Asianet Suvarna News Asianet Suvarna News

Astrology Tips: ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಮಹಿಳೆಯರೇನು ಮಾಡಬೇಕು?

ಗಂಡ, ಹೆಂಡತಿಯರ ಬಾಳು ಸುಮಧುರವಾಗಿರಬೇಕು. ಆಗಾಗ ರೊಮ್ಯಾನ್ಸ್ ಇರಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಕೆಲವರು ಜಗಳದಲ್ಲೇ ಜೀವನ ಕಳೆಯುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಅನುಸಾರ ಕೆಲವು ಕ್ರಮಗಳನ್ನು ಅನುಸರಿಸಿದರೆ ಜೀವನದಲ್ಲಿ ರೊಮ್ಯಾನ್ಸ್ ಹೆಚ್ಚಲಿದೆ. ಹಾಗಾದರೆ ಇದಕ್ಕಾಗಿ ಮಹಿಳೆಯರು ಏನು ಮಾಡಬೇಕು ಎಂಬ ಬಗ್ಗೆ ನೋಡೋಣ ಬನ್ನಿ...

Tips for women for a dreamy romantic life
Author
Bangalore, First Published Jan 11, 2022, 9:22 AM IST
  • Facebook
  • Twitter
  • Whatsapp

ಗಂಡ – ಹೆಂಡತಿ (Husband – Wife) ಜಗಳ (Fight) ಉಂಡು ಮಲಗೋ ತನಕ ಅನ್ನೋ ಗಾದೆ ಇದೆ. ಆದರೆ, ಕೆಲವು ಸಂದರ್ಭಗಳಲ್ಲಿ, ಸನ್ನಿವೇಶಗಳಲ್ಲಿ ಉಂಡರೂ ಮುಗಿಯದು, ಮಲಗಿದರೂ (Sleep) ಮುಗಿಯದು. ಜಗಳ ನಿರಂತರ, ವಿರಸದಿಂದ ಹೆಚ್ಚಿದ ಅಂತರ ಎನ್ನುವಂತಾಗುತ್ತದೆ. ಇದರ ಮಧ್ಯೆ ಸರಸವನ್ನು ಕೇಳಲೇಬೇಡಿ. ಹೀಗಾದರೆ ರೊಮ್ಯಾಂಟಿಕ್ (Romantic) ಸಂಬಂಧ (Relationship), ಪ್ರೀತಿ (Love), ಪ್ರಣಯಗಳ ಕಥೆ ಏನು..? ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಉಪಾಯಗಳಿವೆ. ಇದರ ಅನುಸಾರ ಮನೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ರೊಮ್ಯಾಂಟಿಕ್ ಲೈಫ್ ನಿಮ್ಮದಾಗುತ್ತದೆ. ಆದರೆ, ಇಲ್ಲೊಂದು ಗುಟ್ಟಿದೆ. ಈ ಕ್ರಮವನ್ನು ಮಹಿಳೆಯರು (Women) ಪಾಲನೆ ಮಾಡಬೇಕಿದ್ದು, ಇಷ್ಟು ಮಾಡಿದರೆ ಜೀವನ ಸುಂದರ (Beautiful Life), ರೊಮ್ಯಾಂಟಿಕ್‌ಮಯ... ಹಾಗಾದರೆ ಏನು ಮಾಡಬೇಕೆಂದು ನೋಡೋಣವೇ...?

