Asianet Suvarna News Asianet Suvarna News

ಮರಿ ಆನೆ ಮೇಲೆ ಕಣ್ಣಾಕಿದ ವ್ಯಾಘ್ರ: ಅಟ್ಟಾಡಿಸ್ಕೊಂಡ್ ಬಂತು ಅಮ್ಮ ಆನೆ

ಪುಟ್ಟ ಆನೆ ಮರಿಯ ಮೇಲೆ ದಾಳಿ ಮಾಡೋಕೆ ನೋಡಿದ ಹುಲಿಯನ್ನು ಆನೆಯ ಹಿಂಡು ಅಟ್ಟಾಡಿಸಿಕೊಂಡು ಬಂದ ಘಟನೆ ಮೈಸೂರಿನಲ್ಲಿ ನಡೆದಿದೆ.

Nov 26, 2020, 5:10 PM IST

ಮೈಸೂರು(ನ.26): ಮರಿ ಆನೆ ಮೇಲೆ ಕಣ್ಣಾಕಿದ ವ್ಯಾಘ್ರಕ್ಕೆ ಆನೆಯ ಹಿಂಡು ತಕ್ಕ ಪಾಠ ಕಲಿಸಿದೆ. ಹಿಂಬಾಲಿಸಿದ ಹುಲಿಗೆ ತಿರುಗಿಬಿದ್ದ ಗಜಹಿಂಡು ಹುಲಿರಾಯನ ಅಟ್ಟಾಡಿಸಿಕೊಂಡು ಹೋಗಿದೆ.

ದತ್ತ ಭಜನೆ ಮಾಡುತ್ತಾ ದತ್ತ ಮಾಲಾಧಾರಿಗಳಿಂದ ಪ್ರತಿಭಟನೆ!

ಆನೆಹಿಂಡು ತಿರುಗಿಬೀಳುತ್ತಿದ್ದಂತೆ ಓಡಿದ ಹುಲಿ ಹೆದರಿ ಕಾಲ್ಕಿತ್ತಿದೆ. ಹೆಚ್.ಡಿ ಕೋಟೆಯ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಕೆಬ್ಬಂಗುಂಡಿ ರಸ್ತೆಯಲ್ಲಿ ಬುಧವಾರ ನಡೆದಿರುವ ಘಟನೆ ವನ್ಯಜೀವಿಗಳ ಮನಮೋಹಕ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.