ಮೊಮ್ಮಕ್ಕಳು ಅಜ್ಜ ಅಜ್ಜಿಯರಿಗೆ ಅಚ್ಚರಿ ನೀಡಲು  ಅವರಿಗೆ ಹೇಳದೆಯೇ ರಾತ್ರಿಯ ವೇಳೆ ಒಟ್ಟಾಗಿ ಮನೆಗೆ ಬಂದು ಸರ್‌ಪ್ರೈಸ್ ನೀಡಿದ್ದು, ಅವರ ಭಾವುಕ ವೀಡಿಯೋ ವೈರಲ್‌ ಆಗಿದೆ. 

ಮೊಮ್ಮಕ್ಕಳು ಹಾಗೂ ಅಜ್ಜ ಅಜ್ಜಿಯರು(Grand parents) ಒಳ್ಳೆಯ ಸ್ನೇಹಿತರು, ಕೆಲ ಪುಟ್ಟ ಅಪರಾಧಗಳಿಗೆ ಒಳ್ಳೆಯ ಪಾರ್ಟನರ್‌ಗಳು, ಅಜ್ಜ ಅಜ್ಜಿಯ ಜೊತೆ ಕಳೆದ ಕ್ಷಣಗಳನ್ನು ಮಕ್ಕಳು ದೊಡ್ಡವರಾದರು ಮರೆಯುವುದಿಲ್ಲ, ಅನೇಕರಿಗೆ ಅಜ್ಜ ಅಜ್ಜಿಯ ಜೊತೆ ಕಳೆದ ನೆನಪುಗಳು ಸದಾ ಹಸಿರಾಗಿದ್ದು, ತಮಗೆ ಮಕ್ಕಳಾದ ನಂತರವೂ ಆ ನೆನಪುಗಳನ್ನು ಅವರು ಮಕ್ಕಳೊಂದಿಗೆ ಹೇಳಿ ಖುಷಿ ಪಡುತ್ತಾರೆ. ಇತ್ತ ಅಜ್ಜ ಅಜ್ಜಿಯೂ ಅಷ್ಟೇ ಮೊಮ್ಮಕ್ಕಳ ಆಗಮನವೇ ಅವರಿಗೆ ಸಿಗುವ ದೊಡ್ಡ ಖುಷಿ ಓದಲೆಂದು ದೂರ ಹೋಗುವ ಮಕ್ಕಳು, ರಜೆಯಲ್ಲಿ ಅಜ್ಜಿ ಮನೆಗೆ ಬಂದರೆ ಅವರ ಖುಷಿ ಹೇಳತೀರದ್ದು, ಮಕ್ಕಳು ಬರುತ್ತಾರೆ ಎಂಬ ಸಂಭ್ರಮದಲ್ಲೇ ಅವರು ದಾರಿ ಕಾಯುತ್ತಲೇ ಇರುತ್ತಾರೆ. ಮಕ್ಕಳಿಗಾಗಿ ವಿಶೇಷವಾದ ತಿಂಡಿ ತಿನಿಸುಗಳನ್ನು, ಮನೆಯಲ್ಲಿ ಬೆಳೆದ ಹಣ್ಣು ಹಂಪಲುಗಳನ್ನು ಅವರು ಮಕ್ಕಳಿಗಾಗಿ ತೆಗೆದಿಡುತ್ತಾರೆ. ಹೀಗೆ ಮೊಮ್ಮಕ್ಕಳಿಗೆ ಎನ್ನೆಲ್ಲಾ ಒಳ್ಳೆಯದನ್ನು ನೀಡಲು ಸಾಧ್ಯವೋ ಅದೆಲ್ಲವನ್ನು ಅವರು ನೀಡಲು ಪ್ರಯತ್ನಿಸುತ್ತಾರೆ.

ಅಜ್ಜ ಅಜ್ಜಿಗೆ ಮೊಮ್ಮಕ್ಕಳ ಬಿಗ್ ಸರ್‌ಪ್ರೈಸ್‌(Grand childrens surprise)

ಭಾರತದಲ್ಲಿ ಅವಿಭಕ್ತ ಕುಟುಂಬಗಳು(Indian Joint Family) ಈಗ ಬಹಳ ಕಡಿಮೆ ಹೀಗಾಗಿ ಮದುವೆಯಾಗುತ್ತಿದ್ದಂತೆ ಮಕ್ಕಳೆಲ್ಲರೂ ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡುವುದರಿಂದ ಪೋಷಕರು ಒಪ್ಪಂದದಂತೆ ಯಾರಾದರೊಬ್ಬ ಪುತ್ರನ ಅಥವಾ ಪುತ್ರಿಯ ಮನೆಯಲ್ಲಿ ದಿನ ಕಳೆಯುತ್ತಾರೆ. ಆದರೆ ವಿದೇಶದಲ್ಲಿ ಪೋಷಕರು ಒಂದು ಕಡೆ ವಾಸ ಮಾಡಿದರೆ, ಮಕ್ಕಳು ಒಂದು ಕಡೆ ವಾಸ ಮಾಡುತ್ತಾರೆ. ಹೀಗಾಗಿ ಮಕ್ಕಳು ಮೊಮ್ಮಕ್ಕಳ ಜೊತೆ ಕಳೆಯುವ ಅವಕಾಶ ಅವರಿಗೆ ಸಿಗುವುದು ತೀರಾ ಕಡಿಮೆ ಹಲವು ಮಕ್ಕಳಿದ್ದರೆ ಮೊಮ್ಮಕ್ಕಳ ಸಂಖ್ಯೆಯೂ ಜಾಸ್ತಿ ಇರುತ್ತದೆ. ಹಾಗೆಯೇ ಈ ಮೊಮ್ಮಕ್ಕಳೆಲ್ಲರನ್ನು ಒಮ್ಮೆಗೆ ನೋಡುವುದಕ್ಕೆ ಅಜ್ಜಅಜ್ಜಿಗೆ ಅವಕಾಶ ಸಿಗುವುದು ತೀರಾ ಕಡಿಮೆ ಆದರೆ ಅವರಿಗೆ ಖುಷಿ ನೀಡುವ ಉದ್ದೇಶದಿಂದ ಮೊಮ್ಮಕ್ಕಳೆಲ್ಲರೂ ಸೇರಿ ಪ್ಲಾನ್ ಮಾಡಿ ಅಜ್ಜ ಅಜ್ಜಿಯನ್ನು ನೋಡಲು ಬಂದಿದ್ದು, ಆ ವೀಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.

ನೆಟ್ಟಿಗರ ಭಾವುಕಗೊಳಿಸಿದ ವೀಡಿಯೋ

ಮೊಮ್ಮಕ್ಕಳನ್ನು ತುಂಬಾ ಪ್ರೀತಿ ಮಾಡುವ ಅಜ್ಜಅಜ್ಜಿಯರಿಗೆ ತುಂಬಾ ಖುಷಿಯಾಗೋದು ಯಾವಾಗ, ಮನೆ ಮಕ್ಕಳೆಲ್ಲಾ ಒಟ್ಟಾಗಿ ಬಂದು ಮನೆಯಲ್ಲಿ ಸೇರಿ ಸಂಭ್ರಮಿಸಿದಾಗ.

ಅದೇ ರೀತಿ ಇಲ್ಲೊಂದು ಕಡೆ ವೃದ್ಧ ಅಜ್ಜ ಅಜ್ಜಿಗೆ ಸರ್‌ಪ್ರೈಸ್ ನೀಡುವ ಸಲುವಾಗಿ ಮೊಮ್ಮಕ್ಕಳೆಲ್ಲಾ ಜೊತೆಯಾಗಿ ಅಜ್ಜಿ ಮನೆಗೆ ರಾತ್ರಿಯ ವೇಳೆಯಲ್ಲಿ ಹೇಳದೇ ಬಂದು ಅಚ್ಚರಿ ನೀಡಿದ್ದು, ಈ ಕೌಟುಂಬಿಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media Viral Video)ಭಾರಿ ವೈರಲ್ ಆಗುತ್ತಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಥ್ರೆಡ್‌ನಲ್ಲಿ shadymentol ಎಂಬ ಖಾತೆಯಿಂದ ಈ ವೀಡಿಯೋ ಪೋಸ್ಟ್ ಅಗಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ. ಈ ವೀಡಿಯೋ ಅನೇಕರಿಗೆ ತಮ್ಮ ಅಜ್ಜಿ ಮನೆಯ ನೆನಪು ಮರುಕಳಿಸುವಂತೆ ಮಾಡಿದೆ.

ಮೊಮ್ಮಕ್ಕಳ ಒಟ್ಟಿಗೆ ನೋಡಿ ಅರಳಿದ ಮಲ್ಲಿಗೆಯಂತಾಯ್ತು ಅಜ್ಜಿಯ ಮೊಗ

ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಎದೆಹಾಲು ಕುಡಿಯುವ ಪುಟ್ಟ ಮಗುವಿನಿಂದ ಹಿಡಿದು, ದೊಡ್ಡ ದೊಡ್ಡ ಮೊಮ್ಮಕ್ಕಳವರೆಗೆ 15 ಮೊಮ್ಮಕ್ಕಳು ಜೊತೆಯಾಗಿ ಅಜ್ಜಿ ಮನೆಗೆ ಬಂದಿದ್ದು, ರಾತ್ರಿಯ ವೇಳೆಯಲ್ಲಿ ಅವರು ಮನೆಯ ಬಾಗಿಲನ್ನು ಬಡಿದಿದ್ದಾರೆ. ಈ ವೇಳೆ ಅಜ್ಜಿ ಈ ಹೊತ್ತಲ್ಲಿ ಬಾಗಿಲು ಬಡಿಯುವವರು ಯಾರು ಎಂದು ಯೋಚಿಸುತ್ತಾ ಬಂದು ಬಾಗಿಲು ತೆಗೆದಿದ್ದು, ಮೊಮ್ಮಕ್ಕಳೆಲ್ಲರೂ ಒಟ್ಟಿಗೆ ಇರುವುದನ್ನು ನೋಡಿ ಅವರು ಮುಖ ಅರಳಿದ ಮಲ್ಲಿಗೆಯಂತಾಗಿದೆ. ಖುಷಿಯಿಂದಲೇ ಅವರು ಎಲ್ಲರನ್ನು ಸ್ವಾಗತಿಸಿದ್ದಾರೆ. ಮಕ್ಕಳು ಒಬ್ಬೊರಾಗಿ ಮನೆಯೊಳಗೆ ಬಂದಿದ್ದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು

ಅನೇಕರು ಈ ವೀಡಿಯೋ ನೋಡಿ ಭಾವುಕರಾಗಿದ್ದು, ಕಾಮೆಂಟ್ ಮಾಡಿದ್ದಾರೆ. ನಾನು ಆಕೆಯ ಮುಖದಲ್ಲಿ ಕಾಣುತ್ತಿರುವುದು ಏನೆಂದರೆ ನಾನು ಈಗಲೇ ಏನಾದರೂ ಅಡುಗೆ ಮಾಡಿ ಈ ಮಕ್ಕಳಿಗೆ ತಿನ್ನಿಸಬೇಕು ಎಂಬುದು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಇಂತಹ ಸ್ಲೀಪೋವರ್‌ ಪಾರ್ಟಿಗಿಂತ (Sleepover Party)ಉತ್ಸಾಹಭರಿತವಾದ ಪಾರ್ಟಿಯನ್ನು ನಾನು ಎಲ್ಲೂ ನೋಡಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ನೆನಪುಗಳು ಸದಾ ಹಸಿರಾಗಿರುತ್ತವೆ. ನಾಳೆ ಬೆಳಗ್ಗೆ ಎದ್ದು ಇಲ್ಲಿ ಉಪಹಾರ ಮಾಡಿ ಸೇವಿಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಅಜ್ಜಿಯ(Grand mother) ಖುಷಿ ನೋಡಿ ಖುಷಿಯಾಗುತ್ತಿದೆ. ಹೋ ದೇವರೆ ನೀವೆಲ್ಲರೂ ಒಟ್ಟಿಗೆ ಬಂದಿದ್ದೀರಾ ಎಂಬಂತಿದೆ ಅವರ ಮುಖದ ಪ್ರತಿಕ್ರಿಯೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಭಾವುಕ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.