ಬೆಟ್ಟದ ಹೂ ಸೀರಿಯಲ್‌: ಮತ್ತೆ ರಾಹುಲ್ ಕೈಲಿ ತಾಳಿ ಕಟ್ಟಿಸ್ಕೊಳ್ಳೋ ಹೂವಿ, ಯಾಕ್ಹೀಗೆ?

Kannada Serial News: ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ ಸೀರಿಯಲ್ 'ಬೆಟ್ಟದ ಹೂ'. ಸದ್ಯಕ್ಕೆ ದೂರ ಆಗ್ಬೇಕು ಅಂದುಕೊಂಡ ಜೋಡಿಯನ್ನು ವಿಧಿಯೇ ಒಂದು ಮಾಡೋ ಕತೆ ನಡೀತಿದೆ. ರಾಹುಲ್ ಮತ್ತೆ ಹೂವಿಗೆ ತಾಳಿ ಕಟ್ತಿದ್ದಾನೆ. ಏನಿದರ ಹಿಂದಿನ ಕತೆ?

Bettada hoo Serial : Rahul Huvie wedding for the Second time

ಬೆಟ್ಟದ ಹೂ (Bettada hoo) ಅಂದ ಕೂಡಲೇ ಥಟ್ಟನೆ ನೆನಪಾಗೋದು ಪುನೀತ್ ರಾಜ್‌ಕುಮಾರ್(Puneeth Rajkumar) ನಟನೆಯ ಬೆಟ್ಟದ ಹೂ ಸಿನಿಮಾ. ಇದು ಪುಟ್ಟ ಹುಡುಗನೊಬ್ಬನ ಕನಸಿನ ಜರ್ನಿ. ಈ ಸಿನಿಮಾದಲ್ಲಿನ ನಟನೆಗಾಗಿ ನ್ಯಾಶನಲ್ ಅವಾರ್ಡನ್ನೂ(National Award) ಅಪ್ಪು ಪಡೆದಿದ್ದರು. ಆದರೆ ಸ್ಟಾರ್‌ ಸುವರ್ಣದಲ್ಲಿ (Star suvarna) ಪ್ರಸಾರವಾಗ್ತಿರೋ 'ಬೆಟ್ಟದ ಹೂವು' ಸೀರಿಯಲ್ ಕತೆ ಸಂಪೂರ್ಣ ವಿಭಿನ್ನ. ಇದರಲ್ಲಿ ಬೆಟ್ಟದ ಹೂವಿನಂತಿರುವವಳು ಹೂವಿ (Hoovi) ಎಂಬ ಮುಗ್ಧ ಹುಡುಗಿ. ಈ ಹಳ್ಳಿ ಹುಡುಗಿಯ ಬದುಕಿನ ಸುತ್ತ ಕತೆ ಇರುವ ಕಾರಣ ಸೀರಿಯಲ್‌ಗೆ ಆ ಹೆಸರನ್ನೇ ಇಡಲಾಗಿದೆ. ಸೋಮವಾರದಿಂದ ಶನಿವಾರ 8 ಗಂಟೆಗೆ ಈ ಸೀರಿಯಲ್ ಪ್ರಸಾರವಾಗುತ್ತಿದೆ. ಈ ಹಿಂದೆ ಕಲರ್ಸ್ ನಲ್ಲಿ 'ಅಗ್ನಿಸಾಕ್ಷಿ' (Aagnisakshi) ಅನ್ನೋ ಜನಪ್ರಿಯ ಸೀರಿಯಲ್‌ ಮಾಡಿದ್ದ ಅರ್ಕಾ ಮೀಡಿಯಾ(Arka Media)ದಿಂದ ಹೊರ ಬರ್ತಿರೋ ಸೀರಿಯಲ್‌ ಇದು. ಸ್ಟಾರ್‌ ಜಲ್ಸಾ(Star Jalsa) ಅನ್ನೋ ಬೆಂಗಾಲಿ ವಾಹಿನಿಯಲ್ಲಿ 2012 ರಿಂದ 2015ರವರೆಗೆ ಪ್ರಸಾರವಾಗುತ್ತಿದ್ದ 'ಇಷ್ಟಿ ಕುಟುಮ್' (Ishti Kutum)ಅನ್ನೋ ಸೀರಿಯಲ್‌ನ ರೀಮೇಕ್ ಈ 'ಬೆಟ್ಟದ ಹೂವು' ಸೀರಿಯಲ್‌.

