ವೈರಲ್ ಆದ ಅಪಘಾತದ ವಿಡಿಯೋವೊಂದರಲ್ಲಿ, ಮೇಲ್ನೋಟಕ್ಕೆ ಯುವತಿಯೊಬ್ಬಳ ತಪ್ಪಿನಿಂದ ಅಪಘಾತವಾದಂತೆ ಕಾಣುತ್ತದೆ. ಆದರೆ, ಮತ್ತೊಂದು ಸಿಸಿಟಿವಿ ದೃಶ್ಯವನ್ನು ನೋಡಿದಾಗ, ಆಟೋ ಚಾಲಕ ಮತ್ತು ಅತಿವೇಗವಾಗಿ ಬಂದ ಬೈಕ್ ಸವಾರನೇ ಅಪಘಾತಕ್ಕೆ ನಿಜವಾದ ಕಾರಣ ಎಂಬ ಅಸಲಿಯತ್ತು ಬಯಲಾಗುತ್ತದೆ.
ಅಪಘಾತ ಪ್ರಕರಣಗಳು ನಡೆದಾಗ ಸಹಜವಾಗಿ ದೊಡ್ಡ ಗಾಡಿಗಳ ಮೇಲೆ ಆರೋಪ ಹೊರಿಸುವುದು ಸರ್ವೇ ಸಾಮಾನ್ಯವಾಗಿದೆ. ನಡೆದುಕೊಂಡು ಹೋಗುತ್ತಿರುವಾಗ ಸತ್ತರೆ ಗಾಡಿಗಳ ಮೇಲೆ, ಟೂ ವ್ಹೀಲರ್ನವರು ಸತ್ತರೆ ಆಟೋದವರ ಮೇಲೆ, ಆಟೋಕ್ಕೆ ಅಪಘಾತವಾದರೆ ಬಸ್ನವರ ಮೇಲೆ... ಹೀಗೆ ಹಿಂದೆ ಮುಂದೆ ನೋಡದೇ ಆರೋಪ ಮಾಡುವುದು ದಿನನಿತ್ಯವೂ ನಡೆದೇ ಇರುತ್ತದೆ. ಅಷ್ಟೇ ಏಕೆ ತಪ್ಪು ಯಾರದ್ದೇ ಇದ್ದರೂ ದೊಡ್ಡ ವಾಹನದವರನ್ನೇ ಹಿಡಿದು ಥಳಿಸುವವರೂ ಇದ್ದಾರೆ. ಇದೇ ಕಾರಣಕ್ಕೆ ಎಷ್ಟೋ ಬಾರಿ ತಮ್ಮ ತಪ್ಪು ಇರದಿದ್ದರೂ ಚಾಲಕರು ಎಸ್ಕೇಪ್ ಆಗುತ್ತಾರೆ. ಎಸ್ಕೇಪ್ ಆದ್ದರಿಂದ ಅವರೇ ತಪ್ಪಿತಸ್ಥರು ಎಂದು ಮತ್ತೊಂದು ಆರೋಪ ಅವರ ಮೇಲೆ ಬರುತ್ತದೆ.
ಸಿಸಿಟಿವಿನೂ ಮಾಡತ್ತೆ ಮೋಸ
ಇದು ಜನಸಾಮಾನ್ಯರು ಆಡುವ ಮಾತಾದರೆ, ಇನ್ನು ಸಿಸಿಟಿವಿ ನೋಡಿಯೂ ಮೋಸ ಹೋಗಬಹುದು ಎನ್ನುವುದಕ್ಕೆ ಇಲ್ಲಿ ವೈರಲ್ ಆಗಿರೋ ವಿಡಿಯೋಒಂದು ಉದಾಹರಣೆಯಾಗಿದೆ. worldbuzz_now ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಸಾಮಾನ್ಯವಾಗಿ ಅಪಘಾತ ಸಂಭವಿಸಿದಾಗ ಸಿಸಿಟಿವಿಯ ಫುಟೇಜ್ ವೈರಲ್ ಆಗುತ್ತದೆ. ಅದನ್ನು ನೋಡಿದಾಕ್ಷಣ, ಇಂಥವರದ್ದೇ ತಪ್ಪು ಎಂದು ಎಲ್ಲರೂ ಅಂದುಕೊಂಡು ಬಿಡುತ್ತೇವೆ. ಏಕೆಂದರೆ ಅಲ್ಲಿ ಸಿಸಿಟಿವಿ ಸಾಕ್ಷ್ಯಾಧಾರ ಇರತ್ತಲ್ಲ, ಇನ್ನೇನು ಎಲ್ಲವೂ ನಾವಂದುಕೊಂಡಂತೆ ಅಂದುಕೊಂಡು ಬಿಡುತ್ತೇವೆ. ಇಂಥವರೇ ತಪ್ಪಿತಸ್ಥರು ಎಂದುಕೊಳ್ಳುವುದೂ ಉಂಟು.
