viral video : ಚಿನ್ನದ ಸ್ಪೂನ್ ಬಾಯಲ್ಲಿಟ್ಕೊಂಡು ಹುಟ್ಟಿದ ಹುಡುಗ. ಮೊದಲ ಬರ್ತ್ಡೇಯಲ್ಲಿ ಚಿನ್ನದ ಮಳೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಗಿಫ್ಟ್ ಲೀಸ್ಟ್ ವಿಡಿಯೋ ಸುದ್ದಿ ಮಾಡ್ತಿದೆ.

ಮದುವೆಯಲ್ಲಿ 71 ಲಕ್ಷ ನಗದು, 21 ತೊಲೆ ಬಂಗಾರ ಪಡೆದ ವರನ ಸುದ್ದಿಯೊಂದು ಇತ್ತೀಚಿಗೆ ವೈರಲ್ (Viral) ಆಗಿತ್ತು. ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ನಾನಾ ವಸ್ತುಗಳು ಸಿಕ್ತಿರುತ್ತವೆ. ಅಲ್ದೆ ಸಂಬಂಧಿಕರು, ಸ್ನೇಹಿತರು ದುಬಾರಿ ಬೆಲೆ ಗಿಫ್ಟ್ ನೀಡ್ತಾರೆ. ಆದ್ರೆ ಬರ್ತ್ ಡೇಯಲ್ಲಿ ಮಕ್ಕಳಿಗೆ ದುಬಾರಿ ಗಿಫ್ಟ್ ಸಿಗೋದು ಬಲು ಅಪರೂಪ. ಕೆಲವೇ ಕೆಲವು ಜನರು ಮಾತ್ರ ಬಂಗಾರ, ಬೆಳ್ಳಿಯನ್ನು ಉಡುಗೊರೆ ನೀಡ್ತಾರೆ. ಉಳಿದಂತೆ ನಗದು, ಆಟಿಕೆ ಹೆಚ್ಚಾಗಿ ಬರುತ್ತೆ. ಆದ್ರೆ ಅತೀ ಹೆಚ್ಚು ದುಬಾರಿ ಗಿಫ್ಟ್ ಪಡೆದು ಪುಟಾಣಿ ಸುದ್ದಿಯಲ್ಲಿದ್ದಾನೆ. ಮಗು ಹುಟ್ತಾನೇ ಬಂಗಾರದ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದೆ ಎನ್ನುವ ಮಾತೊಂದಿದೆ. ಅದಕ್ಕೆ ಶಿವಾಯ್ ಉತ್ತಮ ಉದಾಹಣೆ ಅನ್ಬಹುದು. ಒಂದು ವರ್ಷದ ಶಿವಾಯ್ ಗೆ ಸಿಕ್ಕ ಬರ್ತ್ ಡೇ ಗಿಫ್ಟ್ ನೆಟ್ಟಿಗರನ್ನು ದಂಗಾಗಿಸಿದೆ.

ಮೊದಲ ಬರ್ತ್ ಡೆಗೇ ಮಾವ ಕೊಟ್ಟಿದ್ದೆಷ್ಟು?

ಉತ್ತರ ಪ್ರದೇಶದ ಶಿವಾಯ್ ಮೊದಲ ಬರ್ತ್ ಡೇಯನ್ನು ಅವರ ಕುಟುಂಬಸ್ಥರು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಬರ್ತ್ ಡೇ ನಂತ್ರ ಗಿಫ್ಟ್ ಪಟ್ಟಿ ರೆಡಿ ಮಾಡಲಾಗಿದೆ. ಹಾಗೆಯೇ ಸಾಲಾಗಿಟ್ಟಿದ್ದ ಗಿಫ್ಟ್ ಐಟಂ ತಲೆ ತಿರುಗುವಂತೆ ಮಾಡಿದೆ. ಮಗುವಿನ ಮಾಮ ಈ ಎಲ್ಲ ಗಿಫ್ಟ್ ನೀಡಿದ್ದು, ಗಿಫ್ಟ್ ಲಿಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮದುವೆಯಲ್ಲಿ 71 ಲಕ್ಷ ನಗದು, 21 ತೊಲ ಚಿನ್ನ ಪಡೆದ ಯೂಟ್ಯೂಬರ್ ಅರುಣ್‌ಗೆ ನೆಟ್ಟಿಗರಿಂದ

