ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಬಗ್ಗೆ ವಾಹಿನಿ ಮುಖ್ಯಸ್ಥರು ಸಣ್ಣ ಸುಳಿವು ಕೊಟ್ಟಿದ್ದಾರೆ.   ಟಿವಿ ಪ್ರಸಾರಕ್ಕೆ ವೀಕ್ಷಕರು ಡಿಮ್ಯಾಂಡ್ ಮಾಡಿದ್ದಾರೆ.  

ಕನ್ನಡ ಕಿರುತೆರೆ ಲೋಕದಲ್ಲಿ ಅದೆಷ್ಟೇ ಹೊಸ ಧಾರಾವಾಹಿ (Daily soap) ಅಥವಾ ರಿಯಾಲಿಟಿ ಶೋಗಳು (Reality Show) ಬರಲಿ ಯಾವುದೂ ರೆಡ್ ಹಾಟ್‌ ಸೀಟ್‌ಗಿಂತ ಜನಪ್ರಿಯತೆ ಪಡೆಯುವುದಿಲ್ಲ ಎನ್ನುವುದು ವೀಕ್ಷಕರ ಮಾತು. ವರ್ಷಗಳ ಕಾಲ ಜೀ ಕನ್ನಡ (Zee Kannada) ವಾಹಿನಿಯಲ್ಲಿ ನಡೆಸಿಕೊಂಡು ಬರುತ್ತಿರುವ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮ ಇದೀಗ ಮತ್ತೆ ಶುರುವಾಗಲಿದೆ ಆದರೆ ಓಟಿಟಿಯಲ್ಲಿ (OTT) ಎನ್ನುವ ಮಾತುಗಳು ಕೇಳಿ ಬರುತ್ತಿದೆ. 

WWR ಹಾಟ್ ಸೀಟ್‌ನಲ್ಲಿ ಅಸಾಮಾನ್ಯ ಶ್ರೀಸಾಮಾನ್ಯ ನಿವೇದನ್ ನೆಂಪೆ!

ಇತ್ತೀಚಿಗೆ ನಡೆದ ಪ್ರೆಸ್ ಮೀಟ್ ಒಂದರಲ್ಲಿ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ (Raghavendra Hunsur) ಅವರು ಹೇಳಿದ ಮಾಹಿತಿ ಪ್ರಕಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಓಟಿಟಿಯಲ್ಲಿ ಪ್ರಸಾರವಾಗುವ ಸಾಧ್ಯತೆಗಳಿವೆ. ಮುಂದಿನ ವರ್ಷ ಆರಂಭದಲ್ಲಿಯೇ ಈ ಕಾರ್ಯಕ್ರಮ ಶುರುವಾಗಲಿದೆ. ರಮೇಶ್ ಅರವಿಂದ್ (Ramesh Aravind) ಅವರೇ ನಿರೂಪಣೆ ಮಾಡಲಾಗಿದ್ದಾರೆ ಎಂದಿದ್ದಾರೆ. 

2019ರಲ್ಲಿ 'ವೀಕೆಂಡ್ ವಿತ್ ರಮೇಶ್ ಸೀಸನ್ 4' ಪ್ರಸಾರವಾಗಿತ್ತು. ಅದಾದ ನಂತರ ಕೊರೋನಾ ಲಾಕ್‌ಡೌನ್‌ (Covid19 lockdown) ಆರ್ಥಿಕ ಸಮಸ್ಯೆ, ಹೊಸ ಪ್ರಾಜೆಕ್ಟ್‌, ಸೆಲೆಬ್ರಿಟಿಗಳು ಕರೆಯುವುದು ಎಲ್ಲಾ ಬಿಗ್ ರಿಸ್ಕ್ ಎಂದು ಎರಡು ವರ್ಷ ಬ್ರೇಕ್ ನೀಡಿದ್ದರು. ಈಗ ವೀಕ್ಷಕರ ಒತ್ತಾಯದ ಮೇರೆಗೆ ಮತ್ತೆ ಕಾರ್ಯಕ್ರಮ ಶುರು ಮಾಡಲಾಗುತ್ತಿದೆ. ಟಿವಿ ಅಥವಾ ಓಟಿಟಿ ಎನ್ನುವುದು ಇನ್ನೂ ಖಚಿತವಾಗಿಲ್ಲ. ಒಟಿಟಿಯಲ್ಲಿ ಪ್ರಸಾರ ಎನ್ನುವ ಸಣ್ಣ ಮಾಹಿತಿ ಹೊರ ಬರುತ್ತಿದ್ದಂತೆ ಟಿವಿಯಲ್ಲಿ ಪ್ರಸಾರ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಡಿಮ್ಯಾಂಡ್ ಮಾಡಲು ಆರಂಭಿಸಿದ್ದಾರೆ. 

ಮದ್ರಾಸಿನ ಆ 30 ರೂ., ಜೀವನವನ್ನೇ ಬದಲಾಯಿಸಿದ ಉಪ್ಪಿ-ಬಿರಾದಾರ್ ಒಪ್ಪಂದ!

ಕಳೆದ ಸೀಸನ್‌ನ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade) ಅವರು ಬಂದಿದ್ದರು. ಸುಧಾಮೂರ್ತಿ (Sudha Murthy) ದಂಪತಿ, ಶ್ರೀಮುರಳಿ (Sri Murali), ವಿನಯಾ ಪ್ರಕಾಶ್ (Vinaya Prakash), ಟೈಗರ್ ಅಶೋಕ್ (Tiger Ashok), ಶಂಕರ್ ಬಿದರಿ ಎಪಿಸೋಡ್‌ಗಳು ಹೆಚ್ಚಿನ ಗಮನ ಸೆಳೆದಿದೆ.