Viral News: ನಿರುದ್ಯೋಗ ಸಮಸ್ಯೆ ಎನ್ನುವುದು ಕೇವಲ ಭಾರತದಲ್ಲಿ ಮಾತ್ರ ಅಲ್ಲ, ಚೀನಾದಲ್ಲೂ ಕೂಡ ಕಾಡುತ್ತಿದೆ. ಅಲ್ಲಿ  ಕುರಿ ಮೇಯಿಸುವ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಜಾಹೀರಾತು ಕೊಟ್ಟರೆ, 700 ಜನ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಪದವೀದರರೇ ಹೆಚ್ಚು ಅಂದ್ರೆ ನಂಬ್ತೀರಾ? ಇಲ್ಲಿದೆ ವೈರಲ್ ಸುದ್ದಿಯ ಪೂರ್ತಿ ಮಾಹಿತಿ. 

ಕುರಿ ಮೇಯಿಸುವ ಕೆಲಸಕ್ಕೆ 700 ಜನ ಅರ್ಜಿ!

ಮಂಗೋಲಿಯಾದ ದಕ್ಷಿಣದಲ್ಲಿರುವ ದೂರದ ಮತ್ತು ಒರಟಾದ ಹುಲ್ಲುಗಾವಲುಗಳಲ್ಲಿ ಕುರಿ ಮೇಯಿಸಲು ಜನ ಬೇಕಾಗಿದ್ದಾರೆ ಎಂದು ಚೀನಾದ ಕೃಷಿ ಮಾಲೀಕರೊಬ್ಬರು ನೀಡಿದ್ದ ಉದ್ಯೋಗದ ಜಾಹೀರಾತು ದಿನದ ಟಾಪ್ ಟ್ರೆಂಡಿಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್ ಆಗಿದ್ದು, ಈ ಉದ್ಯೋಗಕ್ಕೆ ಬರೋಬ್ಬರಿ 700 ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ. ಶಾಂಘೈ ಮತ್ತು ಚಾಂಗ್‌ಕಿಂಗ್‌ನ ಮೆಗಾಸಿಟಿಗಳ ವೈಟ್-ಕಾಲರ್ ಉದ್ಯೋಗಿಗಳು, ಚೀನಾದ ಕಾರ್ಖಾನೆ ಕಾರ್ಮಿಕರು ಮತ್ತು ವಿಶ್ವವಿದ್ಯಾಲಯದ ಪದವೀಧರರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರು. ಇದು ಭಾರತದಲ್ಲಿ ಮಾತ್ರವಲ್ಲದೇ ಚೀನಾದಲ್ಲೂ ಸಹ ನಿರುದ್ಯೋಗದ ಭೀಕರತೆ ಎಷ್ಟಿದೆ ಎನ್ನುವುದನ್ನು ತೋರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಪ್ರಿಲ್ ನಲ್ಲಿ ನೀಡಿದ್ದ ಜಾಹೀರಾತು

ಏಪ್ರಿಲ್ ಅಂತ್ಯದಲ್ಲಿ ಕೃಷಿ ಮಾಲಿಕರಾದ ಜುವೊ ಅವರು ಕುರಿ ಮೇಯಿಸಲು ಜನ ಬೇಕಾಗಿದ್ದಾರೆ ಎನ್ನುವ ಜಾಹೀರಾತು ಹೊರಡಿಸಿದ್ದರು. ಇದು ಚೀನಾದ X ನ ಆವೃತ್ತಿಯಾದ ವೀಬೊದಲ್ಲಿ ಕೆಲವೇ ಗಂಟೆಗಳಲ್ಲಿ 59 ಮಿಲಿಯನ್ ವೀಕ್ಷಣೆ ಪಡೆದಿತ್ತು. ಇದು ಉದ್ಯೋಗ ಮಾರುಕಟ್ಟೆಯಲ್ಲಿ ಎಷ್ಟೊಂದು ಒತ್ತಡ ಇದೆ ಎನ್ನುವುದನ್ನು ಸೂಚಿಸುತ್ತದೆ. ಇದು ವೈರಲ್ ಆಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ ಎನ್ನುವ ಜುಹು, ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದವರಲ್ಲಿ 10 ನೇ ಒಂದು ಭಾಗದಷ್ಟು ಜನರು ಈಗಷ್ಟೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ, ಇತರರು ಸಾಲದ ಹೊರೆಯಿಂದ, ಕೈಗಾರಿಕಾ ಕೆಲಸಗಳನ್ನು ಕಳೆದುಕೊಂಡವರು ಅಥವಾ ಉದ್ಯೋಗ ರಾಜಕೀಯದಿಂದ ಸಮಸ್ಯೆ ಅನುಭವಿಸಿದವರೇ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕುರಿ ಮೇಯಿಸಲು ಸಂಬಳ ಎಷ್ಟು ಗೊತ್ತಾ?

