Asianet Suvarna News Asianet Suvarna News

Kantara: ಕಾಂತಾರ ಪಾರ್ಟ್ 2 ಬರುತ್ತಾ? ರಿಷಬ್ ಶೆಟ್ಟಿ ರಿಯಾಕ್ಷನ್ ಹೀಗಿದೆ

ಕಾಂತಾರ-2 ಬರುತ್ತಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಪಾರ್ಟ್ ಬೇಕಾದರೂ ಬರಬಹುದು ಎಂದು ಹೇಳಿದರು.

Oct 7, 2022, 3:47 PM IST

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ರಿಲೀಸ್ ಆಗಿ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಸಕ್ಸಸ್ ಬಗ್ಗೆ ರಿಷಬ್ ಶೆಟ್ಟಿ ಇತ್ತೀಚಿಗೆ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದಾರೆ. ಕಾಂತಾರ ರಿಲೀಸ್ ಆದ ಬಳಿಕ ಕಾಂತಾರ-2 ಬರುತ್ತಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಎಷ್ಟು ಪಾರ್ಟ್ ಬೇಕಾದರೂ ಬರಬಹುದು ಎಂದು ಹೇಳಿದರು. ಬಂದರು ಬರಬಹುದು ಎಂದು ಹೇಳಿದರು. ಇನ್ನು ಕಂಬಳ ಬಗ್ಗೆ ಮಾತನಾಡಿದ ರಿಷಬ್ ತಮ್ಮ ಕುಟುಂಬದ ಕಂಬಳ ನಡೆಸುವ ಫ್ಯಾಮಿಲಿ ಎಂದು ಹೇಳಿದರು. ತುಂಬಾ ಪ್ರಾಕ್ಟೀಸ್ ಮಾಡಿ ಕಂಬಳ ಕಲಿತಿರುವುದಾಗಿ ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment