MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಜೀವನದಲ್ಲಿ ಇದಕ್ಕಿಂತ ಕೆಟ್ಟದ್ದು ಬೇರೆ ಏನಾಗಲು ಸಾಧ್ಯ? ಸ್ಟೇಟಸ್‌ ಹಾಕಿ ಪ್ರಾಣ ಬಿಟ್ಟ ಮಹಿಳೆ

ಜೀವನದಲ್ಲಿ ಇದಕ್ಕಿಂತ ಕೆಟ್ಟದ್ದು ಬೇರೆ ಏನಾಗಲು ಸಾಧ್ಯ? ಸ್ಟೇಟಸ್‌ ಹಾಕಿ ಪ್ರಾಣ ಬಿಟ್ಟ ಮಹಿಳೆ

ಮಹಿಳೆಯೊಬ್ಬರು, ತಮ್ಮ ನೋವನ್ನು ವಾಟ್ಸಾಪ್ ಸ್ಟೇಟಸ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣವೇ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಸಂಬಂಧಿಕರು ಪೊಲೀಸರಿಗೆ ತಿಳಿಸುವಷ್ಟರಲ್ಲಿ ದುರಂತ ಸಂಭವಿಸಿತ್ತು.

2 Min read
Author : Mahmad Rafik
| Updated : Mar 15 2026, 11:05 AM IST
Share this Photo Gallery
  • FB
  • TW
  • Linkdin
  • Whatsapp
16
ವಾಟ್ಸಾಪ್ ಸ್ಟೇಟಸ್‌
Image Credit : Social Media

ವಾಟ್ಸಾಪ್ ಸ್ಟೇಟಸ್‌

ಮಹಿಳೆ ಆತ್ಮ*ಹತ್ಯೆಗೂ ಮುನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ವಿಡಿಯೋ ಹಾಕಿಕೊಂಡಿದ್ದು, ತಮ್ಮ ಜೀವನದ ನೋವು ಹಾಗೂ ಒಂಟಿತನದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸ್ಟೇಟಸ್ ನೋಡಿದ ಸಂಬಂಧಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಎಲ್ಲವೂ ಮುಗಿದು ಹೋಗಿತ್ತು. ಸ್ಟೇಟಸ್ ಹಾಕಿದ ಮರುಕ್ಷಣವೇ ಮಹಿಳೆ ನೇಣು ಬಿಗಿದುಕೊಂಡಿದ್ದಾರೆ.

26
ಊನ್ನಾವೋ ಮಹಿಳೆ
Image Credit : Social Media

ಊನ್ನಾವೋ ಮಹಿಳೆ

ಉನ್ನಾವೋದ ಸದರ್ ಕೋತ್ವಾಲಿ ವ್ಯಾಪ್ತಿಯ ಪ್ರಿಯದರ್ಶಿನಿ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬಸ್ಥರು ಹೇಳುವಂತೆ, ಕಳೆದ ಕೆಲವು ವರ್ಷಗಳಿಂದ ಅವರ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ದುರಂತಗಳು ನಡೆದಿದ್ದವು. ಸುಮಾರು ಒಂದು ವರ್ಷದ ಹಿಂದೆ ಅವರ ತಂದೆ-ತಾಯಿ ತೀರಿಕೊಂಡಿದ್ದರು. ಮಹಿಳೆ ಪೋಷಕರಿಗೆ ಒಬ್ಬಳೇ ಮಗಳಾಗಿದ್ದರಿಂದ, ಪತಿ ಅಲೋಕ್ ಜೊತೆ ತವರು ಮನೆಯಲ್ಲೇ ವಾಸವಾಗಿದ್ದರು.

Related Articles

Related image1
ಹಿಂದೂ ಮದ್ವೆಯಲ್ಲಿ ವೆಸ್ಟರ್ನ್ ಸಂಸ್ಕೃತಿ: ಉಸಿರಾಡಲು ಬಿಡದೇ ವರನಿಗೆ ಲೊಚ ಲೊಚ ಅಂತ ಪಪ್ಪಿ ಕೊಟ್ಟ ವಧು !
Related image2
ಅಪ್ಪ-ಅಮ್ಮ ಇಲ್ಲ, ಅಜ್ಜನಿಗೆ ಪಿಂಚಣಿ ಬಂದ್ರೆ ಮಾತ್ರ ಹೊಸ ಬಟ್ಟೆ ಎಂದ ಕಂದಮ್ಮ; ಮಮ್ಮಲ ಮರುಗಿದ ಹೆಣ್ಮಕ್ಕಳು!
36
ಪತಿಯ ಸಾವಿನ ಬಳಿಕ ಮಾನಸಿಕವಾಗಿ ಕುಸಿದಿದ್ದ ಮಹಿಳೆ
Image Credit : Social Media

