ಮನೆಯೊಡೆಯನ ವ್ಯಕ್ತಿತ್ವ ಹೇಳೋ ಮನೆ ಎಂಬ ಗೂಡು!

ವ್ಯಕ್ತಿ ತನ್ನಿಷ್ಟ ಕಷ್ಟಕ್ಕೆ ಅನುಗುಣವಾಗಿ ಮನೆಯ ವಿನ್ಯಾಸ ಹಾಗೂ ಜೋಡಣೆ ಮಾಡಿಕೊಂಡಿರುತ್ತಾನೆ. ಅಂದ ಮೇಲೆ ಮನೆಯನ್ನು ನೋಡಿದರೆ ಮನೆಯೊಡೆಯನ ಮನಸ್ಸೇನು, ಕನಸೇನು, ವಯಸ್ಸೇನು ಎಂದು ಹೇಳಬಹುದಲ್ಲವೇ?

A home gives insight about a persons personality

ಯಾರೇ ಆಗಲಿ, ಮನೆ ಎಂದರೆ ಹಲವಾರು ವರ್ಷ ಕನಸು ಕಂಡು ಇದು ಹೀಗೆಯೇ ಇರಬೇಕು. ಮನೆಯ ಒಳಾಂಗಣ ಇಂಥದ್ದೇ ಆಗಿರಬೇಕು, ಹೊರಾಂಗಣದಲ್ಲಿ ಲಾನ್ ಇರಬೇಕು, ಇಂಟೀರಿಯರ್ ಡೆಕೋರೇಶನ್‌ಗೆ ಇಂಥ ವಸ್ತುಗಳಿದ್ದರೆ ಚೆನ್ನ ಎಂದೆಲ್ಲ ಹತ್ತು ಬಾರಿ ಯೋಚಿಸಿಯೇ ವಿನ್ಯಾಸ ಮಾಡಿರುತ್ತಾರೆ. ಅಂದ ಮೇಲೆ ಮನೆಯ ಇಂಚಿಂಚೂ ಆ ವ್ಯಕ್ತಿಯ ಇಷ್ಟ ಕಷ್ಟಗಳನ್ನು, ಚಿಂತನೆ, ಚರಿತ್ರೆಯನ್ನು ಸಾರಿ ಹೇಳುತ್ತಿರುತ್ತಿದೆ. ಇದನ್ನೇ ಈಗ ಹೊಸ ಅಧ್ಯಯನವೊಂದು ಮತ್ತೆ ಹೇಳಿದೆ. ಯಾವುದೇ ವ್ಯಕ್ತಿಯ ಮನೆ ಆತನ ವ್ಯಕ್ತಿತ್ವ ಹೇಳುತ್ತದೆ. ಅಷ್ಟೇ ಅಲ್ಲ, ಪ್ರತಿ ಜಾಗವೂ ಒಂದು ಭಾವನಾತ್ಮಕ ಅನುಭವ ಹುಟ್ಟುಹಾಕುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ. 

ದುರ್ಭಾಗ್ಯ ದೂರವಾಗಿ ಸೌಭಾಗ್ಯ ನಿಮ್ಮದಾಗಬೇಕೇ... ಇವಿಷ್ಟು ಮಾಡಿ..

'ಪರ್ಸನಾಲಿಟಿ ಆ್ಯಂಡ್ ಸೋಶ್ಯಲ್ ಸೈಕಾಲಜಿ ರಿವ್ಯೂ' ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯು, ಕೆಲ ಜಾಗಗಳು ಎಷ್ಟು ನಾಟಕೀಯವಾಗಿ ಎಮೋಷನಲ್ ಎಕ್ಸ್‌ಪೀರಿಯನ್ಸ್ ನೀಡುತ್ತವೆ ಎಂದರೆ ಇದ್ದಕ್ಕಿದ್ದಂತೆ ಇನ್ನೊಬ್ಬರೊಂದಿಗಿನ ನಮ್ಮ ಬಾಂಧವ್ಯ, ಉತ್ಪಾದಕತೆ ಹಾಗೂ ಪರ್ಫಾರ್ಮೆನ್ಸ್ ನ್ನು ನೆನಪಿಸುತ್ತದೆ ಅಥವಾ ಹಾಗೆ ಮಾಡುವಂತೆ ಪ್ರೇರೇಪಿಸುತ್ತದೆ ಎಂಬುದನ್ನು ಹೈಲೈಟ್ ಮಾಡಿದೆ. 

'ನೀವು ಎಲ್ಲೇ ಇದ್ದರೂ ಖಾಲಿಯಾದ ನ್ಯೂಟ್ರಲ್ ಸ್ಥಳ ಎಂಬುದು ಇರುವುದು ಸಾಧ್ಯವೇ ಇಲ್ಲ. ಪ್ರತಿ ಸ್ಥಳಕ್ಕೂ ಸೈಕಾಲಜಿಕಲ್ ಮೀನಿಂಗ್ ಇದೆ,' ಎಂದು ಹೋಪ್ ಕಾಲೇಜ್‌ನ ಸೋಷ್ಯಲ್ ಸೈಕಾಲಜಿಸ್ಟ್ ಬೆಂಜಮಿನ್ ಮೀಘರ್ ಹೇಳುತ್ತಾರೆ. 

ಸಾಮಾನ್ಯವಾಗಿ ಸಾಮಾಜಿಕ ಹಾಗೂ ವೈಯಕ್ತಿಕ ಸೈಕಾಲಜಿ ಸಂಶೋಧನೆಯು ನಾವು ಹೇಗೆ ಯೋಚಿಸುತ್ತೀವಿ, ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ, ಕೆಲವು ಸನ್ನಿವೇಶಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂದು ನೋಡುತ್ತದೆ. ಆದರೆ ಸೈಕಾಲಜಿಯು ಸುತ್ತಲಿನ ಪರಿಸರವನ್ನು ಇಗ್ನೋರ್ ಮಾಡುತ್ತಿದೆ ಎಂಬುದನ್ನು ಅಧ್ಯಯನ ಹೇಳಿದೆ. 

ತಲೆ ಬುಡದಲ್ಲಿ ಇದನ್ನೆಲ್ಲ ಇಟ್ಕೊಂಡ್ರೆ ಕಾಡುತ್ತೆ ಮನೋರೋಗ!

'ಸೈಕಾಲಜಿಸ್ಟ್‌ಗಳು ವ್ಯಕ್ತಿಯ ತಲೆ, ಮನಸ್ಸಿನಿಂದ ಹೊರ ಬಂದು ಸೈಕಾಲಜಿಕಲ್ ಚಟುವಟಿಕೆ ನಡೆವ ತಾಣಗಳನ್ನು ವಿಸ್ತಾರವಾಗಿ ನೋಡಬೇಕಿದೆ,' ಎಂದು ಮೀಘರ್ ಸಲಹೆ ನೀಡಿದ್ದಾರೆ. 

ಮನಸ್ಸಿನಂತೆ ಮನೆ, ಮನೆಯಂತೆ ಮನಸ್ಸು!

ಒಂದು ಮನೆಯಲ್ಲಿರುವ ದಂಪತಿಯ ಉದಾಹರಣೆ ತೆಗೆದುಕೊಂಡರೆ, ಅವರಿಬ್ಬರೂ ಚಿತ್ರ ಪ್ರೇಮಿಗಳಾಗಿದ್ದರೆ, ದೊಡ್ಡ ಸ್ಕ್ರೀನ್‌ನ ಟಿವಿ, ಆರಾಮದಾಯಕ ಕೌಚ್‌ಗಳು ಇಂಥ ವಸ್ತುಗಳನ್ನು ಸರಿಯಾಗಿ ಜೋಡಿಸಿಕೊಳ್ಳುವತ್ತ ಅವರು ಹೆಚ್ಚಿನ ಗಮನ ಹರಿಸಿರುತ್ತಾರೆ. ಇನ್ನು ಆಹಾರಪ್ರಿಯರಾದರೆ ಅವರ ಕಿಚನ್‌ನಲ್ಲಿ ಹೊಸ ಹೊಸ ಅಡುಗೆ ಪಾತ್ರೆಗಳನ್ನು ಕಾಣಬಹುದು. ಕಲಾರಸಿಕರಾದರೆ ಮನೆಯ ಗೋಡೆಗಳಲ್ಲಿ ಉತ್ತಮ ಪೇಂಟಿಂಗ್ಸ್, ಚೆಂದದ ಶಿಲ್ಪಕಲಾಕೃತಿಗಳು ಇತ್ಯಾದಿಯನ್ನು ಕಾಣಬಹುದು. ಹೀಗೆ ದಂಪತಿಯು ತಮ್ಮ ಮನೆಯಲ್ಲಿ ಮಾಡುವ ಪ್ರತಿಯೊಂದೂ ಬದಲಾವಣೆಯೂ ಅವರ ಹವ್ಯಾಸ, ಇಷ್ಟ, ಕಷ್ಟಗಳನ್ನು ಅವಲಂಬಿಸಿರುತ್ತದೆ. ಹೀಗಾಗಿ, ಮನೆಯು ಮನೆಯಲ್ಲಿ ವಾಸಿಸುವವರ ವ್ಯಕ್ತಿತ್ವವನ್ನು ಸಾರಿ ಹೇಳುತ್ತದೆ ಎಂದು ವರದಿ ವಿವರಿಸಿದೆ.  

ಒಂದು ವೇಳೆ ಸಂಗಾತಿಗಳ ಆಸಕ್ತಿಗಳು ಬೇರೆಯಾಗಿದ್ದರೆ ಆಗ ಅವರ ನಡುವೆ ವೈಮನಸ್ಯ ಬರಬಹುದು. ಇಂಥ ಸಂದರ್ಭದಲ್ಲಿ ದಂಪತಿಯು ಮನೆಯಲ್ಲಿ ತಮ್ಮದೇ ಆದ ಜಾಗಗಳನ್ನು ಹುಟ್ಟುಹಾಕಿಕೊಳ್ಳಬಹುದು. ಜನರು ತಾವು ವಾಸಿಸುವ ಸ್ಥಳಕ್ಕೆ ನೀಡುವ ವಿನ್ಯಾಸವು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 

ಫೆಂಗ್ ಶುಯಿ: ನಿಂಬೆ ಹಣ್ಣಿನ ಬಣ್ಣಕ್ಕೂ ಇದೆ ವಾಸ್ತು ನಂಟು

ಈ ಅಧ್ಯಯನವು ಆರ್ಕಿಟೆಕ್ಟ್‌ಗಳಿಗೆ, ನಗರ ಯೋಜಕರಿಗೆ, ಇಂಟೀರಿಯರ್ ಡಿಸೈನರ್ಸ್‌ಗೆ ಹಾಗೂ ಸ್ಥಳವಿನ್ಯಾಸದ ಮೇಲೆ ಕೆಲಸ ಮಾಡುವ ಎಲ್ಲರಿಗೂ ಸಹಾಯಕವಾಗುತ್ತದೆ. ಪ್ರತಿ ವ್ಯಕ್ತಿಗೂ ಹೊಂದುವಂತೆ, ಅವರ ಹವ್ಯಾಸ, ಯೋಚನೆಗಳನ್ನು ಅರಿತು ಮನೆ ವಿನ್ಯಾಸ ಹಾಗೂ ನಿರ್ಮಾಣ ಮಾಡಿಕೊಟ್ಟರೆ ಅದು ಆ ವ್ಯಕ್ತಿಯಲ್ಲಿ ಆರೋಗ್ಯಕರ ವರ್ತನೆ ಹಾಗೂ ಧನಾತ್ಮಕ ಅನುಭವಗಳಿಗೆ ಕಾರಣವಾಗುತ್ತದೆ. 

Latest Videos
Follow Us:
Download App:
  • android
  • ios