viral news : ಸೋಶಿಯಲ್ ಮೀಡಿಯಾದಲ್ಲಿ ಜರ್ಮನ್ ಮಹಿಳೆ ವಿಡಿಯೋ ವೈರಲ್ ಆಗಿದೆ. ಭಾರತದಲ್ಲಿ ಜರ್ಮನ್ ಮಹಿಳೆ ಕ್ರೆಡಿಟ್ ಕಾರ್ಡ್ ಕಳೆದು ಹೋಗಿತ್ತು. ಆಗ ಏನೆಲ್ಲ ಆಯ್ತು ಅನ್ನೋದನ್ನು ಅವರು ಹೇಳಿದ್ದಾರೆ.
ಪರೋಪಕಾರಾರ್ಥಂ ಇದಂ ಶರೀರಂ. ಇದನ್ನು ಅನೇಕ ಭಾರತೀಯರು ಚಾಚೂ ತಪ್ಪದೆ ಪಾಲಿಸ್ತಿದ್ದಾರೆ. ಬೇರೆಯವರಿಗೆ ಕಷ್ಟಬಂದಾಗ ತಮ್ಮ ಕಷ್ಟ ಮರೆತು ಸಹಾಯಕ್ಕೆ ಬರ್ತಾರೆ. ವಿದೇಶಿಗರು ಭಾರತಕ್ಕೆ ಬಂದಾಗ, ಅವರನ್ನು ಮೋಸ ಮಾಡ್ತಾರೆ, ಅವರಿಂದ ಒಂದಕ್ಕೆ ನಾಲ್ಕು ಪಟ್ಟು ಹಣ ಸುಲಿಗೆ ಮಾಡ್ತಾರೆ ಎನ್ನುವ ಆರೋಪ ಭಾರತೀಯರ ಮೇಲಿದೆ. ಎಲ್ಲ ಕಡೆ, ಎಲ್ಲ ಭಾರತೀಯರೂ ಹಾಗಿಲ್ಲ. ಬಹುತೇಕ ಭಾರತೀಯರು ಕೈಲಾದಷ್ಟು ಸಹಾಯ ಮಾಡಲು ಸದಾ ಸಿದ್ಧ ಇರ್ತಾರೆ. ಅದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಜರ್ಮನ್ (German) ಮಹಿಳೆಯೊಬ್ಬರು ಭಾರತಕ್ಕೆ ಬಂದಾಗ, ಭಾರತೀಯ ಸ್ನೇಹಿತೆಯರು ಹೇಗೆ ಸಹಾಯ ಮಾಡಿದ್ರು ಎಂಬುದನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.
ಜರ್ಮನ್ ಮಹಿಳೆಗೆ ನೆರವಾದ ಭಾರತೀಯರು
ಬರ್ಲಿನ್ ಮಹಿಳೆ, 29 ವರ್ಷದ ಜೆನ್ನಿಫರ್, ಭಾರತ ಪ್ರವಾಸಕ್ಕೆ ಬಂದಾಗ ತಮ್ಮ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಕಳೆದುಕೊಂಡಿದ್ರು. ಕ್ರೆಡಿಟ್ ಕಾರ್ಡ್ ಇಲ್ದೆ ಅವರ ಕೈ ಕಾಲು ಆಡ್ತಿರಲಿಲ್ಲ. ಟೆನ್ಷನ್ ನಲ್ಲಿದ್ದ ಜೆನ್ನಿಫರ್ ಗೆ ಸಹಾಯ ಮಾಡಿದ್ದು ಅವರ ಭಾರತೀಯ ಫ್ರೆಂಡ್ಸ್. ಜೆನ್ನಿಫರ್ ಫ್ರೆಂಡ್ಸ್ ಸಹಾಯವನ್ನು ಎಂದೂ ಮರೆಯೋದಿಲ್ಲ. ಅವರು ನೀಡಿದ ರೆಸ್ಪಾನ್ಸ್ ನೋಡಿ ಜೆನ್ನಿಫರ್ ಭಾವುಕರಾಗಿದ್ದಾರೆ.
ಪ್ರೇಯಸಿಯೊಂದಿಗೆ ವ್ಯಾಲೆಂಟೈನ್ಸ್ ಡೇ ಶಾಪಿಂಗ್ ಹೋಗಿದ್ದ ಗಂಡ: ಹೆಂಡತಿ ಕೈಗೆ ಸಿಕ್ಕಿಬಿದ್ದು,
ಇನ್ಸ್ಟಾಗ್ರಾಮ್ನಲ್ಲಿ ಜೆನ್ನಿಫರ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರು ನೈಜ ಘಟನೆಯನ್ನು ನಂತ್ರ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಕ್ರೆಡಿಟ್ ಕಾರ್ಡ್ ಕಳೆದುಕೊಂಡಾಗ ತುಂಬಾ ಹೆದರಿದ್ದೆ, ಚಿಂತೆ ಕಾಡ್ತಿತ್ತು ಅಂತ ವಿಡಿಯೋದಲ್ಲಿ ವಿವರಿಸಿದ್ದಾರೆ. ಆದ್ರೆ ಸ್ನೇಹಿತರ ಸಹಾಯದಿಂದ ಎಲ್ಲವೂ ಸರಿಹೋಯ್ತು ಅಂತ ಜೆನ್ನಿಫರ್ ಹೇಳಿದ್ದಾರೆ. ಜೆನ್ನಿಫರ್, ಸ್ನೇಹಿತೆಯರು ಕಳುಹಿಸಿದ್ದ ವಾಟ್ಸ್ ಅಪ್ ಮೆಸ್ಸೇಜ್ ಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ.
