ಮಹೀಂದ್ರ ಥಾರ್ ದೇಶದ ಅತ್ಯಂತ ಜನಪ್ರಿಯ ಲೈಫ್ ಸ್ಟೈಲ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರ ಥಾರ್‌ನ ಆಫ್‌ರೋಡಿಂಗ್ ಸಾಮರ್ಥ್ಯಗಳಿಂದಾಗಿ ಜನರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಆದ್ರೆ ಇಲ್ಲೊಬ್ಬ ಥಾರ್‌ ಚಾಲಕ ರಸ್ತೆ ಬಿಟ್ಟು ನದಿಯಲ್ಲಿ ಗಾಡಿ ಓಡಿಸಿದ್ದಾನೆ.

ಮಹೀಂದ್ರ ಥಾರ್ ಕಾರು ಹಲವು ಕಾರಣಗಳಿಂದ ಬಹುತೇಕರ ಅಚ್ಚು ಮೆಚ್ಚಿನ ಕಾರು. ಡಿಸೈನ್, ಪರ್ಫಾಮೆನ್ಸ್, ಪ್ರಯಾಣ, ಸುರಕ್ಷತೆ ಸೇರಿದಂತೆ ಎಲ್ಲವೂ ಉತ್ತಮ. ಮಣ್ಣಿನ ದಾರಿ, ಹೊಂಡಗಳಿರುವ ರಸ್ತೆಯಲ್ಲೂ ಸಲೀಸಾಗಿ ಪ್ರಯಾಣ ಮಾಡಬಹುದು. ಹೀಗಾಗಿಯೇ ಮಹೀಂದ್ರ ಥಾರ್‌ ಆಫ್‌ರೋಡ್‌ಗೇ ಹೆಚ್ಚು ಫೇಮಸ್‌. ಮಹೀಂದ್ರ ಥಾರ್ ದೇಶದ ಅತ್ಯಂತ ಜನಪ್ರಿಯ ಲೈಫ್ ಸ್ಟೈಲ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರ ಥಾರ್‌ನ ಆಫ್‌ರೋಡಿಂಗ್ ಸಾಮರ್ಥ್ಯಗಳಿಂದಾಗಿ ಸಾಹಸಗಳನ್ನು ಇಷ್ಟಪಡುವ ಜನರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಎಂಥಾ ಗುಡ್ಡಗಾಡುಗಳಲ್ಲೂ ಇದನ್ನು ಸಲೀಸಾಗಿ ಓಡಿಸಬಹುದು ಅನ್ನೋದೆ ಇದರ ಅಡ್ವಾಟೆಂಜ್‌..

ಆದ್ರೆ ಹೀಗೆ ಗುಡ್ಡಗಾಡಿನಲ್ಲಿ ಮಾತ್ರವಲ್ಲ, ಮಹೀಂದ್ರಾ ಥಾರ್ ನದಿಯಲ್ಲೂ ಫುಲ್‌ ಝೂಮ್‌ನಲ್ಲಿ ಹೋಗುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ? ಹೌದು, ಲಾಹೌಲ್ ಕಣಿವೆಗೆ ಭೇಟಿ ನೀಡಿದ ಪ್ರವಾಸಿಗರು ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ ಇದೆ ಅನ್ನೋ ಕಾರಣಕ್ಕೆ ನದಿಯಲ್ಲಿ ಮಹೀಂದ್ರಾ ಥಾರ್ ಚಾಲನೆ ಮಾಡಿದ್ದಾರೆ. ಪ್ರವಾಸಿಗರ ಮೂರ್ಖತನದ ವರ್ತನೆಯ ವೀಡಿಯೊ ಇದೀಗ ವೈರಲ್ ಆಗುತ್ತಿದೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ.

ಈಗಾಗಲೇ ತಲುಪಿದೆ, ಸಿರಾಜ್‌ಗೆ ಥಾರ್ ಕಾರು ಗಿಫ್ಟ್ ಕೊಡಿ ಫ್ಯಾನ್ಸ್ ಮನವಿಗೆ ಆನಂದ್ ಮಹೀಂದ್ರ ಉತ್ತರ ವೈರಲ್!

ರಸ್ತೆ ಬಿಟ್ಟು ನದಿಯಲ್ಲಿ ಗಾಡಿ ಓಡಿಸಿದ ಚಾಲಕನಿಗೆ ಬಿತ್ತು ದಂಡ
'ನದಿಯ ಮೂಲಕ ವಾಹನ ಚಾಲನೆ ಮಾಡುವುದು ನೋಡಲು ರೋಮಾಂಚನಕಾರಿಯಾಗಿದ್ದರೂ ತುಂಬಾ ಡೇಂಜರಸ್ ಆಗಿದೆ. ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಬಹುದು' ಎಂದು ಹಲವರು ಕಮೆಂಟಿಸಿದ್ದಾರೆ. ಸಂಚಾರ ನಿಯಮಗಳನ್ನು ಅನುಸರಿಸಲು ಮತ್ತು ನೈಸರ್ಗಿಕ ಭೂದೃಶ್ಯವನ್ನು ಗೌರವಿಸಲು ನಾವು ಜನರಿಗೆ ಬಲವಾಗಿ ಸಲಹೆ ನೀಡುತ್ತೇವೆ ಎಂದು ಸಂಚಾರಿ ವಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧವನ್ನು ಬೇರೆಯವರು ಪುನರಾವರ್ತಿಸದಂತೆ ಖಚಿತಪಡಿಸಿಕೊಳ್ಳಲು, SUV ನ ಚಾಲಕನಿಗೆ ಭಾರಿ ದಂಡವನ್ನು ಸಹ ವಿಧಿಸಲಾಗಿದೆ.

ಲಾಹೌಲ್ ಸ್ಪಿತಿಯಲ್ಲಿ ಥಾರ್ ಚಂದ್ರ ನದಿಯನ್ನು ದಾಟುತ್ತಿರುವ ವೀಡಿಯೊ ವೈರಲ್ ಆಗಿದೆ. 'ಈ ವಾಹನದ ಮೇಲೆ ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಭವಿಷ್ಯದಲ್ಲಿ ಯಾರೂ ಇಂಥಾ ಅಪರಾಧ ಮಾಡದಂತೆ ನೋಡಿಕೊಳ್ಳಲು, ಜಿಲ್ಲೆ. ಪೊಲೀಸರು ಹೇಳಿದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂದು ಎಸ್ಪಿ ಮಯಾಂಕ್ ಚೌಧರಿ ಹೇಳಿದರು.

ಮಹೀಂದ್ರ ಥಾರ್ ಗಾಡಿಯಷ್ಟೇ ಕ್ಲಾಸಿ ಸ್ಟೈಲಿಶ್ ಅದರ ಡಿಸೈನರ್‌..!

ಕ್ರಿಸ್‌ಮಸ್ 2024 ರ ವಾರಾಂತ್ಯದಲ್ಲಿ ಹಿಮಾಚಲ ಪ್ರದೇಶಕ್ಕೆ ಹಿಮಭರಿತ ಪರ್ವತಗಳನ್ನು ಆನಂದಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಕಳೆದ ಮೂರು ದಿನಗಳಲ್ಲಿ, ಸುಮಾರು 55,000 ವಾಹನಗಳು ರೋಹ್ಟಾಂಗ್‌ನ ಅಟಲ್ ಸುರಂಗವನ್ನು ಹಾದು ಹೋಗಿವೆ. ಇದು ಕುಲುವನ್ನು ಲಾಹೌಲ್ ಮತ್ತು ಸ್ಪಿತಿಯೊಂದಿಗೆ ಸಂಪರ್ಕಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಹಲವಾರು ವೀಡಿಯೊಗಳು ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವುದನ್ನು ತೋರಿಸುತ್ತದೆ.

Scroll to load tweet…