ಅಡುಗೆ ಮನೆಯ ರಹಸ್ಯ (Kitchen)
ಮಹಿಳೆಯರಿಗೂ ಅಡುಗೆ ಮನೆಗೂ ಅವಿನಾಭಾವ ಸಂಬಂಧ. ಇಲ್ಲಿಂದಲೇ ಶುರುವಾಗಲಿ ನಿಮ್ಮ ಟ್ರಿಕ್ಸ್ (Trick). ಇದಕ್ಕೆ ನೀವು ಮಾಡಬೇಕಾದ್ದಿಷ್ಟೆ, ರಾತ್ರಿ ಅಡುಗೆ ಬಳಿಕ ಒಲೆ (Stove) ಆರಿಸುವುದಕ್ಕಿಂತ ಮುಂಚಿತವಾಗಿ ಹಾಲನ್ನು (Milk) ಒಲೆಗೆ ಸಿಂಪಡಿಸಿ. ಆಮೇಲೆ ಒಲೆಯನ್ನು ಆರಿಸಿ. ಇದರಿಂದ ದಾಂಪತ್ಯದಲ್ಲಿ ನೆಗೆಟಿವ್ (Negative) ಎನರ್ಜಿ ದೂರವಾಗಿ ಕೆಟ್ಟ ದೃಷ್ಟಿಗಳು ನಿವಾರಣೆಯಾಗಲಿದೆ. ರೊಮ್ಯಾನ್ಸ್ ಜೀವನ ನಿಮ್ಮದಾಗುತ್ತದೆ. 

ಅಡುಗೆ ಮನೆ ಸ್ವಚ್ಛವಾಗಿಡಿ (Clean) 
ಊಟ (Meal) ಮಾಡಿದ ನಂತರ ಅಡುಗೆ ಮನೆ ಸ್ವಚ್ಛವಾಗಿರಬೇಕು. ಊಟ ಮಾಡಿದ ಪಾತ್ರೆಗಳನ್ನು ತೊಳೆಯದೇ ಇಡಬಾರದು. ಹೀಗೆ ಮಾಡದಿದ್ದರೆ ರಾಹುವಿನ ಕೆಟ್ಟ ಪ್ರಭಾವ ಬೀಳುತ್ತದೆ. ದಾಂಪತ್ಯ ಜೀವನದಲ್ಲಿ ಒಡಕು ಮೂಡುತ್ತದೆ. ಮತ್ತೆ ಜಗಳ, ವಿರಸಗಳು ಉಂಟಾಗಿ ಅಂತರವು (Gap) ನಿರ್ಮಾಣವಾಗುತ್ತದೆ. ಜೊತೆಗೆ ಇಂತಹ ಮನೆಯಲ್ಲಿ ಲಕ್ಷ್ಮೀ ದೇವಿಯೂ (Goddess Laxmi) ವಾಸವಿರಲು ಇಷ್ಟಪಡುವುದಿಲ್ಲ. ಹೀಗಾಗಿ ಎಂಜಲು ಪಾತ್ರೆಗಳನ್ನು (Leftovers) ತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಆಗ ವಿರಸಗಳು ಇರದೇ ಸರಸಮಯ ಜೀವನ ನಿಮ್ಮದಾಗಲಿದೆ.

ಇದನ್ನು ಓದಿ: Samudrika Shastra: ಲವ್, ಸೆಕ್ಸ್, ಹೆಲ್ತ್‌‌‌ನ ಮಚ್ಚೆ ಭವಿಷ್ಯ.. ನಿಮಗೆಲ್ಲಿದೆ?

ಹಾಸಿಗೆ ಅಡಿ ಜೇನುತುಪ್ಪ (Honey)
ಜೇನಿನ ಸಂಬಂಧ ನಿಮ್ಮದಾಗಬೇಕಿದ್ದರೆ ಹಾಸಿಗೆ ಕೆಳಗೆ ಯಾರಿಗೂ ತಿಳಿಯದಂತೆ ಗಾಜಿನ ಬಾಟಲಿಯಲ್ಲಿ ಜೇನುತುಪ್ಪವನ್ನು ಇಡಬೇಕು. ಹೀಗೆ ಗುಟ್ಟಾಗಿ ಇಟ್ಟರೆ ರಾತ್ರಿ ಜೀವನ ರೊಮ್ಯಾಂಟಿಕ್ ಆಗಿರುತ್ತದೆ ಎನ್ನುತ್ತದೆ ಶಾಸ್ತ್ರ (Astrology). ಇದಲ್ಲದೆ ಹಾಲಿಗೆ ಜೇನುತುಪ್ಪ ಬೆರೆಸಿ ಕುಡಿದರೆ (Drink) ಒಳ್ಳೆಯದು. ಜೊತೆಗೆ ಸುಗಂಧ ದ್ರವ್ಯದಲ್ಲಿ (Perfume) ಹತ್ತಿಯನ್ನು ನೆನೆಸಿಡಿ. 

