ಟ್ವಿಟರ್ ಜಟಾಪಟಿ; ಒಂದೇ ತಿಂಗಳಿಗೆ ನೇಮಕಗೊಂಡಿದ್ದ ಅಧಿಕಾರಿ ಗುಡ್‌ಬೈ!
- ಟ್ವಿಟರ್ ಹುದ್ದೆ ತೊರೆದ ಕುಂದು ಕೊರತೆ ಆಲಿಸುವ ಅಧಿಕಾರಿ
- ಸದ್ದಿಲ್ಲದೆ ಟ್ವಿಟರ್ ಕಚೇರಿ ಒಳಗಡೆ ನಡೆಯಿತಾ ಜಟಾಪಟಿ?
- ಕೇಂದ್ರ ಹಾಗೂ ಟ್ವಿಟರ್ ನಡುವೆ ಐಟಿ ನಿಯಮ ಹಗ್ಗಜಗ್ಗಾಟ
ನವದೆಹಲಿ(ಜೂ.27): ಕೇಂದ್ರ ಸರ್ಕಾರ ತಂದಿರುವ ನೂತನ ಐಟಿ ನಿಯಮ ಪಾಲಿಸಲು ಟ್ವಿಟರ್ ಹಿಂದೇಟು ಹಾಕುತ್ತಲೇ ಇದೆ. ಇದರ ನಡುವೆ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಈ ಜಟಾಪಟಿ ನಡುವೆ ನಾಲ್ಕು ವಾರಗಳ ಹಿಂದೆ ಟ್ವಿಟರ್ ನೇಮಕ ಮಾಡಿದ್ದ ಗ್ರಾಹಕರ ಗುಂದು ಕೊರತೆ ಆಲಿಸುವ(ಗ್ರಿವೇನ್ಸ್ ಆಫೀಸರ್) ಹುದ್ದೆಯಿಂದ ನಿರ್ಗಮಿಸಿದ್ದಾರೆ.
ಟ್ವಿಟರ್ ಸಮರ: ಭಾರತದಲ್ಲಿ ಅಮೆರಿಕದ ನಿಯಮ!.
ಹೊಸ ಐಟಿ ನಿಯಮ ಪಾಲನೆ ಒತ್ತಡ ಬೀಳುತ್ತಿದ್ದಂತೆ ಮಧ್ಯಂತರ ಗ್ರಿವೇನ್ಸ್ ಅಧಿಕಾರಿಯಾಗಿ ಧರ್ಮೇಂದ್ರ ಚತುರ್ ಅವರನ್ನು ನೇಮಕ ಮಾಡಿತ್ತು. ಇದೀಗ ಟ್ವಿಟರ್ ತನ್ನ ಗ್ರಿವೇನ್ಸ್ ಅಧಿಕಾರಿ ಹೆಸರನ್ನು ಪ್ರದರ್ಶಿಸುತ್ತಿಲ್ಲ. ನಿಯಮದ ಪ್ರಕಾರ ಅಧಿಕಾರಿಯ ಹೆಸರನ್ನು ಉಲ್ಲೇಖಿಸಬೇಕು. ಆರಂಭದಲ್ಲಿ ಚತುರ್ ಹೆಸರನ್ನು ಉಲ್ಲೇಖಿಸಿದ್ದ ಟ್ವಿಟರ್ ಇದೀಗ ತೆಗೆದುಹಾಕಿದೆ. ಈ ಮೂಲಕ ಚತುರ್ ಆಯ್ಕೆಯಾದ ಒಂದು ತಿಂಗಳಿಗೆ ಹುದ್ದೆಯಿಂದ ನಿರ್ಗಮಿಸಿರುವುದುಬಹುತೇಕ ಖಚಿತಗೊಂಡಿದೆ.
ಐಟಿ ನಿಯಮ ಪಾಲಿಸದೆ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್!.
ಮೂವರು ಅಧಿಕಾರಿಗಳನ್ನು ನೇಮಕ ಮಾಡುವಂತೆ ಕೇಂದ್ರ ಐಟಿ ನಿಯಮ ಹೇಳುತ್ತಿದೆ. ಆದರೆ ಒರ್ವ ಅಧಿಕಾರಿಯನ್ನು ಕಾಟಾಚಾರಕ್ಕೆ ನೇಮಕ ಮಾಡಿ ಟ್ವಿಟರ್ ನಿಯಮದ ವಿರುದ್ಧ ಸೆಡ್ಡು ಹೊಡೆದಿದೆ. ಟ್ವಿಟರ್‌ಗೆ ಖಡಕ್ ಎಚ್ಚರಿಕೆ ನೀಡಿರುವ ಕೇಂದ್ರ, ಟ್ವಿಟರ್ ಕಾನೂನು ರಕ್ಷಣೆಯನ್ನು ಮೊಟಕುಗೊಳಿಸಿದೆ.