MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru 2nd International Airport
Bengaluru Land Scam
Mahatma Gandhi Manuscript Auction
Divorce Laws India
ISI Backed Terror Network
Mohan Bhagavat Canada Visit
  • Home
  • News
  • India News
  • ಹಳೇ ಸಿನಿಮಾ ಹಾಡು, ಸಿಗರೇಟು; ನಾಪತ್ತೆಯಾಗಿದ್ದ ಪತ್ರಕರ್ತೆ ಸಲ್ಮಾ ಕೊಲೆ ಹಿಂದಿನ ಸತ್ಯ ಬಯಲು

ಹಳೇ ಸಿನಿಮಾ ಹಾಡು, ಸಿಗರೇಟು; ನಾಪತ್ತೆಯಾಗಿದ್ದ ಪತ್ರಕರ್ತೆ ಸಲ್ಮಾ ಕೊಲೆ ಹಿಂದಿನ ಸತ್ಯ ಬಯಲು

ಹಳೇ ಸಿನಿಮಾ ಹಾಡು, ಸಿಗರೇಟು; ನ್ಯೂಸ್ ಆ್ಯಂಕರ್ ಸಲ್ಮಾ ನಾಪತ್ತೆ ಹಾಗೂ ಕೊಲೆ ಪ್ರಕರಣದ ಕರಾಳ ಸತ್ಯ ಬಯಲಾಗಿದೆ. ಸಲ್ಮಾ ಕೊಲೆಯಾಗಿದ್ದು ಹೇಗೆ, ಭೀಕರ ಘಟನೆಯ ಇಂಚಿಂಚು ಮಾಹಿತಿ ಕೋರ್ಟ್‌ನಲ್ಲಿ ಅನಾವರಣಗೊಂಡಿದೆ.

2 Min read
Author : Chethan Kumar
Published : Feb 12 2026, 04:01 PM IST
Share this Photo Gallery
  • FB
  • TW
  • Linkdin
  • Whatsapp
16
ತುಟಿಗೆ ಸಿಗರೇಟು ಇಟ್ಟು ಸಂಭ್ರಮ
Image Credit : stockPhoto

ತುಟಿಗೆ ಸಿಗರೇಟು ಇಟ್ಟು ಸಂಭ್ರಮ

ಮೂವರು ತುಟಿಗಳಲ್ಲಿನ ಸಿಗರೇಟು ಕಿಕ್ ಹೆಚ್ಚಿಸುತ್ತಿತ್ತು. ಜೊತೆಗ ಹಳೆ ಬಾಲಿವುಡ್ ಸಿನಿಮಾದ ತುಜೆ ನಾರಾಜ್ ನಹಿ ಮೈ ಜಿಂದಗಿ ಹಾಡು ಮೆಲ್ಲನೆ ಪರಿಸ್ಥಿತಿಯನ್ನೇ ಬದಲಿಸಿತ್ತು. ಜಿಮ್ ಇನ್ಸ್‌ಸ್ಟ್ರರ್ ಜೊತೆಗೆ ಆತನ ಇಬ್ಬರು ಸ್ನೇಹಿತರು ಸೇರಿ ನ್ಯೂಸ್ ಆ್ಯಂಕರ್ ಸಲ್ಮಾ ಸುಲ್ತಾನಳ ಉಸಿರು ನಿಲ್ಲಿಸಿದ್ದರು. 18ರ ಹರೆಯದ ಪತ್ರಕರ್ತೆ ಚಿರಮೌನಕ್ಕೆ ಜಾರಿದ್ದಳು. ಸಲ್ಮಾ ಸುಲ್ತಾನ ನಾಪತ್ತೆ ಪ್ರಕರಣ ಬರೋಬ್ಬರಿ 5 ವರ್ಷಗಳ ಕಾಲ ರಹಸ್ಯವಾಗಿಯೇ ಉಳಿದಿತ್ತು. ಇದೀಗ ಈ ಕೊಲೆಯ ಅಸಲಿ ಸತ್ಯಗಳು ಬಯಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನ್ಯೂಸ್ ಆ್ಯಂಕರ್ ಸಲ್ಮಾನ ಸುಲ್ತಾನ ಕೊಲೆ
Image Credit : X

