ಬೆಂಗಳೂರಿನಿಂದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಕೈಗೆಟುಕುವ ಬೆಲೆ, ಒಂದು ಬಾರಿ ಚಾರ್ಜ್ ಮಾಡಿದರೆ 165 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹಲವು ಅತ್ಯಾದುನಿಕ ತಂತ್ರಜ್ಞಾನದ ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ.
ಬೆಂಗಳೂರು (ಆ.07) ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಬೆಂಗಳೂರಿನ ಕೊಡುಗೆ ಪ್ರಮುಖವಾಗಿದೆ. ದೇಶದ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಗಳೂರು ಸ್ಟಾರ್ಟ್ಅಪ್ ಸಂಸ್ಥೆಗಳಿಂದ ಬಿಡುಗಡೆಯಾಗಿದೆ. ಇದೀಗ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರಿನಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇ3 ಎಲೆಕ್ಟ್ರಿಕ್.ಎಐ (E3 Electric.AI) ಅನ್ನೋ ಸ್ಟಾರ್ಟ್ಅಪ್ ಕಂಪನಿ ಭಾರತದ ಇವಿ ಮಾರುಕಟ್ಟೆಗೆ ಇ3 ಟ್ರಿಯಾನ್ ಅನ್ನೋ ಸ್ಕೂಟರ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಸ್ಕೂಟರ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಟೆಕ್ನಾಲಜಿ ಹೊಂದಿದೆ.
ಸ್ಕೂಟರ್ ಬೆಲೆ
ಬೆಂಗಳೂರಿನ ಇ3 ಟ್ರಿಯಾನ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೇವಲ 99,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಮೂರು ವೇರಿಯೆಂಟ್‌ನಲ್ಲಿ ಸ್ಕೂಟರ್ ಲಭ್ಯವಿದೆ. ವಿಶೇಷವಾಗಿ ಮೂರು ಬ್ಯಾಟರಿ ಬ್ಯಾಕ್ ಹಾಗೂ ಮೈಲೇಜ್ ರೇಂಜ್‌ನಲ್ಲಿ ಸ್ಕೂಟರ್ ಮಾರಾಟ ಆರಂಭಿಸಿದೆ.
- ಇ3 ಟ್ರಿಯಾನ್ ಸಿ1: ಮೂರು ವೇರಿಯೆಂಟ್ ಪೈಕಿ ಇದು ಆರಂಭಿಕ ವೇರಿಯೆಂಟ್ ಸ್ಕೂಟರ್. 2.3 kWh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 108 ಕಿಲೋಮೀಟರ್ ಮೈಲೇಜ್ ನೀಡಲಿದೆ. ಟಾಪ್ ಸ್ಪೀಡ್ 67 ಕಿ.ಮಿ ಪ್ರತಿ ಗಂಟೆಗೆ.
- ಇ3 ಟ್ರಿಯಾನ್ ಸಿ2: ಈ ಸ್ಕೂಟರ್ 3 kW ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 128 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇಜರ ಬೆಲೆ 1,09,999 ರೂಪಾಯಿ(ಎಕ್ಸ್ ಶೋ ರೂಂ)
- ಇ3 ಟ್ರಿಯಾನ್ ಸಿ1ಎಕ್ಸ್: 3.5 kWh ಬ್ಯಾಟರಿ ಪ್ಯಾಕ್ ಹೊಂದಿರುವ ಈ ಸ್ಕೂಟರ್ ಫಿಕ್ಸೆಡ್ ಬ್ಯಾಟರಿ ಫೀಚರ್ ಹೊಂದಿದೆ. ಇದರ ಬೆಲೆ 1,19,999 ರೂಪಾಯಿ (ಎಕ್ಸ್ ಶೋ ರೂಂ). ಒಂದು ಬಾರಿ ಚಾರ್ಜ್ ಮಾಡಿದರೆ 165 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ
ಎಐ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಇದೀಗ ಬೆಂಗಳೂರಿನ ಇ3 ಎಲೆಕ್ಟ್ರಿಕ್.ಎಐ ಕಂಪನಿ ಬಿಡುಗಡೆ ಮಾಡಿದ ತನ್ನ ಮೊದಲ ಸ್ಕೂಟರ್‌ನಲ್ಲಿ ಎಐ ಟೆಕ್ ಬಳಸಲಾಗಿದೆ. ವಿಶೇಷ ಅಂದರೆ 100ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್ ಹೊಂದಿದೆ. ಜೊತೆಗೆ 8 ವರ್ಷ ಅಥವಾ 1 ಲಕ್ಷ ಕಿಲೋಮೀಟರ್ ಬ್ಯಾಟರಿ ವ್ಯಾರಿಂಟಿ ನೀಡುತ್ತಿದೆ. ಹೀಗಾಗಿ ಕೈಗೆಟುಕುವ ಬೆಲೆ, ಮೈಲೇಜ್, ಗುಣಮಟ್ಟ ಹಾಗೂ ಸುರಕ್ಷತೆಯಲ್ಲೂ ಹೊಸ ಸ್ಕೂಟರ್ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ.
ವಿಶೇಷ ಅಂದರೆ ಎಐ ಟೆಕ್ ಮೂಲಕ ಸ್ಕೂಟರ್ ಇಗ್ನಿಷನ್ ಆನ್ ಮಾಡಿದ ಬೆನ್ನಲ್ಲೇ 10 ಸೆಕೆಂಡ್‌ಗಳಲ್ಲಿ ನಿಮ್ಮ ಸ್ಕೂಟರ್ ಹೆಲ್ತ್ ಸ್ಕ್ಯಾನ್ ಮಾಡಲಿದೆ. ವಾಹನದ ಸ್ಥಿತಿಗತಿ ಪರಿಶೀಲನೆ ನಡೆಸಲಿದೆ. ಗೂಗಲ್ ಮ್ಯಾಪ್, ನ್ಯಾವಿಗೇಶನ್, ಮೆಸೇಜ್ ಅಲರ್ಟ್, ಸ್ಮಾರ್ಟ್ ಕಾಕ್‌ಪಿಟ್ ಡಿಸ್‌ಪ್ಲೆ, ಜಿಯೋಫೆನ್ಸಂಗ್, ಡ್ಯಾಶಕ್ಯಾಮ್ ಸಪೋರ್ಟ್, ಕಳ್ಳತನವಾಗದಂತೆ ಸಿಸ್ಟಮ್, ರೋಡ್ ಸೈಡ್ ಅಸಿಸ್ಟೆನ್ಸ್ ಸೇರಿದಂತೆಹಲವು ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ.
ಸ್ಕೂಟರ್ ಚಾರ್ಜಿಂಗ್ ಸಮಯವೂ ಕಡಿಮೆ ಇದೆ. ಶೇಕಡಾ 80ರಷ್ಟು ಚಾರ್ಜ್ ಆಗಲು 2.5 ರಿಂದ 3.5 ಗಂಟೆ ಸಮಯ ತೆಗೆದುತೊಳ್ಳುತ್ತದೆ. ಈ ಮೂಲಕ ಮನೆಯಲ್ಲಿ ಸುಲಭವಾಗಿ ಚಾರ್ಜಿಂಗ್ ಮಾಡಲು ಸಾಧ್ಯವಿದೆ.


