Asianet Suvarna News Asianet Suvarna News

ಶಿವೋತ್ಸವದ ಜೊತೆ ರವಿ ಹಬ್ಬ, ದೊಡ್ಡ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ಸ್ಯಾಂಡಲ್‌ವುಡ್

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್-ಕ್ರೇಜಿಸ್ಟಾರ್ ರವಿಚಂದ್ರನ್ ಒಂದೇ ಟೈಂನಲ್ಲಿ ಬಣ್ಣದ ಜಗತ್ತಿಗೆ ಪ್ರವೇಶಿಸಿದವರು. ಅಷ್ಟೆ ಅಲ್ಲ ಅತ್ಯಾತ್ಮೀಯ ಸ್ನೇಹಿತರು ಅನ್ನೋದು ನಿಮ್ಗೆ ಗೊತ್ತು.

Aug 5, 2022, 3:32 PM IST

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್-ಕ್ರೇಜಿಸ್ಟಾರ್ ರವಿಚಂದ್ರನ್ ಒಂದೇ ಟೈಂನಲ್ಲಿ ಬಣ್ಣದ ಜಗತ್ತಿಗೆ ಪ್ರವೇಶಿಸಿದವರು. ಅಷ್ಟೆ ಅಲ್ಲ ಅತ್ಯಾತ್ಮೀಯ ಸ್ನೇಹಿತರು ಅನ್ನೋದು ನಿಮ್ಗೆ ಗೊತ್ತು. ಇದೀಗ ರವಿಚಂದ್ರನ್ (Ravichandran) ಹಾಗು ಶಿವರಾಜ್ ಕುಮಾರ್ ಸ್ನೇಹ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಸಂಭ್ರಮವೊಂದಕ್ಕೆ ಸಾಕ್ಷಿಯಾಗೋ ಟೈಂ ಬಂದಿದೆ. 

ಮಂಚಕ್ಕೆ ಹೋದರೆ ಮಾತ್ರ ಹೀರೋಯಿನ್ ಚಾನ್ಸ್, ಬಿ ಟೌನ್ ಕಾಸ್ಟಿಂಗ್ ಕೌಚ್ ತೆರೆದಿಟ್ಟ ಮಲ್ಲಿಕಾ ಶೆರಾವತ್

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ (Shivarajkumar) 60 ವರ್ಷ ಪೂರೈಸಿದ್ದಾರೆ. ಆದ್ರೆ ತನ್ನ ಅರ್ಧ ಜೀವದಂತಿದ್ದ ತಮ್ಮ ಪುನೀತ್ ರಾಜ್ ಕುಮಾರ್ರನ್ನ ಕಳೆದುಕೊಂಡು ಶಿವಣ್ಣ ಈ ಭಾರಿ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿಲ್ಲ. 

ಶಿವರಾಜ್ ಕುಮಾರ್ ಶಿವೋತ್ಸವದ ಜೊತೆ ರವಿ ಹಬ್ಬ ಮಾಡೋದಕ್ಕೂ ಪ್ಲಾನ್ ಮಾಡಿಕೊಂಡಿದ್ದಾರೆ ಸ್ಯಾಂಡಲ್‌ವುಡ್ ಮಂದಿ. ರವಿಚಂದ್ರನ್ ಕೂಡ ಶಿವರಾಜ್ ಕುಮಾರ್ ಸಮಕಾಲೀನದವರು. ವಯಸ್ಸಿನಲ್ಲೂ ಇಬ್ಬರು ಸಮಾನರು. ಅದಕ್ಕೂ ಮಿಗಿಲಾಗಿ ಅತ್ಯಾತ್ಮೀಯ ಸ್ನೇಹಿತರು. ಹೀಗಾಗಿ ಶಿವೋತ್ಸವದ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್‌ಗೂ ಗೌರವ ಸಲ್ಲಿಸೋ ಉದ್ದೇಶ ಇದ್ದು, ರವಿ ಹಬ್ಬ ಹಾಗೂ ಶಿವೋತ್ಸವ ಎರಡೂ ಸಂಭ್ರಮವನ್ನ ಒಟ್ಟಿಗೆ ಮಾಡೋದಕ್ಕೆ ಸಿದ್ಧತೆ ನಡೆಸಲಾಗ್ತಿದೆ.

Video Top Stories