Asianet Suvarna News Asianet Suvarna News

BJP Core Committee : ನಾಯಕತ್ವ ಬದಲಾವಣೆ ಬಗ್ಗೆ ಮಾತಾಡಿದ್ರೆ ಗೆಟ್‌ಪಾಸ್, ಬೊಮ್ಮಾಯಿಗೆ 'ಹೈ' ಪವರ್!

ಹುಬ್ಬಳ್ಳಿಯಲ್ಲಿ (Hubballi) 2 ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯಕಾರಿಣಿ (BJP Core Cmmitte) ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಸಿಎಂ ಬೊಮ್ಮಾಯಿ (CM Bommai) ಜೊತೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದೆ ಹೈಕಮಾಂಡ್.  

ಬೆಂಗಳೂರು (ಡಿ. 29): ಹುಬ್ಬಳ್ಳಿಯಲ್ಲಿ (Hubballi) 2 ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯಕಾರಿಣಿ (BJP Core Cmmitte) ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಸಿಎಂ ಬೊಮ್ಮಾಯಿ (CM Bommai) ಜೊತೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದೆ ಹೈಕಮಾಂಡ್.  ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ, ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಯಾರೂ ಈ ಬಗ್ಗೆ ಸೊಲ್ಲೆತ್ತುವಂತಿಲ್ಲ. ಬಹಿರಂಗವಾಗಿ ಮಾತನಾಡುವಂತೆಯೂ ಇಲ್ಲ ಎಂದು ವರಿಷ್ಠರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

News Hour: ರೂಪಾಂತರಿ ತಡೆಗೆ ನೈಟ್ ಕರ್ಫ್ಯೂ, ಏನೆಲ್ಲಾ ಹೊಸ ನಿಯಮ?

ಸಿಎಂ ಬದಲಾವಣೆ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವಂತಿಲ್ಲ. ಬಹಿರಂಗ ಚರ್ಚೆ ನಡೆಸುವಂತಿಲ್ಲ. ಇಂಥ ನಡೆಯನ್ನು ಪಕ್ಷ ಸಹಿಸಲು ಸಾಧ್ಯವೇ ಇಲ್ಲ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ. ಈ ಬಗ್ಗೆ ರಾಷ್ಟ್ರ ಮಟ್ಟದಲ್ಲೂ ಚಿಂತನೆಯಿಲ್ಲ. ವಿನಾಕಾರಣ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ನಡೆಸಬೇಡಿ. ಯಾರಾದರೂ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಅರುಣ್‌ ಸಿಂಗ್‌ (Arun Singh) ತಾಕೀತು ಮಾಡಿದರು.

ನಿಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ಅವುಗಳನ್ನು ಪಕ್ಷದ ವೇದಿಕೆಗಳಲ್ಲೇ ಚರ್ಚಿಸಬೇಕೇ ಹೊರತು, ಮಾಧ್ಯಮದ ಎದುರಿಗಲ್ಲ. ಈ ಆದೇಶವನ್ನು ಯಾವುದೇ ನಾಯಕರು ಉಲ್ಲಂಘಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

 

Video Top Stories