Asianet Suvarna News Asianet Suvarna News

Samudrika Shastra: ಲವ್, ಸೆಕ್ಸ್, ಹೆಲ್ತ್‌‌‌ನ ಮಚ್ಚೆ ಭವಿಷ್ಯ.. ನಿಮಗೆಲ್ಲಿದೆ?

ಸಾಮುದ್ರಿಕಾ ಶಾಸ್ತ್ರವು ಉಲ್ಲೇಖಿಸುವಂತೆ ವ್ಯಕ್ತಿಯ ಶರೀರದ (Body) ಮೇಲಿರುವ ಮಚ್ಚೆಯು ಅದೃಷ್ಟ ಮತ್ತು ದುರಾದೃಷ್ಟವನ್ನು (Bad Luck) ತಿಳಿಸುವ ಸೂಚಕಗಳಾಗಿವೆ. ಶರೀರದ ಯಾವ ಭಾಗದಲ್ಲಿರುವ ಮಚ್ಚೆ ಯಾವ ರೀತಿಯ ಪ್ರಭಾವ ಬೀರುತ್ತದೆ, ಯಾವ ಭಾಗದಲ್ಲಿರುವ ಮಚ್ಚೆ ಅದೃಷ್ಟವನ್ನು ತರುತ್ತದೆ ಎಂಬುದನ್ನು ತಿಳಿಯೋಣ... 

These Moles on body bring luck
Author
Bangalore, First Published Jan 10, 2022, 9:36 AM IST

ದೇಹದಲ್ಲಿರುವ ಕೆಲವು ಕಲೆಗಳು, ಚಿಹ್ನೆಗಳಿಂದ ಸಹ ಭವಿಷ್ಯವನ್ನು ತಿಳಿಯಬಹುದು. ಹಸ್ತ ರೇಖೆಗಳಿಂದ, ಕೈ (Hand), ಕಾಲು (Leg), ಬೆರಳು (Finger), ಪಾದ (Foot) ಹೀಗೆ ದೇಹದ ಅನೇಕ ಅಂಗಗಳು ವ್ಯಕ್ತಿಗೆ ಹೇಗೆ ಅದೃಷ್ಟವನ್ನು (Luck) ತಂದುಕೊಡಲಿದೆ ಎಂಬ ಬಗ್ಗೆ ತಿಳಿಯಬಹುದಾಗಿದೆ. ಪುರುಷನಿರಲಿ (Man) ಇಲ್ಲವೇ ಮಹಿಳೆಯರೇ (Woman) ಇರಲಿ ಅವರಿಗೆ ದೇಹದ ಯಾವ ಭಾಗದಲ್ಲಿ ಮಚ್ಚೆಗಳಿದ್ದರೆ (Moles) ಆಯಾ ವ್ಯಕ್ತಿಗಳ ಅದೃಷ್ಟ ಹೇಗೆ ಎಂದು ತಿಳಿದುಕೊಳ್ಳಬಹುದು.

ಹಣೆಯಲ್ಲಿರುವ (Forehead) ಮಚ್ಚೆ
ಹಣೆಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಅಂಥವರಿಗೆ ಅದೃಷ್ಟ ದೇವತೆ ಮತ್ತು ಲಕ್ಷ್ಮೀದೇವಿಯ (Goddess) ಆಶೀರ್ವಾದವೂ (Blessings) ಸದಾ ಇರುತ್ತದೆ. ಅಷ್ಟೇ ಅಲ್ಲದೇ ಅಂಥವರು ತುಂಬಾ ಅದೃಷ್ಟವಂತರು. ಇವರು ಮಾಡುವ ಎಲ್ಲ ಕೆಲಸಗಳಿಗೂ ಅದೃಷ್ಟ ಜೊತೆಗಿರುತ್ತದೆ. ಈ ವ್ಯಕ್ತಿಗಳು ಕಾಲಿಟ್ಟ ಕಡೆಗಳಲ್ಲೆಲ್ಲಾ ಯಶಸ್ಸನ್ನು ಕಾಣುತ್ತಾರೆ. ಹಣೆಯ ಬಲ ಅಥವಾ ಎಡಭಾಗದಲ್ಲಿರುವ ಮಚ್ಚೆ ಧನ ಸಮೃದ್ಧಿಯ ಸಂಕೇತವಾಗಿರುತ್ತದೆ. ಇಂಥ ವ್ಯಕ್ತಿಗಳು ಹೆಚ್ಚು ಹಣವನ್ನು (Money) ಸಂಪಾದಿಸುತ್ತಾರೆ. ಐಷಾರಾಮಿ ಜೀವನವನ್ನು ನಡೆಸುವ ಸಲುವಾಗಿ ಹಣವ್ಯಯಿಸುವ ಈ ವ್ಯಕ್ತಿಗಳ ಬಳಿ ದುಡ್ಡು ನಿಲ್ಲುವುದಿಲ್ಲ.

ಹುಬ್ಬಲ್ಲಿ (Eye Brow) ಮಚ್ಚೆ ಇದ್ದರೆ
ಹುಬ್ಬುಗಳು ವ್ಯಕ್ತಿಯ ಅಂದವನ್ನು ಹೆಚ್ಚಿಸುತ್ತವೆ. ಅದೇ ಹುಬ್ಬಿನಲ್ಲಿ ಮಚ್ಚೆ ಇದ್ದರೆ ಭಾರಿ ಅದೃಷ್ಟವಿದೆ. ಹುಬ್ಬುಗಳ ಮಧ್ಯೆ ಮಚ್ಚೆ ಇದ್ದರೆ ನಾಯಕತ್ವದ (Leadership) ಗುಣವಿದೆ ಎಂದರ್ಥ. ಹೀಗಿದ್ದವರಿಗೆ ಖ್ಯಾತಿ ಸಿಗುವುದಲ್ಲದೆ, ಆರ್ಥಿಕ ಸಮೃದ್ಧಿಯಾಗಲಿದೆ. ಹುಬ್ಬಿನ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಹೇಡಿಗಳಾಗುವ ಸಾಧ್ಯತೆ ಹೆಚ್ಚಿದೆಯಂತೆ. ವ್ಯವಹಾರದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಹುಬ್ಬಿನ ಬಲಭಾಗದಲ್ಲಿದ್ದರೆ ಸಂತೋಷ ಲಭ್ಯವಾಗುತ್ತದೆ. ವೈವಾಹಿಕ ಜೀವನವೂ ಸುಖಮಯವಾಗಿದ್ದು, ಆರೋಗ್ಯವಂತ ಮಕ್ಕಳು (Health Baby) ಜನಿಸುತ್ತಾರೆ. 

ಇದನ್ನು ಓದಿ: Personality Traits: ಈ 4 ರಾಶಿಯವರು ತುಂಬಾ ಎಮೋಷನಲ್ ..!

ತುಟಿಯಲ್ಲಿದ್ದರೆ (Lip)
ಕೆಳಗಿನ ತುಟಿಯಲ್ಲಿ ಮಚ್ಚೆ ಇದ್ದರೆ ಅಂಥವರು ಆಹಾರಪ್ರಿಯರು (Foodie). ತುಟಿಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಶುಭವೆನ್ನಲಾಗಿದೆ. ಇಂಥವರ ವೈವಾಹಿಕ ಜೀವನದಲ್ಲಿ (Marriage Life) ಕೆಲ ಕಷ್ಟಗಳು ಎದುರಾಗಲಿದೆ. ಅದೇ ತುಟಿಯ ಮೇಲೆ ಅದರಲ್ಲೂ ಬಲಭಾಗದಲ್ಲಿ ಮಚ್ಚೆ ಇದ್ದರೆ ಅಂಥವರ ದಾಂಪತ್ಯ ಜೀವನ ಸುಖವಾಗಿರುತ್ತದೆ. ಇವರ ಲೈಂಗಿಕ ಜೀವನವೂ ತೃಪ್ತಿದಾಯಕ ಎಂದು ಹೇಳಲಾಗುತ್ತದೆ. ಈ ಸ್ಥಾನದಲ್ಲಿರುವ ಮಚ್ಚೆ ವೈವಾಹಿಕ ಜೀವನದಲ್ಲಿ ಒಬ್ಬನ್ನೊಬ್ಬರು ಅರ್ಥಮಾಡಿಕೊಂಡು ಸುಖದಿಂದ ಸಂಸಾರ ನಡೆಸುವ ಸಂಕೇತವನ್ನು ತಿಳಿಸುತ್ತದೆ. 

ನಾಲಿಗೆಯ (Tongue) ಮೇಲಿದ್ದರೆ?
ನಾಲಿಗೆಯ ತುದಿಯಲ್ಲಿ  ಮಚ್ಚೆ ಇದ್ದರೆ ಕೌಶಲ್ಯ ಹೊಂದಿದವರಾಗಿರುತ್ತಾರೆ. ಅದೇ ನಾಲಿಗೆಯ ಮೇಲಿದ್ದರೆ ಶೈಕ್ಷಣಿಕ (Education) ಪ್ರಗತಿಗೆ ತೊಡಕಾಗುತ್ತದೆ. ಅಲ್ಲದೆ, ಮಾತಿಗೆ ಸಂಬಂಧಿಸಿದ ದೋಷ ಉಂಟಾಗುವ ಸಂಕೇತವಾಗಿದೆ.

ಗಲ್ಲದ (cheek) ಮಚ್ಚೆ
ಗಲ್ಲದ ಎಡಭಾಗದಲ್ಲಿ ಮಚ್ಚೆ ಇದ್ದರೆ ಪ್ರಾಮಾಣಿಕರಾಗಿರುತ್ತಾರೆ (Honest). ಅದೇ ಗಲ್ಲದ ಮೇಲಿದ್ದರೆ ಯಾತ್ರಾಪ್ರಿಯರು. ಇವರು ಸದಾ ಸುತ್ತಾಡುವ ಮನೋಭಾವವನ್ನು ಹೊಂದಿರುತ್ತಾರೆ. ಇನ್ನು ಮಚ್ಚೆಯು ಬಲಭಾಗದಲ್ಲಿದ್ದರೆ ತಾರ್ಕಿಕ ಭಾವನೆಯನ್ನು ಹೊಂದಿರುತ್ತಾರೆ. ಇವರಿಗೆ ಲೈಂಗಿಕತೆ ಬಗ್ಗೆ ಬಹಳ ಆಸಕ್ತಿ ಇದೆಯಂತೆ.

ಕಣ್ಣು, ಕಿವಿಯಲ್ಲಿನ ಮಚ್ಚೆ (Eye, Ear)
ಎಡಗಣ್ಣಿನಲ್ಲಿ ಮಚ್ಚೆ ಇದ್ದರೆ ನಿರಾಶಾವಾದಿಗಳಾಗಿರುತ್ತಾರೆ. ಅದೇ ಬಲಗಣ್ಣಿನಲ್ಲಿ ಮಚ್ಚೆ ಇದ್ದರೆ ಪ್ರಾಮಾಣಿಕರಾಗಿರುವುದಲ್ಲದೆ, ಹೆಚ್ಚು ಪರಿಶ್ರಮಿಗಳಾಗಿರುತ್ತಾರೆ. ಇಂಥವರು ವಿಶ್ವಾಸಕ್ಕೂ (Trust) ಅರ್ಹರಾಗಿರುತ್ತಾರೆ. ಇನ್ನೊಂದು ಖುಷಿಯ (Happy) ಸಂಗತಿಯೆಂದರೆ ಕಿವಿಯ ಯಾವುದೇ ಭಾಗದಲ್ಲಿರುವ ಮಚ್ಚೆಯು ಐಷಾರಾಮಿ ಜೀವನವನ್ನು ಸೂಚಿಸುತ್ತದೆ.

ಎದೆ (Chest) ಭಾಗದಲ್ಲಿದ್ದರೆ 
ಎದೆಯ ಎಡಭಾಗದಲ್ಲಿ ಮಚ್ಚೆ ಇದ್ದವರು ಕಾಮಾಸಕ್ತಿಯನ್ನು ಹೆಚ್ಚು ಹೊಂದಿರುತ್ತಾರೆ. ಆದರೆ, ಇವರಿಗೆ ಹೃದಯದ ರೋಗಗಳು (Heart) ಬಾಧಿಸುವ ಸಾಧ್ಯತೆ ಇದೆ. ಇಂಥವರ ವಿವಾಹದಲ್ಲೂ ವಿಳಂಬವಾಗಲಿದೆ. ಅದೇ ಎದೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ ಆರ್ಥಿಕವಾಗಿ ಸ್ಥಿತಿವಂತರಾಗಿರುತ್ತಾರೆ.

ಇದನ್ನು ಓದಿ: Vastu Tips: ದಕ್ಷಿಣ ದಿಕ್ಕಿನ ಗುಡ್ ಲಕ್, ನೀವೂ ಟ್ರೈ ಮಾಡಿ

ಹೊಕ್ಕುಳಲ್ಲಿ (Navel)
ಮಹಿಳೆಯ ಹೊಕ್ಕಳಿನ ಸುತ್ತ ಮಚ್ಚೆ ಇದ್ದರೆ ವೈವಾಹಿಕ ಜೀವನದಲ್ಲಿ ಸುಖ-ಸಂತೋಷ ಇರುವುದರ ಸಂಕೇತವಾಗಿದೆ. ಇವರ ಸೆಕ್ಸ್ ಲೈಫ್ ಕೂಡಾ ತುಂಬಾ ಚೆನ್ನಾಗಿರಲಿದೆ. ಅಲ್ಲದೆ, ಉತ್ತಮ ಸಂತಾನವನ್ನು ಸಹ ಸೂಚಿಸುತ್ತದೆ. ಪುರುಷನ ಹೊಕ್ಕುಳಿನ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಕೀರ್ತಿಯನ್ನು ಪಡೆಯುತ್ತಾರೆ.

ಕುತ್ತಿಗೆ (Neck)
ಕುತ್ತಿಗೆಯ ಮುಂಭಾಗದಲ್ಲಿ ಮಚ್ಚೆ ಇದ್ದರೆ ಉತ್ತಮ ಧ್ವನಿ (Voice) ಮತ್ತು ಕಲಾತ್ಮಕತೆಯನ್ನು (Art) ಹೊಂದಿರುತ್ತಾರೆ. ಅಲ್ಲದೆ,  ಅದೃಷ್ಟವಂತರಾಗಿರುತ್ತಾರೆ. ಅದೇ ಹಿಂಭಾಗದಲ್ಲಿ ಮಚ್ಚೆ ಇದ್ದರೆ ಆಕ್ರಮಣಕಾರಿ ಮನೋಭಾವದವರಾಗಿರುತ್ತಾರೆ.

Follow Us:
Download App:
  • android
  • ios