Asianet Suvarna News Asianet Suvarna News

ಆದಿಪುರುಷ್ ಸಿನಿಮಾಗೆ ಬ್ಯಾನ್ ಭಯ!

 ಪ್ರಭಾಸ್ ಅಭಿನಯದ  ಬಹುನಿರೀಕ್ಷಿತ ಚಿತ್ರ ಆದಿಪುರುಷ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು , ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಮೇಲೆ ಬರಲು ಸಿದ್ಧವಾಗಿದೆ. ಆದರೆ ಟೀಸರ್‌ನಿಂದಲೇ  ನೆಗೆಟಿವ್ ಆಗಿ ಪ್ರತಿಕ್ರಿಯೆ ಪಡೆದಿರುವ ಆದಿಪುರುಷ್  ಗೆ  ಬ್ಯಾನ್ ಭಯ ಕಾಡುತ್ತಿದೆ. ಅಷ್ಟಕ್ಕೂ ಚಿತ್ರತಂಡದವರಿಗೆ ಕಂಟಕವಾಗಿರುವುದಾದರೂ ಯಾವುದು?

Oct 7, 2022, 1:40 PM IST

ರಾಮಾಯಣ ಆಧಾರಿತ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ (Adipurush)ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನೆಗೆಟಿವ್ ಪ್ರತಿಕ್ರಿಯೆ ಪಡೆಯುತ್ತಿದೆ. ಇದಕ್ಕೆ ಕಾರಣ ರಾಮಾಯಣದಲ್ಲಿ ಬರೋ ಪಾತ್ರಗಳ ವೇಷಭೂಷಣ ತಿರುಚಲಾಗಿದೆ ಎನ್ನುವುದು.  ಚಿತ್ರದಲ್ಲಿ  ಶ್ರೀರಾಮ,  ಹನುಮ ಸೇರಿದಂತೆ  ರಾವಣನ  ಪಾತ್ರಗಳನ್ನು ತಿರುಚಲಾಗಿದೆ. ರಾಮಾಯಣದಲ್ಲಿ ರಾಮನ ಚರಿತ್ರೆಯಲ್ಲಿ ಯಾವುದೇ ಆಡಂಬರವಿಲ್ಲ, ಆದರೆ ಆದಿಪುರುಷ್ ಚಿತ್ರದಲ್ಲಿ ರಾಮನ ಪಾತ್ರಧಾರಿ ಪ್ರಭಾಸ್ ಗೆ ಹುರಿ ಮೀಸೆ ,  ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಸೈಫ್ ಅಲಿಖಾನ್ ಗಡ್ಡಧಾರಿಯಾಗಿರುವುದು ಮತ್ತು  ಆಂಜನೇಯನಿಗೆ ಚರ್ಮದ ಬಟ್ಟೆಯನ್ನ ತೊಡಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅದಲ್ಲದೆ ಚಿತ್ರದ ಟೀಸರ್ (teaser) ಕುರಿತು ಮಧ್ಯಪ್ರದೇಶ ಗೃಹ ಸಚಿವರು ಗರಂ ಆಗಿದ್ದು, ಚಿತ್ರತಂಡಕ್ಕೆ ಕಾನೂನು ಸಂಕಷ್ಟ ಎದುರಾಗಿದೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