ಬರುತ್ತಿದೆ OpenAI ಬ್ರೌಸರ್, ಗೂಗಲ್ ಕ್ರೋಮ್ ಪ್ರಾಬಲ್ಯ ಮುಗಿಸುತ್ತಾ ಆರ್ಟಿಫೀಶಿಯಲ್ ಇಂಟಲಿಜೆನ್ಸ್?

ಏನೇ ಕೇಳು ಕೊಡುವೆ ನಿನಗೆ ನಾನೀಗ, ಇದು ಗೂಗಲ್ ಕ್ರೋಮ್ ಸ್ಟೈಲ್. ಏನೇ ಬೇಕಿದ್ದರೂ ಕ್ರೋಮ್ ಬ್ರೌಸರ್ ಜಾಲಾಡಿದರೆ ಸಾಕು. ಆದರೆ ಕ್ರೋಮ್ ಬ್ರೌಸರ್ ಅಮೆರಿಕದಲ್ಲಿ ತೀವ್ರ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ  ಚಾಟ್‌ಜಿಪಿಟಿ ಮೂಲಕ ಹಂಗಾಮ ಸೃಷ್ಟಿಸಿದ ಒಪನ ಎಐ ಇದೀಗ ಕ್ರೋಮ್‌ಗೆ ಠಕ್ಕರ್ ನೀಡಲು ವೆಬ್ ಬ್ರೌಸರ್ ಆರಂಭಿಸುತ್ತಿದೆ.

OpenAi plan to launch web browser with AI support to end google chrome monopoly ckm

ನ್ಯೂಯಾರ್ಕ್(ನ.22) ಗೂಗಲ್ ಕ್ರೋಮ್ ಬಹುತೇಕರು ಬಳಸುತ್ತಾರೆ. ಕಾರಣ ಬ್ರೌಸಿಂಗ್ ಕ್ಷೇತ್ರದಲ್ಲಿ ಗೂಗಲ್ ಏಕಸ್ವಾಮ್ಯ ಸಾಧಿಸಿದೆ. ಗೂಗಲ್ ಕ್ರೋಮ್ ಬಿಟ್ಟರೆ ಈ ಮಟ್ಟಿಗೆ ಸೇವೆ ನೀಡುವ ಮತ್ತೊಂದು ಬ್ರೌಸರ್ ಇಲ್ಲ. ಇದ್ದರೂ ಗೂಗಲ್ ಮುಂದೆ ಎಲ್ಲವೂ ಕಡೆಗಣಿಸಲ್ಪಟ್ಟಿದೆ. ಗೂಗಲ್‌ನ ಇದೇ ಏಕಸ್ವಾಮ್ಯ ಮುರಿಯಲು ಅಮೆರಿದದಲ್ಲಿ ಕಾನೂನು ಪ್ರಕ್ರಿಯೆಗಳು ಆರಂಭಗೊಂಡಿದೆ. ಗೂಗಲ್ ಕ್ರೋಮ್ ಕಾನೂನು ಬಾಹಿರವಾಗಿ ವೆಬ್ ಬ್ರೌಸರ್‌ನಲ್ಲಿ ಏಕಸ್ವಾಮ್ಯ ಸಾಧಿಸಿದೆ ಅನ್ನೋದು ಗಂಭೀರ ಆರೋಪ. ಹೀಗಾಗಿ ಕ್ರೋಮ್‌ಗೆ ನಿರ್ಬಂಧ ಹೇರುವ ಪ್ರಕ್ರಿಯೆಗಳು ಶುರುವಾಗಿದೆ. ಇದರ ಬೆನ್ನಲ್ಲೇ ಇದೀಗ ಚಾಟ್‌ಜಿಪಿಟಿ ಮೂಲಕ ಸಂಚಲನ ಸೃಷ್ಟಿಸಿರುವ ಓಪನ್ ಎಐ ಇದೀಗ ಅತ್ಯಾಧುನಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸಹಾಯದ ವೆಬ್ ಬ್ರೌಸರ್ ಆರಂಭಿಸುತ್ತಿದೆ. ಈ ನಡೆ ಮುಂದಿನ ದಿನಗಳಲ್ಲಿ ಬ್ರೌಸಿಂಗ್ ಪರಿಕಲ್ಪನೆ, ಅಭ್ಯಾಸವನ್ನೇ ಬದಲಿಸಲಿದೆ.

 OpenAI ಬೌಸರ್‌ಗೆ ಎಐ ಚಾಟ್‌ಬಾಟ್ ಅತ್ಯಾಧುನಿಕ ಟೆಕ್ ತಂತ್ರಜ್ಞಾನದ ನೆರವಿದೆ. ಹೀಗಾಗಿ ಒಪನ್ ಎಐ ವೆಬ್ ಬ್ರೌಸರ್ ಪ್ರಮುಖವಾಗಿ ನಿಖರ ಮಾಹಿತಿ ನೀಡಲಿದೆ. ಇದು ಗೂಗಲ್ ಕ್ರೋಮ್ ಮೇಲೆ ಹೆಚ್ಚಿನ ಒತ್ತಡ ತರಲಿದೆ. ಕಾರಣ ಗೂಗಲ್ ಕ್ರೋಮ್ ನೀವು ಹುಡುಕುತ್ತಿರುವ ವಿಷಯದ ಕುರಿತು ಜಾಲತಾಣದಲ್ಲಿರುವ ಎಲ್ಲಾ ಮಾಹಿತಿ ನೀಡಲಿದೆ. ಇದರಲ್ಲಿ ಸತ್ಯ ಯಾವುದು, ನಕಲಿ ಯಾವುದು ಅನ್ನೋದು ಪತ್ತೆ ಹಚ್ಚಬೇಕು. ಆದರೆ ಒಪನ್ ಎಐ ವೆಬ್ ಬ್ರೌಸರ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ಒದಗಿಸಲಿದೆ. ಹೀಗಾಗಿ ಗೂಗಲ್ ಕ್ರೋಮ್ ಏಕಸ್ವಾಮ್ಯ , ಪ್ರಾಬಲ್ಯ ಮುರಿಯುವ ಎಲ್ಲಾ ಸಾಧ್ಯತೆ ಇದೆ.

ಮಾರಾಟವಾಗುತ್ತಾ ಗೂಗಲ್ ಕ್ರೋಮ್? ಸರ್ಚ್ ಎಂಜಿನ್ ಎಕಸ್ವಾಮ್ಯ ಮುರಿಯಲು DOJ ಶಿಫಾರಸು!

ಮೂಲಗಳ ಪ್ರಕಾರ ಸ್ಯಾಮ್ ಆಲ್ಟ್‌ಮನ್ ನೇತೃತ್ವದ ಓಪನ್ ಎಐ ಕಂಪನಿ ಈಗಾಗಲೇ ವೆಬ್ ಬ್ರೌಸರ್ ಲಾಂಚ್ ಮಾಡುವ ತಯಾರಿಯಲ್ಲಿದೆ. ಇದಕ್ಕಾಗಿ ಜಗನತ್ತಿನ ಅತ್ಯುತ್ತಮ ಆ್ಯಪ್ ಡೆವಲಪ್ಪರ್ಸ್ , ವೆಬ್‌ಸೈಟ್ ಡೆವಲಪ್ಪರ್ಸ್ ಜೊತೆ ಮಾತುಕತೆ ನಡೆಸಿದೆ. ಕೊಂಡೆ ನಾಸ್ಟ್(Conde Nast) ರೆಡ್‌ಫಿನ್( Redfin) ಈವೆಂಟ್‌‌ಬ್ರೈಟ್) ಹಾಗೂ ಪ್ರೈಸ್‌ಲೈನ್(Priceline) ಡೆವಲಪ್ಪರ್ಸ್ ಜತೆ ಮಾತುಕತೆ ನಡೆಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಪರಿಣಾಮಕಾರಿಯಾದ ವೆಬ್ ಬ್ರೌಸರ್ ಬಿಡುಗಡೆ ಮಾಡಲು ಓಪನ್ ಎಐ ಸಜ್ಜಾಗಿದೆ. 

ಚಾಟ್‌ಜಿಪಿಟಿ(ChatGPT) ಮೂಲಕ ಬಾರಿ ಯಶಸ್ಸು ಗಳಿಸಿರುವ ಓಪನ್ ಎಐ ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸಪೋರ್ಟ್ ಮೂಲಕ ಆಱಂಭಿಸುತ್ತಿರುವ ವೆಬ್ ಬ್ರೌಸರ್ ಭವಿಷ್ಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತದೆ ಎಂದೇ ತಜ್ಞರು ವಿಶ್ಲೇಷಿಸುತ್ತಿದ್ದರೆ. ಓಪನ್ ಎಐ ಈ ನಡೆ ಗೂಗಲ್ ಕ್ರೋಮ್ ನಿದ್ದೆಗೆಡಿಸಿದೆ. ಅಮೆರಿಕ ಡಿಪಾರ್ಟ್‌ಮೆಂಟ್ ಆಫ್ ಜಸ್ಟೀಸ್ ಈಗಾಗಲೇ ಕೋರ್ಟ್‌ನಲ್ಲಿ ಗೂಗಲ್ ಕ್ರೋಮ್ ಏಕಸ್ವಾಮಿ ಮುರಿಯಲು ಮನವಿ ಮಾಡಿದೆ. ಕಾನೂನು ಬಾಹಿರವಾಗಿ ಕ್ರೋಮ್ ಬ್ರೌಸಿಂಗ್ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದೆ. ಹೀಗಾಗಿ ಕೋರ್ಟ್ ಕ್ರೋಮ್ ಮಾರಾಟ ಮಾಡುವಂತೆ, ಇತರ ಪ್ರತಿಸ್ಪರ್ಧಿಗಳಿಗೆ ಅನುವು ಮಾಡಿಕೊಡುಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ. ಎಪ್ರಿಲ್ ತಿಂಗಳ ಅಂತ್ಯದಲ್ಲಿ ಇದರ ವಿಚಾರಣೆ ನಡೆಯಲಿದೆ.
 

Latest Videos
Follow Us:
Download App:
  • android
  • ios