ಪತಿಯ ಸಾವಿನ ಬಳಿಕ ಮಾನಸಿಕವಾಗಿ ಕುಸಿದಿದ್ದ ಮಹಿಳೆ

ಮಾರ್ಚ್ 2 ರಂದು ಮಹಿಳೆ ಪತಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಘಟನೆಯಿಂದ ಮಹಿಳೆ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಮನೆಯಲ್ಲಿ 13ನೇ ದಿನದ ಕಾರ್ಯ ಮುಗಿಯುವವರೆಗೂ ಸಂಬಂಧಿಕರು ಬಂದು ಹೋಗುತ್ತಿದ್ದರು. ಹಾಗಾಗಿ, ಆಗ ಹೇಗೋ ಸಮಾಧಾನವಾಗಿದ್ದರು. ಆದರೆ ಸಂಬಂಧಿಕರೆಲ್ಲಾ ತಮ್ಮ ತಮ್ಮ ಮನೆಗೆ ವಾಪಸ್ ಹೋದ ಮೇಲೆ, ಅವರಿಗೆ ವಿಪರೀತ ಒಂಟಿತನ ಕಾಡಲು ಶುರುವಾಗಿತ್ತು.

46
ಸ್ಟೇಟಸ್‌ನಲ್ಲಿ ವಿಡಿಯೋ ಹಾಕಿ ಮನದ ಮಾತು
Image Credit : Social Media

ಸ್ಟೇಟಸ್‌ನಲ್ಲಿ ವಿಡಿಯೋ ಹಾಕಿ ಮನದ ಮಾತು

ಒಂಟಿತನದಿಂದ ಬೇಸತ್ತು, ಆ ಮಹಿಳೆ ತಮ್ಮ ಮೊಬೈಲ್‌ನಲ್ಲೇ ಒಂದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡಿದ್ದಾರೆ. "ಒಬ್ಬ ಹೆಣ್ಣಿಗೆ ಜೀವನದಲ್ಲಿ ಮೂರು ಆಸರೆಗಳಿರುತ್ತವೆ, ತಾಯಿ, ತಂದೆ ಮತ್ತು ಗಂಡ. ಆದರೆ ಈಗ ನನಗೀಗ ಇವರಲ್ಲಿ ಯಾರೂ ಇಲ್ಲ. ಮುಂದೆ ಎಲ್ಲವೂ ಸರಿಹೋಗುತ್ತೆ ಅಂತಾ ಜನ ಸಮಾಧಾನ ಮಾಡ್ತಾರೆ, ಆದ್ರೆ ಇದಕ್ಕಿಂತ ಕೆಟ್ಟದ್ದು ನನಗೇನಾಗಲು ಸಾಧ್ಯ?" ಅಂತಾ ವಿಡಿಯೋದಲ್ಲಿ ನೋವಿನಿಂದ ಹೇಳಿಕೊಂಡಿದ್ದಾರೆ.

56
ವಿಡಿಯೋ ಪೋಸ್ಟ್ ಮಾಡಿದ ಬಳಿಕ ದುರಂತ ಅಂತ್ಯ
Image Credit : Social Media

ವಿಡಿಯೋ ಪೋಸ್ಟ್ ಮಾಡಿದ ಬಳಿಕ ದುರಂತ ಅಂತ್ಯ

ಈ ವಿಡಿಯೋವನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ ಬಳಿಕ, ಅವರು ಕೋಣೆಯಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ, ಅವರ ಸೋದರ ಸಂಬಂಧಿ ನಿಕೇತ್ ಈ ಸ್ಟೇಟಸ್ ನೋಡಿ ಗಾಬರಿಗೊಂಡಿದ್ದಾರೆ. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ತಾವೂ ಕೂಡ ಆಕೆಯ ಮನೆಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಹಿಳೆ ಪ್ರಾಣ ಬಿಟ್ಟಿದ್ದರು.

