Asianet Suvarna News Asianet Suvarna News

ಖಾಲಿ ಬಾಟಲಿಗಳ ಮೇಲೆ ಮ್ಯಾಜಿಕ್‌ ಮಾಡಿದ ಮಂಗಳೂರಿನ ಹುಡುಗಿ!

ಖಾಲಿ ಬಾಟಲಿಗಳಲ್ಲಿ ಕಲಾತ್ಮಕ ಚಿತ್ರಗಳು. ಇದನ್ನು ಹೀಗೆ ಮಾಡಿದ್ದಾರು ಎಂದು ಎಲ್ಲರೂ ನಿಬ್ಬೆರಗಾಗುವಂತೆ ಕಣ್ಣು ಮಿಟುಕಿಸದಂತೆ ನೋಡಬೇಕೆನ್ನುವ ಅದರೊಳಗೆ ತುಂಬಿರುವ ಬಣ್ಣಗಳ ಮಾತು. ಮಂಗಳೂರಿನ ಕಡಲತಡಿಯ ಬೊಕ್ಕಪಟ್ಟಣ ನಿವಾಸಿ ಮೇಘಾ ಮೆಂಡನ್‌ ಎಂಬಾಕೆಯೇ ಈ ವಿಶೇಷ ಆಸಕ್ತಿ ಹೊಂದಿರುವ ಯುವತಿ. ಸಮುದ್ರ ಕಿನಾರೆಯಲ್ಲಿ ಬಿಸಾಡಿ ಹೋಗಿರುವ ಬಾಟಲಿಗಳೇ ಈಕೆಯ ಕತಾತ್ಮಕತೆಯ ಸೊತ್ತು. ಪ್ರದರ್ಶನದ ಜೊತೆಗೆ ಮಂಆರಾಟವೂ ಆಗಿರುವ ಇವರ ಬಾಟೆಲ್‌ ಪೇಯಿಂಟಿಂಗ್ಸ್‌ ಈವರೆಗೂ ಸುಮಾರು 900ಕ್ಕೂ ಅಧಿಕ ಬಾಟಲಿಗಳು ಸಂಗ್ರಹಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಡೀಟೈಲ್ಸ್‌ ಇಲ್ಲಿದೆ.

Megha Mandan from Mangaluru design glass bottles and caps
Author
Bangalore, First Published Jun 25, 2019, 11:27 AM IST

ಆತ್ಮಭೂಷಣ್‌, ಮಂಗಳೂರು

ಕಡಲ ಕಿನಾರೆಯಲ್ಲಿ ಕಸಕಡ್ಡಿಗಳಿಂದ ಹಿಡಿದು ಬಾಟಲಿ ವಸ್ತುಗಳು ಸಾಮಾನ್ಯವಾಗಿ ರಾರಾಜಿಸುತ್ತಿರುತ್ತವೆ. ಸಮುದ್ರ ತನ್ನ ಒಡಲಿನಿಂದ ಬೇಡದ ವಸ್ತುಗಳನ್ನು ಕಿನಾರೆಗೆ ತಂದು ಬಿಸಾಕುತ್ತದೆ. ಇದಲ್ಲದೆ ಪ್ರವಾಸಿಗರು ಎಸೆದುಹೋಗುವ ಬಾಟಲಿಗಳೂ ಇರುತ್ತವೆ. ಈ ಬಾಟಲಿಗಳಿಗೆ ಈಗ ಮರುಜೀವ ನೀಡುವ ಕೆಲಸವನ್ನು ಮೇಘಾ ಮೆಂಡನ್‌ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಬಾಟಲಿಗಳಿಗೆ ಪೇಯಿಂಟ್‌ ಮಾಡುವ ಅವರಿಗೆ ಸಂಬಂಧಿಗಳಾದ ಯಶವಂತ ಮೆಂಡನ್‌, ಅಕ್ಷಯ್‌ ಪುತ್ರನ್‌ ಹಾಗೂ ಶ್ರಾವ್ಯಾ ಸಾಥ್‌ ನೀಡುತ್ತಾರೆ.

ಮನೆಯೊಡೆಯನ ವ್ಯಕ್ತಿತ್ವ ಹೇಳೋ ಮನೆ ಎಂಬ ಗೂಡು!

ಅಡ್ಯಾರಿನ ವಳಚ್ಚಿಲ್‌ ಶ್ರೀನಿವಾಸ ಕಾಲೇಜಿನಲ್ಲಿ ಆರ್ಕಿಟೆಕ್ಚರ್‌ ಪದವಿ ಪೂರ್ಣಗೊಳಿಸಿರುವ ಮೇಘನಾ ಮೆಂಡನ್‌ ಈಗ ಉದ್ಯೋಗ ಅರಸುತ್ತಿದ್ದಾರೆ. ಜೊತೆಗೆ ಖಾಲಿ ಬಾಟಲಿ ಪೇಯಿಂಟಿಂಗ್‌ ಸಹವಾಸ ಇದ್ದೇ ಇದೆ. ಇತ್ತೀಚೆಗೆ ಕೇರಳದಲ್ಲೂ ಯುವತಿಯೊಬ್ಬರು ಇದೇ ಮಾದರಿಯಲ್ಲಿ ಖಾಲಿ ಬಾಟಲ್‌ನಲ್ಲಿ ಚಿತ್ರ ವಿನ್ಯಾಸಗೊಳಿಸಿದ್ದಾರೆ. ಅವರು ಎರಡು ವರ್ಷಗಳ ಹಿಂದೆಯೇ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ಅದರ ಮೇಲೆ ಚಿತ್ರ ರಚಿಸುತ್ತಿದ್ದರು. ಆದರೆ ಎಲ್ಲಿಯೂ ಪ್ರದರ್ಶನಕ್ಕೆ ಇಡುತ್ತಿರಲಿಲ್ಲ. ಪರಿಸರ ಪ್ರೇಮಿ ದಿನೇಶ್‌ ಹೊಳ್ಳ ಅವರು ಒಮ್ಮೆ ಮನೆಗೆ ಬಂದಿದ್ದಾಗ, ವೇಸ್ಟ್‌ ಬಾಟಲಿಗಳಲ್ಲಿ ಕಲಾತ್ಮಕತೆ ಮೂಡಿರುವುದನ್ನು ಕಂಡು ಬೆರಗಾಗಿ ಇದರ ಪ್ರದರ್ಶನ ನಡೆಸುವಂತೆ ಹೇಳಿದ್ದರು. ಇದೇ ಪ್ರೇರಣೆಯಿಂದ ಕದ್ರಿ ಪಾರ್ಕ್ ಸೇರಿದಂತೆ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಬಾಟಲಿ ಚಿತ್ರ ಪ್ರದರ್ಶನ ನಡೆಸುತ್ತಿದ್ದಾರೆ. ಇದುವರೆಗೆ ಸುಮಾರು 900ಕ್ಕೂ ಅಧಿಕ ಬಾಟಲಿಗಳನ್ನು ಸಂಗ್ರಹಿಸಿ ಚಿತ್ರಮೂಡಿಸಿದ್ದಾರೆ.

ಶಿವಾಜಿಯಿಂದ ಮೋದಿವರೆಗೆ:

ಬಾಟಲಿಯಲ್ಲಿ ಶಿವಾಜಿಯಿಂದ ತೊಡಗಿ ಮೋದಿ ವರೆಗಿನ ಮಹಾನುಭಾವರ ಚಿತ್ರಗಳು ಮೇಘನಾ ಮೆಂಡನ್‌ ಕæೖ ಚಳಕದಿಂದ ರೂಪುಗೊಂಡಿವೆ. ಕರಾವಳಿಯ ಜಾನಪದ ಶೈಲಿಯ ಅನೇಕ ಚಿತ್ರಗಳನ್ನು ಬಾಟಲಿಯಲ್ಲಿ ರಚಿಸಿದ್ದಾರೆ. ಪ್ರತಿಯೊಂದು ಚಿತ್ರವೂ ವಿಶಿಷ್ಟರೀತಿಯಲ್ಲಿ ಕಲಾತ್ಮಕತೆಯನ್ನು ಹೊಂದಿರುವಂತೆ ನೋಡಿಕೊಳ್ಳುತ್ತಾರೆ. ಈ ಮೂಲಕ ಬಾಟಲಿಗೆ ಹೊಸ ಮೆರುಗನ್ನು ತರುತ್ತಾರೆ. ಈಕೆಯ ಕೈಗೆ ಬಾಟಲಿ ಸಿಕ್ಕಿದರೆ ಸಾಕು, ಬಾಟಲಿಯ ಚಿತ್ರಣವನ್ನೇ ಬದಲಾಯಿಸಿ ಬಿಡುತ್ತಾರೆ ಎಂಬುದಕ್ಕೆ ಪ್ರಸ್ತುತ ಅಲ್ಲಲ್ಲಿ ನಡೆಯುತ್ತಿರುವ ಬಾಟಲಿಗಳ ಚಿತ್ರಪ್ರದರ್ಶನವೇ ಸಾಕ್ಷಿ.

