ಬೆನ್ನು ನೋವು ಇದ್ದಾಗಲೂ ಐಸ್ ಕ್ಯೂಬ್ ಇಟ್ಕೊಂಡು ಶೋ ನಡೆಸಿಕೊಟ್ಟಿದ್ದೀನಿ; ಬಿಗ್ ಬಾಸ್ ಬಗ್ಗೆ ಸುದೀಪ್

ನಾನು ಯಾವುದೇ ದೇಶದಲ್ಲಿದ್ದರೂ ಆ ಸಮಯಕ್ಕ ಬರಲೇ ಬೇಕು. ಪರಮ್ ಗೆ ಗೊತ್ತು, ಟೀಂಗೆ ಗೊತ್ತು ಎಷ್ಟು ಕಷ್ಟದಲ್ಲಿ ಶೋ ನಡೆಸಿಕೊಟ್ಟಿದ್ದೇನೆ ಎನ್ನುವುದು ಎಂದು ಸುದೀಪ್ ಬಿಗ್ ಬಾಸ್ ಸೋ ನಡೆಸಿಕೊಟ್ಟ ಬಗ್ಗೆ ಮಾತನಾಡಿದ್ದಾರೆ. 

First Published Aug 2, 2022, 5:04 PM IST | Last Updated Aug 2, 2022, 5:04 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಬಳಿಕ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಾಂತ್ ರೋಣ ಸೂಪರ್ ಹಿಟ್ ಆದ ಖುಷಿಯಲ್ಲಿ ಕಿಚ್ಚ ಬಿಗ್ ಬಾಸ್ ಪ್ರಾರಂಭಿಸುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಒಟಿಟಿಯಲ್ಲಿ ವಾಗುತ್ತಿದೆ. ಬಿಗ್ ಬಾಸ್ ಒಟಿಟಿ ಇದೇ ತಿಂಗಳು ಆಗಸ್ಟ್ 6ರಿಂದ ಪ್ರಾರಂಭವಾಗುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದೀಪ್ ಮತ್ತು ಬಿಗ್ ಬಾಸ್ ತಂಡ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು.ಸುದೀಪ್ ಕಷ್ಟದ ಸಮಯದಲ್ಲಿ ಬಿಗ್ ಬಾಸ್ ನಡೆಸಿಕೊಟ್ಟ ಬಗ್ಗೆ ಬಹಿರಂಗ ಪಡಿಸಿದ್ದಾರೆ. 'ನಾನು ಯಾವುದೇ ದೇಶದಲ್ಲಿದ್ದರೂ ಆ ಸಮಯಕ್ಕ ಬರಲೇ ಬೇಕು. ಪರಮ್ ಗೆ ಗೊತ್ತು, ಟೀಂಗೆ ಗೊತ್ತು ಎಷ್ಟು ಕಷ್ಟದಲ್ಲಿ ಶೋ ನಡೆಸಿಕೊಟ್ಟಿದ್ದೇನೆ ಎನ್ನುವುದು. ಜ್ವರ ಇದ್ದಾಗಲೂ ಶೋ ನಡೆಸಿಕೊಟ್ಟಿದ್ದೇನೆ, ಕಾಲಿಗೆ ಏಟಾಗಿದ್ದರು ಶೂ ಹಾಕಿಕೊಂಡು ಶೋ ನಡೆಸಿದ್ದೀನಿ, ಬ್ಯಾಕ್ ಪೇಯಿನ್ ಆದಾಗ ನನ್ನ ಬೆನ್ನ ಹಿಂದೆ ಐಸ್ ಕ್ಯೂಬ್ ಇಟ್ಟುಕೊಂಡು ಶೋ ನಡೆಸಿಕೊಟ್ಟಿದ್ದೇನಿ ಅಷ್ಟು ಕಷ್ಟದಲ್ಲಿ ಶೋ ನಡೆಸಿಕೊಟ್ಟಿದ್ದೇನೆ. ಒಂದೇ ಒಂದು ಸೀಸನ್ ಮಿಸ್ ಮಾಡಿದ್ದು, ಅದು ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಕಾರಣಕ್ಕೆ.ಜ್ವರ ಜಾಸ್ತಿ ಆಗಿತ್ತು. ಹಾಗಾಗಿ ಆಗಿಲ್ಲ ಎಂದು ಸುದೀಪ್ ಕಷ್ಟದ ಸಮಯದಲ್ಲೂ ಬಿಗ್ ಬಾಸ್ ನಡೆಸಿಕೊಟ್ಟ ಬಗ್ಗೆ ರಿವೀಲ್ ಮಾಡಿದ್ದಾರೆ. 

Video Top Stories