ಹೂವಿ ಚನವಲ್ಸೆ ಪುಟ್ಟ ಹಳ್ಳಿಯ ಹುಡುಗಿ. ಆಕಸ್ಮಿಕವಾಗಿ ಅವಳ ಮದುವೆ ಸಿಟಿಯ ಹುಡುಗ ರಾಹುಲ್ ಜೊತೆಗೆ ನಡೆಯುತ್ತದೆ. ಆದರೆ ರಾಹುಲ್ ಮಾಲಿನಿ ಅನ್ನೋ ಹುಡುಗಿಯನ್ನು ಪ್ರೀತಿಸುತ್ತಿದ್ದ. ಸಿಟಿ ಹುಡುಗಿಯಾದ ಅವಳನ್ನೇ ಲೈಫ್‌ ಪಾರ್ಟನರ್ ಮಾಡಿಕೊಳ್ಳುವ ಕನಸಲ್ಲಿದ್ದ. ಈ ಹಂತದಲ್ಲೇ ಹೂವಿ ಜೊತೆಗೆ ಆಕಸ್ಮಿಕವಾಗಿ ರಾಹುಲ್ ಮದುವೆ ಆಗಿದೆ. ತಾಳಿ ಕಟ್ಟಿದ ಹುಡುಗಿಯನ್ನು ಜೊತೆಗೆ ಕರೆದೊಯ್ಯಬೇಕು ಅನ್ನುವುದು ಸಂಪ್ರದಾಯ. ಅದರಂತೆ ಹೂವಿಯನ್ನು ಸಿಟಿಗೆ ಕರೆತಂದು ಮನೆ ಕೆಲಸದ ಹುಡುಗಿಯಾಗಿ ಇಡುತ್ತಾನೆ. ತನ್ನ ಮನೆಯವರಿಗೆ ಗೊತ್ತಿಲ್ಲದೆ ಆದ ಮದುವೆಯನ್ನು ಹೂವಿ ರಾಹುಲ್ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಈ ನಡುವೆ ರಾಹುಲ್ ತಾನಿಷ್ಟ ಪಡುತ್ತಿದ್ದ ಮಾಲಿನಿಯನ್ನು ಮದುವೆ ಆಗಿದ್ದಾನೆ. ಅವಳನ್ನೇ ಜೀವನ ಸಂಗಾತಿ ಎಂದು ಅಂಗೀಕರಿಸಿದ್ದಾನೆ. ಹೂವಿ ತ್ಯಾಗಮಯಿಯಾಗಿ ಇದನ್ನೆಲ್ಲ ಒಪ್ಪಿಕೊಂಡು ಮನೆಗೆಲಸದವಳಾಗಿ ಮನೆಯವರ ಪ್ರೀತಿ ಸಂಪಾದಿಸಿದ್ದಾಳೆ. ರಾಹುಲ್ ಗೆ ಹೂವಿ ಬೇಡವಾಗಿದ್ದಾಳೆ.

ಇತ್ತ ಹೂವಿ ಮನೆಯವರಿಂದ ಅವಳನ್ನು ವಿಚಾರಿಸಿಕೊಂಡು ಪದೇ ಪದೇ ರಾಹುಲ್‌ಗೆ ಫೋನ್‌ ಬರುತ್ತಿರುತ್ತದೆ. ಇದು ರಾಹುಲ್‌ಗೆ ಅರಗಿಸಿಕೊಳ್ಳಲಾಗದ ತುತ್ತು. ಯಾವಾಗ ಹೂವಿಯ ಕಾಟದಿಂದ ತಪ್ಪಿಸಿಕೊಳ್ಳುತ್ತೇನೋ ಎನ್ನುವಂತಾಗಿದೆ. ಇಂಥಾ ಟೈಮಲ್ಲೇ ಯಾವುದೋ ಪ್ರಾಜೆಕ್ಟ್‌ ಸಲುವಾಗಿ ಚನವಲ್ಸೆ ಎಂಬ ಹೂವಿಯ ಊರಿಗೆ ರಾಹುಲ್ ಬರಬೇಕಾಗುತ್ತದೆ. ಆತ ಹೂವಿಯನ್ನೂ ಜೊತೆಗೇ ಕರೆತಂದು ಅರ್ಧ ದಾರಿಯಲ್ಲಿ ಬಿಟ್ಟು ಹೊರಟುಬಿಡುತ್ತಾನೆ. ತನ್ನ ಬದುಕಿಗೆ ಅಂಟಿಕೊಂಡಿದ್ದ ಹೂವಿ ತೊಲಗಿದಳು ಎಂದೇ ರಾಹುಲ್ ಭಾವಿಸಿದ್ದಾನೆ.

ಇದನ್ನೂ ಓದಿ: Ramachari Serial : ಹೀರೋಯಿನ್‌ ಮೌನಾ ಗುಡ್ಡೆಮನೆ, ರಿಯಲ್ ಲೈಫಲ್ಲೂ ಧಿಮಾಕಿನ ಹೆಣ್ಣಾ?