akhilesh_Chauhan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮಗುವಿಗೆ 21 ಜೋಡಿ ಬಟ್ಟೆ ಸಿಕ್ಕಿದೆ. ಶಿವಾಯ್ಗೆ ಅಲಿಗಢ–ಆಗ್ರಾ ಹೆದ್ದಾರಿಯ ಬಳಿ ಒಂದು ಫ್ಲಾಟ್ ಉಡುಗೊರೆಯಾಗಿ ನೀಡಲಾಗಿದೆ. ಇದರ ಜೊತೆಗೆ ಲಕ್ಷಾಂತರ ರೂಪಾಯಿ ನಗದು, 20 ಗ್ರಾಂ ತೂಕದ ಚಿನ್ನದ ಸರ, 500 ಗ್ರಾಂ ತೂಕದ ಬೆಳ್ಳಿ ಪಾತ್ರೆಗಳು, ಲಕ್ಷ್ಮೀ–ಗಣೇಶ ಮೂರ್ತಿಗಳು ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು ಕುಟುಂಬದವರು ನೀಡಿದ್ದಾರೆ. ಮಗುವಿಗೆ ಆಟಿಕೆ ಕೂಡ ನೀಡಲಾಗಿದೆ. ಇದಲ್ದೆ ಮಗುವಿನ ತಾಯಿಗೂ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಚಿನ್ನದ ಹಾರ, ಬಳೆಗಳು, ಕಿವಿಯೋಲೆಗಳು ಮತ್ತು ಬೆಳ್ಳಿ ಕಾಲುಂಗುರಗಳು ಹಾಗೂ 101 ಸೀರೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಶಿವಾಯ್ ಅಜ್ಜಿ ಹಾಗೂ ಚಿಕ್ಕಮ್ಮನಿಗೂ ಆಭರಣ, ಬಟ್ಟೆಯನ್ನು ಗಿಫ್ಟ್ ಆಗಿ ನೀಡಲಾಗಿದೆ. ಒಂದಿಷ್ಟು ಪ್ಯಾಂಟ್ ಹಾಗೂ ಶರ್ಟ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಒಟ್ಟಾರೆ ಒಂದು ಕೋಟಿ ಮೌಲ್ಯದ ಉಡುಗೊರೆಯನ್ನು ಮಾವ ನೀಡಿದ್ದಾರೆ.

ದಂಗಾದ ಬಳಕೆದಾರರು 

ಉಡುಗೊರೆಗಳ ಪಟ್ಟಿ ತುಂಬಾ ಉದ್ದವಾಗಿದ್ದು,ಇಂಟರ್ನೆಟ್ ಬಳಕೆದಾರರನ್ನು ಬೆರಗುಗೊಳಿಸಿದೆ. ಬಳಕೆದಾರರು ಅಚ್ಚರಿ ಪ್ರತಿಕ್ರಿಯಿ ನೀಡಿದ್ದಾರೆ. ವೀಡಿಯೊಗೆ ಲಕ್ಷಾಂತರ ವೀವ್ಸ್ ಬಂದಿದೆ. ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ದೇವರು ಎಲ್ಲರಿಗೂ ಇಂಥ ಶ್ರೀಮಂತ ಪಾಲಕರನ್ನು ನೀಡಲಿ ಅಂತ ಬಳಕೆದಾರರು ಪ್ರಾರ್ಥಿಸಿದ್ದಾರೆ. ಶಿವಾಯ್ ಜೀವನ ಸುಖಕರವಾಗಿರಲಿ ಅಂತ ಕೆಲವರು ಆಶೀರ್ವಾದ ಮಾಡಿದ್ದಾರೆ. ಶಿವಾಯ್ ತಂದೆಗೆ ಏನೂ ಸಿಕ್ಕಿಲ್ಲ. ಪಾಪ ಅವರೇನು ಮಾಡಿದ್ರು ಎನ್ನುವ ಕಮೆಂಟ್ ಕೂಡ ಇಲ್ಲಿದೆ. ಸಹೋದರಿ ಹಾಗೂ ಕುಟುಂಬದ ಮೇಲಿನ ಪ್ರೀತಿ ಅಂದ್ರೆ ಇದು ಅಂತ ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸರ್ಪ್ರೈಸ್ ಗಿಫ್ಟ್ ಕೊಟ್ಟು ಪ್ರಪೋಸ್ ಮಾಡಿ, ನಿಮ್ಮ GFಗೆ ಗೋಲ್ಡ್ ಮೂಗುತಿ ಕೊಡಿ

ಈ ಘಟನೆ ಇಂದಿನ ಸಮಾಜದಲ್ಲಿ ಸಂಪತ್ತು, ಸಂಪ್ರದಾಯ ಮತ್ತು ತೋರಿಕೆ ಬಗ್ಗೆ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಡಿಜಿಟಲ್ ಯುಗದಲ್ಲಿ ಖಾಸಗಿ ಆಚರಣೆಗಳು ಹೇಗೆ ಸಾರ್ವಜನಿಕ ಚರ್ಚೆಯಾಗುತ್ತವೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.

View post on Instagram