ಯೂಟ್ಯೂಬ್ ಮಾನಿಟೈಸೇಶನ್ ನಿಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇದರಿಂದ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ಸ್ ಇನ್ಮುಂದೆ ಹಣಗಳಿಕೆ ಮಾಡಲು ಕಠಿಣ ಪರಿಶ್ರಮ ಪಡಬೇಕು. ಈಗ ಆದಾಯಕ್ಕೆ ಎಷ್ಟು ವೀವ್ಸ್, ವಾಚ್ ಹವರ್ ಇರಬೇಕು?

ನವದೆಹಲಿ (ಆ.11) ಯೂಟ್ಯೂಬ್ ಕಂಟೆಂಟ್ ಕ್ರಿಯೇಶನ್ ಮೂಲಕ ಬಹುತೇಕರು ಆದಾಯಗಳಿಸುತ್ತಿದ್ದಾರೆ. ಹಲವರು ಹೊಸ ಚಾನೆಲ್ ಆರಂಭಿಸಿ ಆದಾಯಗಳಿಯ ಪ್ರಕ್ರಿಯೆಯಲ್ಲಿದ್ದಾರೆ. ಆದರೆ ಇದೀಗ ಯೂಟ್ಯೂಬ್ ಹೊಸ ನೀತಿ ಜಾರಿಗೊಳಿಸಿದೆ. ಇನ್ಮುಂದೆ ಯೂಟ್ಯೂಬ್ ಮೂಲಕ ಆದಾಯಗಳಿಕೆಗೆ ಕಠಿಣ ನಿಯಮ ಜಾರಿಗೊಳಿಸಿದೆ. ಹೊಸ ನೀತಿ ಪ್ರಕಾರ ಯೂಟ್ಯೂಬ್ ಪಾರ್ಟನರ್ ಪ್ರೋಗ್ರಾಂ (YPP) ಮೂಲಕ ಜಾಹೀರಾತು ಹಾಗೂ ಯೂಟ್ಯೂಬ್ ಪ್ರೀಮಿಯಂ ಆದಾಯಕ್ಕೆ ಬೇಕಾಗದ ವೀವ್ಸ್ ಹಾಗೂ ವಾಚ್ ಹವರ್ (ವೀಕ್ಷಣೆ ಸಮಯ) ಎರಡನ್ನೂ ಹೆಚ್ಚಿಸಲಾಗಿದೆ.

ಹೊಸ ಕ್ರಿಯೇಟರ್ಸ್‌ಗೆ ಸಂಕಷ್ಟ

ಹೊಸ ಕಂಟೆಂಟ್ ಕ್ರಿಯೇಟರ್ಸ್ ಇದೀಗ ಯೂಟ್ಯೂಬ್ ಮೂಲಕ ಆದಾಯಕ್ಕೆ ಸರಿಸುಮಾರು ಹಾಲಿ ನೀತಿಗಿಂತ ಡಬಲ್ ವೀಕ್ಷಣೆ ಹಾಗೂ ವಾಚ್ ಹವರ್ ಪಡೆಯಬೇಕು. ಹೀಗಾಗಿ ಇನ್ಮುಂದೆ ಯೂಟ್ಯೂಬ್ ಮೂಲಕ ಆದಾಯ ಅತೀ ಸುಲಭವೂ ಅಲ್ಲ, ನಿಯಮತಿ ಅವಧಿಯಲ್ಲೂ ಸಾಧ್ಯವಿಲ್ಲ.

  • 8000 ವಾಚ್ ಹವರ್: 1 ವರ್ಷದಲ್ಲಿ ಬರೋಬ್ಬರಿ 8000 ವಾಚ್ ಹವರ್ ಪೂರೈಸಬೇಕು. ಸದ್ಯ 4000 ವಾಚ್ ಹವರ್ ಕಡ್ಡಾಯವಾಗಿತ್ತು.
  • 20 ಮಿಲಿಯನ್ ಶಾರ್ಟ್ ವೀವ್ಸ್ : 10 ಮಿಲಿಯನ್ (1 ಕೋಟಿ) ಯೂಟ್ಯೂಬ್ ಶಾರ್ಟ್ಸ್ ವೀವ್ಸ್ ನೀಯಮ ಇನ್ಮುಂದೆ 20 ಮಿಲಿಯನ್ (2 ಕೋಟಿ)ಗೆ ಏರಿಕೆ ಮಾಡಲಾಗಿದೆ.
  • 1000 ಸಬ್‌ಸ್ಕ್ರೈಬರ್: ಮೂಲ ನಿಯಮದಲ್ಲಿ ಬದಲಾವಣೆ ಮಾಡಿಲ್ಲ. ಕನಿಷ್ಠ 1000 ಸಬ್‌ಸ್ಕ್ರೈಬರ್ ಹೊಂದಿರಬೇಕು ಅನ್ನೋ ಮೂಲ ನಿಯಮದಲ್ಲಿ ಬದಲಾವಣೆ ಮಾಡಿಲ್ಲ. ಕೇವಲ ವೀಕ್ಷಣೆ, ವಾಚ್ ಹವರ್‌ಗಳಲ್ಲಿ ಭಾರಿ ಏರಿಕೆ ಮಾಡಲಾಗಿದೆ.

ಆದಾಯಗಳಿಸುತ್ತಿರುವ ಕ್ರಿಯೆಟರ್ಸ್‌ಗೆ ಈ ನಿಯಮ ಅನ್ವಯಿಸುತ್ತಾ?

ಹೊಸ ಕ್ರಿಯೇಟರ್ಸ್ ಜೊತೆಗೆ ಹಳೇ ಕ್ರಿಯೇಟರ್ಸ್‌ಗೂ ನೀತಿಗಳು ಅನ್ವಯಿಸುತ್ತದೆ. ಶಾರ್ಟ್ಸ್ ವಿಡಿಯೋ ಮೂಲಕ ಜಾಹೀರಾತು, ಸಬ್‌ಸ್ಕ್ರಿಪ್ಶನ್ ಆದಾಯ ಪಡೆಯಲು ಪ್ರತಿ 90 ದಿನಗಳ ಅವಧಿಯಲ್ಲಿ ಕನಿಷ್ಠ 10 ಮಿಲಿಯನ್ (1 ಕೋಟಿ) ಶಾರ್ಟ್ಸ್ ವೀಕ್ಷಣೆ ಕಡ್ಡಾಯವಾಗಿದೆ. ಈ ಮಿತಿ ಪೂರೈಸದಿದ್ದರೆ, ಶಾರ್ಟ್ಸ್ ಮೂಲಕ ಆದಾಯಗಳಿಕೆ ಸಾಧ್ಯವಿಲ್ಲ. ಆದರೆ ಲಾಂಗ್ ವಿಡಿಯೋ ಮೂಲಕ ಹಣ ಗಳಿಕೆ ಸಾಧ್ಯವಿದೆ. ಶಾರ್ಟ್ಸ್ ವೀವ್ಸ್ 10 ಮಿಲಿಯನ್‌ಗಿಂತ ಅಧಿಕಗೊಳ್ಳುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ ಆದಾಯ ಗಳಿಕೆ ಪುನರ್ ಆರಂಭಗೊಳ್ಳಲಿದೆ.

2018ರಲ್ಲಿ ಯೂಟ್ಯೂಬ್ ತನ್ನ ಮಾನಿಟೈಸೇಶನ್ ನೀತಿಯಲ್ಲಿ ಭಾರಿ ಬದಲಾವಣೆ ಮಾಡಿತ್ತು. ಬಳಿಕ ಸಣ್ಣ ಪುಟ್ಟ ಕಂಡೀಷನ್ ಹಾಕಿದ್ದರೂ ಭಾರಿ ಬದಲಾವಣೆ ಮಾಡಿರಲಿಲ್ಲ. ಸದ್ಯ 30 ಲಕ್ಷಕ್ಕೂ ಹೆಚ್ಚು ಕ್ರಿಯೇಟರ್ಸ್ ಯೂಟ್ಯೂಬ್ ಪಾರ್ಟನರ್ ಪ್ರೋಗ್ರಾಂ‌ನಲ್ಲಿ ಸಕ್ರೀಯರಾಗಿದ್ದಾರೆ. ಪ್ರತಿ ದಿನ ಯೂಟ್ಯೂಬ್‌ನಲ್ಲಿ 2000 ಕೋಟಿ ಶಾರ್ಟ್ಸ್ ವೀಕ್ಷಣೆ ಪಡೆಯುತ್ತಿದೆ. ಯೂಟ್ಯೂಬ್ ಹೊಸ ನೀತಿಯಲ್ಲಿ ಒರಿಜನಲ್ ಕೆಂಟೆಂಟ್‌ಗೆ ಹೆಚ್ಚಿನ ಒತ್ತು ನೀಡಿದೆ.

ಆಗಸ್ಟ್ 10ಕ್ಕೆ ಹೊಸ ನೀತಿ ಘೋಷಣೆ, ಮುಂದಿನ ತಿಂಗಳಿನಿಂದ ಪರದಾಟ

ಆಗಸ್ಟ್ 10 ರಂದು ಯೂಟ್ಯೂಬ್ ಹೊಸ ಮಾನಿಟೈಸೇಶನ್ ನೀತಿ ಘೋಷಿಸಿದೆ. ಇದರಿಂದ ಮುಂದಿನ ತಿಂಗಳಿನಿಂದ ಕಂಟೆಂಟ್ ಕ್ರಿಯೇಟರ್ಸ್ ಯೂಟ್ಯೂಬ್ ಆದಾಯಕ್ಕಾಗಿ ಪರದಾಡಬೇಕಾಗುವ ಸ್ಥಿತಿ ನಿರ್ಮಾಣವಾಗಲಿದೆ. ಇದೀಗ ಅತೀ ಹೆಚ್ಚಿನ ಮಂದಿ ಕಂಟೆಂಟ್ ಕ್ರಿಯೇಶನ್ ಮೂಲಕ ಆದಾಯ ನಿರೀಕ್ಷಿಸುತ್ತಿದ್ದಾರೆ. ಎಲ್ಲರೂ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಆಗುತ್ತಿದ್ದಾರೆ. ಇದರ ಬೆನ್ನಲ್ಲೇ ಯೂಟ್ಯೂಬ್ ರೂಲ್ಸ್ ಕಠಿಣಗೊಳಿಸಿದೆ.