Asianet Suvarna News Asianet Suvarna News

ಧನುಷ್ ವಿಚ್ಛೇದನಕ್ಕೆ ಕಾರಣವಾಯ್ತು ಪರಸ್ತ್ರೀ ಸಹವಾಸ?: ಗಾಯಕಿ ಸುಚಿತ್ರಾ ಶಾಕಿಂಗ್ ಆರೋಪ!

ಗಾಯಕಿ ಸುಚಿತ್ರಾ ಕಾರ್ತಿಕ್ ಅವರು ಈಗ ದೊಡ್ಡ ಬಾಂಬ್ ಹಾಕಿದ್ದಾರೆ. ಧನುಷ್ ಪರಸ್ತ್ರೀ ಸಹವಾಸ ಮಾಡಿದ್ದೇ ವಿಚ್ಚೇಧನಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. 2017ರಲ್ಲಿ ಸುಚಿತ್ರಾ ಅವರು ಒಂದು ಗಂಭೀರ ಆರೋಪ ಮಾಡಿದ್ದರು. 

ಕಾಲಿವುಡ್ ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ಪಡೆದಿದ್ದಾರೆ. ಹಲವು ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿಕೊಂಡಿದ್ದ ಇವರು ಬೇರೆ ಆಗಿದ್ದು ಅನೇಕರಿಗೆ ಶಾಕಿಂಗ್ ಎನಿಸಿದೆ. ಇವರು ಬೇರೆ ಆಗೋಕೆ ಕಾರಣ ಏನು ಎಂಬುದು ಈಗಲೂ ರಿವೀಲ್ ಆಗಿಲ್ಲ. ಈ ಮಧ್ಯೆ ತಮಿಳು ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್ ಅವರು ಈಗ ದೊಡ್ಡ ಬಾಂಬ್ ಹಾಕಿದ್ದಾರೆ. ಧನುಷ್ ಪರಸ್ತ್ರೀ ಸಹವಾಸ ಮಾಡಿದ್ದೇ ವಿಚ್ಚೇಧನಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. 2017ರಲ್ಲಿ ಸುಚಿತ್ರಾ ಅವರು ಒಂದು ಗಂಭೀರ ಆರೋಪ ಮಾಡಿದ್ದರು. ತಮ್ಮ ಸೋಶಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿದೆ ಎಂದಿದ್ದ ಅವರು, ಧನುಷ್ ಸಹಾಯಕ ತಮ್ಮ ಜೊತೆ ಬೇರೆ ರೀತಿಯಲ್ಲಿ ನಡೆದುಕೊಂಡಿದ್ದ ಎಂದು ಕೂಡ ಅವರು ಆರೋಪಿಸಿದ್ದರು. ಆ ಬಳಿಕ ಸುಚಿತ್ರಾ ಅವರು ಧನುಷ್ ಬಗ್ಗೆಯೂ ಆರೋಪಿಸಿದ್ದರು. 

ಧನುಷ್ ಓರ್ವ ಡ್ರಗ್ ಅಡಿಕ್ಟ್ ವ್ಯಕ್ತಿ, ತಮಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಇದರಿಂದ ತಮಿಳು ಸಿನಿಮಾ ರಂಗದಲ್ಲಿ ಕಾಸ್ಟಿಂಗ್ಕೌಚ್ ವಿಚಾರ ಚರ್ಚೆಗೆ ಬಂದಿತ್ತು. ಆ ಬಳಿಕ ಧನುಷ್ ಅವರ ಕೆಲವು ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಲೀಕ್ ಮಾಡಿದ್ದರು. ಈಗ ಅವರು ಧನುಷ್ ವಿರುದ್ಧ ಕೂಗಾಡಿದ್ದಾರೆ. ‘ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಇಬ್ಬರೂ ಸರಿ ಇಲ್ಲ. ಐಶ್ವರ್ಯಾ ಒಳ್ಳೆಯ ತಾಯಿ ಅಲ್ಲ. ಧನುಷ್-ಐಶ್ವರ್ಯಾ ಪರಸ್ಪರ ಮೋಸ ಮಾಡಿಕೊಂಡಿದ್ದಾರೆ. ನನಗೆ ಧನುಷ್ ಮೇಲೆ ಸಿಟ್ಟಿದೆ. ಅದನ್ನು ಬೇರೆ ರೀತಿಯಲ್ಲಿ ತೀರಿಸಿಕೊಳ್ಳುತ್ತೇನೆ. ರೀಲ್ಸ್ ಮಾಡೋ ತಾಯಿಗಳು ನನಗೆ ಇಷ್ಟ ಆಗುವುದಿಲ್ಲ. 

