3ನೇ ಮದುವೆ ಆಗ್ತಾರಂತೆ ಮೆಗಾಸ್ಟಾರ್ ಪುತ್ರಿ ಶ್ರೀಜಾ
ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಮೂಲಕ ಸುದ್ದಿಯಾದ್ರೆ ಅವ್ರ ಮಗಳು ಮಾತ್ರ ಮದುವೆ ವಿಚಾರವಾಗಿ ಆಗಾಗ ಸುದ್ದಿ ಆಗ್ತಾ ಇರ್ತಾರೆ. 2016 ರಲ್ಲಿ ಕಲ್ಯಾಣ್ ದೇವ್ ಜೊತೆ ಸಪ್ತಪದಿ ತುಳಿದಿದ್ದ ಚಿರು ಪುತ್ರಿ ಈಗ ಮತ್ತೊಂದು ಮದ್ವೆ ಆಗ್ತಾರಂತೆ. ಟಾಲಿವುಡ್ ಅಂಗಳದಲ್ಲಿ ಸದ್ಯ ಮೆಗಾಸ್ಟಾರ್ ಚಿರಂಜೀವಿ ಪುತ್ರಿಯ ಮದುವೆಯದ್ದೇ ಸುದ್ದಿ.
ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಮೂಲಕ ಸುದ್ದಿಯಾದ್ರೆ ಅವ್ರ ಮಗಳು ಮಾತ್ರ ಮದುವೆ ವಿಚಾರವಾಗಿ ಆಗಾಗ ಸುದ್ದಿ ಆಗ್ತಾ ಇರ್ತಾರೆ. 2016 ರಲ್ಲಿ ಕಲ್ಯಾಣ್ ದೇವ್ ಜೊತೆ ಸಪ್ತಪದಿ ತುಳಿದಿದ್ದ ಚಿರು ಪುತ್ರಿ ಈಗ ಮತ್ತೊಂದು ಮದ್ವೆ ಆಗ್ತಾರಂತೆ. ಟಾಲಿವುಡ್ ಅಂಗಳದಲ್ಲಿ ಸದ್ಯ ಮೆಗಾಸ್ಟಾರ್ ಚಿರಂಜೀವಿ ಪುತ್ರಿಯ ಮದುವೆಯದ್ದೇ ಸುದ್ದಿ. ಹೌದು 2016 ರಲ್ಲಿ ಶ್ರೀಜಾ ಮನೆಯವರು ನೋಡಿದ್ದ ಕಲ್ಯಾಣ್ ದೇವ್ ರ ಜೊತೆ ಸಪ್ತಪದಿ ತುಳಿದಿದ್ರು. ಈ ಮುಂಚೆಯೇ ಶ್ರೀಜಾ ಅವ್ರಿಗೆ ಒಂದು ವಿವಾಹವಾಗಿತ್ತು. ಮದ್ವೆ ಆದ ನಂತರ ಕಲ್ಯಾಣ್ ದೇವ್ ಹಾಗೂ ಶ್ರೀಜಾ ಅವ್ರ ಪ್ರೀತಿಯ ಸಂಕೇತವಾಗಿ ಮುದ್ದಾದ ಹೆಣ್ಣು ಮಗುವಿಗೂ ಜನ್ಮ ನೀಡಿದ್ರು ಶ್ರೀಜಾ. ಆದರೆ ಈಗ ಶ್ರೀಜಾ ಕಲ್ಯಾಣ್ ದೇವ್ ಅವರಿಂದ ವಿಚ್ಛೇದನ ಪಡೆದು ಮತ್ತೊಂದು ಮದ್ವೆ ಆಗ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಅಷ್ಟಕ್ಕೂ ಈ ಅನುಮಾನ ಮೂಡಲು ಕಾರಣವೇನಂದ್ರೆ. ಶ್ರೀಜಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪತಿಯ ಹೆಸರನ್ನ ಕೈಬಿಟ್ಟಿದ್ದಾರೆ. ಅದಷ್ಟೇ ಅಲ್ಲದೆ ಅನ್ ಫಾಲೋ ಕೂಡ ಮಾಡಿದ್ದಾರೆ.