ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಅಗುತ್ತಿರುವ ಈ ಫೋಟೋ ಇಡೀ ಜಗತ್ತಿನ ನಿದ್ದೆ ಕೆಡಿಸಿದೆ. ಕಾರಣ, ಇದರಲ್ಲಿ ಫೋಟೋ & ಬರಹದ ಮೂಲಕ ಹೇಳಿರೋ ವಿಷಯ ಎಂಥವರನ್ನೂ ಒಮ್ಮೆ ದಂಗುಬಡಿಸುತ್ತದೆ. ನೀವು ಒಮ್ಮೆ ಈ ವೈರಲ್ ಫೋಟೋ ನೋಡಿದರೆ, ತುಂಬಾ ದಿನ ನಿದ್ದೆ ಮಾಡಲಾರಿರಿ.. ಸ್ಟೋರಿ ಒಳಗೆ ಫೋಟೋ ಇದೆ ನೋಡಿ..  

ಈ ವೈರಲ್ ಫೋಟೋ ನೋಡಿ ಒಮ್ಮೆ. ಎಂಥಾ ಮೆಸೇಜ್ ಅಲ್ವಾ?

Add Asianetnews Kannada as a Preferred SourcegooglePreferred

ಸೋಷಿಯಲ್ ಮೀಡಿಯಾದಲ್ಲಿ (Social Media) ಅದೊಂದು ಇಮೇಜ್ ರೀಲ್ಸ್ (Viral Post) ಸಾಕಷ್ಟು ವೈರಲ್ ಆಗುತ್ತಿದೆ. ಈ ವೈರಲ್ ಪೋಸ್ಟ್‌ನಲ್ಲಿ ಮಾನವ ನಿರ್ಮಿತ ಸಮಾಜದಲ್ಲಿ, ಅಂದರೆ ನಮ್ಮ ಮನುಷ್ಯ ಜಗತ್ತಿನಲ್ಲಿ ಸಮಾನತೆ, ಸಹಬಾಳ್ವೆ, ಸಹಾನುಭೂತಿ ಸೇರಿದಂತೆ ಸಮಾನತೆ-ಅಸಮಾನತೆ, ಸಹಬಾಳ್ವೆ-ದ್ವೇಷತನ, ನ್ಯಾಯ-ಅನ್ಯಾಯ ಹೀಗೆ ಸಾಕಷ್ಟು ಪದಗಳು ಬಳಕೆಯಲ್ಲಿವೆ. ಆದರೆ ಇಂತಹ ಪದಗಳು ಬಳಕೆಯಲ್ಲಿವೆ ಹೊರತೂ ಆಚರಣೆಯಲ್ಲಿ ಇಲ್ಲ ಅನ್ನೋದು ಹಲವರ ಅನಿಸಿಕೆ, ಕೆಲವರ ಅನುಭವ. ದಿನನಿತ್ಯ ನಾವು ನೋಡುವ, ಕೇಳುವ ಹಾಗೂ ಕೆಲವೊಮ್ಮೆ ಅನುಭವಿಸುವ ಇಂತಹ ಪದಗಳನ್ನು ಬಳಸಿ ಒಂದು ಫ್ಯಾಮಿಲಿ ಇಮೇಜ್ ಸೃಷ್ಟಿಸಿ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ.