ಕಲಾತ್ಮಕತೆಯ ಮೂರು ಹಂತ:

ಬಾಟಲಿಯಲ್ಲಿ ಚಿತ್ರರಚಿಸಲು ಮೇಘನಾ ಮೂರು ಹಂತಗಳನ್ನು ತೆಗೆದುಕೊಳ್ಳುತ್ತಾರೆ. ಮೊದಲ ಹಂತದಲ್ಲಿ ಬಾಟಲಿಯ ಮೇಲ್ಭಾಗದ ಪೇಪರ್‌ನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತದೆ. ನಂತರ ಬಾಟಲಿಯ ಹೊರಭಾಗದಲ್ಲಿ ಮೂರು ಸುತ್ತು ಪೇಯಿಂಟ್‌ ಹೊಡೆಯುವುದು, ಬಳಿಕ ಬೇಕಾದ ಡಿಸೈನ್‌ನ್ನು ಅದರ ಮೇಲೆ ರಚಿಸುವುದು. ಬಾಟಲಿಯ ಮುಚ್ಚಳ ಹಾಗೂ ಒಳಭಾಗದಲ್ಲೂ ಕಲಾತ್ಮಕತೆ ಮೂಡಿಸುತ್ತಾರೆ.

ದುರ್ಭಾಗ್ಯ ದೂರವಾಗಿ ಸೌಭಾಗ್ಯ ನಿಮ್ಮದಾಗಬೇಕೇ... ಇವಿಷ್ಟು ಮಾಡಿ..

ಲ್ಯಾಂಪ್‌ ಮೆರುಗು:

ಗ್ಲಾಸ್‌ಹೌಸ್‌ಗಳಲ್ಲಿ ಕಂಡು ಬರುವ ಮಾದರಿಯಲ್ಲೇ ಬಾಟಲಿ ಲ್ಯಾಂಪ್‌ನ್ನೂ ಕೂಡ ಇವರು ಅಭಿವೃದ್ಧಿಪಡಿಸಿದ್ದಾರೆ. ಕಲಾತ್ಮಕತೆಯ ಬಾಟಲಿಗಳ ಒಳಗೆ ಎಲ್‌ಇಡಿ ಬಲ್‌್ಬ ಅಳವಡಿಸುತ್ತಾರೆ. ಇದನ್ನು ಎಲ್ಲಿ ಬೇಕಾದರೂ ಬಳಕೆ ಮಾಡಬಹುದು. ಮನೆಗಳಲ್ಲಿ ಇದು ಅತಿರಂಜಿತವಾಗಿ ಆಕರ್ಷಕವಾಗಿ ಬೆಳಗುತ್ತದೆ. ಇದಕ್ಕೆ ಈಗ ಸಾಕಷ್ಟುಬೇಡಿಕೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಮೇಘನಾ.

ಮೋದಿ ಮೇನಿಯಾ:

ಬಾಟಲಿಯಲ್ಲಿ ರಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಕ್ಕೆ ಅಪಾರ ಬೇಡಿಕೆ ಬಂದಿದೆ. ಆರಂಭದಲ್ಲಿ ಮೋದಿಯ ಒಂದು ಚಿತ್ರ ರಚಿಸಿದ್ದರು. ಇದಕ್ಕೆ ಬೇಡಿಕೆ ಕುದುರಿದ್ದು, ಈವರೆಗೆ ಮೋದಿಯವರ ಎಂಟು ಚಿತ್ರ ರಚಿಸಿದ್ದಾರೆ. ಮೋದಿಯಲ್ಲದೆ ಶಿವಾಜಿ, ಮೇರಾ ಹಿಂದೂಸ್ತಾನ್‌, ಪ್ರಕೃತಿ ವೈವಿಧ್ಯಗಳ ಬಾಟಲಿ ಚಿತ್ರಕ್ಕೆ ಅಪಾರ ಮನ್ನಣೆ ವ್ಯಕ್ತವಾಗುತ್ತಿದೆ. ಈ ಬಾಟಲಿಗಳ ಪ್ರದರ್ಶನ ಜೊತೆಗೆ ಮಾರಾಟವನ್ನೂ ನಡೆಸುತ್ತಿದ್ದಾರೆ. ಎಲ್‌ಇಡಿ ಹೊಂದಿರುವ ಕಲಾತ್ಮಕ ಬಾಟಲಿಗಳಿಗೆ 900 ರು.ವರೆಗೆ ಇದೆ, ಸಾಮಾನ್ಯ ಕಲಾತ್ಮಕತೆಯ ಬಾಟಲಿಗಳಿಗೆ 700 ರು. ಇದ್ದರೆ, ತಮ್ಮದೇ ಮುಖಚಿತ್ರ ಹೊಂದಿರುವ ಬಾಟಲಿಗೆ 1,000 ರು. ಇರಿಸಲಾಗಿದೆ. ಅಂತೂ ಬಿಸಾಡುವ ಬಾಟಲಿಗಳು ಕಲಾತ್ಮಕತೆ ಪಡೆದು ಮತ್ತೆ ಗ್ರಾಹಕರ ಮನೆಯನ್ನು ಅಲಂಕರಿಸುತ್ತಿದೆ.

Follow Us:
Download App:
  • android
  • ios