ಮಲಗೋ ಮುಂಚೆ ಹಿರಿಯರ ನೋಡಿ (Elders)
ಮಹಿಳೆಯರು ಮಲಗುವ ಮುಂಚೆ ಮನೆಯ ಹಿರಿಯ ಸದಸ್ಯರ ಮುಖವನ್ನು ನೋಡಿ. ಅವರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಆಶೀರ್ವಾದವಿದ್ದಂತೆ (Blessings). ಮನೆಯಲ್ಲೂ ನೆಮ್ಮದಿ ನೆಲೆಸುತ್ತದೆ. ಇನ್ನು ಪತಿ ಕಡೆಯಿಂದಲೂ ಪಾಸಿಟಿವ್ (Positive) ರಿಯಾಕ್ಷನ್ ಸಿಗಲಿದೆ.

ಇದನ್ನು ಓದಿ: Saturn Effect: ನಿಮ್ಮ ರಾಶಿಗೆ ಶನಿ ಎಂಟ್ರಿ ಕೊಟ್ರೆ ಏನಾಗತ್ತೆ?

ದೀಪ ಬೆಳಗಿಸಿ (Light the lamp)
ರಾತ್ರಿ ಮಲಗುವುದಕ್ಕಿಂತ ಮುಂಚಿತವಾಗಿ ಮನೆಯ ಪಶ್ಚಿಮ ಅಥವಾ ದಕ್ಷಿಣ ಮೂಲೆಯಲ್ಲಿ (West or South Direction) ದೀಪವನ್ನು ಬೆಳಗಬೇಕು. ಇದು ಪಾಸಿಟಿವ್ (Possitive) ಅಂಶವನ್ನು ಹೆಚ್ಚಳ ಮಾಡುವುದಲ್ಲದೆ, ಪ್ರಣಯದ ಭಾವವನ್ನು ಮೂಡಿಸುತ್ತದೆ. 

ರೊಮ್ಯಾಂಟಿಕ್ ರಾತ್ರಿಗೆ ಕರ್ಪೂರ  (Camphor)
ಊಟ ಮಾಡಿ ಮಲಗುವ ಮುಂಚೆ ಬೆಡ್ ರೂಂನಲ್ಲಿ (Bed Room) ಕರ್ಪೂರ ಹಚ್ಚಬೇಕು. ಇದರಿಂದ ಉದ್ವೇಗ (Tension) ಕಡಿಮೆಯಾಗುತ್ತದೆ. ಜಗಳಗಳು ನಡೆಯದೇ ಮಧುರ ಕ್ಷಣಗಳು ನಿಮ್ಮದಾಗುತ್ತದೆ. ಆ ಮೂಲಕ ರೊಮ್ಯಾಂಟಿಕ್ ರಾತ್ರಿಗಳನ್ನು ತಮ್ಮದಾಗಿಸಿಕೊಳ್ಳಬಹುದು. ಪತಿ-ಪತ್ನಿ ಸಂಬಂಧದಲ್ಲಿ ನೆಗೆಟಿವ್ ಅಂಶಗಳು ಬರತೊಡಗಿದ್ದರೆ ಇದನ್ನು ಪ್ರತಿದಿನ ಮಾಡುವುದು ಉತ್ತಮ. ಹೀಗೆ ಮಾಡುವುದರಿಂದ ನೆಮ್ಮದಿಯ ನಿದ್ರೆಯೂ ನಿಮ್ಮದಾಗುತ್ತದೆ. 

Follow Us:
Download App:
  • android
  • ios