ಗಂಡ, ಹೆಂಡತಿ ಹಾಗೂ ಮಗ ಒಂದು ಸ್ಪೋರ್ಟ್ಸ್‌ ಮ್ಯಾಚ್ ನೋಡುತ್ತಿದ್ದಾರೆ

ಒಂದು ಕುಟುಂಬ, ಅದರಲ್ಲಿ ಗಂಡ, ಹೆಂಡತಿ ಹಾಗೂ ಮಗ ಒಂದು ಸ್ಪೋರ್ಟ್ಸ್‌ ಮ್ಯಾಚ್ ನೋಡುತ್ತಿದ್ದಾರೆ. ಅಲ್ಲಿ ಪುರುಷ ಹೈಟ್ ಇದ್ದಾರೆ, ಆ ಮಹಿಳೆ ಪುರುಷನಿಗಿಂತ ಸ್ವಲ್ಪ ಕಡಿಮೆ ಎತ್ತರ ಇದ್ದಾರೆ, ಚಿಕ್ಕ ಮಗ ಸಹಜವಾಗಿ ಅಲ್ಲಿ ಎಲ್ಲರಿಗಿಂತ ಚಿಕ್ಕವನು. ಅವರೆಲ್ಲರಲ್ಲಿ, ಅಲ್ಲಿ ಹಾಕಿರುವ ವುಡನ್ ಬೇಲಿ ಮೇಲಿಂದ ಆ ಪುರುಷನಿಗೆ ಮ್ಯಾಚ್ ಕಾಣಿಸುತ್ತದೆ. ಆದರೆ ಎಲ್ಲರಿಗೂ ನಿಂತಿರುವ ನೆಲದ ಮೇಲೆ ಕಾಳಿನ ಕೆಳಗೆ ಮರದ ಮಣೆಯ (wooden support) ಸಪೋರ್ಟ್ ಇದೆ. ಪುರುಷನ ಹೈಟ್‌ಗೆ ಮರದ ಮಣೆ ಇಲ್ಲದೆಯೂ ಕಾಣಿಸುವಂತಿದೆ, ಅದರೆ ಮಹಿಳೆಗೆ ಕೆಳಗೊಂದು ಮರದ ಮಣೆ ಹಾಕಿದಾಗ ಕಾಣಿಸುತ್ತಿದೆ. ಆದರೆ, ಆ ಪುಟ್ಟ ಹುಡುಗನಿಗೆ ಮರದ ಸಪೋರ್ಟ್ ಇದ್ದರೂ ಏನೂ ಕಾಣಿಸುವುದಿಲ್ಲ.

ಈಗ ಅವರೇನು ಮಾಡಬೇಕೋ ಅದನ್ನು ಮಾಡಿದ್ದಾರೆ. ಪರುಷ ಅಂದರೆ ತಂದೆ ಆ ಮಗು ಎಂದರೆ ತನ್ನ ಮಗನಿಗೆ ತನ್ನ ಕಾಲಿನ ಕೆಳಗೆ ಇದ್ದ ಆ ಮರದ ಮಣೆಯನ್ನು ಕೊಟ್ಟು ತಾನು ಬರಿಯ ನೆಲದ ಮೇಲೆ ನಿಂತು ನೋಡುತ್ತಿದ್ದಾರೆ. ಅಲ್ಲಿಗೆ ಮಗನಿಗೆ ಎರರಡು ಮಣೆ, ತಾಯಿಗೆ ಒಂದು ಮಣೆ ಹಾಕಿದಾಗ ಮ್ಯಾಚ್ ಕಾಣಿಸುತ್ತಿದ್ದರೆ ಅಪ್ಪನಿಗೆ ಮಣೆ ಇಲ್ಲದೆಯೂ ಅಲ್ಲಿನ ದೃಶ್ಯ ಕಾಣಿಸುತ್ತಿದೆ. ಈ ಫೋಟೋ ಮೇಲೆ ಟೆಕ್ಸ್ ಕೂಡ ಹಾಕಲಾಗಿದೆ. ಅದೀಗ ಸಹಜವಾಗಿಯೇ ಹಲವರ ಗಮನ ಸೆಳೆಯುತ್ತಿದೆ.

ಕ್ಯಾಪ್ಶನ್‌ಗಳು ಬಹಳಷ್ಟು ಮಾತುಗಳನ್ನು ಹೇಳುತ್ತಿವೆ

ಕಾರಣ, ಅಲ್ಲಿನ ಫೋಟೋಗಳು ಹಾಗೂ ಅವುಗಳ ಮೇಲಿರುವ ಕ್ಯಾಪ್ಶನ್‌ಗಳು ಬಹಳಷ್ಟು ಮಾತುಗಳನ್ನು ಹೇಳುತ್ತಿವೆ. ಸಮಾನತೆ, ಅಗತ್ಯತೆ ಹಾಗೂ ಅನಿವಾರ್ಯತೆ ಎಂಬಂತಿರುವ ನ್ಯಾಯ ಈ ಎಲ್ಲ ಅಂಶಗಳ ಮೇಲೆ ಅವು ಬೆಳಕು ಚೆಲ್ಲುತ್ತಿವೆ. ನ್ಯಾಯ ಎಂಬುದು ಎಲ್ಲರಿಗೂ ಅಗತ್ಯವಾಗಿ ಸಿಗಬೇಕು ಎಂಬರ್ಥದಲ್ಲಿ ಈ ಪೋಸ್ಟ್ ವೈರಲ್ ಅಗುತ್ತಿದೆ. ಸಮಾನತೆ, ಅಗತ್ಯತೆ ಹಾಗೂ ನ್ಯಾಯ ಈ ಮೂರರಲ್ಲಿ ಮಾನವ ಸಮಾಜದಲ್ಲಿ ನ್ಯಾಯವೇ ಗೆಲ್ಲಬೇಕು. ಏಕೆಂದರೆ ಸಮಾನತೆಯಿಂದ, ಅಗತ್ಯತೆಯಿಂದ ನ್ಯಾಯಕ್ಕೆ ಪಟ್ಟೆ ಬೀಳಬಹುದು. ಆದರೆ ನ್ಯಾಯ ಅಂತ ಬಂದಾಗ ಅದು ಸಮಾನತೆಯನ್ನು, ಅಗತ್ಯತೆಯನ್ನು ಮೀರಿದ ನ್ಯಾಯವಾಗಿ ನಿಲ್ಲುತ್ತದೆ. ಅದೇ ಮಾನವೀಯತೆ, ಅದೇ ಮಾನವತೆ ಎಂಬುದನ್ನು ಈ ವೈರಲ್ ಫೋಟೋ ಜಗತ್ತಿಗೆ ಹೇಳುತ್ತಿದೆ.

