Vastu Remedies: ಕೆಂಪುಚಂದನದ ಈ ಪರಿಹಾರಗಳು ಎಷ್ಟೆಲ್ಲ ಸಮಸ್ಯೆ ನೀಗಿಸುತ್ತವೆ ಗೊತ್ತಾ?

ರಕ್ತ ಚಂದನವನ್ನು ಬಹುತೇಕ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಬಳಸುತ್ತೇವೆ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ವಾಸ್ತು ದೋಷ ತೊಡೆದು ಹಾಕಲು, ಗ್ರಹ ದೋಷಗಳಿಂದ ಮುಕ್ತರಾಗಲು, ಬಯಕೆಗಳ ಈಡೇರಿಕೆಗೆ.. ಹೀಗೆ ರಕ್ತಚಂದನವನ್ನು ಬೇರೆ ಬೇರೆ ರೀತಿಯಲ್ಲಿ ಬಳಸುವುದರಿಂದ ಬೇರೆ ರೀತಿಯ ಲಾಭಗಳನ್ನು ಪಡೆಯಬಹುದು. 

These remedies of red sandalwood are very effective skr

ರಕ್ತ ಚಂದನ ಎಂದರೆ ಕೆಂಪು ಶ್ರೀಗಂಧ. ಶ್ರೀಗಂಧದಲ್ಲಿ ಮುಖ್ಯವಾಗಿ ಎರಡು ವಿಧ. ರಕ್ತ ಚಂದನ ಮತ್ತು ಬಿಳಿ ಶ್ರೀಗಂಧ. ಇದಲ್ಲದೆ, ಹಳದಿ ಚಂದನ, ಗೋಪಿ ಚಂದನ, ಬಿಳಿ ಚಂದನ, ಕೆಂಪು ಚಂದನ, ಗೋಮತಿ ಮತ್ತು ಗೋಕುಲ ಚಂದನ ಮುಂತಾದ ಶ್ರೀಗಂಧದ ವಿಧಗಳಿವೆ.  ಸಾಮಾನ್ಯವಾಗಿ ಪೂಜೆ ಎಂದರೆ ಚಂದನ ತೇಯುತ್ತೇವೆ. ಪೂಜೆಯಾದ ಮೇಲೆ ಹಣೆಗೆ ತಿಲಕ ಇಡುವುದರಿಂದ ದೇಹ ತಂಪಾಗುತ್ತದೆ ಎಂದು ನಂಬಲಾಗಿದೆ. ಔಷಧಿಗಳಲ್ಲೂ ಗಂಧವನ್ನು ಬಹಳ ರೀತಿಯಲ್ಲಿ ಬಳಸುತ್ತೇವೆ. ಇದೀಗ ಗಂಧವನ್ನು ನಮ್ಮ ಸಂತೋಷಕ್ಕಾಗಿ, ವಾಸ್ತು ದೋಷ ಪರಿಹಾರಕ್ಕಾಗಿ, ಶತ್ರುಗಳನ್ನು ಹಿಮ್ಮೆಟ್ಟಿಸಲು- ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಹೇಗೆಲ್ಲ ಬಳಸಿದರೆ ಪರಿಣಾಮಕಾರಿಯಾದ ಪರಿಹಾರ ಸಿಗಲಿದೆ ನೋಡೋಣ. 

ಎಲ್ಲ ದುಃಖಗಳನ್ನು ತೊಡೆದುಹಾಕಲು(To remove all sorrows)
ಕೆಂಪು ಚಂದನದ ಮಾಲೆ(red sandalwood garland)ಯನ್ನು ತಾಯಿ ಕಾಳಿಗೆ ಹಾಕಿ ಸಿದ್ಧ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಎಲ್ಲ ದುಃಖಗಳು ದೂರವಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆ.

ಸಂತೋಷ-ಸಮೃದ್ಧಿಗಾಗಿ(For happiness-prosperity)
ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು, ಶುಕ್ರವಾರದ ದಿನ ತಾಯಿ ಲಕ್ಷ್ಮಿಯನ್ನು ಪೂಜಿಸಿ ಮತ್ತು ಅವಳಿಗೆ ಕೆಂಪು ಚಂದನವನ್ನು ಹಚ್ಚಿ. ಇದರಿಂದ ಲಕ್ಷ್ಮೀ ಬೇಗ ಒಲಿಯುತ್ತಾಳೆ ಹಾಗೂ ನಿಮ್ಮ ಜೀವನದಲ್ಲಿ ಸಂತೋಷ ಸಮೃದ್ಧಿ ತುಂಬಿರುವಂತೆ ನೋಡಿಕೊಳ್ಳುತ್ತಾಳೆ. 

Holi 2022: ಹಿರಣ್ಯಕಶಿಪು ಹಾಗೂ ಪ್ರಹ್ಲಾದನ ಕತೆಗೂ ಹೋಳಿಗೂ ಸಂಬಂಧವುಂಟು!

