ಇಲ್ಲೊಂದು ಕಡೆ ಪ್ರವಾಸಿಗರು ತುಂಬಿ ಹರಿಯುವ ನದಿಯಲ್ಲಿ ಹುಚ್ಚು ಸಾಹಸ ಮಾಡುವುದಕ್ಕೆ ಹೋಗಿದ್ದು, ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಸಿಗರು ಮಹೀಂದ್ರಾ ಥಾರ್ ಗಾಡಿಯಲ್ಲಿ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟುವುದಕ್ಕೆ ಹೋಗಿದ್ದಾರೆ
ದೇಶದೆಲ್ಲೆಡೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಹಲವು ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣಾಗಿದೆ. ಹೀಗಿರುವಾಗ ಮಳೆಯಿಂದ ರಭಸವಾಗಿ ಹರಿಯುತ್ತಿರುವ ನದಿಯ ನೀರಿನಲ್ಲಿ ಮಹೀಂದ್ರಾ ಥಾರ್ ಗಾಡಿ ಕೊಚ್ಚಿಕೊಂಡು ಹೋಗಿದ್ದು, ವೀಡಿಯೋ ವೈರಲ್ ಆಗಿದೆ. ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದೆಲ್ಲೆಡೆ ನೈಋತ್ಯ ಮುಂಗಾರು ಜೋರಾಗಿ ಸುರಿಯುತ್ತಿದ್ದು, ಮಳೆಯಿಂದಾಗಿ ದೇಶದ ಹಳ್ಳಕೊಳ್ಳಗಳು ಜಲಾಶಯಗಳು ತುಂಬಿ ಹರಿಯುತ್ತಿದ್ದು ಒಂದೆಡೆ ರಮಣೀಯ ದೃಶ್ಯ ಸೃಷ್ಟಿಯಾಗಿದ್ದರೆ ಮತ್ತೊಂದೆಡೆ ಹಲವು ಮನೆ ಕುಸಿತ ಪ್ರವಾಹ, ಗುಡ್ಡ ಕುಸಿತಗಳಿಂದಾಗಿ ಹಲವು ಅವಾಂತರಗಳು ಸಂಭವಿಸುತ್ತಲೇ ಇವೆ. ಹಲವು ಜಲಾಶಯಗಳು ತುಂಬಿರುವುದರಿಂದ ಅಪಾಯವನ್ನು ಲೆಕ್ಕಿಸದೇ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುವುದಕ್ಕಾಗಿ ರಮಣೀಯ ಸ್ಥಳಗಳತ್ತ ದಾಂಗುಡಿ ಇಡುತ್ತಿದ್ದಾರೆ. ಕೆಲವು ಸ್ಥಳಗಳ ಅಪಾಯವನ್ನು ಅರಿಯದೇ ಕೆಲವು ಪ್ರವಾಸಿಗರು ದುಸ್ಸಾಹಸ ಮೆರೆಯಲು ಹೋಗಿ ಅಪಾಯಕ್ಕೀಡಾಗುತ್ತಿದ್ದಾರೆ.
ಅದೇ ರೀತಿ ಇಲ್ಲೊಂದು ಕಡೆ ಪ್ರವಾಸಿಗರು ತುಂಬಿ ಹರಿಯುವ ನದಿಯಲ್ಲಿ ಹುಚ್ಚು ಸಾಹಸ ಮಾಡುವುದಕ್ಕೆ ಹೋಗಿದ್ದು, ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಸಿಗರು ಮಹೀಂದ್ರಾ ಥಾರ್ ಗಾಡಿಯಲ್ಲಿ ತುಂಬಿ ಹರಿಯುತ್ತಿದ್ದ ನದಿಯನ್ನು ದಾಟುವುದಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ನೀರಿನ ರಭಸಕ್ಕೆ ಥಾರ್ ಗಾಡಿ ಚಾಲಕನ ನಿಯಂತ್ರಣ ಕಳೆದುಕೊಂಡು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಕಾರಿನಲ್ಲಿರುವವರು ಕಾರಿನ ಸೈಡ್‌ನಲ್ಲಿರುವ ರಾಡನ್ನು ಹಿಡಿದು ನೇತಾಡುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಕಾರಿನಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತೊ ಏನೋ ಯಾವುದೇ ಪ್ರಾಣಾಪಾಯವಾಗದೇ ಅವರು ಪಾರಾಗಿದ್ದಾರೆ. ನಂತರ ಕ್ರೇನ್ ಬಳಸಿ ಥಾರ್ ಗಾಡಿಯಲ್ಲಿದ್ದ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಉತ್ತರಾಖಂಡ್‌ನ ಡೆಹ್ರಾಡೂನ್ ಸಮೀಪದ ಮಲ್ಡೇವ್ಟಾದಲ್ಲಿ ಘಟನೆ ನಡೆದಿದೆ. ನಂತರ ಕ್ರೇನ್ ಬಳಸಿ ಥಾರ್ ಗಾಡಿಯನ್ನು ನದಿಯಿಂದ ಮೇಲೆತ್ತಾಲಾಗಿದೆ ಎಂದು ವರದಿಯಾಗಿದೆ..
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಪ್ರವಾಸಿಗರ ಈ ಹುಚ್ಚುತನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
