Asianet Suvarna News Asianet Suvarna News

ಸಮಾಜಕಲ್ಯಾಣ ಖಾತೆ ಪಡೆದ ಬಳಿಕ ಮನೆ ವಿವಾದದ ಬಗ್ಗೆ ಸ್ಪಷ್ಟನೆ ಕೊಟ್ಟ ಕೋಟ ಶ್ರೀನಿವಾಸ ಪೂಜಾರಿ

Aug 7, 2021, 5:03 PM IST

ಮಂಗಳೂರು (ಆ. 07): ಬೊಮ್ಮಾಯಿ ಸಂಪುಟ 29 ನೂತನ ಸಚಿವರ ಖಾತೆ ಹಂಚಿಕೆಯಾಗಿದೆ. ಕೋಟಾ ಶ್ರೀನಿವಾಸ ಪೂಜಾರಿಗೆ ಸಮಾಜಕಲ್ಯಾಣ ಖಾತೆ ನೀಡಲಾಗಿದೆ. ಈ ಬಗ್ಗೆ ಶ್ರೀನಿವಾಸ ಪೂಜಾರಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 'ನಾನಿರೋ ಮನೆ ಬಗ್ಗೆ ವಿವಾದ ಏನಿಲ್ಲ, ಅದು ಹೈಕೋರ್ಟ್‌ನಲ್ಲಿದೆ. ಹೊಸ ಮನೆ ಕಟ್ಟೋ ವಿಚಾರದಲ್ಲಿ ಆರು ಕೋಟಿ ವಿವಾದ ಎಬ್ಬಿಸಿದ್ದಾರೆ ಅಷ್ಟೇ. ನಾನು ಲೋಕಾಯುಕ್ತರಿಗೆ ಈ ಬಗ್ಗೆ ತನಿಖೆ ನಡೆಸಿ ಅಂತ ದೂರು ಕೊಟ್ಟಿದ್ದೇನೆ. ಇಂಥದ್ದೊಂದು ಅರ್ಜಿ ಬಂದಿದ್ದೇ ಇತಿಹಾಸದಲ್ಲಿ ಪ್ರಥಮ ಅಂತ ಹೇಳಿ ತನಿಖೆಯ ಭರವಸೆ ಕೊಟ್ಟಿದ್ದಾರೆ' ಎಂದು ಹೇಳಿದ್ದಾರೆ. 

ಅಳೆದು ತೂಗಿ ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಪಟ್ಟಿ

'ನನಗೆ ಬಹುದೊಡ್ಡ ಖಾತೆಯಾದ ಸಮಾಜಕಲ್ಯಾಣ ಇಲಾಖೆ ಕೊಟ್ಟಿದ್ದಾರೆ. ಸಮಾಜದ ಕೊನೆಯಲ್ಲಿರುವ ಪರಿಶಿಷ್ಟ ಜಾತಿ, ಪಂಗಡವನ್ನ ತಲುಪಬಹುದು.  ಕಡು ಬಡವರ ಜೊತೆ ನಿಂತು ಕೆಲಸ ಮಾಡಬಹುದು. ಇದಕ್ಕೆ ಅವಕಾಶ ಕೊಟ್ಟ ಸಿಎಂ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸ್ತೇನೆ' ಎಂದಿದ್ಧಾರೆ. 

 

Video Top Stories