Asianet Suvarna News Asianet Suvarna News

ಮಂಚಕ್ಕೆ ಹೋದರೆ ಮಾತ್ರ ಹೀರೋಯಿನ್ ಚಾನ್ಸ್ , ಬಿ ಟೌನ್ ಕಾಸ್ಟಿಂಗ್ ಕೌಚ್ ತೆರೆದಿಟ್ಟ ಮಲ್ಲಿಕಾ ಶೆರಾವತ್

ಮಲ್ಲಿಕಾ ಶರವಾತ್ ಅಂದ ತಕ್ಷಣ ಥಟ್ ಅಂತ ನೆನಪಿಗೆ ಬರೋದು ಮರ್ಡರ್ ಸಿನಿಮಾ ಹಾಗೂ ಆ ಚಿತ್ರದ ಸಾಂಗ್ ಗಳು. ತನ್ನ ಹಾಟ್ ಅವತಾರದ ಮೂಲಕ ಪಡ್ಡೆಗಳ ಹೃದಯ ಕದ್ದಿದ್ರು ಈ ನಟಿ ಇತ್ತಿಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದುಕೊಂಡು ವಿದೇಶ ಸೇರಿದ್ರು. 

Aug 5, 2022, 3:20 PM IST

ಮಲ್ಲಿಕಾ ಶರವಾತ್ (Mallika Sherawat) ಅಂದ ತಕ್ಷಣ ಥಟ್ ಅಂತ ನೆನಪಿಗೆ ಬರೋದು ಮರ್ಡರ್ ಸಿನಿಮಾ ಹಾಗೂ ಆ ಚಿತ್ರದ ಸಾಂಗ್ ಗಳು. ತನ್ನ ಹಾಟ್ ಅವತಾರದ ಮೂಲಕ ಪಡ್ಡೆಗಳ ಹೃದಯ ಕದ್ದಿದ್ರು ಈ ನಟಿ ಇತ್ತಿಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದುಕೊಂಡು ವಿದೇಶ ಸೇರಿದ್ರು. ಸಿನಿಮಾ ಬಿಟ್ಟು ಲಾಸ್ ಏಂಜಲೀಸ್ ನಲ್ಲಿ ವಾಸ ಮಾಡ್ತಿರೋ ಮಲ್ಲಿಕಾ ಶೆರಾವತ್ ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಭಾಗಿ ಆಗಿದ್ರು. ಆ ಸಮಯದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ಟಾಪ್‌ಲೆಸ್ ಪೋಸ್ ನೀಡಿದ ಉರ್ಫಿ, ಎದೆ ಮುಚ್ಚಿಕೊಂಡಿದ್ದು ಕೂದಲಿನಿಂದ!

ನಾನು ಸಂಧಾನಕ್ಕೆ ಒಪ್ಪಿಕೊಳ್ಳದಿದ್ದಕ್ಕೆ ಸಾಕಷ್ಟು ಸಿನಿಮಾಗಳಿಂದ ನನ್ನನ್ನು ಕೈಬಿಟ್ಟಿದ್ದಾರೆ. ನಾನು ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್ನ ಎ-ಪಟ್ಟಿಯಲ್ಲಿರುವ ಅಥವಾ ಮುಂಚೂಣಿಯಲ್ಲಿದ್ದ ಬಾಲಿವುಡ್ ನಟರು ನನ್ನೊಂದಿಗೆ ಕೆಲಸ ಮಾಡಲು ನಿರಾಕರಿಸಿದರು ಎಂದಿದ್ದಾರೆ ಮಲ್ಲಿಕಾ ಶೆರಾವತ್ .  ನಾನು ಚಿತ್ರರಂಗ ಬಿಡಲು ಕೂಡ ಇದೇ ಕಾರಣ ಅನ್ನೋದನ್ನು ಹೇಳಿದ್ದಾರೆ ಮಲ್ಲಿಕಾ ಶೆರಾವತ್. ಆದ್ರೆ ಮಲ್ಲಿಕಾ ಅವರ ಈ ಮಾತುಗಳನ್ನ  ಕೇಳಿ ಕೆಲ ಬಾಲಿವುಡ್ ಮಂದಿ ಕಿಡಿಕಾರಿದ್ದಾರೆ. ಇಂಡಸ್ಟ್ರಿಯಿಂದ ದೂರ ಸರಿದಾಗ ಈ ರೀತಿ ಡೈಲಾಗ್ ಹೇಳೋದು ಕಾಮನ್. ಇಂಡಸ್ಟ್ರಿಯಲ್ಲಿ ಅವಕಾಶಗಳಿದ್ದಾಗ ಯಾಕೆ  ನಾಯಕಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡೋಲ್ಲ. ಇಂಡಸ್ಟ್ರಿ ಅಗತ್ಯ ಇಲ್ಲದಾಗ ಈ ಮಾತೆಲ್ಲಾ ಹೊರ ಬರುತ್ತೆ ಎಂದಿದ್ದಾರೆ.