100 ಕೋಟಿ ಕ್ಲಬ್ ಸೇರಿದ ಕಿಚ್ಚ: ಯಾವ ಭಾಷೆಯಲ್ಲಿ ವಿಕ್ರಾಂತ್ ರೋಣ ಎಷ್ಟು ಕಲೆಕ್ಷನ್?

ಎಲ್ಲೆಲ್ಲೂ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಕ್ರೇಜ್ ಸೃಷ್ಟಿಯಾಗಿದೆ. ವಿಕ್ರಾಂತ್ ರೋಣನ ವೈಭವಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.  ಬಾಲಿವುಡ್ ಮಂದಿ ಗಪ್ ಚುಪ್ ಆಗಿದ್ದಾರೆ. 

First Published Aug 3, 2022, 3:09 PM IST | Last Updated Aug 3, 2022, 3:09 PM IST

ಎಲ್ಲೆಲ್ಲೂ ಕಿಚ್ಚ ಸುದೀಪ್ (Kiccha Sudeep) ವಿಕ್ರಾಂತ್ ರೋಣ (Vikrant Rona) ಕ್ರೇಜ್ ಸೃಷ್ಟಿಯಾಗಿದೆ. ವಿಕ್ರಾಂತ್ ರೋಣನ ವೈಭವಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.  ಬಾಲಿವುಡ್ ಮಂದಿ ಗಪ್ ಚುಪ್ ಆಗಿದ್ದಾರೆ. ಯಾಕಂದ್ರೆ ವಿಕ್ರಾಂತ್ ರೋಣ ಬಾಕ್ಸಾಫೀಸ್ನಲ್ಲಿ ಅಕ್ಷರಶಃ ಕಮಾಲ್ ಮಾಡುತ್ತಿದ್ದಾನೆ. ವಿಕ್ರಾಂತ್ ರೋಣ ಬೆಳ್ಳಿತೆರೆ ಮೇಲೆ ಬಂದು ಐದು ದಿನದಲ್ಲಿ 100 ಕೋಟಿ ಕ್ಲಬ್ ಸೇರಿ ಇತಿಹಾಸ ಸೃಷ್ಟಿಸಿದೆ. ಹಿಂದಿಯಲ್ಲಿ 15 ಕೋಟಿಗೂ ಹೆಚ್ಚು ಗಳಿಕೆ ಕಾಣುತ್ತಿರೋ ವಿಕ್ರಾಂತ್ ರೋಣ ತೆಲುಗುನಲ್ಲಿ 10 ಕೋಟಿ, ತಮಿಳುನಲ್ಲಿ 8, ಹಾಗು ಮಲೆಯಾಳಂನಲ್ಲಿ 7 ಕೋಟಿ ಗಳಿಸಿ ಕಲೆಕ್ಷನ್ ನಲ್ಲಿ ಮುನ್ನುಗ್ಗುತ್ತಿದೆ ಅಂತ ಮಾಹಿತಿ ಇದೆ. 

ಬಿಗ್‌ಬಾಸ್ ಓಟಿಟಿ ಸೀಸನ್‌ನಲ್ಲಿ ವಿನ್ನರ್‌ಗಳು ಇರ್ತಾರಾ ಅಂದ್ರೆ ವಿನ್ನರ್ ಇರಲ್ಲ: ಪರಂ ಶಾಕಿಂಗ್ ಹೇಳಿಕೆ

ಈ ವರ್ಷ ಸ್ಯಾಂಡಲ್ವುಡ್ ಮಂದಿಗೆ ಸುಗ್ಗಿ ಹಬ್ಬ. ಯಾಕಂದ್ರೆ ಕನ್ನಡದಿಂದ ನಾಲ್ಕು ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರಿವೆ. ರಾಕಿಂಗ್ ಸ್ಟಾರ್ ಯಶ್ರ ಕೆಜಿಎಫ್-2, ಪುನೀತ್ ರಾಜ್‌ಕುಮಾರ್ ಜೇಮ್ಸ್, ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿರೋ 777 ಚಾರ್ಲಿ ಸಿನಿಮಾಗಳು 100 ಕೋಟಿ ಕಲೆಕ್ಷನ್ ದಾಟಿವೆ. ವಿಕ್ರಾಂತ್ ರೋಣ ಸಿನಿಮಾಗೆ ಈ ಸಿಗುತ್ತಿರೋ ರೆಸ್ಪಾನ್ಸ್ ನೋಡುತ್ತಿದ್ರೆ, ಈ ಸಿನಿಮಾದ ಕಲೆಕ್ಷನ್ 200 ಪ್ಲಸ್ ಆಗೋದ್ರಲ್ಲಿ ನೋ ಡೌಟ್!


 

Video Top Stories