ಧನುಷ್ ಓರ್ವ ಒಳ್ಳೆಯ ತಂದೆ’ ಎಂದಿದ್ದಾರೆ ಸುಚಿತ್ರಾ. ‘ಮದುವೆ ಆದ ಬಳಿಕ ಯಾರಾದರೂ ಡೇಟ್ಗೆ ಹೋಗುತ್ತಾರಾ? ಧನುಷ್ ಹೋಗಿದ್ದರು. ಓಪನ್ ಆಗಿ ಧನುಷ್ ಮೋಸ ಮಾಡಿದ್ದಾರೆ. ದೆವ್ವ ಹಾಗೂ ಆಳ ಸಮುದ್ರದಲ್ಲಿ ದೆವ್ವವೇ ಬೆಸ್ಟ್. ಧನುಷ್ ನಿಜಕ್ಕೂ ಉತ್ತಮ. ನನಗೆ ಅವರ ಮೇಲೆ ದ್ವೇಷ ಇಲ್ಲ. ನನಗೆ ಪ್ರ್ಯಾಂಕ್ ಮಾಡಿ ನನ್ನ ಜೀವನವೇ ನಾಶ ಮಾಡಿದರು’ ಎಂದಿದ್ದಾರೆ ಸುಚಿತ್ರಾ. ಈ ಮೂಲಕ ಪರಸ್ತ್ರೀ ಸಹವಾಸದಿಂದ ವಿಚ್ಛೇದನ ಆಯಿತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.  ಖಾಸಗಿ ವಾಹಿನಿಗೆ ಗಾಯಕಿ ಸುಚಿತ್ರಾ ನೀಡಿರೋ ಸಂದರ್ಶನದಲ್ಲಿ ಈ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಧನುಷ್ ಹಾಗೂ ಐಶ್ವರ್ಯ ಒಂದೂವರೆ ವರ್ಷದ ಹಿಂದೆ ಡಿವೋರ್ಸ್‌ಗೆ ಮುಂದಾಗಿರುವ ವಿಚಾರವನ್ನು ಘೋಷಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. 

ಬಳಿಕ ಬೇರೆ ಬೇರೆ ಮನೆಗಳಲ್ಲಿ ಇಬ್ಬರೂ ವಾಸಿಸುತ್ತಿದ್ದು ಇತ್ತೀಚೆಗೆ ಡಿವೋರ್ಸ್ ಕೋರಿ ಚೆನ್ನೈ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಟ ರಜನಿಕಾಂತ್ ಎಷ್ಟೇ ಪ್ರಯತ್ನಿಸಿದ್ದರೂ ಇಬ್ಬರೂ ದೂರಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎನ್ನಲಾಗಿತ್ತು. ಡಿವೋರ್ಸ್ ಅರ್ಜಿ ವಿಚಾರಣೆ ನಡೆದು ಕೋರ್ಟ್ ಮುಂದಿನ ವಿಚಾರಣೆಗೆ ಧನುಷ್ ಹಾಗೂ ಐಶ್ವರ್ಯ ಇಬ್ಬರೂ ಹಾಜರಾಗಬೇಕು ಎಂದು ತಿಳಿಸಿದೆ. ಶೀಘ್ರದಲ್ಲೇ ಅಧಿಕೃತವಾಗಿ ದಂಪತಿ ಡಿವೋರ್ಸ್ ಪಡೆದು ದೂರಾಗುವ ಸಾಧ್ಯತೆಯಿದೆ. ಇತ್ತೀಚೆಗೆ ಮಗನ ಶಾಲಾ ಕಾರ್ಯಕ್ರಮವೊಂದರಲ್ಲಿ ಧನುಷ್ ಹಾಗೂ ಐಶ್ವರ್ಯ ಇಬ್ಬರೂ ಭಾಗಿ ಆಗಿದ್ದರು. ಇನ್ನು ಗಾಐಕಿ ಸುಚಿತ್ರ ಮಾನಸಿಕ ಅಸ್ವಸ್ಥೆಯೆಂದು ಅವರ ಮಾತನ್ನು ಯಾರೂ ಗಂಭೀರವಾಘಿ ತೆಗೆದುಕೊಳ್ಳಬೇಡಿಯೆಂದು ಕಮೆಂಟ್ ಮಾಡುತ್ತಿದ್ದಾರೆ. ಸುಚಿತ್ರ ಪತಿ ಕೂಡ ಇದನ್ನೆ ಹೇಳಿದ್ದಾರೆ. ಆದರೆ ಸಿನಿ ದುನಿಯಾದಲ್ಲಿ ಸುಚಿತ್ರಾ ಸಂದರ್ಶನ ಸದ್ಯ ವೈರಲ್ ಆಗಿದೆ.