ಜುಹು ಜಾಹೀರಾತಿನಲ್ಲಿ ನೀಡಿದಂತೆ ‘ಬೇಸಿಗೆಯಲ್ಲಿ 2,000 ಹೆಕ್ಟೇರ್ (4,942 ಎಕರೆ) ಹುಲ್ಲುಗಾವಲಿನಲ್ಲಿ 3,000 ಕುರಿಗಳನ್ನು ಮೇಯಿಸಲು ಮತ್ತು - 30 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಬಹುದಾದ ಚಳಿಗಾಲದಲ್ಲಿ ಕಠಿಣ ಒಳಾಂಗಣ ಆಹಾರ ಮತ್ತು ಕ್ಲೀನಿಂಗ್ ಮಾಡಲು ಜುವೊ ಕುರಿ ಮೇಯಿಸುವವರನ್ನು ಹುಡುಕುತ್ತಿದ್ದರು. ಈ ಕೆಲಸಕ್ಕಾಗಿ, ಕುರುಬರಿಗೆ ತಿಂಗಳಿಗೆ 8,000 ಯುವಾನ್ ($1,178) ಸಿಗುತ್ತದೆ ಜೊತೆಗೆ ವಸತಿ ಮತ್ತು ದಿನಸಿ ವಸ್ತುಗಳನ್ನು ಸಹ ಒದಗಿಸಲಾಗುತ್ತದೆ. ಈ ಸಂಬಳವು ಖಾಸಗಿ ಕಂಪನಿಗಳಲ್ಲಿ, ರಾಷ್ಟ್ರೀಯ ನಗರ ಸರಾಸರಿಗಿಂತ ಸುಮಾರು 6,000 ಯುವಾನ್ ಹೆಚ್ಚು. ಹಾಗಾಗಿ ಹೆಚ್ಚಿನ ಅರ್ಜಿ ಹರಿದು ಬಂದಿತ್ತು.

ಚೀನಾದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ

ಚೀನಾದಲ್ಲಿ ನಿರುದ್ಯೋಗ ಸಮಸ್ಯೆಯು ಹೆಚ್ಚಾಗುತ್ತಿದೆ. ಇನ್ನು ಖಾಸಗಿ ವಲಯದ ಆದಾಯವು ಕಳೆದ ಹತ್ತು ವರ್ಷದಕ್ಕಿಂತ ಕಡಿಮೆಯಾಗಿದೆ. ಬ್ಲೂ ಮತ್ತು ವೈಟ್ ಕಾಲರ್ ಕಾರ್ಮಿಕರು ವಾರದಲ್ಲಿ ಆರು ದಿನಗಳು ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಕೆಲಸ ಮಾಡುವ '996' ಸಂಸ್ಕೃತಿಯ ಬಗ್ಗೆ ದೂರು ನೀಡುತ್ತಾರೆ. ಇರಾನ್ ಯುದ್ಧದಿಂದಾಗಿ ಕಾರ್ಖಾನೆಗಳು ಹೆಚ್ಚಿನ ವೆಚ್ಚವನ್ನು ಎದುರಿಸುತ್ತಿರುವುದರಿಂದ, AI ಅಳವಡಿಸಿಕೊಂಡಿರುವುದರಿಂದ ದಾಖಲೆಯ 12.7 ಮಿಲಿಯನ್ ವಿಶ್ವವಿದ್ಯಾಲಯ ಪದವೀಧರರು ಕೆಲಸಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಚೀನಾದ 5% ಆರ್ಥಿಕ ಬೆಳವಣಿಗೆಯು ಹೆಚ್ಚುತ್ತಿರುವ ರಫ್ತುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಏಕೆಂದರೆ ತಯಾರಕರು ವಿಶ್ವಾದ್ಯಂತ ಮಾರುಕಟ್ಟೆ ಪಾಲನ್ನು ಪಡೆಯಲು ಲಾಭವನ್ನು ತ್ಯಾಗ ಮಾಡುತ್ತಾರೆ, ಇದು ಸ್ವದೇಶಿ ಕಾರ್ಮಿಕರ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ.