Asianet Suvarna News Asianet Suvarna News

ನೂರು ದಿನ ಪೂರೈಸಿದ 'ಬೆಟ್ಟದ ಹೂವು' ಧಾರವಾಹಿ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಬಾಲನಟನಾಗಿ ಅಭಿನಯಿಸಿದ ಚಿತ್ರ ‘ಬೆಟ್ಟದ ಹೂ’. (Bettada Hovu) ಇದೀಗ ಇದೇ ಸಿನಿಮಾದ ಟೈಟಲ್‌ನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಧಾರಾವಾಹಿ ಮೂಡಿ ಬರುತ್ತಿದೆ. 

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಬಾಲನಟನಾಗಿ ಅಭಿನಯಿಸಿದ ಚಿತ್ರ ‘ಬೆಟ್ಟದ ಹೂ’. (Bettada Hovu) ಇದೀಗ ಇದೇ ಸಿನಿಮಾದ ಟೈಟಲ್‌ನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಧಾರಾವಾಹಿ ಮೂಡಿ ಬರುತ್ತಿದೆ. 

ಬೆಟ್ಟದ ಹೂ ಸೀರಿಯಲ್: ಮತ್ತೆ ರಾಹುಲ್ ಕೈಲಿ ತಾಳಿ ಕಟ್ಟಿಸ್ಕೊಳ್ಳೋ ಹೂವಿ, ಯಾಕ್ಹೀಗೆ?

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುತ್ತಿರೋ ಬೆಟ್ಟದ ಹೂವು ಧಾರವಾಹಿ ಈಗ ನೂರು ದಿನ (100 Days)  ಪೂರೈಸಿದೆ. ಬಡ ಪ್ರತಿಭಾವಂತ ಹಳ್ಳಿ ಹುಡುಗಿ ಹೂವಿ ಮತ್ತು ಹಳ್ಳಿಗೆ ಆಗಮಿಸಿ ವಿಚಿತ್ರ ಸಂಕಟಗಳಿಗೆ ಸಿಲುಕಿಕೊಳ್ಳುವ ಪತ್ರಕರ್ತ ರಾಹುಲ್‌ ಎಂಬ ಪಾತ್ರಗಳ ಸುತ್ತ ಕತೆ ಹೊಂದಿರುವ ಧಾರಾವಾಹಿ ಇದು. 

ಅರ್ಕ ಮೀಡಿಯಾ ಸಂಸ್ಥೆ ನಿರ್ಮಾಣ ಮಾಡುತ್ತಿರೋ ಬೆಟ್ಟದ ಹೂವು ಧಾರವಾಹಿಯನ್ನ ಜಿ.ಕೆ ಸತೀಶ್ ಕೃಷ್ಣ, ನಿರ್ದೇಶನ ಮಾಡುತ್ತಿದ್ದಾರೆ. ಈ ಸೀರಿಯಲ್ನಲ್ಲಿ ಶ್ರೀವಿದ್ಯಾ, ದರ್ಶಕ್‌, ಪ್ರಕೃತಿ ಪ್ರಸಾದ್‌, ಶ್ರೀನಿವಾಸ್‌ ಪ್ರಭು, ಪದ್ಮಜಾ ರಾವ್‌, ಪ್ರವೀಣ್‌.ಡಿ.ರಾವ್‌, ಸ್ವಾತಿ, ಸುನೇತ್ರ ಪಂಡಿತ್‌, ಅಂಬರೀಷ್‌ ಸಾರಂಗಿ, ನಾರಾಯಣ ಸ್ವಾಮಿ ನಟಿಸುತ್ತಿದ್ದು, ಇಡೀ ಸೀರಿಯಲ್ ಟೀಂ ಸೇರಿ ಧಾರವಾಹಿ ನೂರು ದಿನ ಪೂರೈಸಿದ್ದಕ್ಕೆ ಸೆಲೆಬ್ರೇಷನ್ ಮಾಡಿದ್ದಾರೆ.