ಡಿಜಿಟಲ್ ಜಗತ್ತಿನಲ್ಲಿ ಕನ್ನಡಕ್ಕೆ ಮಹತ್ವ ಕಲ್ಪಿಸಿದ ಓಂಶಿವಪ್ರಕಾಶ್
ಕನ್ನಡ ಡಿಜಿಟಲ್ ಜಗತ್ತು ಎಂದಾಗ ನೆನಪಾಗುವ ಮುಖ್ಯ ಹೆಸರು ಓಂ ಶಿವಪ್ರಕಾಶ್. ಕನ್ನಡ ವಿಕಿಪೀಡಿಯಾದಲ್ಲಿ ನಿಮಗಿಂದು ಸಿಗುವ ಮಾಹಿತಿಗಳಿಂದ ಹಿಡಿದು ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ, ವಚನ ಸಾಹಿತ್ಯದ ಡಿಜಿಟಲೀಕರಣ, ಕನ್ನಡ ಪುಸ್ತಕಗಳ ಡಿಜಿಟಲೀಕರಣ, ರಂಗ ಗೀತೆಗಳು, ನಾಟಕಗಳನ್ನು ಡಿಜಿಟಲ್ ಫ್ಲಾಟ್‌ಫಾಮ್‌ರ್‍ಗೆ ತರುವುದರವರೆಗೆ ಇವರ ಕಾರ್ಯ ಹಲವು ನೆಲೆಗಳಲ್ಲಿ ವಿಸ್ತರಿಸಿದೆ. ಆ ಕುರಿತ ಕಿರು ಮಾಹಿತಿ.
ಬೆಂಗಳೂರು (ನ. 30): ಕನ್ನಡ ಡಿಜಿಟಲ್ ಜಗತ್ತು ಎಂದಾಗ ನೆನಪಾಗುವ ಮುಖ್ಯ ಹೆಸರು ಓಂ ಶಿವಪ್ರಕಾಶ್. ಕನ್ನಡ ವಿಕಿಪೀಡಿಯಾದಲ್ಲಿ ನಿಮಗಿಂದು ಸಿಗುವ ಮಾಹಿತಿಗಳಿಂದ ಹಿಡಿದು ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ, ವಚನ ಸಾಹಿತ್ಯದ ಡಿಜಿಟಲೀಕರಣ, ಕನ್ನಡ ಪುಸ್ತಕಗಳ ಡಿಜಿಟಲೀಕರಣ, ರಂಗ ಗೀತೆಗಳು, ನಾಟಕಗಳನ್ನು ಡಿಜಿಟಲ್ ಫ್ಲಾಟ್‌ಫಾಮ್‌ರ್‍ಗೆ ತರುವುದರವರೆಗೆ ಇವರ ಕಾರ್ಯ ಹಲವು ನೆಲೆಗಳಲ್ಲಿ ವಿಸ್ತರಿಸಿದೆ. ಆ ಕುರಿತ ಕಿರು ಮಾಹಿತಿ.
ಅದು 2006-07 ರ ಕಾಲಘಟ್ಟ. ಇಂಟರ್‌ನೆಟ್, ಕನ್ನಡ ಸಾಫ್ಟ್‌ವೇರ್ ಬಳಕೆಗೂ ತಿಣುಕಾಡುತ್ತಿದ್ದ ಕಾಲ. ಆ ಹೊತ್ತಿಗೆ ಕನ್ನಡದಲ್ಲಿ ಒಂದಿಷ್ಟುಬ್ಲಾಗ್‌ಗಳಿದ್ದವು. ಅವುಗಳಲ್ಲೊಂದು ಬ್ಲಾಗ್‌ನಲ್ಲಿ ಲಿನಕ್ಸಾಯಣ ಎಂಬ ಅಂಕಣ ಬರುತ್ತಿತ್ತು. ಕನ್ನಡ ಪರಂಪರೆಗೆ ಹೊಸತಾದ ತಂತ್ರಜ್ಞಾನದ ಬಗ್ಗೆ, ಮುಕ್ತ ತಂತ್ರಾಶದ ಬಗ್ಗೆ ಅರಿವು ನೀಡುತ್ತಿದ್ದ ಕಾಲಂ ಅದು. ಆ ಕಾಲ ಬರೆಯುತ್ತಾ ತಂತ್ರಜ್ಞಾನವನ್ನು ಕನ್ನಡಿಗರಿಗೆ ಸರಳವಾಗಿ ಅರ್ಥ ಮಾಡಿಸಿದವರು ಓಂ ಶಿವಪ್ರಕಾಶ್. ಈ ಲಿನಕ್ಸಾಯಣ ಬರೆಯುವ ಯೋಚನೆ ಹುಟ್ಟಿದ್ದು ಒಂದು ಸಂದರ್ಭದಲ್ಲಿ.
ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು
2007ರ ಹೊತ್ತಿಗೆ ಒಮ್ಮೆ ಬ್ಲಾಗ್ ಬರಹಗಾರರ ಸಮಾವೇಶ ನಡೆಯಿತು. ಅಲ್ಲಿಗೆ ಶಿವಪ್ರಕಾಶ್ ಅವರೂ ಹೋಗಿದ್ದರು. ಅಲ್ಲವರಿಗೆ ಕನ್ನಡ ಭಾಷೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಲ್ಲಿ ಎಷ್ಟುಹಿಂದಿದೆ, ತಾಂತ್ರಿಕವಾಗಿಯೂ ಬೆಳೆಯಬೇಕಾದ ಅವಶ್ಯಕತೆ ಎಷ್ಟಿದೆ ಅನ್ನೋದು ಮನದಟ್ಟಾಯ್ತು. ಆ ಬಳಿಕ ತಂತ್ರಜ್ಞಾನದ ಬಗೆಗೆ ಸತತವಾಗಿ ಕನ್ನಡಗರ ತಿಳುವಳಿಕೆ ಹೆಚ್ಚಿಸುವಂತೆ ಬರೆಯುತ್ತಾ ಬಂದರು. ನೀವೊಮ್ಮೆ https://www.linuxaayana.net/ ಗೆ ವಿಸಿಟ್ ಮಾಡಿದರೆ ಈಗಲೂ ಇಂದಿನ ತಂತ್ರಜ್ಞಾನದ ಬೆಳವಣಿಗೆಗಳ ಬಗೆಗೆ ಕನ್ನಡದಲ್ಲಿರುವ ಸರಳ ಬರಹಗಳನ್ನು ಇಲ್ಲಿ ನೋಡಬಹುದು.
ಆ ಬಳಿಕ ಮಕ್ಕಳಿಗಾಗಿ ಕಿಂದರಿಜೋಗಿ ಅನ್ನುವ ಡಾಟ್‌ಕಾಮ್‌ಅನ್ನೂ ಆರಂಭಿಸಿದರು. ಇದರಲ್ಲಿ ಮಕ್ಕಳ ತಿಳುವಳಿಕೆ ಹೆಚ್ಚಿಸುವ ಪ್ರಯತ್ನವಿತ್ತು. ಆ ಬಳಿಕ ಹುಟ್ಟಿದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗೆ ಬಳಸುವ ಸಾಧ್ಯತೆಯನ್ನು ಬಗೆಯಲು ಹುಟ್ಟಿದ್ದು ಸಂಚಯ.
ಸಂಚಯ ಸೃಷ್ಟಿಸಿದ ಸಂಚಲನ
ಸಂಚಯ https://www.linuxaayana.net/ ಭಾಷಾ ಸಂಶೋಧನೆಯಲ್ಲಿ ಮಹತ್ತರ ಕೆಲಸ ಮಾಡಿದೆ. ವಚನ ಸಂಚಯ, ದಾಸ ಸಂಚಯ, ಸರ್ವಜ್ಞ ಸಂಚಯ, ರನ್ನ ಸಂಚಯ, ಜನ್ನ ಸಂಚಯ ಎಂಬ ಭಾಷಾ ಸಂಶೋಧನಾ ಸೀರೀಸ್ ಇದರಲ್ಲಿವೆ. ನೀವು ಇದರಲ್ಲಿ ವಚನ ಸಂಚಯ ಅನ್ನುವ ಲಿಂಕ್ ಕ್ಲಿಕ್ಕಿಸಿದರೆ ಒಂದು ವೆಬ್ ಪೇಜ್ ತೆರೆಯುತ್ತದೆ.
ಇದರಲ್ಲಿ ನಿಮಗೆ ಬೇಕಾದ ವಚನ, ವಚನಕಾರರ ವಿವರ, ಅದರ ಕಾಲಘಟ್ಟಇತ್ಯಾದಿ ಮಾಹಿತಿ ಪಡೆಯಬಹುದು. ಇದಕ್ಕೆ ಕೋಟಿಗೂ ಮೀರಿ ಹಿಟ್‌ಗಳು ಸಿಕ್ಕಿವೆ ಅಂದರೆ ಅದಕ್ಕೆಷ್ಟುಮಹತ್ವವಿದೆ ಅನ್ನೋದು ಗೊತ್ತಾಗುತ್ತೆ. ಅದೇ ರೀತಿ ದಾಸರ ಬಗ್ಗೆ, ಸರ್ವಜ್ಞ, ರನ್ನ, ಜನ್ನರ ಬಗ್ಗೆ ಮಾಹಿತಿ ಪಡೆಯಲು ಪ್ರತ್ಯೇಕ ಲಿಂಕ್‌ಗಳಿವೆ.
ಕನ್ನಡ ಕಟ್ಟಿದವರು:ಐಟಿ ಮಂದಿಯನ್ನು ಸಾಹಿತ್ಯದೆಡೆಗೆ ಸೆಳೆಯುತ್ತಿರುವ 'ಕಹಳೆ'!
ಈ ಸಂಚಯ ವೆಬ್‌ಸೈಟ್‌ನಲ್ಲಿ ‘ಪದ ಸಂಚಯ’, ‘ಪುಸ್ತಕಗಳ ಡಿಜಿಟಲೈಸೇಶನ್’ ಎಂಬ ಇನ್ನಿತರ ಪುಟಗಳಿವೆ. ಜೊತೆಗೆ ಸಮೂಹ ಸಂಚಯ ಅನ್ನುವ ಲಿಂಕ್ ಇದೆ. ಇದರಲ್ಲಿ ಕನ್ನಡ ಸಮೂಹಗಳ ಸಾಧ್ಯತೆಯ ವಿವರ ಇದೆ. ಅದೇ ರೀತಿ ‘ಪುಸ್ತಕ ಸಂಚಯ’ಕ್ಕೆ ಹೋದರೆ ಡಿಜಿಟಲ್ ಲೈಬ್ರೆರಿಯಲ್ಲಿರುವ ಕನ್ನಡ ಪುಸ್ತಕಗಳ ವಿವರ ಪಡೆಯಬಹುದು.
ಈ ಸಂಚಯದ ಹರಹು ಬಹಳ ವಿಸ್ತಾರವಾದದ್ದು. ಅಷ್ಟೇ ಆಳವಾದ ಅಧ್ಯಯನವೂ ಇದರಲ್ಲಾಗಿದೆ. ಸಂಚಯದಲ್ಲಿ ‘ಅರಿವಿನ ಅಲೆಗಳು’ ಎಂಬೊಂದು ಪುಟವಿದೆ. ಶಿವಪ್ರಕಾಶ್ ಸಂಪಾದಕತ್ವದ ಈ ಪುಟದಲ್ಲಿ ಕನ್ನಡದಲ್ಲಿ ತಂತ್ರಜ್ಞಾನದ ಕುರಿತಾದ ಮಹತ್ವದ ಲೇಖನಗಳಿವೆ.
ಪುಸ್ತಕಗಳ ಡಿಜಿಟಲೀಕರಣ
ಇಂಗ್ಲೀಷ್ ಪುಸ್ತಕಗಳಂತೆ ಕನ್ನಡ ಕೃತಿಗಳು ಅಂತರ್ಜಾಲದಲ್ಲಿ ಸಿಗುವುದು ಕಡಿಮೆ. ಆ ಸಾಧ್ಯತೆಯೂ ಕನ್ನಡದಲ್ಲಾಗಬೇಕು ಅನ್ನುವುದು ಶಿವಪ್ರಕಾಶ್ ಮತ್ತು ಗೆಳೆಯರ ಮಹದಾಸೆ. ಅದಕ್ಕೋಸ್ಕರ ಸಾಕಷ್ಟುಕೃತಿಕಾರರನ್ನು, ಪ್ರಕಾಶಕರನ್ನು ಸಂಪರ್ಕಿಸಿದ್ದಾರೆ. ಮುದ್ರಣ ನಿಂತು ಹೋದ ಕೃತಿಗಳನ್ನು ಹಾಗೂ ಇತರ ಕೃತಿಗಳನ್ನು ಡಿಜಿಟಲ್ ಮಾಧ್ಯಮಕ್ಕೆ ತರಲು ಪ್ರಯತ್ನಿಸಿದ್ದಾರೆ. ಸದ್ಯಕ್ಕೀಗ 500ಕ್ಕೂ ಅಧಿಕ ಪುಸ್ತಕಗಳು ಡಿಜಿಟಲ್ ಮಾಧ್ಯಮದಲ್ಲಿ ಸಿಗುತ್ತಿದೆ ಎಂದಾದರೆ ಅದರ ಹಿಂದಿರುವುದು ಈ ಮಹನೀಯರ ಪರಿಶ್ರಮ.
ಕನ್ನಡ ಕಟ್ಟಿದವರು: ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಿದ ಉತ್ಸಾಹಿ ಅನಿಲ್ ಶೆಟ್ಟಿ
ಸಂಚಿ ಫೌಂಡೇಶನ್
ಹೀಗೊಂದು ಅಂತರ್ಜಾಲ ತಾಣ ಕಳೆದ ಕೆಲವು ವರ್ಷಗಳಿಂದ ಸದ್ದು ಮಾಡುತ್ತಿದೆ. ಈ ತಾಣದ ಹಿಂದಿರುವ ತಾಂತ್ರಿಕ ನೈಪುಣ್ಯ ಶಿವಪ್ರಕಾಶ್ ಅವರದು. ಸಂಚಿ ಫೌಂಡೇಶನ್ ಎಂಬ ಜಾಲ ತಾಣಕ್ಕೆ ಭೇಟಿ ನೀಡಿದರೆ ಅಲ್ಲಿ ನೀನಾಸಂನ ಹೆಚ್ಚಿನ ನಾಟಕಗಳನ್ನು ಕಾಣಬಹುದು. ಹಲವು ರಂಗಗೀತೆಗಳನ್ನು ಆನಂದಿಸಬಹುದು. ಜೊತೆಗೆ ಕಾವ್ಯ ಕನ್ನಡಿ ಎಂಬ ವಿಭಿನ್ನ ಪ್ರಯೋಗವೂ ಇಲ್ಲಿ ಸಿಗುತ್ತದೆ. ಯಕ್ಷಗಾನ, ಜ್ಞಾನ ಸರಣಿ ಎಂಬ ಪುಟಗಳೂ ಇವೆ. ಇದರಲ್ಲಿ ಯಕ್ಷಗಾನ ದಿಗ್ಗಜರ ಭಾಗವತಿಕೆ, ತಾಳಮದ್ದಳೆ, ಯಕ್ಷಗಾನಗಳನ್ನೂ ನೋಡಬಹುದು. ಜ್ಞಾನ ಸರಣಿಯಲ್ಲಿ ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳಿವೆ.
ಹೀಗೆ ಓಂಶಿವಪ್ರಕಾಶರ ಕನ್ನಡ ಕೆಲಸ ಲೇಖನಿಯ ಪರಿಮಿತಿಯನ್ನೂ ಮೀರಿ ಸಾಗುತ್ತದೆ. ತಮ್ಮ ಕೆಲಸಗಳಿಗೆ ಅರ್ಧ ವಿರಾಮವನ್ನಷ್ಟೇ ನೀಡಿ ಮುಂದುವರಿಸುತ್ತಲೇ ಹೋಗುವುದು ಶಿವಪ್ರಕಾಶ್ ಅವರ ಇಚ್ಛಾಶಕ್ತಿಗೆ ಸಾಕ್ಷಿಯಂತಿದೆ.
ನಾನೀಗ ಮಾಡುತ್ತಿರುವ ಕೆಲಸ ಒಂಥರಾ ಜೇನುಗೂಡಿಗೆ ಕೈ ಹಾಕಿದ ಹಾಗೆ. ಈ ಕೆಲಸ ಮುಗಿಯುವುದು ಅಂತಿಲ್ಲ. ನಾನು ಹಾಗೂ ನಮ್ಮ ಸಮಾನಾಸ್ತಕ ಮಿತ್ರರ ಬಿಡುವಿನ ವೇಳೆಯೆಲ್ಲ ಇದಕ್ಕೇ ಮೀಸಲು. ಕನ್ನಡಿಗರು ಹೆಚ್ಚೆಚ್ಚು ತಂತ್ರಜ್ಞಾನದ ಬಳಕೆ ಮಾಡಬೇಕು. ಅಪ್‌ಡೇಟ್ ಆಗಬೇಕು ಅನ್ನುವ ಇಂಗಿತ ನಮ್ಮದು. ಈ ನೆಲೆಯಲ್ಲಿ ಇನ್ನಷ್ಟುದುಡಿಯುವ ಮನಸ್ಸಿದೆ. ಆದರೆ ಫಂಡಿಂಗ್ ಸಮಸ್ಯೆ, ಸಮಯದ ಅಭಾವ ಸೇರಿದಂತೆ ಅನೇಕ ಸವಾಲುಗಳೂ ಎದುರಿಗಿವೆ.
- ಓಂ ಶಿವಪ್ರಕಾಶ್, ಕನ್ನಡ ಸಾಧಕ