ಇದನ್ನೂ ಓದಿ: ಕಂಕುಳಲ್ಲಿ ಮಗು, ಕೈಯಲ್ಲಿ ಕಲ್ಲಿನ ಚಿಪ್ಪು; ತುತ್ತಿನ ಚೀಲ ತುಂಬಿಸಿಕೊಳ್ಳುವ ತಾಯಿ ಕಂಠಕ್ಕೆ ಮನಸೋತ ಜನ್ರು!

66
ಪೊಲೀಸರಿಂದ ಪ್ರಕರಣದ ತನಿಖೆ
Image Credit : Social Media

ಪೊಲೀಸರಿಂದ ಪ್ರಕರಣದ ತನಿಖೆ

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ, ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆ, ದಿಢೀರ್ ದುಃಖ ಮತ್ತು ಒಂಟಿತನದಿಂದ ಬಳಲುತ್ತಿರುವವರಿಗೆ ಸಕಾಲದಲ್ಲಿ ಬೆಂಬಲ ಮತ್ತು ಸಹಾಯ ಸಿಗುವುದು ಎಷ್ಟು ಮುಖ್ಯ ಅನ್ನೋ ಪ್ರಶ್ನೆಯನ್ನು ಮತ್ತೊಮ್ಮೆ ಎತ್ತಿದೆ.

ಇದನ್ನೂ ಓದಿ: ನಂಗೆ ಮೋಸ ಮಾಡ್ಬೇಡ; ಮೊನಾಲಿಸಾ ಗಂಡ ಫರ್ಮಾನ್ ಖಾನ್ 'ಲವ್ ಫೇಲ್ಯೂರ್' ವಿಡಿಯೋ ವೈರಲ್!

पति के मौत का सदमा नहीं बर्दाश्त कर पाई यह महिला. फांसी लगाकर दे दी जान.

ये घटना यूपी के उन्नाव की है, जहां बबलू नाम के युवक की मौत 2 मार्च 2026 को हार्ट अटैक से हुई. पति के मौत के 12 दिन बाद पत्नी ने भी जान दे दी.

आत्महत्या से पहले महिला ने वीडियो बनाते हुए कहा-हमारा अंतिम… pic.twitter.com/cA1Llt6Zd1

— Priya singh (@priyarajputlive) March 14, 2026

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಉತ್ತರ ಪ್ರದೇಶ
ವೈರಲ್ ಸುದ್ದಿ
ವೈರಲ್ ವಿಡಿಯೋ
ಆತ್ಮಹತ್ಯೆ
Latest Videos
Recommended Stories
Recommended image1
ಕಂಕುಳಲ್ಲಿ ಮಗು, ಕೈಯಲ್ಲಿ ಕಲ್ಲಿನ ಚಿಪ್ಪು; ತುತ್ತಿನ ಚೀಲ ತುಂಬಿಸಿಕೊಳ್ಳುವ ತಾಯಿ ಕಂಠಕ್ಕೆ ಮನಸೋತ ಜನ್ರು!
Recommended image2
ಅರೆನಗ್ನ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆಯಾದ ಬೆನ್ನಲ್ಲೇ 12 ಸೆಕೆಂಡ್ ವಿಡಿಯೋ ಬಹಿರಂಗ
Recommended image3
Middle East Crisis: ಒಣಹಣ್ಣುಗಳ ಬೆಲೆ ಶೇ.40ರಷ್ಟು ಹೆಚ್ಚಳ, ಇಂಧನ ದರ ಏರಿಕೆಯಿಂದ ಪಾಕ್‌ ಸರ್ಕಾರಿ ನೌಕರರ ಅರ್ಧ ಸಂಬಳ ಕಟ್!
Related Stories
Recommended image1
ಹಿಂದೂ ಮದ್ವೆಯಲ್ಲಿ ವೆಸ್ಟರ್ನ್ ಸಂಸ್ಕೃತಿ: ಉಸಿರಾಡಲು ಬಿಡದೇ ವರನಿಗೆ ಲೊಚ ಲೊಚ ಅಂತ ಪಪ್ಪಿ ಕೊಟ್ಟ ವಧು !
Recommended image2
ಅಪ್ಪ-ಅಮ್ಮ ಇಲ್ಲ, ಅಜ್ಜನಿಗೆ ಪಿಂಚಣಿ ಬಂದ್ರೆ ಮಾತ್ರ ಹೊಸ ಬಟ್ಟೆ ಎಂದ ಕಂದಮ್ಮ; ಮಮ್ಮಲ ಮರುಗಿದ ಹೆಣ್ಮಕ್ಕಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved