ಉತ್ತರಪ್ರದೇಶದ ಪೊಲೀಸ್ ಠಾಣೆಯೊಂದರಲ್ಲಿ, ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಸಹೋದ್ಯೋಗಿಯೊಂದಿಗೆ ಪ್ರಣಯದಾಟ ಆಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದೆ. ಈ ಪ್ರಕರಣದಲ್ಲಿ ಸುಮ್ಮನೆ ಕುಳಿತ ಪೊಲೀಸ್ ಅರವಿಂದ್ ಅಮಾನತ್ತಾಗಿದ್ದಾರೆ, ಲೇಡಿ ಪೊಲೀಸರನ್ನ ಯಾಕಿಲ್ಲ? ನೆಟಿಜೆನ್ಸ್ ಕಿಡಿ

ಉತ್ತರಪ್ರದೇಶ: ಪೊಲೀಸ್ ಠಾಣೆಯೊಳಗೆ ಲೇಡಿ ಪೊಲೀಸ್ ಒಬ್ಬರು ಪೊಲೀಸಪ್ಪನ ಜೊತೆ ಪ್ರಣಯದಾಟ ಆಡುತ್ತಿರುವ ಆಘಾತಕಾರಿ ವಿಡಿಯೋಂದು ಸಿಸಿಟಿವಿ ಸೆರೆಯಾಗಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಒಂದೇ ಠಾಣೆಯ ಸಿಬ್ಬಂದಿಯಾಗಿದ್ದು ಠಾಣೆಯೊಳಗೆ ಯಾರೂ ಇಲ್ಲದ ವೇಳೆ ಪ್ರಣಯದಾಟ ಶುರು ಮಾಡಿದ್ದಾರೆ. ಪ್ರೀತಿಸುವವರ ಕಣ್ಣು ಕುರುಡು ಎಂಬಂತೆ ಪ್ರಣಯದಲ್ಲಿದ್ದ ಈ ಜೋಡಿಗಳಿಗೆ ಸ್ಟೇಷನ್ ಒಳಗಡೆ ಇರುವ ಸಿಸಿಟಿವಿಯೂ ಕಣ್ಣಿಗೆ ಕಂಡಿಲ್ಲ. ಸಿಸಿಟಿವಿ ಮುಂದೆಯೇ ಪ್ರಣದಾಯಟ ಶುರು ಮಾಡಿದ್ದು ಅದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯದಲ್ಲಿ ಕಾಣಿಸಿದಂತೆ, ಠಾಣೆಯೊಳಗೆ ಮಹಿಳಾ ಕಾನ್‌ಸ್ಟೆಬಲ್ ತನ್ನ ಸಹೋದ್ಯೋಗಿಯ ಬಳಿಗೆ ಬಂದು, ಕಂಪ್ಯೂಟರ್ ಮುಂದೆ ಕುರ್ಚಿಯ ಮೇಲೆ ಕುಳಿತಿದ್ದಾಗ ಆತನನ್ನು ಹಿಂದಿನಿಂದ ತಬ್ಬಿಕೊಳ್ಳೋದನ್ನ ತೋರಿಸಲಾಗಿದೆ. ಆಕೆ ಅಷ್ಟಕ್ಕೆ ಸುಮ್ಮನಾಗಿಲ್ಲ. ಪೊಲೀಸಪ್ಪನಿಗೆ ಮತ್ತಿನಲ್ಲಿ ಮುತ್ತಿಡಲು ಕೆಳಗೆ ಬಾಗಿ ನಿಂತಿರುವುದು ಕಂಡುಬಂದಿದೆ. ಈ ವೇಳೆ ಪೊಲೀಸಪ್ಪ ಸೈಲೆಂಟಾಗಿ ಕುಳಿತಿರುವ ಪೊಲೀಸಪ್ಪನನ್ನು ಅರವಿಂದ್ ಎಂದು ಗುರುತಿಸಲಾಗಿದೆ. ಲೇಡಿ ಪೊಲೀಸ್ ಅವನನ್ನು ತಬ್ಬಿಕೊಳ್ಳಲು ಪದೇಪದೆ ಯತ್ನಿಸಿರುವುದು ಕಂಡುಬಂದಿದೆ. ಇದ್ಯಾವುದು ಗಮನಿಸದೆ ಪೊಲೀಸಪ್ಪ ತನ್ನ ಕೆಲಸದಲ್ಲಿ ತೊಡಗಿರುವುದು, ಕುರ್ಚಿಯಿಂದ ಎದ್ದು ಕೋಣೆಯೊಳಗೆ ಹೋಗಿದ್ದಾನೆ. ಈ ವೇಳೆ ಅವನನ್ನು ಲೇಡಿ ಪೊಲೀಸ್ ಹಿಂಬಾಲಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಸುಮ್ಮನಿದ್ದ ಪೊಲೀಸಪ್ಪ ಅಮಾನತ್ತು!