ರಾಹುಲ್ ಹೂವಿಯಿಂದ ಅದೆಷ್ಟೇ ದೂರ ಸರಿದರೂ ವಿಧಿ ಈ ಇಬ್ಬರನ್ನು ಮತ್ತೆ ಮತ್ತೆ ಒಂದು ಮಾಡಿಯೇ ಮಾಡುತ್ತೆ. ಹೂವಿ ಕಾಟ ತಪ್ಪಿದೆ ಅನ್ನುವಾಗಲೇ ಊರಿನ ಜನ ಆತ ಉಳಿದುಕೊಂಡಿದ್ದ ಲಾಡ್ಜ್ ಗೆ ಬಂದು ಊರಿಗೆ ಕರೆತರುತ್ತಾರೆ. ರಾಹುಲ್ ಊರಿಗೆ ಬಂದಿರುವುದನ್ನು ಹೂವಿ ತಾನಾಗಿಯೇ ಯಾರಿಗೂ ಹೇಳಿಲ್ಲ. ಆದರೆ ಮನೆಯವರ ಒತ್ತಡಕ್ಕೆ ಮಣಿದು, ತಾಯಿಯ ಆರೋಗ್ಯದ ಸ್ಥಿತಿ ಕಂಡು ಸತ್ಯವನ್ನು ಬಾಯಿ ಬಿಡಲೇಬೇಕಾಯಿತು. ರಾಹುಲ್ ಇಲ್ಲೆ ಲಾಡ್ಜ್‌ನಲ್ಲಿದ್ದಾರೆ ಎಂದಿದ್ದೆ ತಡ, ಊರ ಅಳಿಯನನ್ನು ಕರೆ ತರಲು ಎಲ್ಲರೂ ಸಿದ್ಧವಾಗಿಯೇ ಬಿಟ್ಟರು. ಆದರೆ ಇದಕ್ಕೆ ಹೂವಿ ಒಪ್ಪುತ್ತಿಲ್ಲ. ಹಾಗಂತ ಮನೆಯವರು ಅಳಿಯನನ್ನು ಕರೆತರದಿರುವುದು ಹೇಗೆ? ಹೂವಿಗೆ ತಿಳಿಯದಂತೆ ಲಾಡ್ಜ್ ನತ್ತ ಹೊರಟು ಬಿಡುತ್ತಾರೆ. ಅಲ್ಲಿ ಅಳಿಯ ರಾಹುಲ್‌ ಕ್ಷಮೆ ಕೇಳಿ ಗಂಡ ಹೆಂಡತಿ ಇಬ್ಬರಿಗೂ ಹಾರ ಹಾಕಿ, ಮೆರವಣಿಗೆ ಮೂಲಕ ಕರೆತಂದು ಮತ್ತೆ ಮದುವೆ ಮಾಡಿಸಿಯೇ ಬಿಟ್ಟಿದ್ದಾರೆ. ಹೀಗೆ ರಾಹುಲ್ ಮತ್ತೊಮ್ಮೆ ಹೂವಿಗೆ ತಾಳಿ ಕಟ್ಟಿದ್ದಾನೆ. ಮೊದಲ ಸಲ ಗಡಿಬಿಡಿಯಲ್ಲಿ ಹೇಗ್ಹೇಗೋ ಮದುವೆ ಆಯ್ತು ಅಂತ ಎರಡನೇ ಸಲ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದಾರೆ. ಅಲ್ಲಿಗೆ ಸದ್ಯಕ್ಕೆ ಮಾಲಿನಿ ಜೊತೆ ಚೆಂದಕೆ ಬದುಕುವ ರಾಹುಲ್ ಕನಸಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.

ಇದನ್ನೂ ಓದಿ: Gattimela Serial: ಗಟ್ಟಿಮೇಳ ಸೀರಿಯಲ್‌ನಲ್ಲಿ ಕೋರ್ಟ್ ಸೀನ್, ಹೀರೋನೇ ಲಾಯರ್!

ಶ್ರೀವಿದ್ಯಾ (Srividya Shastri) ಹೂವಿ ಪಾತ್ರದಲ್ಲಿ, ದರ್ಶಕ್ ಗೌಡ ( Darshak Gowda)  ರಾಹುಲ್ ಚಕ್ರವರ್ತಿಯಾಗಿ ಹಾಗೂ ಪ್ರಕೃತಿ ಪ್ರಸಾದ್(Prakruthi Prasad) ಮಾಲಿನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀನಿವಾಸ್ ಪ್ರಭು, ಪದ್ಮಜಾ ರಾವ್ ಮುಖ್ಯ ಪೋಷಕ ಪಾತ್ರಗಳಲ್ಲಿದ್ದಾರೆ.

ಇದನ್ನೂ ಓದಿ: ನಾನು ಕನ್ನಡತಿ, ನನ್ನ ಭಾಷೆನೇ ನನ್ನ ಶಕ್ತಿ: ನಿರೂಪಕಿ ರೀನಾ ಡಿಸೋಜಾ
 

Latest Videos
Follow Us:
Download App:
  • android
  • ios