ಓ ವೈರಲ್ ಫೋಟೋ ಬಹಳಷ್ಟು ಜನರನ್ನು, ಅದರಲ್ಲೂ ಮುಖ್ಯವಾಗಿ ಬುದ್ದಿವಂತರನ್ನು ಸೆಳೆಯುತ್ತಿದ್ದು, ಸಾಕಷ್ಟು ಶೇರ್ ಹಾಗೂ ಲೈಕ್ಸ್ ಪಡೆಯುತ್ತಿದೆ. ಇದನ್ನು ನೋಡಿದವರು ಒಂದು ಕ್ಷಣ ಯೋಚಿಸುವಂತೆ ಮಾಡುವುದರ ಜೊತೆಗೆ, ಸಮಾಜದಲ್ಲಿ ಸಮಾನತೆ, ಅಗತ್ಯತೆಗಿಂತ ನ್ಯಾಯದ ಅಗತ್ಯವೇ ಹೆಚ್ಚಿದೆ ಎಂಬುದು ಮನದಟ್ಟಾಗುತ್ತದೆ. ಜೊತೆಗೆ, ಇಂದಿನ ಸಮಾಜದಲ್ಲಿ ಬಹಳಷ್ಟು ಜನರು ಅನ್ಯಾಯಗಳಿಂದ ಬೆಂದು ಬಸವಳಿಯುತ್ತಿರಲು, ಈ ವೈರಲ್ ಪೋಸ್ಟ್ ಆ ಬಗ್ಗೆ ಯೋಚಿಸುವಂತೆ, ಆ ಸಮಸ್ಯೆಗೆ ಒಂದು ಪರಿಹಾರದಂತೆ ಕಂಡು ಮನದಲ್ಲಿ ಬೆಳಕು ಮೂಡಿಸುತ್ತದೆ.

ಹೌದು, ಮುಂದೊಂದು ದಿನ ಸಮಾಜ ಹಾಗೆಯೇ ಇರಬಹುದು. ಸಮಾನತೆಗಿಂತ, ಅಗತ್ಯತೆಗಿಂತ, ನ್ಯಾಯಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಯಾವುದೇ ಕಟ್ಟುಪಾಡು ಇರಕೂಡದು. ಎಲ್ಲರಿಗೂ ಎಲ್ಲ ಅಗತ್ಯಗಳಲ್ಲಿ ನ್ಯಾಯ ಇರಬೇಕು. ಸಮಾನತೆ, ಸಮಪಾಲು ಹಾಗೂ ಅಗತ್ಯ ಪೂರೈಕೆಗಿಂತ ಹೆಚ್ಚಾಗಿ ಎಲ್ಲರೂ ಸ್ವತಂತ್ರವಾಗಿ ಬದುಕಲು ನೆರವಾಗುವಂತಹ ವಾತಾವರಣ ಇರಬೇಕು. ಈ ಮಾತನ್ನೇ ಈ ವೈರಲ್ ಫೋಟೋ ಹೇಳುತ್ತಿದೆ. ಇದು ಪ್ರಪಂಚದಲ್ಲಿ ಅಸ್ತಿತ್ವಕ್ಕೆ ಬಂದ ದಿನ ಮನುಷ್ಯರು ಹಾಗೂ ಮಾನವಸಮಾಜ ಸುಖ-ಶಾಂತಿ-ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎನ್ನಬಹುದು. ಹಾಗಿದ್ದರೆ ಆ ಕಾಲ ಬರುವುದು ಎಂದು? ಸದ್ಯಕ್ಕೆ ಇದು ಉತ್ತರವಿಲ್ಲದ ಪ್ರಶ್ನೆ ಎನಿಸಬಹುದಲ್ಲವೇ?