ವೈರಲ್ ವಿಡಿಯೋವನ್ನು ಜಲೌನ್ ಪೊಲೀಸರು ಗುರುತಿಸಿದ್ದಾರೆ ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಜಲೌನ್ ಪೊಲೀಸರು ಕಾನ್‌ಸ್ಟೆಬಲ್ ಅರವಿಂದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಇದಲ್ಲದೆ, ಇಡೀ ವಿಷಯದ ತನಿಖೆ ನಡೆಸಲು ನಗರ ಉಪವಿಭಾಗಾಧಿಕಾರಿಗೆ ಸೂಚಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Scroll to load tweet…

ಲೇಡಿ ಪೊಲೀಸ್ ಏಕೆ ಅಮಾನತುಗೊಳಿಸಲಿಲ್ಲ

ಪುರುಷ ಪೊಲೀಸ್ ಅಧಿಕಾರಿಯ ಅಮಾನತು ಕುರಿತು ಜಲೌನ್ ಪೊಲೀಸರ ಹೇಳಿಕೆಯ ಬಗ್ಗೆ ನೆಟ್ಟಿಗರ ಕಾಮೆಂಟ್ ಮಾಡಿದ್ದು, ಪುರುಷ ಕಾನ್‌ಸ್ಟೆಬಲ್‌ನನ್ನು ಮಾತ್ರ ಅಮಾನತುಗೊಳಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಹಿಳಾ ಪೊಲೀಸ್‌ ಅಧಿಕಾರಿಯನ್ನು ಏಕೆ ರಕ್ಷಿಸಲಾಗಿದೆ. ಅಮಾನತು ಮಾಡದಿರಲು ಕಾರಣವೇನು? ವಿಡಿಯೋದಲ್ಲಿ ಪೊಲೀಸ್ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿರುವುದು ತೋರಿಸಿದೆ. ಲೇಡಿ ಪೊಲೀಸ್ ಬಲವಂತವಾಗಿ ತಬ್ಬುವುದು ಮುತ್ತಿಕ್ಕುವುದು ಕಂಡುಬಂದಿದೆ ಹೀಗಿರುವಾಗ ಲೇಡಿ ಪೊಲೀಸ್ ಅಮಾನತು ಮಾಡುವ ಬದಲು, ಕಾನ್‌ಸ್ಟೇಬಲ್ ಅರವಿಂದ್ ನನ್ನ ಅಮಾನತು ಮಾಡಿದ್ದು ಯಾಕೆ ಎಂದು ನೆಟಿಜನ್ ಪ್ರಶ್ನೆ ಮಾಡಿದ್ದಾರೆ.

ಈ ಮಧ್ಯೆ, ಒಬ್ಬ ಎಕ್ಸ್ ಬಳಕೆದಾರ, 'ಪೊಲೀಸ್ ಕಿ ಇಮೇಜ್ ಖರಾಬ್ ಕರ್ ರಹೇ ಹೆಚ್. ಅಬ್ ಇನ್ ದೋನೋ ಕೋ ಸಸ್ಪೆಂಡ್ ಕರ್ಕೆ ಶಾದಿ ಕರ್ ದೇನಾ ಚಾಹಿಯೇ. (ಅವರು ಪೊಲೀಸರ ಮರ್ಯಾದೆಯೇ ಹಾಳು ಮಾಡುತ್ತಿದ್ದಾರೆ. ಅವರನ್ನು ಅಮಾನತುಗೊಳಿಸಿ ) ಎಂದು ಬರೆದಿದ್ದಾರೆ.

ಮತ್ತೊಬ್ಬರು 'ಅಸೂಯೆ ಪಟ್ಟ ಸಹೋದ್ಯೋಗಿ' ಸಿಸಿಟಿವಿ ದೃಶ್ಯಾವಳಿಗಳನ್ನು ಲೀಕ್ ಮಾಡಿರಬೇಕು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ. ಜಾಗ ಯಾವುದೇ ಇರಲಿ ಪ್ರೀತಿ ಕುರುಡು, ಪ್ರಣಯದಲ್ಲಿದ್ದವರೂ ಕುರುಡು ಅನ್ನೋದು ಸುಳ್ಳಲ್ಲ.