ವ್ಯಾಪಾರ(business)ದಲ್ಲಿ ಪ್ರಗತಿ
ವ್ಯವಹಾರದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯಲು, ಪ್ರತಿ ಮಂಗಳವಾರ ಅಶ್ವತ್ಥ ಮರದ 11 ಎಲೆಗಳನ್ನು ತೆಗೆದುಕೊಂಡು ಅದರಲ್ಲಿ ಕೆಂಪು ಚಂದನದಿಂದ ರಾಮ-ರಾಮ ಎಂದು ಬರೆಯಿರಿ. ಈ ಎಲೆಗಳ ಹಾರವನ್ನು ಮಾಡಿ ಮತ್ತು ಆಂಜನೇಯ ದೇವಸ್ಥಾನ(Hanuman ji’s temple)ಕ್ಕೆ ಹೋಗಿ ದೇವರಿಗೆ ಅರ್ಪಿಸಿ. ಇದರೊಂದ ನಿಮ್ಮ ವ್ಯಾಪಾರವು ಈಗ ನಡೆಯುತ್ತಿರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಈ ಪರಿಹಾರವನ್ನು ಮಾಡುವಾಗ ಯಾರನ್ನೂ ನೋಡದಿರಲು ಪ್ರಯತ್ನಿಸಿ. ಮನಸ್ಸಲ್ಲಿ ಭಕ್ತಿ ತುಂಬಿರಲಿ. 

ವಾಸ್ತು ದೋಷಗಳನ್ನು ತೊಡೆದುಹಾಕಲು(Vastu remedies)
ಮನೆಯ ವಾಸ್ತು ದೋಷಗಳನ್ನು ತೊಡೆದುಹಾಕಲು, ಕರ್ಪೂರದಲ್ಲಿ ಕೆಂಪು ಚಂದನದ ಪುಡಿ, ಅಶ್ವಗಂಧ ಮತ್ತು ಗೋಖ್ರುಚೂರ್ಣವನ್ನು ಬೆರೆಸಿ ಮನೆಯಲ್ಲಿ ಹವನವನ್ನು 40 ದಿನಗಳವರೆಗೆ ನಿರಂತರವಾಗಿ ಮಾಡಿ. ಇದು ಮನೆಯ ಎಂಥದೇ  ದೊಡ್ಡ ದೋಷವನ್ನು ಸಹ ತೆಗೆದು ಹಾಕುತ್ತದೆ. ಇದು ಮನೆಯಲ್ಲಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸುತ್ತದೆ. 

ಶತ್ರುವನ್ನು ಸೋಲಿಸಲು(To defeat the enemy)
ಇದಕ್ಕಾಗಿ ಭೋಜ್ ಎಲೆಯ ಮೇಲೆ ಕೆಂಪು ಚಂದನದಿಂದ ಶತ್ರುವಿನ ಹೆಸರನ್ನು ಬರೆದು ಜೇನು ತುಪ್ಪದಲ್ಲಿ ಅದ್ದಿ. ಹೀಗೆ ಮಾಡುವುದರಿಂದ ಶತ್ರುವಿನ ಕಡೆಯಿಂದ ಬರುವ ಎಲ್ಲ ತೊಂದರೆಗಳು ದೂರವಾಗುತ್ತವೆ.

Weekly Horoscope: ಕಟಕಕ್ಕಿದೆ ಪ್ರೇಮ ಜೀವನಕ್ಕೆ ಜಿಗಿವ ಅವಕಾಶ, ಮೀನಕ್ಕೆ ವೃತ್ತಿ ಯಶ

ಬಹಳಷ್ಟು ಹಣ(money)ವನ್ನು ಗಳಿಸಲು
ಎಲ್ಲ ಪ್ರಯತ್ನಗಳ ನಂತರವೂ ನಿಮಗೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗದಿದ್ದರೆ ಅಥವಾ ನೀವು ಅಂದುಕೊಂಡ ಮಟ್ಟಕ್ಕೆ ಆದಾಯ ಸಿಗದಿದ್ದರೆ, ಮಂಗಳವಾರ ಕೆಂಪು ಚಂದನ, ಕೆಂಪು ಗುಲಾಬಿ ಹೂವುಗಳು, ಕೆಂಪು ಬಟ್ಟೆಗಳನ್ನು ಸೇರಿಸಿ ಗಂಟು ಕಟ್ಟಿ. ಈ ಗಂಟನ್ನು ಹಣವನ್ನು ಇರಿಸುವ ತಿಜೋರಿಯಲ್ಲಿ ಇರಿಸಿ. ಪ್ರತಿ 6 ತಿಂಗಳಿಗೊಮ್ಮೆ ಹೀಗೆ ಮಾಡುವುದರಿಂದ ಹಣದ ಒಳಹರಿವು ಹೆಚ್ಚಾಗುತ್ತದೆ.

ಯಶಸ್ಸ(success)ನ್ನು ಪಡೆಯಲು
ಕೆಂಪು ಚಂದನದ ತಿಲಕವು ವ್ಯಕ್ತಿಯ ಚೈತನ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ತರುತ್ತದೆ. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios