ಬಿಎಸ್ಎನ್ಎಲ್ ಬಂಪರ್ ಪ್ಲಾನ್‌ಗೆ ಜಿಯೋ ಹಾಗೂ ಏರ್‌ಟೆಲ್ ಕಂಗಾಲಾಗಿದೆ. ಬರೋಬ್ಬರಿ 13 ತಿಂಗಳು ವ್ಯಾಲಿಟಿಡಿ, ಕೇವಲ 799 ರೂಪಾಯಿ ಮಾತ್ರ. ಹೈಸ್ವೀಡ್ ಇಂಟರ್ನೆಟ್ ಜೊತೆ 22 ಒಟಿಟಿ ಸಂಪೂರ್ಣ ಉಚಿತವಾಗಿದೆ.

ನವದೆಹಲಿ (ನ.10) ಬಿಎಸ್ಎನ್ಎಲ್ ಭರ್ಜರಿ ಕೊಡುಗೆ ಘೋಷಿಸಿದೆ. ಕೇವಲ 799 ರೂಪಾಯಿ ಪ್ಲಾನ್. 12 ತಿಂಗಳ ಪಾವತಿ ಒಮ್ಮೆ ಮಾಡಿದರೆ 13ನೇ ತಿಂಗಳು ಉಚಿತವಾಗಿ ಸಿಗಲಿದೆ. ಅಂದರೆ ಒಂದು ವರ್ಷ ಒಂದು ತಿಂಗಳಿಗೆ ಈ ಪ್ಲಾನ್ ಸಿಗಲಿದೆ. ಕೇವಲ 799 ರೂಪಾಯಿ ಮಾತ್ರ. ತಿಂಗಳಿಗೆ 799 ರೂಪಾಯಿ ಪಾವತಿಸಿದರೆ ಹೈಸ್ಪೀಡ್ ಇಂಟರ್ನೆಟ್ ಜೊತೆಗೆ 25 ಒಟಿಟಿ ಸಂಪೂರ್ಣವಾಗಿ ಉಚಿತವಾಗಿ ಸಿಗಲಿದೆ. ಹೌದು, BSNL ಘೋಷಿಸಿರುವ ಬ್ರಾಡ್‌ಬ್ಯಾಂಡ್ ಸೇವೆ ಟೆಲಿಕಾಂ ಲೋಕದಲ್ಲಿ ಸಂಚಲನ ಮೂಡಿಸಿದೆ. ಇದು ಜಿಯೋ ಹಾಗೂ ಏರ್‌ಟೆಲ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.

4000 ಜಿಬಿ ಡೇಟಾ

ಜಿಯೋ ಹಾಗೂ ಏರ್‌ಟೆಲ್‌ಗೆ ಪೈಪೋಟಿ ನೀಡುತ್ತಿಪುವ ಬಿಎಸ್‌ಎನ್‌ಎಲ್ ಇದೀಗ ಅತೀ ಕಡಿಮೆ ಬೆಲೆಯಲ್ಲಿ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ವಿಶೇಷ ವಾರ್ಷಿಕ ಕೊಡುಗೆ ಘೋಷಿಸಿದೆ. ಕೇವಲ 799 ರೂಪಾಯಿಗೆ ಹಲವು ಸೌಲಭ್ಯ ಜೊತೆಗೆ ಹೈಸ್ಪೀಡ್ ಇಂಟರ್ನೆಟ್ ಪ್ಲಾನ್ ನೀಡುತ್ತಿದೆ. ಈ ಆಫರ್ ಅಡಿಯಲ್ಲಿ 799 ರೂಪಾಯಿ ಬ್ರಾಡ್‌ಬ್ಯಾಂಡ್ ಪ್ಲಾನ್ ಪಡೆಯುವ ಗ್ರಾಹಕರು 12 ತಿಂಗಳ ಬಿಲ್ಲನ್ನು ಒಟ್ಟಿಗೆ ಪಾವತಿಸಿದರೆ ಸಾಕು. ಬಿಎಸ್‌ಎನ್‌ಎಲ್ ಅವರಿಗೆ ಹೆಚ್ಚುವರಿಯಾಗಿ 1 ತಿಂಗಳ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡಲಿದ್ದು, ಒಟ್ಟು 13 ತಿಂಗಳ ವ್ಯಾಲಿಡಿಟಿಯನ್ನು ಪಡೆಯಬಹುದಾಗಿದೆ. ಈ ಪ್ಲಾನ್‌ನಲ್ಲಿ ಬರೋಬ್ಬರಿ 4000 ಜಿಬಿ ಡೇಟಾ ಲಭ್ಯವಿದೆ.

