ಟೈಗರ್ ನೋಡಿದಾಗೆಲ್ಲ ಊಟ ಬಿಡಬೇಕು ಅನ್ಸತ್ತೆ: ಅಭಿಷೇಕ್ ಅಂಬರೀಶ್
ವಿನೋದ್ ಪ್ರಭಾಕರ್ ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಅದರ ಹೆಸರು ‘ಟೈಗರ್ ಟಾಕೀಸ್’.
ವಿನೋದ್ ಪ್ರಭಾಕರ್ ತಮ್ಮ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಅದರ ಹೆಸರು ‘ಟೈಗರ್ ಟಾಕೀಸ್’. ಈ ಸಂಸ್ಥೆಯ ಚೊಚ್ಚಲ ಸಿನಿಮಾವಾಗಿ ಪ್ರಮೋದ್ ಕುಮಾರ್ ನಿರ್ದೇಶನದ, ವಿನೋದ್ ಪ್ರಭಾಕರ್ ನಟನೆಯ ‘ಲಂಕಾಸುರ’ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್ ಮತ್ತು ಸಂಸ್ಥೆಯ ಲೋಗೋವನ್ನು ಚಿತ್ರತಂಡ ಲೋಕಾರ್ಪಣೆಗೊಳಿಸಿದೆ.
'ನಿಮ್ಮ ಡಿಸಿಪ್ಲೀನ್ ಮತ್ತು ಡೆಡಿಕೇಶನ್ ನೋಡಿದಾಗ ನಾವೆಲ್ಲಾ ಊಟ ಬಿಟ್ಟು ಬಿಡಬೇಕು ಅನಿಸುತ್ತೆ ಟೈಗರ್. ಟೀಸರ್ ನೋಡಿದೀನಿ, ಅದ್ಭುತವಾಗಿ ಬಂದಿದೆ. ನಿಮ್ಮ ತಂಡಕ್ಕೆ ಆಲ್ ದಿ ಬೆಸ್ಟ್' ಎಂದು ಅಭಿಷೇಕ್ ಅಂಬರೀಶ್ ವಿಶ್ ಮಾಡಿದರು.