರ ರಾಜ್ಯಗಳನ್ನು ಪ್ರತ್ಯೇಕಿಸಿದ ಮ್ಯಾಪ್ ಪ್ರಕಟಿಸಿತ್ತು. ಈ ಕುರಿತು ಪ್ರಕರಣ ದಾಖಲಾಗಿದೆ. ಹೀಗಿ ಇದೀಗ ನಾಲ್ಕು ಪ್ರಕರಣ ಇದೀಗ ಟ್ವಿಟರ್ ಮೇಲಿದೆ.

Follow Us:
Download App:
  • android
  • ios