ಸಿಸಿಟಿವಿಯಲ್ಲಿ ದಾಖಲು
ಆದರೆ ಈ ಘಟನೆ ನೋಡಿ. ಇದು ಸಿಸಿಟಿವಿಯಲ್ಲಿ ದಾಖಲಾಗಿದ್ದೆ. ಇಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಮಹಿಳೆಯೊಬ್ಬಳ ಸೈಡ್ಗೆ ಗಾಡಿ ತೆಗೆದುಕೊಳ್ಳುತ್ತಾಳೆ. ಇವಳು ಸೈಡ್ಗೆ ಹೋಗುವುದು ತಿಳಿಯುತ್ತಲೇ ಹಿಂದೆ ಇದ್ದವನು ಸ್ವಲ್ಪ ಗಲಿಬಿಲಿಗೊಂಡು ಇತ್ತ ಬರುತ್ತಾನೆ. ಅದೇ ಎದುರಿಗೆ ಇದ್ದ ಬೈಕ್ನವ ಬಂದು ಲೇಡಿಯ ಹಿಂದೆ ಇದ್ದ ಬೈಕ್ನವನಿಗೆ ಗುದ್ದುತ್ತಾನೆ. ಅಲ್ಲಿಗೆ ಅವರಿಬ್ಬರೂ ಬಿದ್ದು ಗಂಭೀರ ಗಾಯಗಳಾಗುತ್ತವೆ (ಇವರಿಗೆ ಏನಾಗಿದೆ ಎನ್ನುವುದು ತಿಳಿದಿಲ್ಲ. ಆದರೆ ಗಂಭೀರವಾಗಿ ಗಾಯಗೊಂಡಿರಬಹುದು ಎನ್ನುವುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ). ಅಲ್ಲಿಗೆ ಮೇಲ್ನೋಟಕ್ಕೆ ಇಲ್ಲಿ ತಪ್ಪು ಆ ಯುವತಿಯದ್ದೆ ಎನ್ನಿಸುವುದು ಉಂಟು. ಆಕೆ ಬೈಕ್ ಅನ್ನು ಸೈಡ್ಗೆ ತೆಗೆದುಕೊಂಡಿದ್ದೇ ಇಷ್ಟೆಲ್ಲಾ ಆವಾಂತರಕ್ಕೆ ಕಾರಣವಾಯಿತು ಎಂದು.
ನಿಜಕ್ಕೂ ಆಗಿದ್ದೇ ಬೇರೆ
ಆದರೆ ನಿಜಕ್ಕೂ ಹಾಗೆ ಆಗಿದ್ದಲ್ಲ. ಇನ್ನೊಂದು ಕಡೆಯಲ್ಲಿ ಇರುವ ಸಿಸಿಟಿವಿ ನೋಡಿದರೆ ಅಸಲಿಯತ್ತು ಏನೆಂದು ತಿಳಿಯತ್ತದೆ. ಅಲ್ಲಿ ಒಬ್ಬ ರಿಕ್ಷಾದವನು ರೋಡ್ ಕ್ರಾಸ್ ಮಾಡಲು ನಿಂತಿದ್ದಾನೆ. ಆಗ ಬೈಕ್ನವರ ಸಿಕ್ಕಾಪಟ್ಟೆ ಫಾಸ್ಟ್ನಿಂದ ಬರುತ್ತಿದ್ದಾನೆ. ಈ ಆಟೋದವ ಕ್ರಾಸ್ ಮಾಡುವಾಗ ಅತ್ತ ಕಡೆಯಿಂದ ಯಾರು ಬರುತ್ತಿದ್ದಾರೆ ಎನ್ನುವುದನ್ನು ನೋಡಿಯೇ ಇಲ್ಲ. ಏಕಾಏಕಿ ಆಟೋ ಸ್ಟಾರ್ಟ್ ಮಾಡಿದ್ದಾನೆ. ಬೈಕ್ನಲ್ಲಿ ಫಾಸ್ಟ್ ಆಗಿ ಬರುತ್ತಿದ್ದವ, ಗಲಿಬಿಲಿಗೊಂಡು ಬೈಕ್ ಅನ್ನು ಸರ್ರನೆ ಸೈಡ್ಗೆ ಸರಿಸಿ ಮುಂದೆ ಹೋಗಿದ್ದಾನೆ. ಆಗಲೇ ಅವನಿಗೆ ಬ್ಯಾಲೆನ್ಸ್ ತಪ್ಪಿದೆ. ಸಿಕ್ಕಾಪಟ್ಟೆ ಫಾಸ್ಟ್ ಇದ್ದುದರಿಂದ ಆತ ಮುಂದೆ ಬರುತ್ತಿರುವ ಬೈಕ್ಗೆ ಹೊಡೆದಿದ್ದಾನೆ. ಒಂದು ವೇಳೆ ಆ ಲೇಡಿ ಸೈಡ್ಗೆ ತನ್ನ ಗಾಡಿ ತರದೇ ಹೋಗಿದ್ದರೆ ಈತ ನೇರವಾಗಿ ಅವಳಿಗೆ ಗುದ್ದಿ ಬೇರೆ ರೀತಿ ಅನಾಹುತ ಸೃಷ್ಟಿಸುತ್ತಿದ್ದ. ಒಟ್ಟಿನಲ್ಲಿ ಒಂದರಲ್ಲಿ ಲೇಡಿಯದ್ದು ತಪ್ಪು ಎನ್ನಿಸಿದರೆ, ಇನ್ನೊಂದರಲ್ಲಿ ಆಟೋದವ ಹಾಗೂ ಸಿಕ್ಕಾಪಟ್ಟೆ ಫಾಸ್ಟ್ ಆಗಿ ಬೈಕ್ ಓಡಿಸುತ್ತಿದ್ದವನ ತಪ್ಪು ಎಂದು ತಿಳಿಯುತ್ತದೆ.