799 ರೂಪಾಯಿ ಬ್ರಾಡ್‌ಬ್ಯಾಂಡ್ ಪ್ಲಾನ್‌

ಬಿಎಸ್‌ಎನ್‌ಎಲ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕೊಡುಗೆ ಪ್ರಕಟಿಸಿದೆ. ಈ 799 ರೂಪಾಯಿ ತಿಂಗಳ ಪ್ಲಾನ್ ಮೂಲಕ ವಾರ್ಷಿಕ ಆಫರ್‌ನಲ್ಲಿ ಗ್ರಾಹಕರು 150 Mbps ನಷ್ಟು ಅತ್ಯಂತ ವೇಗದ ಇಂಟರ್ನೆಟ್ ಸ್ಪೀಡ್ ಪಡೆಯಲಿದ್ದಾರೆ. ಈ ಪ್ಲಾನ್‌ನಲ್ಲಿ 4,000 GB (4TB) ಹೈ-ಸ್ಪೀಡ್ ಡೇಟಾ ಲಭ್ಯವಿರುತ್ತದೆ. ಈ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗವು 10 Mbps ಗೆ ಇಳಿಕೆಯಾಗಲಿದೆ. ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ನೀಡಲಾಗುತ್ತದೆ.

25 OTT ಆಪ್ಸ್ ಉಚಿತ:

ಸಂಸ್ಥೆಯ BiTV ಆಪ್ ಮೂಲಕ ಗ್ರಾಹಕರು ಡಿಸ್ನಿ+ ಹಾಟ್‌ಸ್ಟಾರ್, ಝೀ5, ಸೋನಿ ಲಿವ್ ಸೇರಿದಂತೆ ಪ್ರಮುಖ 25 ಒಟಿಟಿ ಆಪ್‌ಗಳ ಉಚಿತ ಚಂದಾದಾರಿಕೆಯನ್ನು ಪೂರ್ತಿ 13 ತಿಂಗಳು ಪ್ರಯೋಜನ ಪಡೆದುಕೊಳ್ಳಬಹುದು. ಇದರಿಂದ ಇಂಟರ್ನೆಟ್ ಜೊತೆಗೆ ಸಂಪೂರ್ಣ ಮನರಂಜನೆಗೆ ಅವಕಾಶವಿದೆ.

2,399 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ಗೆ 365 ದಿನಗಳ ವ್ಯಾಲಿಡಿಟಿ:

ಬ್ರಾಡ್‌ಬ್ಯಾಂಡ್ ಆಫರ್ ಜೊತೆಗೆ ದೀರ್ಘಾವಧಿಯ ರಿಚಾರ್ಜ್ ಬಯಸುವ ಮೊಬೈಲ್ ಬಳಕೆದಾರರಿಗಾಗಿ ಬಿಎಸ್‌ಎನ್‌ಎಲ್ ₹2,399 ಬೆಲೆಯ ಪ್ರಿಪೇಯ್ಡ್ ಪ್ಲಾನ್ ನೀಡುತ್ತಿದೆ.. ಈ ಪ್ಲಾನ್‌ನಲ್ಲಿ 365 ದಿನಗಳ (1 ವರ್ಷ) ಸುದೀರ್ಘ ವ್ಯಾಲಿಡಿಟಿ ಲಭ್ಯವಿದ್ದು, ನಿತ್ಯ 2GB ಹೈ-ಸ್ಪೀಡ್ ಡೇಟಾ (ಒಟ್ಟು 730GB ಡೇಟಾ), ದಿನಕ್ಕೆ 100 ಎಸ್‌ಎಂಎಸ್ ಹಾಗೂ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ ಕಾಲ್ ಸೌಲಭ್ಯವಿದೆ.