Asianet Suvarna News Asianet Suvarna News

ಹೊಂಬಾಳೆ ಜತೆ ಕಿಚ್ಚ ಸುದೀಪ್ ನ್ಯೂ ಬಿಗಿನಿಂಗ್ಸ್? ಕೂತೂಹಲ ಕೆರಳಿಸಿದ ಆ ಒಂದು ಫೋಟೋ..

ಹೊಂಬಾಳೆ ಸಂಸ್ಥೆಯ ಜೊತೆ ಕಿಚ್ಚ ಸುದೀಪ್ ಕೈ ಜೋಡಿಸಿದ್ದು, ಆದಷ್ಟು ಬೇಗ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎಂಬ ಸುಳಿವು ಸಿಕ್ಕಿದೆ.
 

Oct 7, 2022, 6:09 PM IST

ಹೊಂಬಾಳೆ ಸಿನಿಮಾ ಸಂಸ್ಥೆಯ ಜತೆ ಕಿಚ್ಚ ಸುದೀಪ್ ನ್ಯೂ ಬಿಗಿನಿಂಗ್ಸ್ ಅನ್ನುವ ಸೀಕ್ರೆಟ್ ಇದೀಗ ರಿವೀಲ್ ಆಗಿದ್ದು, ಸಿನಿಪ್ರಿಯರ ಕೂತೂಹಲ ಹೆಚ್ಚಿಸಿದೆ. ಈಗಾಗಲೇ ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ನಾಲ್ಕೈದು ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿರುವ ಹೊಂಬಾಳೆ, ಕೆಜಿಎಫ್ ಹಾಗೂ ಕಾಂತಾರದಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿದೆ. ಇದೀಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಮುಂದಿನ ಚಿತ್ರಕ್ಕೆ ಬಂಡವಾಳ ಹಾಕಲು ಸಜ್ಜಾಗಿದೆ. ಹೊಂಬಾಳೆ ಫಿಲ್ಮ್ಸ್ ಕ್ರಿಯೆಟಿವ್‌ ಪ್ರೊಡ್ಯೂಸರ್‌ ಕಾರ್ತಿಕ್‌ ಗೌಡ ಕಿಚ್ಚನ ಸಿನಿಮಾ ಸುಳಿವು ನೀಡಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