ನ್ಯೂಸ್ ಆ್ಯಂಕರ್ ಸಲ್ಮಾನ ಸುಲ್ತಾನ ಕೊಲೆ

ಐದು ವರ್ಷ ಕಾಲ ರಹಸ್ಯವಾಗಿದ್ದ ಸಲ್ಮಾ ಸುಲ್ತಾನ ಪ್ರಕರಣ ಇದೀಗ ಕೆಲ ಸ್ಫೋಟಕ ಮಾಹಿತಿಯೊಂದಿಗೆ ಸತ್ಯ ಹೊರಬಂದಿದೆ. ಛತ್ತಿಸಘಡದ ಕೋರ್ಬಾದಲ್ಲಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಸಲ್ಮಾನ ಸುಲ್ತಾನ 2018ರಲ್ಲಿ ನಾಪತ್ತೆಯಾಗಿದ್ದಳು. ಸಲ್ಮಾ ಎಲ್ಲಿದ್ದಾಳೆ, ಏನಾಗಿದೆ ಅನ್ನೋ ಯಾವ ಸುಳಿವು ಸಿಗಲೇ ಇಲ್ಲ. ಪೋಷಕರು ಮಗಳಿಗಾಗಿ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿದ್ದರೂ ಆಕೆ ಪತ್ತೆಯಾಗಲಿಲ್ಲ. ಮತ್ತೊಂದೆಡೆಯಿಂದ ತನಿಖೆಯ ವೇಗ ಕಡಿಮೆಯಾಗಿತ್ತು.

Related Articles

Related image1
Astrologer Kamalakar Bhat Case: ಫೇಸ್‌ಬುಕ್‌ನಲ್ಲಿ ಸಿಗೋ ಹುಡುಗರ ಜೊತೆ ತಿರುಗ್ತಾ ಇದ್ಲು, ಆಮೇಲೆ ಗುರೂಜಿ ಜೊತೆ ಹೋದಳು!
Related image2
ಸುಚಿತ್ರಾಗೆ 100 ಕೋಟಿ ರೂ ಆಸ್ತಿ ಮಾಡಿಟ್ಟಿರೋ Kamalakar Bhat; ಜ್ಯೋತಿಷಿ ಇನ್ನೊಂದು ಆಡಿಯೋ ಸ್ಫೋಟ!
36
ಸಲ್ಮಾ ಕೊಲೆ ಪತ್ತೆ ಹಚ್ಚಿದ ಹೆದ್ದಾರಿ ಯೋಜನೆ
Image Credit : X

ಸಲ್ಮಾ ಕೊಲೆ ಪತ್ತೆ ಹಚ್ಚಿದ ಹೆದ್ದಾರಿ ಯೋಜನೆ

ಸಲ್ಮಾ ಕೊಲೆ ಪತ್ತೆ ಹಚ್ಚಲು ಛತ್ತೀಸಘಡ ಪೊಲೀಸರು ವಿಫಲರಾಗಿದ್ದರು. 2018ರಲ್ಲಿ ಸಲ್ಮಾ ಕೊಲೆಯಾಗಿತ್ತು. ಐದು ವರ್ಷಗಳ ಬಳಿಕ 2023ರಲ್ಲಿ ಕೊರ್ಬಾದಲ್ಲಿ ಹೆದ್ದಾರಿ ವಿಸ್ತರಣೆ, ಫ್ಲೈಓವರ್ ನಿರ್ಮಾಣ ಯೋಜನೆಗಳು ಆರಂಭಗೊಂಡಿತ್ತು. ಪಿಲ್ಲರ್ ನಿರ್ಮಾಣ ಹಾಗೂ ಭೂಮಿಯ ಗಟ್ಟಿ, ಎಷ್ಟು ಆಳಕ್ಕೆ ಪಿಲ್ಲರ್ ಹಾಕಬೇಕು ಅನ್ನೋದ ಕುರಿತು ಗ್ರೌಂಡ್ ಪನಟ್ರೇಟಿಂಗ್ ಮ್ಯಾಪಿಂಗ್ ಸೇರಿದಂತೆ ಹಲವು ಸಲಕರಣೆಗಳ ಮೂಲಕ ಎಂಜಿನೀಯರ್ಸ್ ಅಧ್ಯಯನ ನಡೆಸಿದ್ದರು. ಈ ವೇಲೆ ಅಸ್ಥಿಪಂಜರ ಇರುವುದು ಪತ್ತೆಯಾಗಿತ್ತು. ಜನ ವಸತಿ ಇಲ್ಲದ, ಸ್ಮಶಾನವಲ್ಲದ ಪ್ರದೇಶದಲ್ಲಿ ಒಂದೇ ಒಂದು ಅಸ್ಥಿಪಂಜರ ಪತ್ತೆ ಹಲವು ಅನುಮಾನಕ್ಕೆ ಕಾರಣವಾಗಿತ್ತು.

46
ಡಿಎನ್ಎ ಪರೀಕ್ಷೆಯಲ್ಲಿ ಬಹಿರಂಗ
Image Credit : X

ಡಿಎನ್ಎ ಪರೀಕ್ಷೆಯಲ್ಲಿ ಬಹಿರಂಗ

ಅಸ್ಥಿಪಂಜರ ಹೊರತೆಗೆದ ಪೊಲೀಸರು ಡಿಎನ್‌ಎ ಪರೀಕ್ಷೆ ಮಾಡಿದ್ದಾರೆ. ಬಳಿಕ ನಾಪತ್ತೆಯಾಗಿರುವ ಹಲವು ಪ್ರಕರಣಗಳ ವರದಿ ತರಿಸಿಕೊಂಡಿದ್ದಾರೆ. ಅಸ್ಥಿಪಂಜರದ ಪರೀಕ್ಷೆಯಲ್ಲಿ ಆಸುಪಾಸಿನ ವಯಸ್ಸು ಸ್ಷಷ್ಟವಾಗಿತ್ತು. ಹೀಗಾಗಿ ನಾಪತ್ತೆಯಾದ ಸಲ್ಮಾ ಪ್ರಕರಣಕ್ಕೂ ಈ ಅಸ್ಥಿಪಂಜರಕ್ಕೂ ತಾಳೆಯಾಗುತ್ತಿತ್ತು. ಹೀಗಾಗಿ ಸಲ್ಮಾನ ಕುಟುಂಬಸ್ಥರ ಡಿಎನ್ಎ ಪರೀಕ್ಷೆ ಮಾಡಿಸಿದಾಗ ಅಚ್ಚರಿ ಕಾದಿತ್ತು. ಇದು ನಾಪತ್ತೆಯಾದ ಸಲ್ಮಾ ಅಸ್ಥಿಪಂಜರ ಅನ್ನೋದು ದೃಢಪಟ್ಟಿತ್ತು.

56
ಉಸಿರುಗಟ್ಟಿಸಿ ಕೊಲೆ
Image Credit : Facebook/news anchor salma sultana

ಉಸಿರುಗಟ್ಟಿಸಿ ಕೊಲೆ

ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಈ ವೇಳೆ ಸಲ್ಮಾ ಸುಲ್ತಾನ ಹಾಗೂ ಕೊರ್ಬಾದಲ್ಲಿದ್ದ ಜಿಮ್ ಇನ್ಸ್‌ಸ್ಟ್ರಕ್ಟರ್ ಮಧು ಸಾಹು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಅನ್ನೋದು ಪತ್ತೆಯಾಗಿತ್ತು. ಮಧು ಸಾಹು ಹಾಗೂ ಆತನ ಆಪ್ತರನ್ನು ವಿಚಾರಣೆ ಮಾಡಿದಾಗ ಕೆಲ ಮಾಹಿತಿಗಳು ಸಿಕ್ಕಿತ್ತು. ಮಧು ತನ್ನ ಆಪ್ತ ಸ್ನೇಹಿತರಾದ ಕೌಶಲ್ ಶ್ರೀವಾಸ್ ಹಾಗೂ ಅತುಲ್ ಶರ್ಮಾ ಜೊತೆ ಸೇರಿ ಸಲ್ಮಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಮಧು ಸಾಹು ಆಪ್ತರು, ಸಲ್ಮಾ ಆಪ್ತರು, ಜಿಮ್ ಬಳಿ ಬರುತ್ತಿದ್ದ ಹಲವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿಗಳ ಆಧಾರದಲ್ಲಿ ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿ ಸಲ್ಮಾನ ಕೊಲೆ ರಹಸ್ಯ ಭೇದಿಸಿದ್ದಾರೆ.

66
ಕೊಲೆ ಬಳಿಕ ಸಂಭ್ರಮಾಚರಣೆ
Image Credit : Facebook/Salma Sultana

ಕೊಲೆ ಬಳಿಕ ಸಂಭ್ರಮಾಚರಣೆ

ದೈಹಿಕವಾಗಿ ಬಳಸಿಕೊಂಡ ಬಳಿಕ ಮಧು ಸಾಹು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದಕ್ಕೆ ಇಬ್ಬರು ಸಾಥ್ ನೀಡಿದ್ದರು. ಆಕೆಯ ಮೃತದೇಹ ಕೋಣೆಯಲ್ಲಿ ಬಿದ್ದಿದ್ದರೆ, ಬಾಲಿವುಡ್ ಸಿನಿಮಾದ ಹಳೇ ಹಾಡು ಹಾಕಿ, ಸಿಗರೇಟು ಹಚ್ಚಿ ಈ ಮೂವರು ಸಂಭ್ರಮಿಸಿದ್ದರು. ಬಳಿಕ ಕೊಲೆಯನ್ನು ಯಾವುದೇ ಸಾಕ್ಷಿ, ಸುಳಿವು ಸಿಗದಂತೆ ಮರೆ ಮಾಚಲು ತಂತ್ರಗಳನ್ನು ಹೂಡಿದ್ದರು ಅನ್ನೋದು ಬಯಲಾಗಿದೆ.

ಕೊಲೆ ಬಳಿಕ ಸಂಭ್ರಮಾಚರಣೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಭಾರತ ಸುದ್ದಿ
ಪೊಲೀಸ್
ಛತ್ತೀಸ್‌ಗಢ ಪೊಲೀಸ್
ಛತ್ತೀಸ್‌ಗಢ

Latest Videos
Recommended Stories
Recommended image1
ನಮ್ಮ ತಂಡದ 3000 ಜನ ಭಾರತದಲ್ಲಿದ್ದಾರೆ; ಮೋದಿ ಸರ್ಕಾರಕ್ಕೆ ಪಾಕ್ ಉಗ್ರ ಶೆಹಜಾಬ್ ಭಟ್ಟಿ ಸವಾಲ್!
Recommended image2
ಅಯೋಧ್ಯೆಯಲ್ಲಿ 42 ಸಾವಿರ ಹಣ ಎಗರಿಸಿದ ಕೋತಿ.. ಮಂಗಣ್ಣನ ಹೈಜಾಕ್ ಆಪರೇಷನ್ ಹೇಗಿತ್ತು ಗೊತ್ತಾ?
Recommended image3
RSS Chief s Canada Visit: ಭಾಗ್ವತ್ ಕೆನಡಾ ಭೇಟಿಗೆ ನೂರಕ್ಕೂ ಹೆಚ್ಚು ಸಂಘಟನೆಗಳ ಭಾರೀ ಬೆಂಬಲ! ಯಾವಾಗ ಪ್ರವಾಸ?
Related Stories
Recommended image1
Astrologer Kamalakar Bhat Case: ಫೇಸ್‌ಬುಕ್‌ನಲ್ಲಿ ಸಿಗೋ ಹುಡುಗರ ಜೊತೆ ತಿರುಗ್ತಾ ಇದ್ಲು, ಆಮೇಲೆ ಗುರೂಜಿ ಜೊತೆ ಹೋದಳು!
Recommended image2
ಸುಚಿತ್ರಾಗೆ 100 ಕೋಟಿ ರೂ ಆಸ್ತಿ ಮಾಡಿಟ್ಟಿರೋ Kamalakar Bhat; ಜ್ಯೋತಿಷಿ ಇನ್ನೊಂದು ಆಡಿಯೋ ಸ್ಫೋಟ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved