Vastu Tips: ಈ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅದೃಷ್ಟ ಕುಲಾಯಿಸಲಿದೆ..

ಜೀವನದಲ್ಲಿ ಅದೃಷ್ಟವನ್ನು ಹೊಂದಲು ಹಲವು ಮಾರ್ಗಗಳಿದ್ದು, ವಾಸ್ತು ಶಾಸ್ತ್ರದ ಅನುಸಾರ ಕೆಲವು ನಿಯಮಗಳನ್ನು ಪಾಲಿಸಿದರೆ ಆರ್ಥಿಕ ಸ್ಥಿತಿ ಸಹ ಉತ್ತಮವಾಗಿರುವುದಲ್ಲದೆ, ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂತೋಷ ನಿಮ್ಮದಾಗುತ್ತದೆ. ಹೀಗಾಗಿ ಮನೆಯಲ್ಲಿ ಕೆಲವು ವಿಗ್ರಹಗಳನ್ನು ಇಟ್ಟುಕೊಂಡರೆ ನಿಮಗೆ ಯಾವ ರೀತಿ ಲಾಭ ಎಂಬ ಬಗ್ಗೆ ನೋಡೋಣ...

Bring home luck by keeping these idols

ಪ್ರತಿಯೊಬ್ಬರಿಗೂ ಜೀವನದಲ್ಲಿ (Life) ಏನನ್ನಾದರೂ ಸಾಧಿಸಬೇಕು ಎಂಬುದು ಇದ್ದೇ ಇರುತ್ತದೆ. ಜೊತೆಗೆ ಈ ನಿಟ್ಟಿನಲ್ಲಿ ಪರಿಶ್ರಮವನ್ನೂ (Perseverance) ಹಾಕುತ್ತಿರುತ್ತಾರೆ. ಆದರೆ, ಎಷ್ಟೇ ಪ್ರಯತ್ನ ಪಟ್ಟರೂ ಅದೃಷ್ಟ (Luck) ಮಾತ್ರ ಕೈಗೂಡುವುದಿಲ್ಲ. ಇದಕ್ಕಾಗಿ ಪೂಜೆ, ಪುನಸ್ಕಾರಗಳನ್ನೂ ಸಹ ಮಾಡಿರುತ್ತಾರೆ. ಆದರೂ ಅಷ್ಟಾಗಿ ಸರಿಯಾಗುತ್ತಿರುವುದಿಲ್ಲ. ಇಂಥ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ (Vastu Shatra) ಪರಿಹಾರಗಳು ಇವೆ. ಜೀವನದಲ್ಲಿ ಅದೃಷ್ಟವನ್ನು ಹೆಚ್ಚಿಸಿಕೊಳ್ಳಲು ಕೈಗೊಂಡ ಯೋಜನೆಗಳು ಫಲಿಸಲು ಹಲವು ಮಾರ್ಗಗಳಿದ್ದು, ಅವುಗಳ ಅಳವಡಿಸಿಕೊಳ್ಳಬೇಕಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಶಾಂತಿ (Peace) ಮತ್ತು ಸಂತೋಷವೂ (Happy) ಲಭ್ಯವಾಗುತ್ತವೆ. ಆದರೆ, ಕೆಲವು ವಸ್ತುಗಳು ಮನೆಯಲ್ಲಿದ್ದರೆ ಪ್ರಯೋಜನಕ್ಕಿಂತ ಕಷ್ಟವೇ ಸರಿ. ಇನ್ನು ಕೆಲವು ವಸ್ತುಗಳು ಅದೃಷ್ಟ, ನೆಮ್ಮದಿಯನ್ನು ತಂದುಕೊಡಲಿದೆ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ಮೂರ್ತಿಗಳನ್ನು ಇಟ್ಟುಕೊಂಡರೆ ಅದೃಷ್ಟ ನಿಮ್ಮದಾಗಲಿದೆ. ಹಾಗಾದರೆ ಅವು ಯಾವುವು ಎಂಬ ಬಗ್ಗೆ ನೋಡೋಣವೇ..?

ಗಿಳಿಯ ಪ್ರತಿಮೆ (Parrot idols)
ಗಿಳಿಯ ಪ್ರತಿಮೆಯನ್ನು ಇಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷವು ನೆಲೆಸಲಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಜೊತೆಗೆ ಇದರಿಂದ ನಿಮ್ಮ ಪ್ರತಿ ಕಾರ್ಯದಲ್ಲಿಯೂ ಅದೃಷ್ಟವು ಹೆಚ್ಚಲಿದೆ. ಇನ್ನು ಅಧ್ಯಯನ ಕೊಠಡಿಯಲ್ಲಿ (Reading Room) ಗಿಳಿ ಪ್ರತಿಮೆಯನ್ನು ಇಡಬೇಕು. ಹೀಗೆ ಮಾಡುವುದರಿಂದ ಅಭ್ಯಾಸದಲ್ಲಿ (Study) ಏಕಾಗ್ರತೆ (Concentration) ಹೆಚ್ಚುತ್ತದೆ. ಇದರ ಜೊತೆಗೆ ಅಧ್ಯಯನಗಳಲ್ಲಿ ಯಶಸ್ಸನ್ನು ಕಾಣಬಹುದಾಗಿದೆ. ಹೀಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ಇದು ಬಹಳ ಉಪಕಾರಿಯಾಗಿದೆ. ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನು ಸರಿಯಾಗಿ ಅನುಸರಿಸಿದಲ್ಲಿ ಲಾಭಗಳು (Profit) ಹೆಚ್ಚಾಗುತ್ತಾ ಹೋಗುತ್ತದೆ. 

ಆನೆ ಪ್ರತಿಮೆ (Elephant idols) 
ಮನೆಯಲ್ಲಿ ಆನೆ ಪ್ರತಿಮೆಯನ್ನಿಟ್ಟುಕೊಳ್ಳುವುದು ಕೂಡ ಬಹಳ ಶುಭವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆನೆಯನ್ನು ಐಶ್ವರ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಬೆಳ್ಳಿ (Silver) ಅಥವಾ ಹಿತ್ತಾಳೆಯಿಂದ (Brass) ಮಾಡಿದ ಆನೆ ಪ್ರತಿಮೆಯನ್ನು ಇಡುವುರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ. ಅಲ್ಲದೆ, ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಅಲ್ಲದೆ, ಸಂಪತ್ತು, ಸಮೃದ್ಧಿ ಹೆಚ್ಚುತ್ತದೆ.

ಇದನ್ನು ಓದಿ: Samudrika Shastra: ಲವ್, ಸೆಕ್ಸ್, ಹೆಲ್ತ್‌‌‌ನ ಮಚ್ಚೆ ಭವಿಷ್ಯ.. ನಿಮಗೆಲ್ಲಿದೆ?

ಆಮೆ ವಿಗ್ರಹ (Turtle idols)
ವಾಸ್ತು ಶಾಸ್ತ್ರದ ಪ್ರಕಾರ ಆಮೆಯು ಧನಾತ್ಮಕ ಶಕ್ತಿಯ (Positive Energy) ಸಂಕೇತವಾಗಿದ್ದು, ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಆಮೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಜೀವನದಲ್ಲಿ ಸಂತೋಷ, ಸಮೃದ್ಧಿಯು (Wealth) ಹೆಚ್ಚುವುದಲ್ಲದೆ, ಸದಾ ನಿಮಗೆ ನೆಮ್ಮದಿ ಲಭ್ಯವಾಗುತ್ತದೆ. ಮನೆಯ ಉತ್ತರ (North Derection)) ಭಾಗದಲ್ಲಿ ಲೋಹದ ಆಮೆಯನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಅದೃಷ್ಟವು ಹೆಚ್ಚಾಗುವುದರ ಜೊತೆಗೆ ನೀವು ಕೈಹಾಕಿದ ಕ್ಷೇತ್ರದಲ್ಲಿ ಯಶಸ್ಸು (Success) ಲಭ್ಯವಾಗುತ್ತದೆ.  

ಮೀನಿನ ಪ್ರತಿಮೆ (Fish idols)
ವಾಸ್ತುಶಾಸ್ತ್ರದ ಅನುಸಾರ ಮೀನು ಶುಭಕಾರಕವಾಗಿದೆ. ಅಲ್ಲದೆ, ಇದು ಉತ್ತಮ ಆರೋಗ್ಯ (Health), ಸುಖ, ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವೂ ಆಗಿದೆ. ಮನೆಯ ಈಶಾನ್ಯ ಭಾಗದಲ್ಲಿ (Northeast Direction) ಅಥವಾ ಪೂರ್ವ ಭಾಗದಲ್ಲಿ (East Side) ಹಿತ್ತಾಳೆ ಅಥವಾ ಬೆಳ್ಳಿಯಿಂದ ಮಾಡಿದ ಮೀನಿನ ಪ್ರತಿಮೆಗಳನ್ನು ಇಟ್ಟುಕೊಂಡರೆ ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುವುದಲ್ಲದೆ, ಆರ್ಥಿಕ ಸ್ಥಿತಿ (Economic Status) ಸಹ ವೃದ್ಧಿಸುತ್ತದೆ. 

ಇದನ್ನು ಓದಿ: Astrology Tips: ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಮಹಿಳೆಯರೇನು ಮಾಡಬೇಕು?

ಕುದುರೆ ಪ್ರತಿಮೆ (Horse idols)
ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಕುದುರೆ ಪ್ರತಿಮೆಯನ್ನಿಟ್ಟುಕೊಂಡರೆ ಶುಭ ಫಲ ದೊರೆಯುತ್ತದೆ. ಹೀಗೆ ಮಾಡುವುದರಿಂದ ಸೌಭಾಗ್ಯವು ಹೆಚ್ಚುವುದರ ಜೊತೆಗೆ ಸುಖ – ಸಮೃದ್ಧಿಯುಂಟಾಗುತ್ತದೆ. ಓಡುವ ಕುದುರೆಗಳು ಯಶಸ್ಸಿನ ವೇಗ ಮತ್ತು ಶಕ್ತಿಯ ಸಂಕೇತಗಳಾಗಿವೆ. ಮನೆಯಲ್ಲಿ ಕುದುರೆ ಪ್ರತಿಮೆ ಹೊಂದುವುದರಿಂದ ದಾಂಪತ್ಯದಲ್ಲಿ ಪ್ರೀತಿ (Love) ಹೆಚ್ಚುತ್ತದೆ. ಮನೆಯಲ್ಲಿ ಶಾಂತಿ, ನೆಮ್ಮದಿಯನ್ನು ಕಾಪಾಡುತ್ತದೆ.

Latest Videos
Follow Us:
Download App:
  • android
  • ios