ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!

* ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿತ, ಗಡ್ಡ ಕತ್ತರಿಸಿ ಹಲ್ಲೆ

* ಕೋಮು ಬಣ್ಣ ಪಡೆದಿದ್ದ ವೈಯುಕ್ತಿಕ ದ್ವೇಷ ಪ್ರಕರಣ

* ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ದಾಖಲಾಯ್ತು ಕೇಸ್

Ghaziabad assault case FIR against Twitter others police denies communal angle pod

ಲಕ್ನೋ(ಜೂ.16): ಗಾಜಿಯಾಬಾದ್‌ ಜಿಲ್ಲೆಯ ಲೋನಿಯಲ್ಲಿ ಮುಸ್ಲಿಂ ವೃದ್ಧನ ಮೇಲಿನ ಥಳಿತ ಪ್ರಕರಣಕ್ಕೆ ಕೋಮು ಬಣ್ಣ ಮನೀಡಲು ಯತ್ನಿಸಿದವರ ವಿರುದ್ಧ ಯೋಗಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಗಾಜಿಯಾಬಾದ್‌ ಪೊಲೀಸರು ಇಬ್ಬರು ಕಾಂಗ್ರೆಸ್ ನಾಯಕರು , ಪತ್ರಕರ್ತರು ಸೇರಿ ಒಂಭತ್ತು ಮಂದಿ ವಿರುದ್ಧ FIR ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಟ್ವಿಟರ್ ವಿರುದ್ಧವೂ ದಾಖಲಿಸಲಾಗಿದೆ. 

ಮುಸ್ಲಿಂ ಹುಡುಗನ ಜೊತೆ ಹಿಂದೂ ಯುವತಿಯ ಡ್ಯಾನ್ಸ್: ಟೀಕಿಸಿದವರಿಗೆ ಖಡಕ್ ಆನ್ಸರ್

ಕಳೆದ ಕೆಲ ದಿನಗಳ ಹಿಂದೆ ಗಾಜಿಯಾಬಾದ್ ಜಿಲ್ಲೆಯ ವೃದ್ಧ ಮುಸ್ಲಿಂ ವ್ಯಕ್ತಿ ಸೂಫಿ ಅಬ್ದುಲ್ ಸಮದ್​ ಎಂಬವರನ್ನು ಯುವಕರ ತಂಡ ಥಳಿಸಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಇದಲ್ಲಿ ವೃದ್ಧನನ್ನು ಕೋಣೆಯಲ್ಲಿ ಬಂಧಿಸಿ ಥಳಿಸಿದ್ದಲ್ಲದೇ, ಆತನ ಗಡ್ಡ ಕತ್ತರಿಸಿ ಹಿಂಸಿಸುತ್ತಿದ್ದ ದೃಶ್ಯಗಳಿದ್ದವು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೋಮು ಬಣ್ಣ ಪಡೆದುಕೊಂಡಿತ್ತು. 

ವೈಯುಕ್ತಿಕ ದ್ವೇಷ

ಆದರೆ ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಇದೊಂದು ಕೋಮು ಗಲಭೆಯಲ್ಲ, ಬದಲಾಗಿ ವೈಯುಕ್ತಿಕ ದ್ವೇಷದಿಂದಾದ ಕೃತ್ಯ. ಆದರೆ ಇದನ್ನು ತಿರುಚುವ ಯತ್ನ ನಡೆಸಲಾಗಿದೆ ಎಂದಿದ್ದಾರೆ. ಹೀಗಾಗಿ ತಪ್ಪು ಸಂದೇಶ ಹರಡಿ ಶಾಂತಿ ಭಂಗಗೊಳಿಸಲು ಯತ್ನಿಸಿದ ಆರೋಪದಡಿ ಟ್ವಿಟರ್ ಸೇರಿ  ದಿ ವೈರ್, ರಾಣಾ ಅಯೂಬ್, ಮೊಹಮ್ಮದ್ ಜುಬೈರ್, ಡಾ. ಶಮಾ ಮೊಹಮ್ಮದ್, ಸಬಾ ನಖ್ವಿ, ಮುಸ್ಕೂರ್ ಉಸ್ಮಾನಿ, ಸ್ಲಾಮನ್ ನಿಜಾಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟ್ವಿಟರ್ ಈ ವಿಡಿಯೋ ವೈರಲ್ ಆಗುತ್ತಿದ್ದರೂ ತಡೆಯಲು ಯತ್ನಿಸಲಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ. 

ಇನ್ನು ಆರೋಪಿಗಳ ಪೈಕಿ ರಾಣಾ ಅಯೂಬ್ ಮತ್ತು ಸಬಾ ನಖ್ವಿ ಪತ್ರಕರ್ತರಾಗಿದ್ದಾರೆ. , ಜುಬೈರ್ ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್ ಆಲ್ಟ್ ನ್ಯೂಸ್‌ನ ಲೇಖಕರಾಗಿದ್ದು, ಡಾ.ಶಮಾ ಮೊಹಮ್ಮದ್ ಮತ್ತು ನಿಜಾಮ್ ಕಾಂಗ್ರೆಸ್ ನಾಯಕರಾಗಿದ್ದಾರೆ. ಉಸ್ಮಾನಿ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.

ಕೊರಗಜ್ಜನಿಗೆ ದೇವಾಲಯ ಕಟ್ಟಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ವ್ಯಕ್ತಿ!

ಧಾರ್ಮಿಕ ಭಾವನೆ ಕೆಣಕುವ ಯತ್ನ

ಇನ್ನು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ವೃದ್ಧ ಅಬ್ದುಲ್ ಸಮದ್ ಸೈಫಿಯನ್ನು ಕೆಲವರು ಬಲವಂತವಾಗಿ ಹೊಡೆಯುವುದು ಮತ್ತು ಅವನ ಗಡ್ಡವನ್ನು ಕತ್ತರಿಸುವ ದೃಶ್ಯಗಳಿವೆ. ಆದರೆ ಮುಂದೆ ಇಲ್ಲಿ ಥಳಿಸಿದವರು ಹಿಂದೂಗಳೆಂಬ ಆರೋಪ ಮಾಡಲಾಗಿದೆ. ಇವರು ಬಲವಂತವಾಗಿ ಜೈಶ್ರೀರಾಮ್ ಎನ್ನುವಂತೆ ವೃದ್ಧನಿಗೆ ಒತ್ತಾಯಿಸುತ್ತಿದ್ದರು. ಈ ವಿಡಿಯೋವನ್ನು ವೈರಲ್ ಮಾಡಿ ಕೋಮು ಗಲಭೆ ಹುಟ್ಟುಹಾಕುವ ಯತ್ನ ನಡೆಸಿದ್ದಾರೆ ಎಂದಿದ್ದಾರೆ. 


 

Latest Videos
Follow Us:
Download App:
  • android
  • ios