Vastu Tips: ಮನೆಯನ್ನು ಸದಾ ಸಂತೋಷವಾಗಿರಿಸುವುದು ಹೇಗೆ?
ಮನೆಯೊಂದು ಸಂತೋಷದಿಂದ ತುಂಬಿದೆ ಎಂದರೆ ಅಂಥ ಮನೆಗೆ ಕಾಲಿಟ್ಟ ಕೂಡಲೇ ಅದು ಅನುಭವಕ್ಕೆ ಸಿಗುತ್ತದೆ. ಆದರೆ, ಮನೆಯನ್ನು ಹೀಗೆ ಸಂತೋಷದಿಂದ ತುಂಬಿರಲು ಏನು ಮಾಡಬೇಕು?
ಯಾರದಾದರೂ ಮನೆಗೆ ಹೋದಾಗ ಕೂಡಲೇ ಅಲ್ಲಿನ ಎನರ್ಜಿ(energy) ಗಮನಕ್ಕೆ ಬರುತ್ತದೆ. ಕೆಲವರ ಮನೆಯಲ್ಲಿ ಕಾಲಿಟ್ಟಾಗ ಪಾಸಿಟಿವ್ ವೈಬ್ಸ್(Positive vibes) ತಾಕುತ್ತವೆ. ನಮ್ಮಲ್ಲೂ ಆ ಖುಷಿಯೊಂದು ತುಂಬಿ ನಗುನಗುತ್ತಾ ಕಾಲ ಕಳೆದು ಬರುತ್ತೇವೆ. ಮತ್ತೆ ಕೆಲ ಮನೆಗೆ ಹೋದರೆ, ಅದೇನೋ ಕಟ್ಟಿ ಹಾಕಿದ ಅನುಭವ. ಯಾಕಾದರೂ ಬಂದೆವೋ, ಎಷ್ಟೊತ್ತಿಗೆ ಹೊರಡುತ್ತೇವೋ ಅನಿಸುತ್ತದೆ. ಇದಕ್ಕೆ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ(negative energy) ತುಂಬಿರುವುದು ಕಾರಣ. ಈ ಎರಡೂ ಅನುಭವಗಳು ನಿಮಗೆ ಆಗಿರಬಹುದು. ಆದರೆ, ನಿಮ್ಮ ಮನೆ ಹೇಗಿದೆ? ಅಲ್ಲಿಗೆ ಹೊರಗಿನವರು ಕಾಲಿಟ್ಟಾಗ ಅವರ ಮನಸ್ಸಿಗೆ ಸಂತೋಷವಾಗುವುದೋ, ಕಿರಿಕಿರಿಯಾಗುವುದೋ ಎಂದು ಎಂದಾದರೂ ಯೋಚಿಸಿದ್ದೀರಾ?
ಮನೆಯೊಂದು ಸಂತಸದಿಂದ ತುಂಬಿದ್ದರೆ, ಆ ಮನೆಗೆ ಕಾಲಿಟ್ಟವರಿಗೂ ಆ ಸಂತಸ ಹರಡುತ್ತದೆ. ಮನೆಯು ಸಂತಸದಿಂದ ತುಂಬಿರಲು ಅಲ್ಲಿರುವ ಪ್ರತಿಯೊಬ್ಬರ ಮನಸ್ಥಿತಿಯೂ ಸಕಾರಾತ್ಮಕವಾಗಿರುವುದು ಮುಖ್ಯ. ಕಷ್ಟ ಎಲ್ಲರ ಬಾಳಿನಲ್ಲೂ ಇರುತ್ತದೆ. ಆದರೂ, ಕೆಲವರು ಅವೆಲ್ಲ ಮರೆತು ಸಂತೋಷದಿಂದಿರುತ್ತಾರೆ. ಅಂದರೆ, ಸಂತಸ ಎಂಬುದು ಮನಸ್ಥಿತಿಯಾಗಿದೆ. ವಾಸ್ತುವಿನ ಪ್ರಕಾರ, ಈ ಮನಸ್ಥಿತಿ ಗಳಿಸಲು ಸಕಾರಾತ್ಮಕ ಶಕ್ತಿ ಮನೆಯೊಳಗೆ ತುಂಬಿರುವುದು ಅಗತ್ಯ. ಹಾಗೆ ಸಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ತುಂಬಿಸಲು ಈ ಕೆಳಗೆ ಹೇಳಿರುವ ವಾಸ್ತು(vastu) ಸಲಹೆಗಳನ್ನು ಅನುಸರಿಸಿ ನೋಡಿ.
ಬಣ್ಣಗಳು(colours)
ಒಳಾಂಗಣ ಅಲಂಕಾರಕ್ಕೆ ನಮ್ಮ ಮೂಡನ್ನು ನಿಯಂತ್ರಿಸುವ ಶಕ್ತಿ ಇರುತ್ತದೆ. ಮನೆಯ ಗೋಡೆಗಳಿಗೆ ಚಿಯರ್‌ಫುಲ್ಲಾದ ಬಣ್ಣಗಳು ಎಂದರೆ ಚಿನ್ನಲೇಪಿತ ಹಳದಿ, ಆರೇಂಜ್‌ನಂಥ ಬಣ್ಣಗಳನ್ನು ಬಳಸಿದರೆ ಅವು ನಮ್ಮಲ್ಲಿ ಸೆರಟೋನಿನ್(Seratonin)- ಎಂದರೆ ಸಂತೋಷದ ಹಾರ್ಮೋನ್(happy hormone) ಬಿಡುಗಡೆ ಮಾಡುವ ಶಕ್ತಿ ಹೊಂದಿವೆ. ಸೂರ್ಯನ ಬಣ್ಣಗಳೆಲ್ಲವನ್ನೂ ಮನೆಯ ಗೋಡೆಗೆ ಬಳಸಬಹುದು. ಇವುಗಳು ಮೂಡ್ ಉತ್ತಮಪಡಿಸುತ್ತವೆ.
ಸಂತೋಷದ ನೆನಪುಗಳು(happy memories)
ಮನೆಯ ಗೋಡೆಯಲ್ಲಿ ನೀವು ಪ್ರೀತಿಸುವವರು ಸಂತೋಷವಾಗಿರುವ ಫೋಟೋಗಳು, ಅವರೊಂದಿಗೆ ಕಳೆದ ಕ್ಷಣಗಳು, ತಮಾಷೆಯ ಕ್ಷಣಗಳ ಫೋಟೋಗಳನ್ನು, ಸಂಬಂಧಿಸಿದ ವಸ್ತುಗಳನ್ನು ಅಲಂಕಾರಿಕವಾಗಿ ಹಾಕಿದರೆ ಅವನ್ನು ನೋಡುವಾಗೆಲ್ಲ ಮನಸ್ಸಿನಲ್ಲಿ ಸಂತಸ ಉಕ್ಕುವುದು.
ಮಿತಿ ಮೀರೋಷ್ಟು Romantic ಈ ರಾಶಿಯ ಹುಡುಗೀರು, ಕಟ್ಟಿಕೊಳ್ಳೋನೇ ಪುಣ್ಯವಂತ!
ಹೊರಾಂಗಣ ಒಳತನ್ನಿ!
ಹೊರಾಂಗಣದಲ್ಲಿರುವ ಹಸಿರನ್ನು ಮನೆಯೊಳಗೆ ತನ್ನಿ. ಮನೆಯೊಳಗೆ ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಿ. ಇವು ಮನೆಯನ್ನು ಹೆಚ್ಚು ಜೀವಂತಿಕೆಯಿಂದಿರಿಸುತ್ತವೆ. ಎಲ್ಲ ಕೋಣೆಗಳಲ್ಲೂ ಹಸಿರಾದ ಗಿಡಗಳು ನಳನಳಿಸುತ್ತಿರಬೇಕು.
ವಿನ್ಯಾಸಗಳು(patterns)
ಚಲನಶೀಲತೆಯಲ್ಲಿವೆಯೇನೋ ಎಂಬ ಭ್ರಮೆ ಹುಟ್ಟಿಸುವಂಥ ವಿನ್ಯಾಸಗಳನ್ನು ಗೋಡೆಗೆ ಬಳಸುವುದು ಮತ್ತೊಂದು ಮೂಡ್ ಉತ್ತಮಪಡಿಸುವ ವಿಧಾನ. ಗ್ರಾಫಿಕ್ ವಿನ್ಯಾಸಗಳು, ಪ್ರಾಣಿ ದೇಹದ ಮೇಲಿನ ವಿನ್ಯಾಸಗಳನ್ನು ಗೋಡೆಗೆ ಬಳಸಬಹುದು. ಇವನ್ನು ನಿಮ್ಮ ಕುಶನ್‌ಗಳು, ಕರ್ಟೇನ್‌ಗಳು, ರಗ್ಸ್, ಪೀಠೋಪಕರಣಗಳಲ್ಲಿಯೂ ಬಳಸಬಹುದು.
ಈ ಐದು ರಾಶಿಗಿದೆ ಈ ವರ್ಷ ಕನಸಿನ ಮನೆ ಕೊಳ್ಳೋ ಯೋಗ
ಗೋ ಬೋಲ್ಡ್
ನಿಮ್ಮ ಕೋಣೆಗೆ ದೊಡ್ಡದಾದ ಕಲೆಯ ಕುಸುರಿಯನ್ನು ನೇತು ಹಾಕಿ. ವರ್ಣರಂಜಿತ ರಗ್ ಬಳಸಿ. ಬಹಳ ಕ್ರಿಯೇಟಿವ್ ಎನಿಸುವಂಥ ಆರ್ಟ್ ಪೀಸನ್ನು ಕಣ್ಣೆದುರು ಕಾಣುವಂತೆ ಇರಿಸಿ.
ಕಿಟಕಿಗಳು(windows)
ಮನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಿಟಕಿಗಳನ್ನು ಬಳಸಿ. ಸಾಧ್ಯವಾದಲ್ಲಿ ಪೂರ್ತಿ ಗೋಡೆಯೊಂದನ್ನು ಕಿಟಕಿಯಂತೆ ಬಳಸಲು ಪ್ರಯತ್ನಿಸಿ. ಈ ಕಿಟಕಿಗಳ ಕಂಬಿಗಳಲ್ಲಿ ಆಟವಾಡಿ. ಅಂದರೆ ಅವು ಕೂಡಾ ಅಲೆಗಳಂತೆ ಹರಿಯುವ ವಿನ್ಯಾಸದಲ್ಲಿರುವುದೋ ಇಲ್ಲವೇ ವಿಶೇಷವಾಗಿರುವಂತೆ ನೋಡಿಕೊಳ್ಳಿ. ಕೇವಲ ಗಾಜಿನ ಕಿಟಕಿಯಾದರೂ ಅದರ ಮೇಲೆ ಡ್ರೀಮ್ ಕ್ಯಾಚರ್ ಹಾಕಿ.
ಸಾಕುಪ್ರಾಣಿಗಳು(pets)
ಚಿಕ್ಕ ಮಕ್ಕಳಿರುವ ಮನೆ ಹೆಚ್ಚು ಜೀವಂತಿಕೆಯಿಂದ ಕೂಡಿರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಮಕ್ಕಳಿಲ್ಲವೆಂದರೆ ಪ್ರಾಣಿಗಳನ್ನು ಸಾಕಿ, ವಿಶೇಷವಾಗಿ ನಾಯಿ ಮರಿಗಳು ಮನೆಯ ಸಂತೋಷವನ್ನು ಇಮ್ಮಡಿಗೊಳಿಸುತ್ತವೆ. ಅವುಗಳ ಚಲನವಲನವೇ ಮನಸ್ಸನ್ನು ಚೇತೋಹಾರಿಯಾಗಿರಿಸುತ್ತದೆ.