ಭಾರಿ ಮಳೆ ಇದೆ ಸರ್, ಅಪಾರ್ಟ್‌ಮೆಂಟ್ ಸುತ್ತ ನೀರು ತುಂಬಿಕೊಂಡಿದೆ. ಹೊರಗಡೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ಇಂದು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಿ ಎಂದು ಬಾಸ್‌ಗೆ ಮೆಸೇಜ್ ಹಾಕಿದ ಉದ್ಯೋಗಿ ಸಿಕ್ಕ ಉತ್ತರ ಭಾರಿ ವೈರಲ್ ಜೊತೆಗೆ ಚರ್ಚೆಗೆ ಕಾರಣವಾಗಿದೆ.
ಮುಂಬೈ (ಜು.08) ಮಳೆಗಾಲದಲ್ಲಿ ಮಳೆ ಹೆಚ್ಚಾದರೆ ಶಾಲಾ ಕಾಲೇಜಿಗೆ ರಜೆ ಘೋಷಣೆಯಾಗುತ್ತದೆ.ಇತ್ತ ವೃತ್ತಿಪರರು ಭಾರಿ ಮಳೆಯಾದಾಗ ಮನೆಯಿಂದ ಕೆಲಸ ಮಾಡಿ ಕೊಡಲು ಅನುಮತಿ ಕೇಳುವುದು ಸಹಜ. ಹೀಗೆ ಉದ್ಯೋಗಿ ಭಾರಿ ಮಳೆ ಕಾರಣದಿಂದ ಬಾಸ್ ಬಳಿ ವರ್ಕ್ ಫ್ರಮ್ ಹೋಮ್ ಮಾಡಲು ಅನುಮತಿ ಕೇಳಿದ್ದಾನೆ. ಅಪಾರ್ಟ್‌ಮೆಂಟ್ ಸುತ್ತ ಭಾರಿ ಮಳೆಯಿಂದ ನೀರು ತುಂಬಿಕೊಂಡಿದೆ. ಮನಯಿಂದ ಹೊರಗೆ ಕಾಲಿಡಲು ಕಷ್ಟದ ಪರಿಸ್ಥಿತಿ ಇದೆ. ಹೀಗಾಗಿ ಇಂದು ಮನೆಯಿಂದ ಕೆಲಸ ಮಾಡಲು ಅನುಮತಿ ಕೊಡಿ ಎಂದು ವ್ಯಾಟ್ಸಾಪ್ ಮೂಲಕ ಮೇಸೇಜ್ ಹಾಕಿದ್ದಾನೆ. ಇದಕ್ಕೆ ಬಾಸ್ ಇಮೇಲ್ ಮೂಲಕ ಉತ್ತರ ಕೊಟ್ಟಿದ್ದಾರೆ. ಬಾಸ್ ಉತ್ತರಕ್ಕೆ ಉದ್ಯೋಗಿ ಶಾಕ್ ಆಗಿದ್ದು ಮಾತ್ರವಲ್ಲ, ಸಂಕಷ್ಟಕ್ಕೆ ಸಿಲುಕಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಘಟನೆ
ಪ್ರತೀಶ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಘಟನೆ, ಬಾಸ್ ರಿಪ್ಲೈ ನೀಡಿದ ಇಮೇಲ್ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಪ್ರತೀಕ್ ಶೆಟ್ಟಿ ಬೆಳಗ್ಗೆ ತನ್ನ ಮ್ಯಾನೇಜರ್‌ಗೆ ವ್ಯಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿದ್ದಾನೆ. ಭಾರಿ ಮಳೆಯಾಗುತ್ತಿದೆ. ರಸ್ತೆಗಳು ಜಲಾವೃತಗೊಂಡಿದೆ. ಹೊರಗಡೆ ಹೋಗುವುದು ಅಪಾಯಕಾರಿಯಾಗಿ ಕಾಣಿಸುತ್ತಿದೆ. ಹೀಗಾಗಿ ಇಂದು ನನಗೆ ವರ್ಕ್ ಫ್ರಮ್ ಹೋಮ್ ನೀಡಲು ಸಾಧ್ಯವೇ? ನನ್ನ ಕೆಲಸದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಪ್ರತೀಶ್ ಶೆಟ್ಟಿ ತನ್ನ ಮ್ಯಾನೇಜರ್‌ಗೆ ಮೆಸೇಜ್ ಮಾಡಿದ್ದಾನೆ. ಬಳಿಕ ಉತ್ತರಕ್ಕಾಗಿ ಕಾದಿದ್ದಾನೆ.
ಪ್ರತೀಕ್ ಶೆಟ್ಟಿ ಮ್ಯಾನೇಜರ್ ಉತ್ತರಕ್ಕಾಗಿ ಕಾಯುತ್ತಿದ್ದ. ಇತ್ತ ಸಮಯವೂ ಮೀರುತ್ತಿದೆ. ಕಾರಣ ಆಫೀಸ್‌ಗೆ ಬರಬೇಕು ಎಂದರೆ ಹೊರಡಲು ತಡವಾಗುತ್ತಿದೆ. ಹೀಗಾಗಿ ಉತ್ತರ ಸಿಗದೆ ಚಡಪಡಿಸುತ್ತಿದ್ದ. ಹೀಗೆ ಕಾಯುತ್ತಿರುವ ನಡುವೆ ಮ್ಯಾನೇಜರ್ ಉತ್ತರದ ಬದಲು ಕಂಪನಿಯ ಸಿಇಒನಿಂದ ಇಮೇಲ್ ಬಂದಿದೆ. ಈ ಇಮೇಲ್ ಇದೀಗ ಭಾರಿ ವೈರಲ್ ಹಾಗೂ ಚರ್ಚೆಯಾಗುತ್ತಿದೆ.
ನೀವು ಮನೆಯಲ್ಲೇ ಇರಿ...ಈಜಾಲು ಕಲಿತು ಬನ್ನಿ
ಪ್ರತೀಶ್ ಶೆಟ್ಟಿ ನೀವು ಕಳುಹಿಸಿದ ವ್ಯಾಟ್ಸಾಪ್ ಮೆಸೇಜ್ ಸಿಕ್ಕಿದೆ. ಈ ವ್ಯಾಟ್ಸಾಪ್ ಮೆಸೇಜ್ ಸ್ಕ್ರೀನ್‌ಶಾಟ್ ಇಲ್ಲಿ ಅ್ಯಟಾಚ್ ಮಾಡಲಾಗಿದೆ. ನಿಮ್ಮ ಮನವಿ ಕುರಿತು ಗಂಭೀರವಾಗಿ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಆದೇಶದಲ್ಲಿ ನಿಮ್ಮ ಜಲಾವೃತ, ನಿಮ್ಮ ವರ್ಕ್ ಫ್ರಮ್ ಹೋಮ್ ಮನವಿ ಆಟ್ಯಾಚ್‌ಮೆಂಟ್ ಜೊತೆಗೆ ಕೆಲಸದಿಂದ ಕಿತ್ತು ಹಾಕಿರುವ ಆದೇಶವಿದೆ. ನೀವು ಈ ಕಂಪನಿಗೆ ಅಪ್ಲೈ ಮಾಡುವ ಮೊದಲು ಹೇಗೆ ಸ್ವಿಮ್ ಮಾಡಬೇಕು ಅನ್ನೋದು ಕಲಿತಿರಬೇಕು. ನೀವು ಮನೆಯಲ್ಲೇ ಇರಿ, ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಂಪನಿ ಸಿಇಒ ಇಮೇಲ್ ಮಾಡಿದ್ದಾರೆ.
ಉದ್ಯೋಗಿ ವರ್ಕ್ ಫ್ರಮ್ ಹೋಮ್ ಕೇಳಿದ ಕಾರಣಕ್ಕೆ ಕೆಲಸದಿಂದ ಕಿತ್ತು ಹಾಕುವ ನಿರ್ಧಾರ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಮಳೆಯ ಕಾರಣದಿಂದ ಉದ್ಯೋಗಿ ಕೇಳಿದ್ದಾನೆ. ಉದ್ಯೋಗಿ ವಿವರಿಸುವ ಮಟ್ಟಿಗೆ ಮಳೆ ಅಥವಾ ನೀರು ಇಲ್ಲದೇ ಇರಬಹುದು. ಮಳೆ ಬರುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಕಂಫರ್ಟ್ ಆಗಿ ಕೆಲಸ ಮಾಡಲು ಆತ ಮನೆಯಿಂದ ಕೇಳಿದ್ದಾನೆ. ಅನುಮತಿಸಬಹುದು ಅಥವಾ ನಿರಾಕರಿಸಬಹುದು. ಅದನ್ನು ಬಿಟ್ಟು ಕೆಲಸದಿಂದ ಕಿತ್ತು ಹಾಕುವ ನಿರ್ಧಾರ ಉತ್ತಮವಲ್ಲ. ಇಂತಹ ಕಂಪನಿಗಳಲ್ಲಿ ಕೆಲಸ ಮಾಡದೇ ಇರುವುದು ಒಳಿತು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಇತ್ತ ಪ್ರತೀಶ್ ಶೆಟ್ಟಿ ಕೂಡ ಈ ನಿರ್ಧಾರದ ಕುರಿತು ವ್ಯಂಗ್ಯವಾಡಿದ್ದಾರೆ. ನಾನು ಈಜಾಡುವುದು ಕಲಿಯುತ್ತಿದ್ದೇನೆ. ಬಳಿಕ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ನನಗೆ ಈಜು ಬರುತ್ತೆ ಎಂದು ದಾಖಲಿಸಿ ಕಂಪನಿಗಳಿಗೆ ಅರ್ಜಿ ಹಾಕುತ್ತೇನೆ ಎಂದಿದ್ದಾರೆ. ಕೆಲವರು ಸ್ವಿಮ್ಮಿಂಗ್ ಗೊತ್ತಿಲ್ಲ ಎಂದು ಕಂಪನಿಯಿಂದ ಕೆಲಸ ಕಳೆದಕೊಂಡ ಘಟನೆ ಹಲವರಿಗೆ ಎಚ್ಚರಿಕೆ ಪಾಠ. ನೀವು ಕೆಲಸಕ್ಕೆ ಸೇರುವ ಮುನ್ನ ಸ್ವಿಮ್ಮಿಂಗ್ ಕಲಿಯಿರಿ ಎಂದು ವ್ಯಂಗ್ಯವಾಡಿದ್ದಾರೆ.