ಭಾರತೀಯ ಸ್ನೇಹಿತರು ಜೆನ್ನಿಫರ್ ಸಹಾಯ ಕೇಳ್ತಿದ್ದಂತೆ ತಕ್ಷಣ ಸಹಾಯಕ್ಕೆ ಬಂದಿದ್ದರು. ಪದೇ ಪದೇ ಜೆನ್ನಿಫರ್ ಸ್ಥಿತಿಯನ್ನು ವಿಚಾರಿಸಿದ್ದರು. ಹಣ ನೀಡಿದ್ದಲ್ಲೆ ಯುಪಿಐ ಐಡಿಗಳನ್ನು ಹಂಚಿಕೊಂಡಿದ್ದರು. ಜರ್ಮನಿಗೆ ವಾಪಸ್ ಹೋಗಲು ಅಗತ್ಯವಿರುವ ಹಣವನ್ನು ಸ್ನೇಹಿತರು ಹೊಂದಿಸಿಕೊಟ್ಟಿದ್ದರು. ಭಾರತ ಪ್ರವಾಸವನ್ನು ಕ್ರೆಡಿಟ್ ಕಾರ್ಡ್ ಇಲ್ಲದೆಯೂ ಜೆನ್ನಿಫರ್ ಎಂಜಾಯ್ ಮಾಡಿದ್ದರು. ಎಲ್ಲರಿಂದ ಪ್ರೀತಿ, ಕಾಳಜಿ ಸಿಕ್ಕಿದ್ರಿಂದ ಜೆನ್ನಿಫರ್ ಗೆ ಹೆಚ್ಚು ಟೆನ್ಷನ್ ಆಗ್ಲಿಲ್ಲ. ಭಾರತದಲ್ಲಿ ಇದೇ ಮೊದಲ ಬಾರಿ ಇಂಥ ಪ್ರೀತಿ, ಕಾಳಜಿಯನ್ನು ನಾನು ನೋಡಿದ್ದೇನೆ ಅಂತ ಜೆನ್ನಿಫರ್ ಹೇಳಿದ್ದಾರೆ. ಇಷ್ಟೊಂದು ಸ್ನೇಹಿತರಿಂದ ನನಗೆ ಸಪೋರ್ಟ್ ಸಿಕ್ಕಿದ್ದು ನನ್ನ ಅದೃಷ್ಟ ಅಂತ ಜೆನ್ನಿಫರ್ ಹೇಳಿದ್ದಾರೆ.
ಮಿಲಿಯನ್ ಜನರ ಮೆಚ್ಚುಗೆಗಳಿಸಿದ ಪಂಜಾಬಿ ಗರ್ಲ್ ಶಾಯರಿ, ವೈರಲ್ ವಿಡಿಯೋ ಹಿಂದಿದೆ
ಜೆನ್ನಿಫರ್ ಸದ್ಯ ತಮ್ಮ ಊರು ಸೇರಿದ್ದಾರೆ. ಜರ್ಮನಿಗೆ ಹೋದ್ಮೇಲೆ ಸ್ನೇಹಿತರ ಹಣವನ್ನು ಜೆನ್ನಿಫರ್ ವಾಪಸ್ ನೀಡಿದ್ದಾರೆ. ಆ ಸಮಯದಲ್ಲಿ ಸಿಕ್ಕ ಬೆಂಬಲ, ನಂಬಿಕೆ, ಔದಾರ್ಯ ಮರೆಯಲು ಸಾಧ್ಯವಿಲ್ಲ ಅಂತ ಜೆನ್ನಿಫರ್ ಹೇಳಿದ್ದಾರೆ. ಬಳಕೆದಾರರೊಬ್ಬರ ಕಮೆಂಟ್ ಗೆ ಉತ್ತರ ನೀಡಿದ ಜೆನ್ನಿಫರ್, ಭಾರತೀಯರು ಯಾವಾಗಲೂ ಸಹಾಯ ಮಾಡಲು ಸಿದ್ಧ, ಅಸಾಧ್ಯವನ್ನು ಸಾಧ್ಯವಾಗಿಸಲು ನಿಮ್ಮ ಬೆನ್ನೆಲುಬಾಗಿ ನಿಲ್ಲಲು ಯಾವಾಗಲೂ ಸಿದ್ಧ ಇರ್ತಾರೆ ಅಂತ ಭಾರತೀಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೆನ್ನಿಫರ್ ವಿಡಿಯೋ ನೋಡಿದ ಬಳಕೆದಾರರು, ಭಾರತೀಯರ ಸ್ವಭಾವವನ್ನು ಹೊಗಳಿದ್ದಾರೆ. ಭಾರತೀಯ ಆತಿಥ್ಯ ಇಡೀ ಜಗತ್ತಿನಲ್ಲಿಯೇ ಸರಿಸಾಟಿಯಿಲ್ಲ ಎಂದಿದ್ದಾರೆ. ಜೆನ್ನಿಫರ್ ಸುರಕ್ಷಿತವಾಗಿ ಬರ್ಲಿನ್ ಗೆ ವಾಪಸ್ ಬಂದಿದ್ದಕ್ಕೆ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ಜೆನ್ನಿಫರ್ ಹಿಂದೆ ಜರ್ಮನಿಗೆ ಬಂದಿದ್ದ, ಕ್ರೆಡಿಟ್ ಕಾರ್ಡ್ ಕಳೆದುಕೊಂಂಡಿದ್ದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ್ದರಂತೆ. ಅದನ್ನು ಬಳಕೆದಾರರು ನೆನಪಿಸಿಕೊಂಡಿದ್ದಾರೆ. ಬಳಕೆದಾರರು ತಮಗಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮೂಲಕ ತಿಳಿಸಿದ್ದಾರೆ.

